ಕೊರೊನಾ ಇತಿ ವ್ಯಾಪ್ತಿಯಾಗಿರುವ ಈ ದಿನಗಳಲ್ಲಿ ಎಷ್ಟು ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಸುದ್ದಿ ನೀಡಲು ಒಂದೆರಡು ನಿಮಿಷಗಳು ಸಾಕು. ಆದರೆ ಅದನ್ನೇ ಅತಿ ರಂಜಿತವಾಗಿ ನೀಡುತ್ತಿರುವ ವಿದ್ಯುನ್ಮಾನ ಸುದ್ದಿ ಮಾಧ್ಯಮಗಳ ಉದ್ದೇಶವಾದರೂ ಏನು? ವೀಕ್ಷಕರನ್ನು ಹಿಡಿದಿಡಬೇಕು ಎನ್ನುವ ಉದ್ದೇಶವೇ ? ಹೌದಾದರೆ, ಅದಕ್ಕೊಂದು ನೀತಿ-ನಿಯಮವಿದೆ. ಜನರನ್ನು ಭಯ ಪಡಿಸುವಂತಹ ಶಬ್ದಗಳ ಬಳಕೆ ಅಗತ್ಯವೇ ?
- ಕೌಶಿಕ ಗಟ್ಟಿಗಾರು
ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದು ಸುಭಾಷಿತ. ಕೊರೊನಾ ಸಂದರ್ಭದಲ್ಲಿ ವಿದ್ಯುನ್ಮಾನ ಸುದ್ದಿ ಮಾಧ್ಯಮಗಳಿಗೆ ಇದು ಹೆಚ್ಚು ಸೂಕ್ತವಾಗಿ ಅನ್ವಯವಾಗುತ್ತಿದೆ.
ಸರಕಾರವನ್ನು ಎಚ್ಚರಿಸುವುದು ಸಂವಿಧಾನದ ನಾಲ್ಕನೇ ಸ್ತಂಭವಾದ ಮಾಧ್ಯಮದ ಕೆಲಸ ಎನ್ನುವುದು ಕ್ಲೀಷೆಯಾದರೂ ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯುನ್ಮಾನ ಮೀಡಿಯಾ (ಟಿವಿ ನ್ಯೂಸ್) ಇದನ್ನು ಅತಿಯಾಗಿ ಬಳಸಿಕೊಳ್ಳುತ್ತಿವೆ. ಒಂದು ರೀತಿಯಲ್ಲಿ ಭಯೋತ್ಪಾದನೆಯನ್ನೇ ಮಾಡುತ್ತಿವೆ.
ಭಯೋತ್ಪಾದನೆಯಲ್ಲಿ ಹಲವು ವಿಧಗಳಿವೆ. ಕಾಲ ಕಳೆದಂತೆ ಅದರ ವ್ಯಾಖ್ಯಾನವೂ ಬದಲಾಗುತ್ತಲೇ ಹೋಗುತ್ತದೆ. ಈಗ ನಡೆಯುತ್ತಿರುವ ಟಿವಿ ವಾಹಿನಿ ಭಯೋತ್ಪಾದನೆ. ಚಿಕ್ಕ ಪುಟ್ಟ ವಿಷಯಗಳನ್ನೇ ದೊಡ್ಡದಾಗಿ, ಅದಕ್ಕೆ ಒಂದಿಷ್ಟು ಮಸಾಲೆ ಸೇರಿಸಿ ಖಾಲಿ ದೋಸೆಯನ್ನು ಮಸಾಲೆ ದೋಸೆಯನ್ನಾಗಿ ಮಾಡುವ ಹೊಸ ಟ್ರೆಂಡ್ . ತಾವು ಜನರಿಗೆ ಮಾಹಿತಿಯನ್ನು ತಲುಪಿಸುವ ಮಾಧ್ಯಮ ಎಂಬುದನ್ನು ಮರೆತು, ಭಯ-ಭೀತಿಯನ್ನೇ ಹುಟ್ಟಿಸಿ ಅದನ್ನೇ ಟಿಆರ್ಪಿ ಬಂಡವಾಳವನ್ನಾಗಿಸಿಕೊಳ್ಳುವ ಹೊಸ ವಿದ್ಯಮಾನವೇ ಇದಕ್ಕೆ ಕಾರಣ.
ಇಲ್ಲಿ ಪ್ರತಿಯೊಬ್ಬ ಸುದ್ದಿ ನಿರೂಪಕರು (ಆಂಕರ್), ವರದಿಗಾರರು ಕೂಡ ಆರೋಗ್ಯ ಪಂಡಿತರು, ಆರ್ಥಿಕ ತಜ್ಞರು. ಬ್ರಹ್ಮಾಂಡ ಜ್ಞಾನ ಪಡೆದವರು ! ಬೆಳಗ್ಗಿನಿಂದ ರಾತ್ರಿಯವರೆಗೆ ಹೇಳಬಹುದು, ಮಾಡಬಹುದು ಎಂಬ ಪುಂಕಾನುಪುಂಕ ಮಾತುಗಳೇ ಇವರ ಬಂಡವಾಳ. ಅದು ಬಿಟ್ಟು ಇನ್ ಡೆಪ್ತ್ ಅಂದರೆ ಆಳವಾದ ಸುದ್ದಿ ವಿಶ್ಲೇಷಣೆ ಇವರಲ್ಲಿ ಇಲ್ಲವೇ ಇಲ್ಲ. ಇನ್ನು ಪ್ರತಿದಿನವೂ ಕನಿಷ್ಠವೆಂದರೂ ನಾಲ್ಕೈದು ಅರ್ಧರ್ಧ ಗಂಟೆ ಪ್ರೋಗ್ರಾಂ ಕೊಡಲೇ ಬೇಕು ಎಂಬ ತಾವೇ ಸೃಷ್ಟಿಸಿಕೊಂಡ ಅನಿವಾರ್ಯತೆ. ಅದಕ್ಕೆ ತಕ್ಕುದಾಗಿ ಪ್ರೋಮೋ. ಅದಕ್ಕೊಂದು ತಮ್ಮ ಭಂಡಾರದಲ್ಲಿರುವ ಶಬ್ದಗಳ ಸುರಿಮಳೆ. ಅಂತಿಮವಾಗಿ ಘೋರಾತಿಘೋರ ಅಘೋರ ಶಬ್ದಗಳ ಬಳಕೆ. ನೋಡುಗರಿಗೆ ಇದೇನು ಎನ್ನುವ ಕುತೂಹಲ, ಅಂತಿಮವಾಗಿ ಎಲ್ಲವೂ ಶೂನ್ಯ.
ಕೊರೊನಾ ಇತಿ ವ್ಯಾಪ್ತಿಯಾಗಿರುವ ಈ ದಿನಗಳಲ್ಲಿ ಎಷ್ಟು ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಸುದ್ದಿ ನೀಡಲು ಒಂದೆರಡು ನಿಮಿಷಗಳು ಸಾಕು. ಆದರೆ ಅದನ್ನೇ ಅತಿ ರಂಜಿತವಾಗಿ ನೀಡುತ್ತಿರುವ ವಿದ್ಯುನ್ಮಾನ ಸುದ್ದಿ ಮಾಧ್ಯಮಗಳ ಉದ್ದೇಶವಾದರೂ ಏನು? ವೀಕ್ಷಕರನ್ನು ಹಿಡಿದಿಡಬೇಕು ಎನ್ನುವ ಉದ್ದೇಶವೇ ? ಹೌದಾದರೆ, ಅದಕ್ಕೊಂದು ನೀತಿ-ನಿಯಮವಿದೆ. ಜನರನ್ನು ಭಯ ಪಡಿಸುವಂತಹ ಶಬ್ದಗಳ ಬಳಕೆ ಅಗತ್ಯವೇ ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುವುದು ಸಹಜ.
ಇನ್ನು ಸುದ್ದಿ ನಿರೂಪಕರ ವಿಷಯಕ್ಕೇ ಬಂದರೆ, ಫೋನ್ ಇನ್ ಕಾರ್ಯಕ್ರಮಗಳು, ಇದರ ಮೂಲಕ ಇಂತಹ ಶಾಸಕ, ಸಂಸದರಿಗೆ ನಾನು ಹೇಳುತ್ತೇನೆ ಎಂಬಲ್ಲಿಗೆ ನಾವು ಅಂದರೆ ಮಾಧ್ಯಮಗಳು ಸರಕಾರಕ್ಕೇ ನಿರ್ದೇಶನ ನೀಡುವ ಮಟ್ಟದಲ್ಲಿದ್ದೇವೆ ಎಂಬ ಮಾಹಿತಿಯನ್ನು ಜನ ಸಾಮಾನ್ಯರಿಗೆ ತಲುಪಿಸುವಂತಹ ಕೆಲಸ ಆಗುತ್ತಿದೆ.
ಮಾಧ್ಯಮಗಳು ಸರಕಾರವನ್ನು ಎಚ್ಚರಿಸಬೇಕು ನಿಜ. ಆದರೆ ನಾವೇ ಸರಕಾರವಾಗುವುದಲ್ಲ. ನಾವು ಮೀಡಿಯಾ, ನಾನು ಹೇಳಿದರೆ ನಿಮಗೆ ಮನೆಗೆ ಅಕ್ಕಿ, ರೇಷನ್ ತಲುಪತ್ತದೆ ಎಂಬ ಮನೋಭಾವವು ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ ಅದು ಕೂಡ ಭ್ರಷ್ಟಾಚಾರವಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸದೇ ಇರುವುದಿಲ್ಲ. ಲಾಭ ಪಡೆದುಕೊಂಡವರು (ಫೋನ್ ಮೂಲಕ ಕೆಲವ ಬೆರಳೆಣಿಕೆ ಸಂಖ್ಯೆ) ಖುಷಿ ಪಡಬಹುದು. ಆದರೆ ಉಳಿದವರಿಗೆ ಮಾಧ್ಯಮವೆಂದರೆ ಏನು ಅನ್ನಿಸದಿರಲು ಸಾಧ್ಯವೇ ?
ಸುದ್ದಿಗಳಿಗೆ ಮ್ಯೂಸಿಕ್ ಸಮೇತ ಇಮೋಷನಲ್ ಟಚ್ ಕೊಡುವ ಕೆಲಸ ಆಗುತ್ತಿದೆ. ಸುದ್ದಿ ಅಂದರೆ ಸುದ್ದಿ ಮಾತ್ರ, ಇಲ್ಲಿ ಭಾವನೆಗಳಿಗೆ ಬೆಲೆಯಿಲ್ಲ. ಪ್ರಸಿದ್ಧ ಪತ್ರಕರ್ತರೊಬ್ಬರ ಮಾತನ್ನೇ ಇಲ್ಲಿ ಉಲ್ಲೇಖಿಸುವಾದರೆ “ಪತ್ರಕರ್ತನೊಬ್ಬ ಹೃದಯದಿಂದ ಮಾತನಾಡಬಾರದು, ಮೆದುಳಿಗೆ ಕೆಲಸ ನೀಡಬೇಕು’, ಇದು ತುಂಬಾ ಸೂಕ್ತವಲ್ಲವೇ ?
ಹಲವು ಲಾಭ
ಹಾಗೆಂದು ಟಿವಿ ಸುದ್ದಿಗಳಿಂದ ಲಾಭ ಆಗಿಯೇ ಇಲ್ಲವೇ ? ಖಚಿತವಾಗಿಯೂ ಆಗಿದೆ. ಯಾರೇನೋ ಹೇಳಲಿ, ಮುಖ್ಯವಾಗಿ ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸ್ ಲಾಠಿ ಪ್ರಹಾರವನ್ನು ಪದೇ ಪದೇ ತೋರಿಸಿದ್ದರಿಂದಲೇ ಒಂದಿಷ್ಟು ದಿನ ಜನರು ಬೀದಿಗೆ ಇಳಿಯುವುದು ನಿಂತಿತು. ಅಷ್ಟರ ಮಟ್ಟಿಗೆ ಸುದ್ದಿ ಮಾಧ್ಯಮಗಳು ಜನರಿಗೆ ಆ ಮೂಲಕ ಕೊರೊನಾ ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿವೆ ಎಂಬುದು ಅತಿಶಯೋಕ್ತಿ ಆಗಲ್ಲ ಎಂಬುದು ನನ್ನ ಅಭಿಪ್ರಾಯ.
ಮಾಧ್ಯಮದ ಮೇಲೆ ಹಿಡಿತ
ಜಾಗತಿಕವಾಗಿ ಶೇ. 97ರಷ್ಟು ಮಾಧ್ಯಮಗಳು ಸರಕಾರಿ ಅಥವಾ ಖಾಸಗಿ ಒಡೆತನದಲ್ಲಿವೆ. ಸರಕಾರಿ ಪ್ರಯೋಜಿತ ಮಾಧ್ಯಮಗಳು ಸರಕಾರದ ಪ್ರೊಪಗಾಂಡವನ್ನೇ ಹೆಚ್ಚು ಹೆಚ್ಚುಪ್ರಚಾರ ಮಾಡಿದರೆ, ಖಾಸಗಿ ಒಡೆತನದ ಮಾಧ್ಯಮಗಳು ಸರಕಾರದಿಂದ ಆಗುವ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಆ ಕುರಿತು ವರದಿ ಮಾಡುತ್ತಲೇ ಸಾಗುತ್ತಿವೆ. ಅದರಲ್ಲಿರುವ ಉದ್ಯೋಗಿಗಳು ಸಂಸ್ಥೆಯ ಮಾಲೀಕರ ಮನೋಭಾವಕ್ಕೆ ಅನುಗುಣವಾಗಿ ಸುದ್ದಿ ಮಾಡಲೇಬೇಕಾಗುತ್ತದೆ, ಇಲ್ಲವಾದರೆ ಕೆಲಸ ಬಿಟ್ಟು ಹೋಗಬೇಕಾದ ಅನಿವಾರ್ಯ ಸನ್ನಿವೇಶವನ್ನು ಎದುರಿಸುತ್ತಾರೆ.
Sorry for commenting in English. The article gives an impartial, open minded, pragmatic analysis of the present trend of the electronic media in particular, who mainly thrive on the mass psychological hysteria who need sensationalism in everything. For a level headed person,(as rightly observed in the article) many of the presentations in the electronic media appear to be hysterical and sometimes even irritating by their tone tenor and the language used.Added to it is the bizarre sound effects given to it to make it more sensational. All these aspects have been succinctly covered in the article. Hats off the wisdom and maturity exhibited by the author and to publishers in publishing such articles which is the need of the hour.
Sorry for commenting in English. The article gives an impartial, open minded, pragmatic analysis of the present trend of the electronic media in particular, who mainly thrive on the mass psychological hysteria who need sensationalism in everything. For a level headed person,(as rightly observed in the article) many of the presentations in the electronic media appear to be hysterical and sometimes even irritating by their tone tenor and the language used.Added to it is the bizarre sound effects given to it to make it more sensational. All these aspects have been succinctly covered in the article. Hats off the wisdom and maturity exhibited by the author and to publishers in publishing such articles which is the need of the hour.