17.6 C
Karnataka
Wednesday, January 29, 2025

    ಕನ್ನಡಪ್ರೆಸ್.ಕಾಮ್: ಶುದ್ಧ ಪತ್ರಿಕೋದ್ಯಮದ ಆಶಯ

    Must read

    ನಾಡಿನ ಮುಂಚೂಣಿ ಪತ್ರಿಕೆಗಳಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ ತಂಡ ಇದೀಗ ಸ್ವತಂತ್ರ ಪತ್ರಿಕೋದ್ಯಮವನ್ನು ನಾಡಿಗೆ ಸಮರ್ಪಿಸಬೇಕೆಂಬ  ಉದ್ದೇಶದಿಂದ ಕನ್ನಡಪ್ರೆಸ್ .ಕಾಮ್ ಆರಂಭಿಸುವ ಸಾಹಸಕ್ಕೆ ಕೈ ಹಾಕಿದೆ. ಇದು  ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ನ್ಯೂಸ್ ಪೋರ್ಟಲ್. ಡಿಜಿಟಲ್‌‌ನ ವೇಗದೊಂದಿಗೆ ಮುದ್ರಣ ಮಾಧ್ಯಮದ ವಿಶ್ವಾಸವನ್ನು ಉಳಿಸಿಕೊಂಡು ಹೋಗುವುದು ನಮ್ಮ ಧ್ಯೇಯ. ಹಾಗೆ ನೋಡಿದರೆ ಇಂದು ಮುದ್ರಣ ಮಾಧ್ಯಮವೂ ತನ್ನ ಉಳಿವಿಗಾಗಿ ರಾಜಕಾರಣಿಗಳ ಕೃಪ ಕಟಾಕ್ಷ ಬಯಸುತ್ತಿದೆ. ಇಂಥ ದಿನದಲ್ಲಿ ಯಾವ ಆಮಿಷಕ್ಕೂ ಒಳಗಾಗದೆ ನಿರ್ಭೀತವಾಗಿ ವಿಷಯ ಮಂಡನೆ ಮಾಡುವುದು ನಮ್ಮ ಉದ್ದೇಶ. ನಮಗೆ ಯಾರ ಹಂಗೂ ಇಲ್ಲ.ನಮ್ಮಓದುಗರೆ ನಮ್ಮ ಮಾಲೀಕರು. ನಾವು ಬ್ರೇಕಿಂಗ್ ಸುದ್ದಿಯ ಬೆನ್ನು ಹತ್ತುವುದಿಲ್ಲ. ಸುದ್ದಿಯ ಹಿಂದಿನ ಸತ್ಯವನ್ನುಅನಾವರಣ ಮಾಡುತ್ತೇವೆ. ಜೊತೆಗೆ ಒಂದು ಸುದ್ದಿಯನ್ನು ನಮ್ಮ ಹಲವಾರು ಮೂಲಗಳಿಂದ ಖಚಿತ ಪಡಿಸಿಕೊಂಡ ನಂತರವೇ ನಾವು ಪ್ರಕಟಿಸುತ್ತೇವೆ. ಕನ್ನಡಪ್ರೆಸ್.ಕಾಮ್ ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿಗಳು  ಖಚಿತ, ಸತ್ಯ ಮತ್ತು ಸ್ವತಂತ್ರವಾಗಿರುತ್ತವೆ. ಅತ್ಯತ್ತುಮ ಗುಣಮಟ್ಟದ ಸುದ್ದಿ ವಿಶ್ಲೇಷಣೆಯನ್ನು ಯಾರ ಮುಲಾಜಿಗೂ ಒಳಗಾಗದೆ ನೀಡುವ ಭರವಸೆಯನ್ನು ನಾವು ನೀಡುತ್ತೇವೆ.

    ಕೋವಿಡ್ ೧೯ ಮಾಧ್ಯಮ ರಂಗದಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ಅದರಲ್ಲೂ ಮುದ್ರಣ ಮಾಧ್ಯಮ ಜರ್ಜರಿತವಾಗಿ ದಿನದ ಕೂಳಿಗಾಗಿ ರಾಜಕೀಯ ವ್ಯಕ್ತಿಗಳ ಕದವನ್ನು ತಟ್ಟಿ ದೇಹಿ ಎನ್ನುವ ಸ್ಥಿತಿಗೆ ತಲುಪಿಸಿದೆ. ಆರ್ಥಿಕವಾಗಿ ಸದೃಢವಾಗಿರುವ ಪತ್ರಿಕಾ ಸಂಸ್ಥೆಗಳು ಕೂಡ ಕೋವಿಡ್ ನಮ್ಮನ್ನು ಮುಗಿಸೇ ಬಿಟ್ಟಿತು ಎಂಬಂತೆ ಓವರ್ ರಿಯಾಕ್ಟ್ ಮಾಡಿಕೊಂಡು ರಾಜಕಾರಣಿಗಳ ಕೃಪಾ ಭಿಕ್ಷೆಗಾಗಿ ಸಾಲು ಗಟ್ಟಿ ನಿಂತಿರುವಾಗ ಅವುಗಳಿಂದ ನಿಷ್ಪಕ್ಷಪಾತ ಪತ್ರಿಕೋದ್ಯಮವನ್ನು ನಿರೀಕ್ಷಿಸಲು ಸಾಧ್ಯವೇ ?

    ಒಂದು ಕಡೆ ಪತ್ರಿಕೆಗಳ ಸರ್ಕುಲೇಷನ್ ಬಿದ್ದು ಹೋಗುತ್ತಿದೆ. ಓದುವವರು ಕಡಿಮೆ ಆಗುತ್ತಿದ್ದಾರೆ.  ಮನೆ ಮನೆ ವಿತರಣೆ ಅಸ್ತವ್ಯಸ್ತ ಗೊಂಡಿದೆ. ಸ್ಟಾಲ್ ಸೇಲ್ಸ್  ಕಡಿಮೆ ಆಗಿದೆ. ಮತ್ತೊಂದು ಕಡೆ ಕಾರ್ಪೋರೇಟ್ ಜಾಹೀರಾತುಗಳು ನಿಂತು ಹೋಗಿವೆ. ಸರಕಾರದ ಜಾಹೀರಾತುಗಳೇನೋ  ಬರುತ್ತಿವೆ. ಆದರೆ ಸರಕಾರವೊಂದೆ  ಎಷ್ಟು ಎಂದು  ಮಾಧ್ಯಮಗಳ ಕೈ ಹಿಡಿಯಲು ಸಾಧ್ಯ?  ಸರಕಾರ ಕೂಡ ಎಲ್ಲ ವರ್ಗದ ಜನರ ಕಷ್ಟವನ್ನು ಕೇಳ ಬೇಕಲ್ಲ.

    ಇನ್ನು ಗ್ರಾಹಕರೆ ಇಲ್ಲದಿರುವಾಗ ಕಾರ್ಪೋರೇಟ್ ವಲಯಗಳು ಜಾಹೀರಾತು ನೀಡಿ ಸಾಧಿಸುವುದಾದರು ಏನಿದೆ. ಉದಾಹರಣೆಗೆ ರೆಡಿಮೇಡ್ ಟೆಕ್ಸ್ ಟೈಲ್  ಇಂಡಸ್ಟ್ರೀ. ಸದಾಕಾಲ ಜನರಿಂದ ತುಂಬಿರುತ್ತಿದ್ದ ಈ ಮಳಿಗೆಗಳಲ್ಲಿ ಜನರಿಲ್ಲ. ಟ್ರಯಲ್ ನೋಡುವ ಹಾಗಿಲ್ಲ. ಎಕ್ಸ್ ಚೇಂಜ್ ಇಲ್ಲ. ಹೀಗಾಗಿ ಗ್ರಾಯಕರು ಸುಳಿಯುತ್ತಿಲ್ಲ. ಗ್ರಾಹಕರೆ ಇಲ್ಲವೆಂದ ಮೇಲೆ ಆತ ಜಾಹೀರಾತಿಗೆ ಖರ್ಚು ಮಾಡುವುದು ದೂರದ ಮಾತು.  ಕರೋನಾ ಸಂಕಷ್ಟ ಕಾಲದಲ್ಲಿ ಜನ ಹಣವನನ್ನು ಕೂಡಿಡಲು ಬಯಸುತ್ತಾರೆ ವಿನಾ ಖರ್ಚು ಮಾಡಲು ಬಯಸುವುದಿಲ್ಲ. ಹೀಗಾಗಿ ಹೊಸ ಖರೀದಿಗೆ ಹೊರಡುವುದಿಲ್ಲ. ಮಾಲುಗಳು ತೆರೆದಿಲ್ಲ. ಸಿನಿಮಾಗಳು ಓಪನ್ ಆಗಿಲ್ಲ.  ಹೀಗಾಗಿ ಮಾಧ್ಯಮಗಳಿಗೆ ಜಾಹೀರಾತಿನ ಹರಿವಿಲ್ಲ. ಇಂಥ ಕಡು ಕಷ್ಟದ ಕಾಲದಲ್ಲಿ ಎಷ್ಟೇ ಟಿಆರ್ಪಿ ಬಂದರೂ ರೀಡರ್‌‌ಷಿಪ್  ಬಂದರೂ, ಪ್ರಸರಣದಲ್ಲಿ ಅಗ್ರ ಸ್ಥಾನಕೇರಿದರೂ ಉಪಯೋಗವಿಲ್ಲ.  ಹಾಗಾಗಿಯೇ ರಾಜಕಾರಣಿಗಳು ,ಸಮಾಜಸೇವಕರ ಮರ್ಜಿಗೆ ಮಾಧ್ಯಮಗಳು ಒಳಪಡುವಂತೆ ಹಾಗಿದೆ.

    ಹಾಗಾದರೆ ಪತ್ರಿಕೆಗಳ ಇಂದಿನ ಸ್ಥಿತಿಗೆ  ಕೋವಿಡ್ ಒಂದೇ ಕಾರಣವೇ. ಇಲ್ಲ. ೨೦೧೯ರ ಆರ್ಥಿಕ ವರ್ಷದ ಆರಂಭದಲ್ಲಿ ಪತ್ರಿಕೆಗಳಿಗೆ ಬಿಸಿ ತಟ್ಟಲು ಆರಂಭವಾಗಿತ್ತು.  ಒಂದೆಡೆ   ನ್ಯೂಸ್ ಪ್ರಿಂಟ್ ದರದಲ್ಲಿ ಏರಿಕೆ. ಇನ್ನೊಂದೆಡೆ ಡಿಜಿಟಲ್ ನತ್ತ  ವಾಲುತ್ತಿರುವ ಓದುಗರು ಮತ್ತು ಜಾಹೀರಾತುದಾರರು. ದುಬಾರಿ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ದರ ಏರಿಸಿದರೆ ಓದುಗರನ್ನು ಕಳೆದುಕೊಳ್ಳುವ ಭೀತಿ. ಹೀಗಾಗಿ . ಇದೇ ಅವಧಿಯಲ್ಲಿ ಹಲವು ಪತ್ರಿಗೆಗಳು ತಮ್ಮ ಆವೃತ್ತಿಗಳನ್ನು ನಿಲ್ಲಿಸಿದವು. ಡೆಕನ್ ಕ್ರಾನಿಕಲ್  ತನ್ನ ಕೇರಳ ಮತ್ತು ಬೆಂಗಳೂರು ಎಡಿಷನ್‌ಗಳನ್ನು ಕ್ಲೋಸ್ ಮಾಡಿತು. ಡಿಎನ್‌ಎ ಕೂಡ ಹಲವು ಆವೃತ್ತಿಗಳನ್ನು ನಿಲ್ಲಿಸಿತು.  ಮುಂಚೂಣಿ ಪತ್ರಿಕೆಳ  ರೀಡರ್ ಶಿಪ್ ಕೂಡ ಇಳಿಮುಖ ಕಾಣಲು ಶುರುವಾಯಿತು.

    ಈ ಸಮಯದಲ್ಲೇ ಕೋವಿಡ್ ಅಪ್ಪಳಿಸಿತು, ಹೀಗಾಗಿ ಹಲವು ಪತ್ರಿಕೆಗಳು ಪುರವಣಿಗಳನ್ನು ನಿಲ್ಲಿಸಿದವು. ಪುಟಗಳ ಸಂಖ್ಯೆ ಕಡಿಮೆ ಮಾಡಿದವು. ಲೇ ಆಫ್ ಗಳನ್ನು ಘೋಷಿಸತೊಡಗಿದವು.ವೇತನ ಕಡಿತ ಪ್ರಕಟಿಸಿದವು.  ಅನೇಕ ಕಡೆ  ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಹಲವಾರು ಮಂದಿ  ಅನಿಶ್ಚತತೆಯಿಂದ ದಿನ ದೂಡುತ್ತಿದ್ದಾರೆ.

    ಇಂಥ ಸ್ಥಿತಿಯಲ್ಲಿ ಶುದ್ಧ ಪತ್ರಿಕೋದ್ಯಮದ ಆಶಯದೊಂದಿಗೆ ಕನ್ನಡಪ್ರೆಸ್.ಕಾಮ್ ಆರಂಭವಾಗುತ್ತಿದೆ. ನಿಮ್ಮ ಬೆಂಬಲ ಸದಾ ಇರಲಿ. ಕೋವಿಡ್ ಕಾರ್ಮೋಡ ಬೇಗ ಸರಿಯಲಿ . ಎಲ್ಲೆಡೆ ಮತ್ತೆ ಸಂತಸ ಮೂಡಲಿ ಎಂಬ ಆಶಯ ದೊಂದಿಗೆ ಕನ್ನಡಪ್ರೆಸ್ . ಕಾಮ್ ಅನ್ನು ನಿಮ್ಮ ಮಡಿಲಿಗೆ  ಹಾಕುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    14 COMMENTS

    1. Mudrana madhyamada indina stitigati kurita baraha maahitipurnavaagide.
      Abhinandanegalu.
      prayatna yashaswiyaagali.

    2. ಸರ್ ನಿಮ್ಮ ತಂಡಕ್ಕೆ…
      ಆದರೆ…ಕೆಲವು ಪದಗಳು ಹಾಗೂ ಅರ್ಥಗಳು ಸಹ ತಪ್ಪಾಗಿದೆ…ದಯಮಾಡಿ..ತಿದ್ದುಪಡಿ ಮಾಡಿ…
      ಕನ್ನಡ ತಪ್ಪಾಗಬಾರದು….ಅನ್ಯಥಾ ಭಾವಿಸಬೇಡಿ…

      :- ವೆಂಕಿ-ಬೆಂಕಿ -:

      • ತಿದ್ದಿಕೊಳ್ಳುತ್ತೇವೆ. ನಿಮ್ಮ ಸಲಹೆಗೆ ಧನ್ಯವಾದ.ತಪ್ಪು ಕಂಡಾಗ ಮುಲಾಜಿಲ್ಲದೆ ತಿಳಿಸಿ.

    3. ಸರ್ ನಿಮ್ಮ ತಂಡಕ್ಕೆ ಶುಭವಾಗಲಿ…….
      ಆದರೆ…ಕೆಲವು ಪದಗಳು ಹಾಗೂ ಅರ್ಥಗಳು ಸಹ ತಪ್ಪಾಗಿದೆ…ದಯಮಾಡಿ..ತಿದ್ದುಪಡಿ ಮಾಡಿ…
      ಕನ್ನಡ ತಪ್ಪಾಗಬಾರದು….ಅನ್ಯಥಾ ಭಾವಿಸಬೇಡಿ…

      :- ವೆಂಕಿ-ಬೆಂಕಿ -:

    4. ಒಳ್ಳೆಯ ಪ್ರಯತ್ನ.

      ನಿಮ್ಮ ಪತ್ರಿಕೆಗೆ ನಾನು ಬರೆಯುವಾಸೆ,
      ಸಾಧ್ಯವಾದರೆ ನಿಮ್ಮ emal ಕಳುಹಿಸಿ. ಸತ್ವ ಇದ್ದರೆ ಪ್ರಕಟಿಸಿ.

    5. ನಿಮ್ಮ ತಂಡಕ್ಕೆ ಶುಭವಾಗಲಿ,ಕನ್ನಡ ಪತ್ರಿಕೋದ್ಯಮ ಮತ್ತಷ್ಟು ಉಳಿಯಲಿ ಹಾಗೂ ಬೆಳೆಯಲಿ

    6. ಸರ್ಕಾರ ಪತ್ರಿಕೆಗಿಂತ ಹೆಚ್ಚು ಓದುಗರಿರುವ ವೆಬ್ ಪೋರ್ಟಲ್’ಗಳಿಗೆ ಜಾಹೀರಾತು ನೀಡುವುದಿಲ್ಲ. ಇವೆಲ್ಲಾ ಸರಿಯಾದರೆ ವೆಬ್ ಪೋರ್ಟಲ್ ಹಾಗೂ ಅದರಲ್ಲಿ ದುಡಿಯುವ ಪತ್ರಕರ್ತರಿಗೂ ಅನುಕೂಲವಾಗುತ್ತೆ 🙂

      ನಿಮಗೆ ಶುಭವಾಗಲಿ 🙏

    7. ಹೊಸ ಆಶಯಗಳನ್ನು ಹೊತ್ತ ; ಹೊಸ ಭರವಸೆಯ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು . ನಿಮ್ಮ ವೃತ್ತಿಪರತೆ ಎದ್ದು ಕಾಣುವ ಹಾಗೆ ರೂಪಿತವಾಗಿದೆ . ತುಂಬಾ ಚೆನ್ನಾಗಿ ಇದೆ. 
      ಸುಧಾ ಶರ್ಮ ಚವತ್ತಿ 

    8. Namaskaara.

      Kannadapress.com jaalataanavannu eegashTE nODide. Khushiyaayitu. nimage oLLeyadaagali.

      – Yagati Raghu Nadig
      Mob: 88840 64463

    LEAVE A REPLY

    Please enter your comment!
    Please enter your name here

    Latest article

    error: Content is protected !!