ಮಹಾಮಾರಿ ಕೋರನಾ ಭೀತಿಯ ನಡುವೆಯೇ ಹಸಿರನ್ನು ತಿಂದು ಕಬಳಿಸುವ ಮಿಡತೆಗಳು ರಾಜ್ಯದತ್ತ ದಾಳಿ ಇಡುತ್ತಿವೆ ಎಂಬ ಸುದ್ದಿ ರಾಜ್ಯದ ರೈತಾಪಿ ವರ್ಗವನ್ನು ಕಂಗೆಡಿಸಿತ್ತು. ಆದರೆ ಆ ಭೀತಿ ಸದ್ಯಕ್ಕೆ ದೂರವಾಗಿದೆ. ಹೀಗೆಂದು ರಾಜ್ಯ ಕೃಷಿ ಸಚಿವರು ಹೇಳಿದ್ದಾರೆ.
ಹಾಗಾದರೆ ಈ ಮಿಡತೆ ಏನು? ಇದು ಕರ್ನಾಟಕಕ್ಕೆ ದಾಳಿ ಇಡುವ ಭೀತಿ ಎದುರುದಾದ್ದರು ಹೇಗೆ ಎಂಬದನ್ನು ತಿಳಿದುಕೊಳ್ಳುವ ಸಲುವಾಗಿ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಕೀಟ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿ.ಎಂ. ಕಲ್ಲೇಶ್ವರ ಸ್ವಾಮಿ ಅವರನ್ನು ಕನ್ನಡಪ್ರೆಸ್.ಕಾಮ್ ಮಾತನಾಡಿಸಿತು. ಆ ಮಾತುಕತೆಯ ಸಂಗ್ರಹ ಇಲ್ಲಿದೆ
ವಿಶ್ವದಲ್ಲಿ ಬಹಳಷ್ಟು ತರಹದ ಮಿಡತ ಪ್ರಭೇದಗಳಿದ್ದು, ಅವುಗಳಲ್ಲಿ ಸಿಸ್ಟೋಸೆರ್ಕಾರ ಗ್ರಿಗೇರಿಯಾ ಎಂಬುದು ಬಹಳ ಪ್ರಮುಖ ಮಿಡತೆಯಾಗಿದೆ ಇವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾರುತ್ತ ದೊಡ್ಡ ಪ್ರಮಾಣದಲ್ಲಿ ಯಾವುದೇ ಅಡ್ಡ ಬರುವ ಹಸಿರು ಬೆಳೆಗಳನ್ನು ತಿನ್ನುತ್ತ ಮುನ್ನುಗುತ್ತದೆ. ಒಂದು ಸಮೂಹದಲ್ಲಿ ಪ್ರತಿ ಚದರ ಕಿಲೋಮಿಟರ್‌ಗೆ ೧೫೦ ಮಿಲಿಯನ್ ಮಿಡತೆಗಳು ಕಂಡು ಬರಬಹುದು.
ಇದರ ಹಾನಿಯು ಉತ್ತರ ಭಾರತದ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ನಾನಾ ಕಡೆ ಕಂಡು ಬರುತ್ತಿದೆ. ಇವು ಮೂಲತ: ಆಫ್ರಿಕಾ, ಮಧ್ಯಪ್ರಾಚ್ಯ, ದಕ್ಷಿಣ ಮತ್ತು ನೈರುತ್ಯಾ ಏಷ್ಯಾದ ಅನೇಕ ದೇಶಗಳ ಮರುಭೂಮಿಗಳಿಂದ ಹಾರಿಬರುತ್ತ ದಾಳಿ ಇಡುತ್ತಿವೆ.
ಈ ತರಹದ ಹಾವಳಿ ಹಿಂದೆ ೧೯೨೬-೧೯೩೪, ೧೯೪೦-೧೯೪೮, ೧೯೪೯-೧೯೬೩, ೧೯೬೭-೬೯, ೧೯೮೭-೧೯೮೯, ೨೦೦೩-೨೦೦೫ ಮತ್ತು ೨೦೧೯-೨೦ ರಂದು ಸಂಭವಿಸಿದ್ದು ಈ ವರ್ಷ ಕೂಡ ಅತಿಯಾದ ರೀತಿಯಲ್ಲಿ ಹಾನಿಮಾಡುತ್ತಿವೆ.
ಈ ಹರಡುತ್ತಿರುವ ಮಿಡತೆಗಳು ಕರ್ನಾಟಕಕ್ಕೆ ಮಹಾರಾಷ್ಟ್ರದಿಂದ ಬರುವ ಸಾಧ್ಯತೆ ಇರಬಹುದು. ಆದರೆ ಈ ಮೇಲೆ ತಿಳಿಸಿದ ವರ್ಷಗಳಲ್ಲಿ ಆದ ವರದಿಯ ಪ್ರಕಾರ ಯಾವ ವರ್ಷದಲ್ಲಿಯೂ ಇದರ ಹಾನಿಯು ದಕ್ಷಿಣ ಭಾರತಕ್ಕೆ ಬಂದಿಲ್ಲ. ಈಗಿನ ವರದಿಯ ಪ್ರಕಾರ ಗಾಳಿಯ ದಿಕ್ಕು ಉತ್ತರದ ಕಡೆ ಬೀಸುತ್ತಿರುವುದರಿಂದ ಕರ್ನಾಟಕಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ. ಆದರೆ ಗಾಳಿಯ ದಿಕ್ಕು ಬದಲಿಸಿದರೆ ಮಿಡತೆಗಳ ಸಮೂಹ ನೆಡೆ ಕರ್ನಾಟಕದತ್ತ ತಿರುಗುವ ಸಾಧ್ಯತೆ ಬಿಟ್ಟರೆ ಬಹುತೇಕವಾಗಿ ಬರುವ ಸಾಧ್ಯತೆ ಕಡಿಮೆ ಇದೆ.
ಮಿಡತೆಗಳ ಸಮಗ್ರ ನಿರ್ವಹಣೆ
ಮಿಡತೆ ಸಮೂಹದ ಮಾಹಿತಿ ಪಡೆದ ತಕ್ಷಣ ಮಿಡತೆಗಳು ಬೆಳೆಗಳ ಮೇಲೆ ಕೂರದಂತೆ ಮಾಡಲು ಖಾಲಿಡಬ್ಬ, ಲೋಹದ ಫಲಕಗಳು, ಡ್ರಮ್, ಪಟಾಕಿ ಸಿಡಿಸುವುದು, ರೇಡಿಯೋ ಅಥವಾ ಇನ್ಯಾವುದೇ ಉಪಕರಣಗಳ ಮೂಲಕ ರೈತರು ದೊಡ್ಡದಾಗಿ ಶಬ್ದಮಾಡಿ ಎಚ್ಚರಿಕೆಯಿಂದ ಓಡಿಸಹುದಾಗಿದೆ
.ಬೇವಿನ ಆಧಾರಿತ ಕೀಟನಾಶಕ (೦.೧೫% ಇಸಿ ೪೫ ಮಿ.ಲೀ./೧೫ ಲೀಟರ್ ನೀರು) ವನ್ನು ಬೆಳೆಗಳ ಮೇಲೆ ಸಿಂಪರಿಸಿದರೆ ಮಿಡತೆಗಳು ಬೆಳೆಗಳನ್ನು ತಿನ್ನದೆ ವಿಕರ್ಷಣೆಗೆ ಒಳಗಾಗುತ್ತವೆ.
ಬೆಳೆಗಳ ಮೇಲೆ ಕ್ಲೋರ್‌ಫೈರಿಫಾಸ್ ೧.೫ % ಡಿ.ಪಿ. ಪುಡಿಯನ್ನು ಧೂಳಿಕರಿಸಬಹುದಾಗಿದೆ. ಈ ಕೀಟನಾಶಕ ಧೂಳೀಕರಣವನ್ನು ಬೆಳಿಗ್ಗೆ ಅಥವಾ ಸಾಯಂಕಾಲದ ತಂಪಾದ ಸಮಯದಲ್ಲಿ ಮಾಡುವುದು ಸೂಕ್ತ.
ಮಿಡತೆಗಳು ಮೊಟ್ಟೆಗಳನ್ನು ಎಲ್ಲಾ ಪ್ರದೇಶಗಳಲ್ಲಿ ನೆಲದಲ್ಲಿ ಇಡುವುದರಿಂದ ಕ್ವಿನಾಲ್‌ಫಾಸ್ ೧.೫% ಡಿ.ಪಿ. ಆಥವಾ ಕ್ಲೋರ್‌ಪೈರಿಫಾಸ್ ೧.೫ % ಡಿ.ಪಿ. ಪುಡಿಯನ್ನು ಅಂತಹ ಪ್ರದೇಶಗಳಲ್ಲಿ ಧೂಳಿಕರಿಸುವುದು. ಇದರಿಂದ ಮೊಟ್ಟೆಯಿಂದ ಹೊರಬರುವ ಅಪ್ಸರೆಗಳು ಕೀಟನಾಶಕಕ್ಕೆ ತುತ್ತಾಗಿ ಸಾಯುತ್ತವೆ.
ಮೊಟ್ಟೆಯಿಂದ ಹೊರಬರುವ ಅಪ್ಸರೆ ಕೀಟಗಳು ಒಂದು ಹೊಲದಿಂದ ಇನ್ನೊಂದು ಹೊಲಕ್ಕೆ ನುಗ್ಗುತ್ತ ಹೋಗುತ್ತವೆ. ಇವುಗಳನ್ನು ತಪ್ಪಿಸಲು ಒಣಹುಲ್ಲನ್ನು ಅಥವಾ ಸಸ್ಯವಶೇಷಗಳನ್ನು ಸುಟ್ಟಿಹಾಕಿ ಮಿಡತೆಗಳ ಸಮೇತ ಕೊಲ್ಲುವುದು.
ಹಾವಳಿ ಹೆಚ್ಚಾದಲ್ಲಿ ಬಿತ್ತುವ ಮುಂಚೆ ಹೊಲದ ಸುತ್ತಲು ಎರಡು ಅಗಲದ ಹಾಗೂ ಎರಡು ಅಡಿ ಹಾಳದ ಕಾಲುವೆಗಳನ್ನು ತೋಡಿ ಅದಕೆ ಶೇ. ೧.೫ ರ ಕ್ವಿನಾಲ್‌ಫಾಸ್ ಅಥವಾ ಶೇ. ೧.೫ರ ಕ್ಲೋರ್ ಪೈರಿಫಾಸ್ ಪಡಿಯನ್ನು ಧೂಳೀಕರಿಸುವುದು.
ಕೀಟನಾಶಕ ಬಳಸುವಾಗ ಬಟ್ಟೆಗಳಿಂದ , ಕನ್ನಡಕದಿಂದ ಮೈಯನ್ನು ಮತ್ತು ಕಣ್ಣುನ್ನು ಮುಚ್ಚಿಕೊಂಡು ಮುಂಜಾಗೃತ ವಹಿಸುವುದು ಉತ್ತಮ
Thanks for ur information