ಅಶೋಕ ಹೆಗಡೆ
ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೇ ಕೇಂದ್ರದಲ್ಲಿರುವ ಮೋದಿ ೨.೦ ಸರಕಾರ ಶನಿವಾರ (ಮೇ ೩೦) ಮೊದಲ ವರ್ಷ ಪೂರೈಸಿದೆ. ಮೊದಲ ಅವಧಿಯ ಸಾಧನೆಯ ಆಧಾರದಲ್ಲಿಯೇ ದೇಶದ ಮತದಾರ ಎರಡನೇ ಅವಧಿಗೂ ನಿಚ್ಚಳ ಬಹುಮತದೊಂದಿಗೆ ನಿರಾತಂಕವಾಗಿ ಆಡಳಿತ ನಡೆಸುವ ಅವಕಾಶವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ನೀಡಿದ್ದಾನೆ.
ಮೊದಲ ಅವಧಿಗೆ ಹೋಲಿಸಿದರೆ ಎರಡನೇ ಅವಧಿಯ ಆರಂಭ ಅತ್ಯಂತ ಬಿರುಸಿನಿಂದ ಕೂಡಿತ್ತು ಮಾತ್ರವಲ್ಲ ಇಡೀ ವರ್ಷದ ಅವಧಿಯಲ್ಲಿ ಹಲವು ಸಾಧನೆಗಳನ್ನು ಮಾಡಿರುವುದೂ ನಿಜ. ಆರ್ಥಿಕತೆ ವಿಚಾರಲ್ಲಿ ಕೊಂಚ ಎಡವಿದೆ ಎನ್ನುವುದನ್ನು ಬಿಟ್ಟರೆ ಮೋದಿ ೨.೦ ಆಡಳಿತದ ಬಗ್ಗೆ ಜನಸಾಮಾನ್ಯರಲ್ಲಿಅಸಮಾಧಾನವೇನೂ ಕಾಣಿಸುತ್ತಿಲ್ಲ.
ಕೊರೊನಾ ದಾಂಗುಡಿ ಇಡುವ ಕೆಲತಿಂಗಳ ಮೊದಲು ಗತಿಕವಾಗಿಯೇ ಆರ್ಥಿಕ ಹಿಂಜರಿತದ ಸೂಚನೆಕಾಣಿಸಿಕೊಂಡಿತ್ತು. ಅದನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸವೂ ಸರಕಾರಕ್ಕೆ ಇತ್ತು. ಹಲವು ಸಂಸ್ಥೆಗಳು ಸಹ ಆರ್ಥಿಕ ಹಿಂಜರಿತವನ್ನು ಭಾರತ ಸಮರ್ಥವಾಗಿ ಮೆಟ್ಟಿನಿಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೂ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಕಾರ್ಯನಿರ್ವಹಣೆ ಅಷ್ಟು ತೃಪ್ತಿಕರವಾಗಿ ಇಲ್ಲ ಎಂಬ ಸಣ್ಣದೊಂದು ಅಸಮಾಧಾನ ಬಿಜೆಪಿಯಲ್ಲೇ ಇತ್ತು.
ಬಜೆಟ್ ಮಂಡನೆ ಬಳಿಕ ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಕೆ.ವಿ.ಕಾಮತ್ ಅವರನ್ನು ಹಣಕಾಸು ಖಾತೆ ಸಚಿವರಾಗಿ ನೇಮಕ ಮಾಡಲಾಗುತ್ತದೆ ಎಂಬ ವದಂತಿಗಳೂ ಹರಿದಾಡಿದ್ದವು. ಅದೇಹೊತ್ತಿಗೆ ಕಾಣಿಸಿಕೊಂಡ ಕೊರೊನಾ ನಿರ್ಮಲಾ ಸೀತಾರಾಮನ್ಅವರನ್ನು ಮುಜುಗರದಿಂದ ಪಾರುಮಾಡಿತು ಎಂದರೆ ತಪ್ಪಾಗಲಾರದು.ಆರ್ಥಿಕತೆ ನಿರ್ವಹಣೆಯಲ್ಲಿನ ‘ಲೋಪ’ವನ್ನು ಜನಸಾಮಾನ್ಯರು ಅಷ್ಟು ಗಂಭೀರವಾಗಿಪರಿಗಣಿಸದಿರುವುದಕ್ಕೆ ಹಲವು ಕಾರಣಗಳಿವೆ.
ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಆರು ವರ್ಷಗಳಲ್ಲಿ ಗೃಹ ಸಾಲ ಬಡ್ಡಿ ದರ ಏರಿಕೆ ಕಾಣಲಿಲ್ಲ. ಸಗಟು ಹಣದುಬ್ಬರ ಏರಿಕೆಕಾಣಲಿಲ್ಲ. ಭ್ರಷ್ಟಾಚಾರದ ಪಿಡುಗು ಬಾಧಿಸಲಿಲ್ಲ. ಒಂದು ರೀತಿಯಲ್ಲಿ ನೆಮ್ಮದಿಯವಾತಾವರಣವೇ ಇತ್ತು.
ಸಮಾನ ನಾಗರಿಕ ಸಂಹಿತೆ ಸವಾಲು: ವಾಸ್ತವಿಕವಾಗಿ ಇನ್ನು ಮುಂದಿನ ನಾಲ್ಕು ವರ್ಷ ಅತ್ಯಂತಸವಾಲಿನದ್ದು. ಏಕೆಂದರೆ ಈಗ ಬಹುತೇಕರ ಅಪೇಕ್ಷೆ ಇರುವುದು ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂಬ ಬಗ್ಗೆ. ಪೌರತ್ವ ತಿದ್ದುಪಡಿ ವಿಧೇಯಕ ಖಂಡಿಸಿದೇಶಾದ್ಯಂತ ಪ್ರತಿಭಟನೆಗಳು ನಡೆದರೂ ಅದಕ್ಕೆ ಮಣಿಯದೇ ಪರಿಸ್ಥಿತಿಯನ್ನು ಅಮಿತ್ ಶಾನಿಭಾಯಿಸಿದ ರೀತಿಯಿಂದ ಸಮಾನ ನಾಗರಿಕ ಸಂಹಿತೆಯ ಕನಸು ಚಿಗುರೊಡೆದಿದೆ.
ಇನ್ನು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲು ವಿಧೇಯಕ ಅಂಗೀಕಾರವಾಗುವಂತೆನೋಡಿಕೊಳ್ಳುವ ಗುರುತರ ಹೊಣೆಗಾರಿಕೆಯೂ ಮೋದಿ ಸರಕಾರದ ಮೇಲಿದೆ. ಆ ಮೂಲಕ ತಾನು
ನಿಜವಾಗಿಯೂ ಮ ಮಹಿಳಾ ಪರ ಎಂಬುದನ್ನು ಸರಕಾರ ತೋರಿಸಿಕೊಡಬೇಕಿದೆ.
ಅದಲ್ಲದೇಕೊರೊನಾದಿಂದ ಉಂಟಾಗಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಜನರಮೇಲೆ ಭಾರ ಹಾಕದೇ ‘ಆತ್ಮನಿರ್ಭರ ಭಾರತ’ದ ಕನಸು ಸಾಕಾರಗೊಳಿಸಿಕೊಳ್ಳಬೇಕಿದೆ. ಇನ್ನೂ ಎರಡು ವರ್ಷ ಕೊರೊನಾ ಬೆಂಬಿಡದೇ ದೇಶವನ್ನು ಕಾಡಲಿದೆ ಎಂಬುದು ಕಟುವಾಸ್ತವ. ಅದರನಡುವೆಯೇ ಅಭಿವೃದ್ಧಿ ಮತ್ತು ಆರ್ಥಿಕ ಚೇತರಿಕೆಯನ್ನು ಸಾಸುವುದು ಸಲೀಸಲ್ಲ. ಆದರೆಅದನ್ನು ಸಾಸುವ ಸಾಮರ್ಥ್ಯ ಮೋದಿ ಸರಕಾರಕ್ಕೆ ಖಂಡಿತವಾಗಲೂ ಇದೆ. ದೇಶ ಉಜ್ವಲದಿನಗಳಿಗಾಗಿ ಎದುರು ನೋಡುತ್ತಿದೆ.