ಜನಾಂಗೀಯ ಕೊಲೆಗಳು ಅಮೆರಿಕಾಕ್ಕೆ ಹೊಸದಲ್ಲ. ಆದರೆ 2015 ರಿಂದಲೂ ಮತ್ತೆ ಮತ್ತೆ ಪೊಲೀಸರ ಕೈನಲ್ಲಿ ಕರಿಯ ಜನಾಂಗೀಯರ ಅನಗತ್ಯ ಹತ್ಯೆ ಆಗುತ್ತಿರುವ ವಿಚಾರ ದೊಡ್ಡ ಸುದ್ದಿಗಳಾಗುತ್ತಲೇ ಬಂದಿವೆ.
ಹಾಲಿವುಡ್ ನಟ ವಿಲ್ ಸ್ಮಿತ್ ‘ರೇಸಿಸಂ ಯಾವಾಗಲೂ ಇತ್ತು, ಇದೀಗ ಅದು ರೆಕಾರ್ಡ್ ಆಗುತ್ತಿದೆ ಅಷ್ಟೆ’ ಎಂದಿದ್ದಾನೆ.
ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಕೊಲೆಯ ನಂತರ ಇದೇ ಮೊದಲ ಬಾರಿಗೆ ಅಮೆರಿಕಾ ಈ ಮಟ್ಟದಲ್ಲಿ ಹೊತ್ತಿ ಉರಿಯುತ್ತಿದೆ.ಪೊಲೀಸರ ಬಳಿ ತನ್ನ ತಪ್ಪೇನು ಎಂದು ಕೇಳಲು ಹೋಗಿ ಕೇವಲ ನಾಲ್ಕು ನಿಮಿಷಗಳಲ್ಲಿ ಸಾರ್ವಜನಿಕರ ಎದುರೇ ಆಫ್ರಿಕಾ ಮೂಲದವನೊಬ್ಬನ ಹತ್ಯೆ ಆಗಿದೆ.
ಆದದ್ದಿಷ್ಟೆ. ಅಮೆರಿಕಾದ ಮಿನಿಯಾಪೋಲಿಸ್ ನಗರದ ಸಣ್ಣದೊಂದು ಅಂಗಡಿಯಲ್ಲಿ ಜಾರ್ಜ್ ಫ್ಲಾಯ್ದ್ ಎನ್ನುವವ 20 ಡಾಲರ್ ನೋಟೊಂದನ್ನು ಕೊಟ್ಟು ಸಿಗರೇಟು ಖರೀದಿಸಿದ. ಅಂಗಡಿಯಾತ ಮರು ನಿಮಿಷದಲ್ಲಿ ಪೊಲೀಸರಿಗೆ ಕರೆಮಾಡಿ ಇದು ಖೋಟಾನೋಟು ಎಂದು ತಿಳಿಸಿದ. ಕೇವಲ 17 ನಿಮಿಷದಲ್ಲಿ ಪೊಲೀಸರು ಆಗಮಿಸಿದರು.ಜಾರ್ಜ್ ಫ್ಲಾಯ್ದ್ ನನ್ನು ಬಂಧಿಸಿದರು.ಇದೆಲ್ಲ ಅಲ್ಲಿಯೇ ಇದ್ದ ಸೆಕ್ಯೂರಿಟಿ ಕ್ಯಾಮರದಲ್ಲಿ ದಾಖಲಾಯಿತು. ಬಂಧನಕ್ಕೆ ಆತ ಪ್ರತಿರೋಧ ವ್ಯಕ್ತಪಡಿಸಲಿಲ್ಲ.ಆತನ ಬಳಿ ಯಾವುದೇ ಮಾರಕಾಸ್ತ್ರಗಳೂ ಇರಲಿಲ್ಲ. ಕೈ ಕೋಳ ಹಾಕಿ ಅವನನ್ನು ಪೊಲೀಸರು ರಸ್ತೆಯಲ್ಲೇ ಒದ್ದು ಬೀಳಿಸಿದರು .ಒಬ್ಬ ಅವನ ಬೆನ್ನಿನ ಮೇಲೆ ಕೂತ .ಮತ್ತೊಬ್ಬ ಅವನ ಕತ್ತಿನ ಹಿಂಭಾಗ ಹಿಡಿದ. ಮತ್ತೊಬ್ಬ ದೇಹವನ್ನು ಬಿಗಿಯಾಗಿ ಹಿಡಿದ . ಈ ಮೂರು ವ್ಯಕ್ತಿಗಳ ಭಾರದಲ್ಲಿ ಜಾರ್ಜನ ದೇಹ ನಿಷ್ಕ್ರಿಯಗೊಂಡಿತು. ‘ನನಗೆ ಉಸಿರಾಡಲಾಗುತ್ತಿಲ್ಲ’ ಎಂದು ಜಾರ್ಜ್ ಗೋಗೆರದದ್ದು ಸುತ್ತಲೂ ನಿಂತು ನೋಡುತ್ತಿದ್ದ ಜನರು ಮಾಡಿದ ವಿಡಿಯೋದಲ್ಲಿ ದಾಖಲಾಯಿತು. ನಾಲ್ಕನೇ ಪೊಲೀಸ್ ( ಸಾಮಾನ್ಯ ಭಾಷೆಯಲ್ಲಿ ’ಬ್ಲೂ ಶೀಲ್ಡ್ ’ ಎಂದು ಕರೆಯಲ್ಪಡುವ) ಸುತ್ತಲಿದ್ದ ಜನರು ಹತ್ತಿರ ಬರದಂತೆ ತಡೆದ.ನಾಲ್ಕೇ ನಿಮಿಷಕ್ಕೆ ಜಾರ್ಜ್ ನಿಷ್ಕ್ರಿಯನಾದರೂ ಅವನನ್ನು ಪರೀಕ್ಷಿಸುವ, ಸಿ.ಪಿ.ಆರ್(cardio pulmonary resuscitation) ಮೂಲಕ ರಕ್ಷಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ. ಒಟ್ಟು 8 ನಿಮಿಷ 46 ಸೆಕೆಂಡುಗಳ ಈ ನಾಟಕ ಮುಗಿಯವ ವೇಳೆಗೆ ಅವನ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಜನರ ಆಕ್ರೋಶ ಪೊಲೀಸರ ಮೇಲೇಕೆ?
ಕಾನೂನನ್ನು ರಕ್ಷಿಸುವ ಪೊಲೀಸರು ಜಾರ್ಜ್ ಬಳಿ ಆ 20 ಡಾಲರ್ ಎಲ್ಲಿಂದ ಬಂತು ಎಂದು ಕೇಳಲಿಲ್ಲ. ಅದನ್ನು ಆತನಿಗೆ ಬೇರೆ ಯಾರಾದರು ಕೊಟ್ದಿದ್ದರೆ ಎಂಬುದನ್ನು ತಿಳಿದುಕೊಳ್ಳುವ ಮೊದಲೇ ಆಕ್ರಮಣ ನಡೆಸಿ ಪ್ರತಿರೋಧವೇ ತೋರದ ಆತನ ಮೇಲೆ ಸಾರ್ವಜನಿಕವಾಗೇ ಹಿಂಸೆ ಮಾಡಿದರು. ಅವನ ದೇಹ ತಟಸ್ಥವಾದರೂ ಅವನನ್ನು ಪರೀಕ್ಷಿಸುವ ಯಾವುದೇ ಪ್ರಯತ್ನ ಮಾಡದೆ, ಸಹಾಯಕ್ಕೆ ಮುಂದಾದ ಸಾಮಾನ್ಯ ಜನರನ್ನು ತಡೆದರು.ಆರೋಗ್ಯವಾಗಿದ್ದ 46 ವರ್ಷದ ಜಾರ್ಜ್ ನ್ಯಾಯಾಲಯದ ಮುಂದೆ ಹಾಜರಾಗುವ ಮುನ್ನವೇ ಸತ್ತ. ಇವೆಲ್ಲಕ್ಕೂ ಸಾಕ್ಷಿಗಳಿದ್ದ ಕಾರಣ ಆಗಾಗಲೇ ನೊಂದಿದ್ದ ಕರಿಯ ಜನಾಂಗ ಮತ್ತು ಅವರ ಹೋರಾಟದಲ್ಲಿ ಬೆಂಬಲ ನೀಡುತ್ತಿರುವ ಬಿಳಿಯರು ರಸ್ತೆಗಿಳಿದರು. ಮರುದಿನವೇ ನಾಲ್ವರೂ ಪೊಲೀಸರನ್ನ ಅಮಾನತು ಮಾಡಲಾಯಿತು. ಆದರೆ ಆ ವೇಳೆಗೆ ಕಾಲ ಮಿಂಚಿತ್ತು.
ಈ ಘಟನೆಗೆ ಜನಾಂಗೀಯ ದ್ವೇಷ ಮತ್ತು ಪೂರ್ವಗ್ರಹಗಳೇ ಕಾರಣ ಎನ್ನುವ ನೋವು, ಸಿಟ್ಟು, ದುಃಖ, ಅವಮಾನಗಳಿಂದ ನೊಂದು ಬೆಂದ ಜನ ಭುಗಿಲೆದ್ದರು. ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಗಲಭೆ, ಹಿಂಸೆ, ಲೂಟಿಗಳಾದವು. ದೂರದ ಲಂಡನ್ನಿನ ಅಮೆರಿಕನ್ ರಾಯಭಾರಿ ಕಚೇರಿಯ ಮುಂದೆಯೂ ಸಾವಿರಾರು ಜನರು ಸೇರಿ ಪ್ರತಿಭಟಿಸಿದರು.
ಹಿಂಸೆ ತಾರಕಕ್ಕೇರಿದ್ದೇಕೆ?
ಮಂಗಳವಾರ ಜಾರ್ಜ್ ಫ್ಲಾಯ್ಡ್ ನ ಪೋಸ್ಟ್ ಮಾರ್ಟಂ ರಿಪೋರ್ಟ್ ಹೊರಬಿದ್ದಿತು. ಸಾವಿಗೆ ಕಾರಣ ‘ಮೆಕ್ಯಾನಿಕಲ್ ಆಸ್ಫಿಕ್ಸಿಯೇಷನ್’ ಎಂದು ಅಧಿಕೃತವಾಗಿ ಪ್ರಕಟಗೊಂಡಾಗ ಅದು ಅಮೆರಿಕನ್ ಆಫ್ರಿಕನ್ನರ ಗಾಯದ ಮೇಲೆ ಉಪ್ಪು ಚೆಲ್ಲಿದಂತೆ ಆಯಿತು.
ಟ್ರಂಪ್ ನಿಲುವು
ರಾಜಧಾನಿ ವಾಷಿಂಗ್ಟನ್ ಕೂಡ ಸೇರಿದಂತೆ ಅಮೆರಿಕಾದ 75 ನಗರಗಳಲ್ಲಿ ಗಲಭೆ ನಡೆದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೆಕ್ಯೂರಿಟಿಯನ್ನು ಹೆಚ್ಚಿಸಲಾಗಿದೆ. ಆದರೆ ಇಂತಹ ಸಮಯದಲ್ಲಿ ಜನತೆಗೆ ಸಾಂತ್ವನ ಹೇಳುವ ಬದಲು ಟ್ರಂಪ್ ಗಲಭೆಯನ್ನು ಮಿಲಿಟರಿ ಪಡೆಯನ್ನು ತರಿಸಿ ನಿಯಂತ್ರಿಸುವ ಸೂಚನೆ ನೀಡಿದ್ದಾನೆ. ಅದಕ್ಕೆ ಉತ್ತರವಾಗಿ ಕೆಂಡ ಕಾರುತ್ತ ಹ್ಯೂಸ್ಟನ್ನಿನ ಪೊಲೀಸ್ ಮುಖ್ಯಾಧಿಕಾರಿ ಆರ್ಟ್ ಆಸಿವಿಡೊ ಎಂಬಾತ “Let me just say this to the President of the United States, on behalf of the police chiefs of this country: Please, if you don’t have something constructive to say, keep your mouth shut,” ( ಉಪಯೋಗವಾಗುವ ಏನನ್ನಾದರೂ ಹೇಳಲು ಇಲ್ಲವೆಂದರೆ, ದಯವಿಟ್ಟು ಬಾಯ್ಮುಚ್ಚಿಕೊಂಡಿರು) ಎಂದು ಹೇಳಿದ್ದಾನೆ.
The entire background culminating in the public fury against the racial oppression and the Police highhandedness in the USA and the President’s indifference to the human sensitivities has been nicely encapsulated in a nutshell.
Good coverage of latest information 👍