ಲಾಂಚ್ ಆದ ಒಂದೆರಡು ದಿನಗಳಲ್ಲೇ 10 ಲಕ್ಷಕ್ಕೂ ಹೆಚ್ಚು ಹಿಟ್-ಲೈಕ್ ಸಂಪಾದಿಸಿದ್ದ ಜೈಪುರ ಮೂಲದ ರಿಮೂವ್ ಚೀನಾ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಹಿಂತೆಗೆದುಕೊಂಡಿದೆ.
ಕೊರೊನಾ ವೈರಸ್ ಹಾವಳಿ, ಲಡಾಖ್ ಗಡಿಯಲ್ಲಿ ಚೀನಾ ಸೇನೆಯ ದುಸ್ಸಾಹಸದ ಹಿನ್ನೆಲೆಯಲ್ಲಿ ಭಾರತದಲ್ಲಿ ದಾಖಲೆಯ ಹಿಟ್ ಕಂಡ ಇದು ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ.
ಜನಪ್ರಿಯ 3 ಈಡಿಯೆಟ್ಸ್ ಸಿನಿಮಾದ ಪ್ರೇರಣೆಯಿಂದ ಮುಖ್ಯವಾಗಿ ಲಡಾಖ್ ಪ್ರದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದ ಆಂದೋಲನವನ್ನು ಆರಂಭಿಸಿದ್ದ ಸೋನಮ್ ವಾಗ್ನೆಹಕ್ ಸೇರಿದಂತೆ ಹಲವು ಖ್ಯಾತನಾಮರು ಇದರ ಫಾಲೋವರ್ ಆಗಿದ್ದರು.
ಆದರೆ ಈಗ ಗೂಗಲ್ ಈ ಆಪ್ ನ್ನು ತನ್ನ ಆಪ್ ಸ್ಟೋರ್ ನಿಂದ ಹಿಂತೆಗೆದುಕೊಂಡಿದ್ದು ಈ ಬಗ್ಗೆ ಟ್ವೀಟ್ ಮೂಲಕ ಆಪ್ ಅಭಿವೃದ್ಧಿ ಪಡಿಸಿದ ಒನ್ ಟಚ್ ಆಪ್ ಲ್ಯಾಬ್ ಮಾಲೀಕರಿಗೆ ಮಾಹಿತಿ ನೀಡಿದೆ.
Very quick in updating the developments made in the latest happenings, involving much public attention. Such analyses will keep the readers very much updated on the day to day to developments in various fields.