ಮೈಕ್ರೋಸಾಫ್ಟ್ ಮತ್ತು ಸಹ ಸಂಸ್ಥೆ ಎಂಎಸ್ಎನ್ ತನ್ನ ನ್ಯೂಸ್ ಪೋರ್ಟಲ್ ನಲ್ಲಿ ಕೆಲಸ ಮಾಡುತ್ತಿರುವ ನೂರಾರು ಪತ್ರಕರ್ತರ ಬದಲು ಈ ಮೂಲಕ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್)ಯನ್ನು ಪತ್ರಿಕಾರಂಗಕ್ಕೂ ಅನ್ವಯಿಸಲು ಮುಂದಾಗಿದೆ.
ಕೊರೊನಾ ವೈರಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಬದಲಾಗಿ ಈ ಕ್ರಮವನ್ನು ತೆಗೆದುಕೊಳ್ಳಲು ಕೆಲವು ಕಾಲದ ಹಿಂದೆಯೇ ಯೋಜನೆ ರೂಪಿಸಲಾಗಿತ್ತು ಎಂದು ಮೈಕ್ರೋಸಾಫ್ಟ್ ಸ್ಪಷ್ಟನೆ ನೀಡಿದೆ.
ಕಳೆದ 25 ವರ್ಷಗಳಿಂದ ಮೈಕ್ರೋಸಾಫ್ಟ್ ಸುದ್ದಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, 1995ರಲ್ಲಿ ಪ್ರತ್ಯೇಕ ವೆಬ್ ಚಾನಲ್ ಆರಂಭಿಸಿತ್ತು. ಹೊಸ ಪ್ರಕ್ರಿಯೆಯ ಮೂಲಕ ಸಂಸ್ಥೆಯು ಎಐ ಮೂಲಕವೇ ಸುದ್ದಿಯ ಪ್ರಾಮುಖ್ಯತೆಯನ್ನು ಅಳೆದು ಪ್ರಕಾಶನ ಮಾಡಲಿದೆಯಂತೆ. ಅದಕ್ಕಾಗಿ ನಿರ್ದಿಷ್ಟ ಸಂಖ್ಯೆಯ ಪತ್ರಕರ್ತರಿಗೆ ತರಬೇತಿಯನ್ನೂ ನೀಡಲಿದೆಯಂತೆ.ಈ ಮೂಲಕ ಮಾನವ ಬುದ್ಧಿಮತ್ತೆಗಿಂತಲೂ ರೊಬೋಟ್ ನಂತಹ ಯಾಂತ್ರಿಕ ಬುದ್ಧಿಮತ್ತೆಯು ಎಷ್ಟು ಪ್ರಮಾಣದಲ್ಲಿ ಸೂಕ್ತ ಸುದ್ದಿಯನ್ನು ಆಯ್ಕೆ ಮಾಡುತ್ತದೆ ಎಂದು ಗುರುತಿಸಲಿದೆ ಎಂದು ಹೇಳಲಾಗಿದೆ.
ಆದರೆ ಪತ್ರಿಕಾರಂಗದಂತಹ ಅತಿ ಸೂಕ್ಷ್ಮ ಕ್ಷೇತ್ರದಲ್ಲಿ ಈ ರೀತಿ ಕೃತಕ ಬುದ್ಧಿಮತ್ತೆ ಯಾವ ರೀತಿ ನಿರ್ಧಾರಾತ್ಮಕ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಮುಖ್ಯವಾಗಿ ಇಂತಹ ಒಂದು ಕ್ರಮವನ್ನು ಸಾಕಷ್ಟು ಅಧ್ಯಯನ ಅಥವಾ ವಿಶ್ಲೇಷಣೆಯಿಲ್ಲದೆ ಯಾವ ರೀತಿ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ಜಗತ್ತು ಪ್ರತಿಕ್ರಿಯೆ ನೀಡಿದೆ.
ಮಾನವನ ಬುದ್ಧಿಗೆ ಸಾಟಿಯಾಗದು
ಯಂತ್ರಗಳು ಮಾನವ ಸೃಷ್ಟಿ. ಆತನ ಸೃಜನಶೀಲತೆಯಿಂದಲೇ ಅವುಗಳ ನಿರ್ಮಾಣವಾಗಿದ್ದು, ಹೀಗಾಗಿ ಎಐ ಯಾವ ಕಾರಣಕ್ಕೂ ಪೂರ್ಣವಾಗಿ ಮಾನವನ ಸ್ವಯಂ ಬುದ್ಧಿಮತ್ತೆ ಮತ್ತು ಆ ಕ್ಷಣದಲ್ಲಿ ಉದ್ಭವವಾಗುವ ಕ್ರಿಯೇಟಿವಿಟಿಗೆ ಸಾಟಿಯಾಗಲಾರದು ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗುತ್ತಲೇ ಸಾಗಿದೆ. ಅದರಲ್ಲೂ ಪತ್ರಿಕಾ ರಂಗದಲ್ಲಿ ಆ ಕ್ಷಣದ ಆಗು ಹೋಗುಗಳ ಬಗ್ಗೆ ನಿರ್ಧಾರಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಯಾವುದೋ ಒಂದು ಕಾಲದಲ್ಲಿ ಸಿದ್ಧಪಡಿಸಿದ ಯಂತ್ರಮಾನವ ಸುದ್ದಿಯನ್ನು ಯಾವ ರೀತಿ ನಿರ್ಧರಿಸಬಲ್ಲ ?
ಉದಾಹರಣೆ ಕೊರೊನಾ ವೈರಸ್, ನಿಸರ್ಗ ಚಂಡ ಮಾರುತದಂತಹ ವಿಕೋಪಗಳು ಆ ಕ್ಷಣದಲ್ಲಿ ಮಾಡಬಹುದಾದ ಅನಾಹುತಗಳನ್ನು ಗ್ರಹಿಸಿಯೇ ಸುದ್ದಿಗೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ ಎಂಬುದು ಬಹುತೇಕ ತಜ್ಞರ ಅಭಿಪ್ರಾಯವಾಗಿದೆ. ಇದಕ್ಕೆ ಐಬಿಎಂ ವಾಟ್ಸನ್ ಸಿದ್ಧಪಡಿಸಿದ ಮೋರ್ಗನ್ ಸಿನಿಮಾದ ಟ್ರೇಲರ್ ನ್ನು ಅವರು ಉಲ್ಲೇಖಿಸುತ್ತಾರೆ. ಇದನ್ನು ನೋಡಿದರೆ ಸಾಮಾನ್ಯ ಮನುಷ್ಯನಿಗೆ ಕ್ರಿಯೇಟಿವಿ ಅರ್ಥವಾಗುತ್ತದೆಯೇ ವಿನಾಃ ಇನ್ನಷ್ಟೇ ಜಗತ್ತನ್ನು ಅರಿಯಬೇಕಾಗಿದ್ದ, ತನ್ನದೇ ಕಣ್ಣುಗಳಿಂದ ಜಗತ್ತನ್ನು ನೋಡುತ್ತಿರುವ ಮಕ್ಕಳಿಗೆ ಅರ್ಥವಾಗಲು ಸಾಧ್ಯವಿಲ್ಲ. ಯಂತ್ರಗಳು ಮಾನವನ ಕ್ರಿಯೇಟಿವಿಟಿಗೆ ಪೂರಕವಾಗಬಹುದೇ ಹೊರತು ಅವುಗಳೇ ಸ್ವಯಂ ಯೋಚನೆ ಮಾಡುವ ಶಕ್ತಿಯನ್ನು ಹೊಂದಿಲ್ಲ. ಇದೇ ರೀತಿ ದಿನ ನಿತ್ಯದಲ್ಲಿ ಆಗುವ ನಾನಾ ಬೆಳವಣಿಗೆಗಳನ್ನು ಯಂತ್ರದ ಕಣ್ಣಿನಿಂದ ನೋಡಿ ಸುದ್ದಿಯ ಗ್ರಾವಿಟಿಯನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
Reality has been explained well. It is said when world reality is totally different than conceived in human brain .Artificial Intelligence is creation of real intelligence . The article is precise and good