ಭಾರತದಲ್ಲಿ ಮಗುವಿನ ಕಲಿಕಾ ಪ್ರಕ್ರಿಯೆಯು ಪ್ರಾಚೀನವಾದ ಗುರುಕುಲ ಪದ್ಧತಿಯಿಂದ ಪ್ರಾರಂಭವಾಗಿ ಇಂದು ನಾವು ಕಾಣುತ್ತಿರುವ ಆಧುನಿಕ ಶಿಕ್ಷಣವ್ಯವಸ್ಥೆಯ ವರೆಗೆ ಕಾಲಕಾಲಕ್ಕೆ ಹಲವು ಬದಲಾವಣೆಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳುತ್ತ ಸಾಗಿಬಂದಿದೆ.
“ಶಿಕ್ಷಣವೆಂದರೆ ಕೇವಲ ಮಾಹಿತಿಯನ್ನು ನೀಡುವುದಲ್ಲ ಜಗತ್ತಿನ ಇತರ ಜೀವಿಗಳೊಂದಿಗೆ ಸಾಮರಸ್ಯದಿಂದ ಬಾಳುವುದನ್ನು ಕಲಿಸುವುದು ಶಿಕ್ಷಣ”ಎಂದು ನೋಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ್ ಟ್ಯಾಗೋರ್ ಹೇಳಿದ್ದಾರೆ. ಶಿಕ್ಷಣವು ಮಗುವನ್ನು ಹೊರ ಜಗತ್ತಿನ ಆಗುಹೋಗುಗಳಿಗೆ ತೆರೆದುಕೊಳ್ಳುವಂತೆ ಮಾಡಲು ಕಿಟಕಿಯಂತೆ ಕಾರ್ಯ ನಿರ್ವಹಿಸುತ್ತದೆ ಮತ್ತು ಸತತವಾದ ಬದಲಾವಣೆಯನ್ನು ಬಯಸುತ್ತದೆ.
ಕೊರೋನಾ ಇಫೆಕ್ಟ್
ಇವೆಲ್ಲವನ್ನೂ ಮೀರಿ ಕೊರೋನಾ ವೈರಾಣುವಿನ ದುಷ್ಪರಿಣಾಮವು ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಪರಿವರ್ತನೆಯನ್ನು ಅಳವಡಿಸಿಕೊಳ್ಳುವ ಪರಿಸ್ಥಿತಿಯನ್ನು ತಂದೊಡ್ಡಿದೆ . ಈ ದಿಸೆಯಲ್ಲಿ ಶಿಕ್ಷಣ ತಜ್ಞರು ಮನಃಶಾಸ್ತ್ರಜ್ಞರಾದಿಯಾಗಿ ಪ್ರತಿಯೊಬ್ಬರೂ ಹೊಸ ಆಯಾಮದ ಅನ್ವೇಷಣೆಯಲ್ಲಿ ತೊಡಗಿದ್ದಾರೆ .ಈ ಮಂಥನದಲ್ಲಿ ಹೊಳೆದ ತತ್ ಕ್ಷಣದ ಪರಿಹಾರದ ಮಾರ್ಗ ಆನ್ ಲೈನ್ ಶಿಕ್ಷಣ.
ಪೋಷಕರ ವಿಪರೀತ ಕಾಳಜಿಯೋ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿಯ ಒತ್ತಡವೋ ಅಥವಾ ಕಾಣದ ಕೈಗಳ ಲಾಬಿಯೋ ಕಾಣೆ ಪುಟ್ಟ ಮಕ್ಕಳಿಗೂ ಆನ್ ಲೈನ್ ತರಗತಿಗಳು ಪ್ರಾರಂಭವಾಗಿವೆ. ಗೆಳೆಯರೊಡನೆ ಆಡುತ್ತಾ ಹಾಡುತ್ತಾ ಕುಣಿಯುತ್ತಾ ಕಲಿಯುವ ಮಗು ಒಂದೇ ಕಡೆ ಕುಳಿತು ಕಂಪ್ಯೂಟರ್ ಪರದೆಯ ಮೇಲೆ ಗಂಟೆಗಟ್ಟಲೆ ದೃಷ್ಟಿನೆಟ್ಟು ಕೂರುವ ಪರಿಸ್ಥಿತಿ ಉಂಟಾಗಿದೆ.
ಮಾಂಟೆಸರಿ ಶಿಕ್ಷಣ ಪದ್ದತಿಯ ಇಟಲಿಯ ವೈದ್ಯೆ ಡಾಕ್ಟರ್ ಮರಿಯಾ ಮಾಂಟೆಸ್ಸರಿಯ ಪ್ರಕಾರ “ಚಿಕ್ಕ ಮಕ್ಕಳ ಕಲಿಕೆಯ ಉದ್ದೇಶ ಅವರ ಭವಿಷ್ಯ ಜೀವನಕ್ಕೆ ಅತ್ಯವಶ್ಯಕವಾದ ಮೌಲ್ಯಗಳನ್ನು ಬಿತ್ತುವ ವೇದಿಕೆಯನ್ನು ಸೃಷ್ಟಿಸುವುದೇ ಹೊರತು ಒಣ ದಿನಚರಿಯನ್ನೆಲ್ಲ”. ಆದರೆ ಇಂದು ಪುಟ್ಟ ಮಕ್ಕಳಿಗೂ ಆರಂಭವಾಗಿರುವ ಆನ್ ಲೈನ್ ಶಿಕ್ಷಣ ಶಿಶು ಕೇಂದ್ರಿತವಾಗಿದೆಯೇ?
ಮನೆಯಲ್ಲಿಯೇ ಆನ್ ಲೈನ್ ಕಲಿಕೆಯ ಪ್ರಕ್ರಿಯೆ ಆರಂಭವಾದರೆ ಮಗು ಕೊರೋನಾ ವೈರಾಣುವಿಗೆ ತುತ್ತಾಗುವ ಸಂಭವ ಕಡಿಮೆ.ಮನೆಯಲ್ಲೇ ಸುರಕ್ಷಿತವಾಗಿರುತ್ತವೆ. ಬ್ಯಾಗನ್ನು ಹೊರಲಾರದೆ ಹೊತ್ತು ಶಾಲೆೆಗೆ ಹೋಗುವ ಶ್ರಮವೂ ತಪ್ಪುತ್ತದೆ.ಜೊತಗೆ ಸಣ್ಣ ವಯಸ್ಸಿನಲ್ಲೇ ಕಂಪ್ಯೂಟರ್ ಜ್ಞಾನವು ಸಿಕ್ಕಂತಾಗುತ್ತದೆ. ಕೋವಿಡ್ ಕಾರಣದಿಂದಾಗಿ ಮಗುವಿನ ಶೈಕ್ಷಣಿಕ ವರ್ಷವೂ ವ್ಯರ್ಥವಾಗುವುದಿಲ್ಲ. ಇದೆಲ್ಲವೂ ಸರಿಯೇ.. ! ಆದರೆ ಆಳವಾಗಿ ಯೋಚಿಸಿದಾಗ ಆನ್ ಲೈನ್ ಶಿಕ್ಷಣವು ಪುಟ್ಟ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಕಿಂಡರ್ ಗಾರ್ಟನ್ (ಅಂದರೆ ಮಕ್ಕಳ ಹೂಬನ) ಅಥವಾ ಕೆ.ಜಿ.ತರಗತಿಗಳ ಪಧ್ಧತಿಯನ್ನು ಪರಿಚಯಿಸಿದ ಜರ್ಮನಿಯ ಶಿಕ್ಷಣ ತಜ್ಞ ಫೆಡರಿಕ್ ಪ್ರೊಬೆಲ್ ರ ಪ್ರಕಾರ “children are like flowers. Each is beautiful alone but glorious when seen in the community of peers”
ಶಿಸ್ತಿನ ಚೌಕಟ್ಟಿನಲ್ಲಿ ಪರಸ್ಪರ ಹೊಂದಾಣಿಕೆ ಸಹಕಾರಗಳಿಂದ ಗುಂಪಿನಲ್ಲಿ ಉಂಟಾಗುವ ಕಲಿಕೆಯು ಮಕ್ಕಳಲ್ಲಿ ಕಲಿಯುವ ಖುಷಿಯನ್ನು ಹುಟ್ಟುಹಾಕುತ್ತದೆ.
miss ಆದ ಮಿಸ್
ತರಗತಿಗಳಲ್ಲಿ ನಡೆಯುವ ಮನೋ ದೈಹಿಕ ಚಟುವಟಿಕೆಗಳು ಮಗುವಿನ ಮಾನಸಿಕ ಮತ್ತು ಶಾರೀರಿಕ ವಿಕಾಸವನ್ನು ಉತ್ತೇಜಿಸುತ್ತವೆ. ಜೊತೆಗಾರರೊಂದಿಗಿನ ಕಲಿಕೆಯು ಮಗುವಿನಲ್ಲಿ ಹೊಸಹೊಸ ಪರಿಕಲ್ಪನೆಗಳನ್ನು ಮೂಡಿಸಿ ಇತರರ ಮೆಚ್ಚುಗೆ ಗಳಿಸಲಾದರೂ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಪಡಿಸುತ್ತದೆ. ಗುಂಪಿನಲ್ಲಿ ಕಲಿಕೆಯ ವೇಗವೂ ಅಧಿಕ ಮತ್ತು ಪರಿಣಾಮಕಾರಿಯಾಗಿರುತ್ತದೆ .ಏಕತೆಯ ಪರಿಕಲ್ಪನೆಯು ಸ್ವಾಭಾವಿಕವಾಗಿ ಒಡಮೂಡುತ್ತದೆ .ಕಣ್ಣೆದುರಿನಲ್ಲಿಯೇ ಇರುವ “miss” ಮಕ್ಕಳ ಪ್ರೀತ್ಯಾದರಗಳ
ಕೇಂದ್ರವಾಗಿ ಮಗುವಿನ ಮುಗ್ಧ ಮಾತುಗಳಿಗೆ ಕಿವಿಯಾಗುತ್ತಾರೆ.
ಮನೆಯಲ್ಲೇ ಕುಳಿತು ಆನ್ ಲೈನ್ ಶಿಕ್ಷಣ ವ್ಯವಸ್ಥೆಯಲ್ಲಿ ಇವುಗಳನ್ನೆಲ್ಲಾ ಕಲ್ಪಿಸಿಕೊಳ್ಳಲು ಅಸಾಧ್ಯ. ಮಗುವು ಸಂಭಾಷಣಾ ಕೌಶಲ್ಯ, ಸಂವಹನಾ ಚಾತುರ್ಯಗಳಿಂದ ವಂಚಿತವಾಗಿ ಒಂಟಿತನಕ್ಕೆ ತುತ್ತಾಗುತ್ತದೆ. ಅದರಲ್ಲೂ ಪೋಷಕರು ಕೆಲಸದ ನಿಮಿತ್ತ ಹೊರ ಹೋದರಂತೂ ಆನ್ ಲೈನ್ ಶಿಕ್ಷಣದ ಕಥೆ ವ್ಯಥೆಯೇ ಸರಿ .ಹಿರಿಯರ ಉಸ್ತುವಾರಿಯಿಲ್ಲದೆ ಆನ್ ಲೈನ್ ತರಗತಿಗಳು ನಡೆಯುವಾಗ ಇಂಟರ್ನೆಟ್ ಯುಗದ ಸೈಬರ್ ಕ್ರೈಮ್ ಗಳಿಂದ ಮಗುವನ್ನು ರಕ್ಷಿಸುವವರು ಯಾರೆಂಬುದು ಯಕ್ಷಪ್ರಶ್ನೆ.
ಅಶ್ಲೀಲ ವೆಬ್ ಸೈಟ್ ಗಳ ವೀಕ್ಷಣೆಯ ಚಟಕ್ಕೆ ಮಗು ಒಳಗಾದರೆ?
ಅಶ್ಲೀಲ ವೆಬ್ ಸೈಟ್ ಗಳ ವೀಕ್ಷಣೆಯ ಚಟಕ್ಕೆ ಮಗು ಒಳಗಾದರೆ ಆ ಕೂಪದಿಂದ ಅದನ್ನು ಮೇಲೆತ್ತುವ ಬಗೆಯಾದರೂ ಎಂತು ? ಸ್ಕ್ರೀನ್ ಟೈಂ ಅತಿಯಾಗಿ ಮಗುವಿನ ದೃಷ್ಟಿಯ ಮೇಲೆ ಉಂಟಾಗುವ ದುಷ್ಪರಿಣಾಮ, ವ್ಯಾಯಾಮವಿಲ್ಲದ ದಿನಚರಿಯಿಂದ ಚಿಕ್ಕವಯಸ್ಸಿನಲ್ಲೇ ಬರುವ ಬೊಜ್ಜು ಇವೆಲ್ಲವುಗಳಿಗೂ ಆನ್ ಲೈನ್ ಶಿಕ್ಷಣ ಕಾರಣೀಭೂತವಾಗುತ್ತದೆ . ಚಿಕ್ಕ ಮಕ್ಕಳಲ್ಲಿ ಏಕಾಗ್ರತೆ ಮತ್ತು ಜ್ಞಾನತ್ಮಕ ಹಾಗೂ ಭಾವನಾತ್ಮಕ ವಲಯಗಳು ಹಿರಿಯರಷ್ಟು ಬೆಳವಣಿಗೆ ಹೊಂದದೇ ಇರುವುದರಿಂದ ಆನ್ ಲೈನ್ ತರಗತಿಗಳ ನಿರ್ವಹಣೆ ಸುಲಭದ ಮಾತಲ್ಲ.
ಮನೆಗಳಲ್ಲಿ ಆನ್ಲೈನ್ ಶಿಕ್ಷಣಕ್ಕಾಗಿ ಪ್ರತ್ಯೇಕ ಕೊಠಡಿ, ಕಂಪ್ಯೂಟರ್, ಕಲಿಕಾ ವಾತಾವರಣಗಳನ್ನು ಸೃಷ್ಠಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಆಗ “ಶಿಕ್ಷಣ ಪಡೆಯುವ ಹಕ್ಕು” ಅರ್ಥಹೀನವಾಗಿಬಿಡುತ್ತದೆ. ಬಣ್ಣಬಣ್ಣದ ಅಂಗಿ ಧರಿಸಿ ಸ್ಕೂಟರ್ ನಲ್ಲಿ ತಾಯಿ/ತಂದೆಯ ಹಿಂದೆ ತಬ್ಬಿಕುಳಿತು, ಅಜ್ಜಿ ತಾತಂದಿರಿಗೆ ಪುಟ್ಟ ಕೈಗಳಿಂದ ಟಾಟಾ ಮಾಡುತ್ತಾ, ಪುಟ್ಟ ತಲೆಯಲ್ಲಿ ಅಂದು ಶಾಲೆಯಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳ ಬೇಕಿರುವ ನಾನಾ ವಿಷಯಗಳ ಬಗ್ಗೆ ಯೋಚಿಸುತ್ತಾ ಖುಷಿಯಿಂದ ಶಾಲೆಗೆ ತೆರಳುವ ದೃಶ್ಯವನ್ನು ನೋಡಿದವರಿಗೆ ಮಗು ಮನೆಯಲ್ಲಿ ಒಬ್ಬಂಟಿಯಾಗಿ ಕಂಪ್ಯೂಟರಿನೆದುರು ಏಕತಾನತೆಯಿಂದ ಕುಳಿತಿರುವ ದೃಶ್ಯ ನಿಜಕ್ಕೂ ಭೀತಿ ಹುಟ್ಟಿಸುತ್ತದೆ. ಮಗುವಿನ ಶಿಕ್ಷಣಿಕ ಜೀವನದ ಆರಂಭದ ವರ್ಷಗಳು ಹರುಷದ ವಾತಾವರಣವನ್ನು ನಿರ್ಮಿಸಬೇಕೆ ಹೊರತು ಬಂಧನದ ಅನುಭವವನ್ನಲ್ಲ.
ಆಟವಾಡುತ್ತಾ ತಾನೇತಾನಾಗಿ ಕಲಿಯುವ ಹಂತದಲ್ಲಿ ಮಗುವಿನ ಆಸಕ್ತಿಯ ಕ್ಷೇತ್ರ, ರಚನಾತ್ಮಕ ಸ್ವಭಾವ, ಗುಂಪಿನಲ್ಲಿ ನಡವಳಿಕೆ, ಮನಸ್ಸಿನ ಸಂಕೀರ್ಣತೆ, ಕಲ್ಪನಾಶಕ್ತಿ ಇವೆಲ್ಲವುಗಳನ್ನು ಸತತವಾಗಿ ಗಮನಿಸಿ,ಪೋಷಕರಿಗೆ ತಿಳಿಯಪಡಿಸುವುದು ಸುಲಭವಲ್ಲ. ಇದಕ್ಕೆ ಅತ್ಯುತ್ತಮ ತರಬೇತಿ ಪಡೆದ ತಾಯಿ ಮನದ ಶಿಕ್ಷಕಿಯರೇ ಬೇಕು. ಮನೆಯಲ್ಲಿ ನಡೆಯುವ ಆನ್ಲೈನ್ ಶಿಕ್ಷಣದಿಂದ ಈ ಎಲ್ಲಾ ಪ್ರಕ್ರಿಯೆಗಳನ್ನು ಅಪೇಕ್ಷಿಸುವುದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಮಾರಕವೇ ಸರಿ. ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ತರಗತಿಗಳು ಸಂಪೂರ್ಣವಾಗಿ ಚಟುವಟಿಕೆ ಆಧಾರಿತವಾಗಿ ನಡೆಯಬೇಕೆಂಬುದು RTE (Right to Education) ನ ಧ್ಯೇಯ. ಇದು ಸರ್ವ ಶಿಕ್ಷಣ ಅಭಿಯಾನದ ಮೂಲ ಮಂತ್ರವೂ ಹೌದು. ಆನ್ಲೈನ್ ಶಿಕ್ಷಣದಿಂದ ಈ ಮೂಲ ಉದ್ದೇಶಕ್ಕೆ ಕೊಡಲಿಯೇಟು ಬೀಳುತ್ತದೆ. ಆನ್ಲೈನ್ನಲ್ಲಿ ಬೋಧಿಸುವ ಶಿಕ್ಷಕರಿಗೆ ವಿಶೇಷವಾದ ತರಬೇತಿಯನ್ನು ನೀಡದ ಹೊರತು ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಗಳೆರಡೂ ಯಶಸ್ವಿಯಾಗುವುದು ಅನುಮಾನ .
ಆದಾಗ್ಯೂ ಜಾಗತಿಕ ಪರಿಸ್ಥಿತಿಯ ಒತ್ತಡದಿಂದ ಅನ್ಯಮಾರ್ಗವಿಲ್ಲದೆ ಪುಟ್ಟ ಮಕ್ಕಳಿಗೆ ಆನ್ ಲೈನ್ ಶಿಕ್ಷಣವನ್ನು ಸದ್ಯದ ಮಟ್ಟಿಗೆ ಒಪ್ಪಿಕೊಳ್ಳುವುದೇ ಆದರೆ ಅದಕ್ಕಾಗಿ ಸೂಕ್ತವಾದ ಮಾರ್ಗದರ್ಶಿಯನ್ನು ಅನುಸರಿಸಲೇಬೇಕು. ಆನ್ಲೈನ್ ತರಗತಿಯ ಪ್ರಾರಂಭದಲ್ಲಿ ಪ್ರಾರ್ಥನೆ, ವ್ಯಾಯಾಮ, ತರಗತಿಗಳ ಮಧ್ಯೆ ವಿಶ್ರಾಂತಿ, ಮನೆಯಲ್ಲೇ ಅತ್ತಿತ್ತ ಓಡಾಡುತ್ತಾ ಚಟುವಟಿಕೆ ಮಾಡುವಂತೆ ಮಾರ್ಗದರ್ಶನ ,ಕಂಪ್ಯೂಟರ್ ಗೇಮ್ ಗಳ ಮೂಲಕ ಪಾಠ ಇವೆಲ್ಲವನ್ನು ಅಳವಡಿಸಿ ವೇಳಾ ಪಟ್ಟಿಯನ್ನು ಸಿದ್ಧಗೊಳಿಸಲು ಬೇಕಾಗುತ್ತದೆ. ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಮಗುವಿಗೆ ಕಂಪ್ಯೂಟರ್ ಪರದೆಯ ಮೇಲೆ ಶಿಕ್ಷಕರೊಂದಿಗೆ ಇತರ ಸ್ನೇಹಿತರು ಕಾಣುವಂತಿರಬೇಕು. ಇವೆಲ್ಲ ಮಾನದಂಡಗಳನ್ನು ಪೂರೈಸಿ, ಆನ್ ಲೈನ್ ಶಿಕ್ಷಣ ವ್ಯವಸ್ಥೆಯನ್ನು ರಚಿಸುವುದು ಸುಲಭವೇ ?ಯೋಚಿಸಿ.
ಮಕ್ಕಳಿಗೆ ಶಿಕ್ಷೆ
ಎಲ್ಲರೊಡನೆ ಬೆರೆತು ಕಲಿಯಬೇಕಾದ ಮಗುವನ್ನು ಶಿಕ್ಷೆಗೊಳಪಡಿಸಿದಂತೆ ಆಗುವುದಿಲ್ಲವೇ ? ಪುಟ್ಟ ಮಕ್ಕಳಿಂದ ಅವರ ಪ್ರಾಥಮಿಕ ಶಾಲಾ ಸವಿನೆನಪುಗಳನ್ನು ಕಿತ್ತುಕೊಳ್ಳುವ ಹಕ್ಕು ನಮಗೆಲ್ಲಿದೆ? ಆನ್ ಲೈನ್ ಶಿಕ್ಷಣದಿಂದ ಪುಟ್ಟ ಮಕ್ಕಳನ್ನು ಕಷ್ಟಪಟ್ಟು ಕಲಿಯುವಂತೆ ಮಾಡಬಹುದೇ ವಿನಃ ಇಷ್ಟಪಟ್ಟು ಕಲಿಯುವಂತೆ ಮಾಡುವುದು ಕಷ್ಟಸಾಧ್ಯ.
ಎಲ್ಲ ಕ್ರಿಯೆಗೂ ಒಂದು ಕೊನೆ ಇದ್ದೇ ಇರುತ್ತದೆ. ಹಾಗೆ ಕರೋನಾಗೆ ಸಹ . ಒಂದೆರಡು ತಿಂಗಳುಗಳಲ್ಲಿ ಪುಟ್ಟ ಮಕ್ಕಳು ಆನ್ ಲೈನ್ ನಲ್ಲಿ ಕಲಿತು ಗುಡ್ಡೆ ಹಾಕುವುದೇನು ಇರುವುದಿಲ್ಲ. ಕೆಲಕಾಲ ಮಕ್ಕಳನ್ನು ಮಕ್ಕಳಾಗಿ ಇರಲು ಬಿಟ್ಟು ಬಿಡೋಣ. ಅವರನ್ನು ಯಂತ್ರಗಳನ್ನಾಗಿಸಲು ಉಳಿದ ಜೀವನವೇ ಎದುರಿಗಿದೆ. ಹಾಗಾಗಿ ಕವಿದ ಮೋಡ ಕರಗಿದ ಮೇಲೆ ಮಕ್ಕಳು ಕುಣಿಯುತ್ತಾ ಶಾಲೆಗೆ ಹೋಗಲಿ ಅಲ್ಲವೇ ?
👍👍👍👍👍
🙏
🙏 I totally agree with you PrabhaAkka
Thanks BRUNDA.. Really thought of your little son while writing.
ಸುಲಭವಾಗಿ ಓದಿಸಿಕೊಂಡು ಹೋಗುವ ಲೇಖನ. ಮಕ್ಕಳ ಮನಸ್ಸನ್ನು ಚೆನ್ನಾಗಿ ಓದಿರುವ ಶಿಕ್ಷಕಿ. ಓದುಗರನ್ನು ಯೋಚನೆಗೆ ಹಚ್ಚುವ ಲೇಖನ.
ಧನ್ಯವಾದಗಳು
ಆನ್ ಲೈನ್ ತರಗತಿ ಮಾಡೋದುಮಕ್ಕಳು ಕಲಿಯಲಿ ಅಂತ ಅಲ್ಲ. ಅವರಿಗೆ ಫೀಸ್ ಮುಖ್ಯ. ನಾವು ಕೊರೋನಾ ಸಮಯದಲೂ ಮಕ್ಕಳಿಗೆ ಆನ್ ಲೈನ್ ಮೂಲಕ ಪಾಠ ಮಾಡಿದೇವೆ ಅಂತಾ ತೋರಿಸಿ ಕೊಳುವ ಇರಾದೆ. ಪುಟ್ಟ ಮಕ್ಕಳ ಮನಸು ಸದಾ ಆಟದ ಕಡೆ. ಅವರಿಗೆ ಕಥೆ ಹೇಳಿ ,ಆಟ ಆಡಿಸಿ,,ಚಪ್ಪಾಳೆ ಮೂಲಕ ಪಾಠ ಮಾಡಬೇಕು.ಆವಾಗಲೇ ಹರ ಸಾಹಸ. ಇದನು ಯಾರು ಸಲಹೆ ಕೊಟ್ಟರೋ. ಫೀಸ್ ವಸೂಲಿ ತಂತ್ರ
ನಿಜ… Thank you for your response🙏
ತುಂಬಾ ಸೊಗಸಾದ ಲೇಖನ, ಇವರ ಅನುಭವ ಮಾತು, ಈ ಕುರಿತು ಸರ್ಕಾರ ಮತ್ತು ಪಾಲಕರು ಯೋಚನೆ ಮಾಡಬೇಕು
Thank you Sir
Thank you Sir
ಸರಳ ,ಸುಂದರ ಲೇಖನ.👌👌
Thank you Manju 😊
Thank you
ಕಾಮೆಂಟ್: ತುಂಬಾ ಚೆನ್ನಾಗಿದೆ ಲೇಖನ ಪ್ರಭಾ ಬಹಳ ಖುಷಿಯಾಯಿತು ಓದಿ…ಆನ್ಲೈಲ್ ಶಿಕ್ಷಣದಿಂದ ಮಕ್ಕಳ ಮೇಲೆ ದುಷ್ಪರಿಣಾಮ ಆಗೋದು ಖಂಡಿತ, ಹೆತ್ತವರು ಇದರ ಬಗ್ಗೆ ಮುಂಜಾಗ್ರತೆ ವಹಿಸೋದು ಬಹಳ ಮುಖ್ಯ…
Thank you Manju
Your feedback means a lot Thankyou Suresh bhava
ಆನ್ ಲೈನ್ ಕ್ಲಾಸ್ ಪುಟ್ಟ ಪುಟಾಣಿಗಳಿಗೆ ಬೇಕೆ? ಇದರ ಬಗ್ಗೆ ಪ್ರಭಾ ಅವರ ವಿಶ್ಲೇಷಣೆ ಉತ್ತಮ ಮಾಹಿತಿಯನ್ನು ಒಳಗೊಂಡಿದೆ. ಬಾಲವಾಡಿ ಎಂದು ನಮ್ಮ ಭಾಷೆಯಲ್ಲಿ ಕರೆಯುವ, ಕಿಂಡರ್ ಗಾರ್ಟನ್ ಅಥವಾ ಪ್ರಿ ಸ್ಕೂಲು, online ನಲ್ಲಿ ಅತ್ಯಂತ ತುರ್ತು ಎಂಬಂತೆ ಕಲಿಯಬೇಕಾದ ಪ್ರಮೇಯವೇನೂ ಬಂದಿಲ್ಲ. ಮನೆಯಲ್ಲಿ ಅಜ್ಜ, ಅಜ್ಜಿ,ಇನ್ನಿತರ ಹಿರಿಯರಿದ್ದರೆ ಅವರ ಮಾರ್ಗದರ್ಶನದಲ್ಲಿ ಸಣ್ಣ ಮಕ್ಕಳು ನಮ್ಮಲ್ಲಿನ ಶ್ಲೋಕಗಳು, ಸಣ್ಣ ಪುಟ್ಟ ಲೆಕ್ಖದಂತಹ ಪ್ರಾಕ್ಟಿಕಲ್ , ವ್ಯಾವಹಾರಿಕ ಜ್ನಾನಗಳನ್ನು ಕಲಿಯಬಹುದು.
ಕೆಲಸಕ್ಕೆ ಹೋಗುವ ಪೋಷಕರಿಗೆ ಮಕ್ಕಳನ್ನು ಶಾಲೆಗೂ ಕಳುಹಿಸದೇ ಮನೆಯಲ್ಲೂ ನೋಡಿಕೊಳ್ಳುವವರಿಲ್ಲದೇ ಹೋಗುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಉತ್ತರವನ್ನು ಕಂಡು ಹುಡುಕಲು, ತಮ್ಮ ಸುತ್ತಮುತ್ತಲಿನ ಜನರ ಸಹಕಾರವೇ ಪರಿಹಾರ ಎಂದು ಕಾಣುತ್ತದೆ.
ಲೇಖಕಿ ಹೇಳುವಂತೆ ಆಟವಾಡುವ ಪುಟ್ಟ ಪುಟಾಣಿಗಳಿಗೆ ಆನ್ ಲೈನ್ ತರಗತಿಗಳು ತುರ್ತು ಪರಿಹಾರ ಕಂಡಿತ ಅಲ್ಲ. ಮೂರು ನಾಲ್ಕು ತಿಂಗಳ ಆಟವಾಡಿಕೊಂಡಿದ್ದರೆ ಏನೇನೂ ನಷ್ಟವಿಲ್ಲ. ಆ ಮಕ್ಕಳಿಗೆ ಆಟವಾಡಲು, ಬೆರೆಯಲು ಅಕ್ಕಪಕ್ಕದಲ್ಲಿಯೇ ಓರಗೆಯವರು ಸಿಕ್ಕರೆ ಅದೇ ಸದ್ಯದ ಉತ್ತಮ ಆಯ್ಕೆ.
ಇನ್ನು ಆನ್ ಲೈನು ತರಗತಿಯ ಪರಿಹಾರ ಬಹುಶಃ ದೊಡ್ಡ ಮೊತ್ತದ ಫೀಸು ಪಡೆದ ಶಾಲೆಗಳು ತಮ್ಮ ಹಿತರಕ್ಷಣೆಗಾಗಿ ಕಂಡುಕೊಂಡ ಪರಿಹಾರವಷ್ಟೆ. ಮಕ್ಕಳ ಹಿತರಕ್ಷಣೆಗಾಗಿ ಅಲ್ಲ.
ಧನ್ಯವಾದಗಳು ಲಲಿತಾ
Thank you so so much for taking your precious time to give feedback on the writeup..
Super article prabha
Thank you 😊
ಪ್ರತಿಭಾವಂತ ಲೇಖಕಿ ಮತ್ತು ಶಿಕ್ಷಕಿ ಪ್ರಭಾರವರ ಲೇಖನ ಚೆನ್ನಾಗಿದೆ ಮತ್ತು ಪೋಷಕರ ಚಿಂತನೆಗೆ ಒಂದು ದಾರಿ ದೀಪ ವಾಗಿದೆ .
ಧನ್ಯವಾದಗಳು ಸರ್
ಸಣ್ಣ ಲೇಖನ… ಸಾವಿರ ಪ್ರಶ್ನೆಗಳಿಗೆ ಉತ್ತರ ಕೊಡಬಲ್ಲದು ಮಿಸ್…. ಈ ಲೇಖನದಲ್ಲಿ ಪೋಷಕರು ಯೋಚಿಸುವುದು ಬಹಳ ಇದೆ….
ಸದ್ಯದ ಪರಿಸ್ಥಿತಿ ಅಲ್ಲಿ ನೋಡಿ ಕಲಿಯುವುದಕ್ಕಿಂತ ಆಡಿ ಕಲಿಯುವುದು ಒಳ್ಳೇದು…
ನಿಜ ಶಿವರಾಜ್.. 😊 Thank you
ಪ್ರಭಾ , ಕಿರಿಕಿರಿ ದೇವರಿಗೆ ಮರದ ಜಾಗಟೆ ಬಾರಿಸಿ ಹರಕೆ ತೀರಿಸಿದ ಕಥೆ ಕೇಳಿದ ನೆನಪಿದೆ. ಇಂದು online class ಎಂದು ಹೇಳುತ್ತಾ, ಎಲ್ಲಾ ಸೇರಿ ನಾವು ನೀಡುತ್ತಿರುವುದು ಶಿಕ್ಷಣವೇ ಎಂದು ವಾದ ಮಾಡುವಂತೆ ಇದೆ . ನಿನ್ನ ಲೇಖನ ಪ್ರಸ್ತುತ ಪರಿಸ್ಥಿತಿಗೆ ಕೈಗನ್ನಡಿ ಹಿಡಿದಂತೆ ಇದೆ. ಓದಿ ತುಂಬಾ ಸಂತೋಷವಾಯ್ತು.
ಹೌದು ವಾಣಿ.. ಕಿರಿಕಿರಿ ದೇವರ ಕಥೆಯಂತೆ ಇದೆ ಸಂದರ್ಭ😃 Thank you for the response
Hi nee heliddu correct. Tumba chennagi manassige natuvante baradde.
Thank you Pratibha. Your words mean a lot 😊
Online class ಎಂಬ ಪರಿಕಲ್ಪನೆಯನ್ನು ಪ್ರಾರಂಭಿಸಿದ ಬ್ರಹಸ್ಪತಿಗೆ ನಿಜಕ್ಕೂ ಸನ್ಮಾನ ಮಾಡಬೇಕು. ಅವರಿಗೆ 4-5 ವರ್ಷದ ಮಕ್ಕಳು ಅಥವಾ ಮೊಮ್ಮಕ್ಕಳು ಇದ್ದರೆ ಈ system ನ್ನು ಅವರ ಮೇಲೆ ಪ್ರಯೋಗಿಸಿ ಅದು success ಆದರೆ ನೋಡೋಣ ಎನ್ನಬೇಕಿತ್ತು.
Online class ನ್ನು ತಂದೆ/ತಾಯಿ ಮುಗಿಸಿ, ಮಕ್ಕಳಿಗೆ ನಿದ್ದೆ ಮಾಡಿಸಿ, ಅದನ್ನೇ ಟೀಚರ್ ಗೆ ಕಳುಹಿಸಿದರೆ ಅದು great achievement. ಆದರೆ ಇದರಿಂದ ಮಕ್ಕಳು ಇನ್ನಷ್ಟು ದಡ್ಡರು, ವ್ಯವಹಾರ ಜ್ಞಾನ ಇಲ್ಲದವರು, ಸಮಾಜದ ವ್ಯವಸ್ಥೆ ಬಗ್ಗೆ ಅರಿವಿಲ್ಲದವರು ಮತ್ತು computer/mobile addict ಆಗೋದಿಲ್ವಾ ???
ಇದರ ಬದಲು ಮಕ್ಕಳನ್ನು ಮನೆಯ ಸುತ್ತ ಮುತ್ತ ಓಡಾಡಿಸಿ ಅವರಿಗೆ ಸಾಮಾನ್ಯ ಜ್ಞಾನದ ಬಗ್ಗೆ, social distance ಬಗ್ಗೆ,
ಕೈ ಸ್ವಚ್ಛತೆ ಬಗ್ಗೆ, ಆಹಾರದ ಬಗ್ಗೆ ತಿಳಿವಳಿಕೆ ನೀಡಿದರೆ ಅವರು ಇನ್ನೂ ಚುರುಕು, ಬುದ್ಧಿವಂತರೂ ಆಗುತ್ತಾರೆ, ವ್ಯವಹಾರ ಜ್ಞಾನ ಹೊಂದುತ್ತಾರೆ
ನಿಜ ಸರ್.. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? Thank you
ನಿಜ ಭಟ್ ಸರ್.. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ..ಆನ್ಲೈನ್ ಶಿಕ್ಷಣ ನಿರ್ದಿಷ್ಟ ವಯಸ್ಸಿನ ಮೇಲ್ಪಟ್ಟ ಮಕ್ಕಳಿಗೆ ಸರಿ.
You are right, nice Article👌
Thank you vani 😘
ಲೇಖನ ಸರಳ ಮತ್ತು ಅರ್ಥ ಪೂರ್ಣ ವಾಗಿದೆ ಆನ್ಲೈನ್ ಪದ್ಧತಿ ಸರಿಯಾದ ಪದ್ಧತಿ. ಅಲ್ಲ. ಗುರು ಮತ್ತು ಶಿಷ್ಯ ರ ಸಂಭಂದ ಅವಿನಾಭಾವ ಸಂಭಂದ. ತರಗತಿ ಯಲ್ಲಿ ಮಕ್ಕಳೆಲ್ಲ ಒಟ್ಟಿಗೆ ಸೇರಿ ಕಲಿಯುವ ಪದ್ಧತಿ ಸರಿಯಾದದ್ದು ಇದನ್ನು ಸಂಬಂಧ ಪಟ್ಟವರು ಅರ್ಥ ಮಾಡಿಕೊಂಡು ನಿರ್ಧಾರ ತೆಗೆದು ಕೊಂಡರೆ ಒಳ್ಳೇದು. ನಿಮ್ಮ ಈ ಪ್ರಯತ್ನ ದಿಂದ ಮಕ್ಕಳು ಪಡುತ್ತಿರುವ ಕಷ್ಟ ದುರಾಗಲಿ.
ಚೆನ್ನಾಗಿ ಹೇಳಿದಿರಿ 😊
ಓಮ್ಮೆ ಓದಿದರೆ ಸಾಕು ,
ಸುಲಭವಾಗಿ ಅರ್ಥ ವಾಗುವಂತೆ ಇ ಲೇಖನ
‘ ಇರುವುದೆಲ್ಲವ ಇದ್ದಹಾಗೆ ‘
ಮೂಡಿ ಬಂದಿದೆ .
ಚೆನ್ನಾಗಿದೆ ಮಿಸ್ ಲೇಖನ
ನಿಜ ಸತೀಶ😊
ನಿಜ ಸರ್.. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? Thank you
Carona ಭೀತಿ ಗೊಳಗಾಗಿ online ಶಿಕ್ಷಣ ಎಂಬ ಹುಚ್ಚು ಕುದುರೆ ಹಿಂದೆ ಓಡುತ್ತಿರುವ ಈ ಸಂದರ್ಭದಲ್ಲಿ, ಅದರ ಇನ್ನೊಂದು ಕರಾಳ ಮುಖ ವನ್ನು ತೆರೆದಿಟ್ಟ ಅಧ್ಬುತ ಲೇಖನ.
ಧನ್ಯವಾದಗಳು ಶ್ರೀರಾಮ್ 🙏
ಒಂದು ಸುಂದರವಾದಬರಹ..
ಒಂದು ಕಾಲದಲ್ಲಿ ಗುರುಕುಲ ಪದ್ಧತಿಯಿಂದ ಬಂದ ಶಿಕ್ಷಣವು, ಈಗ ‘ಶಿಕ್ಷೆ’ಣ ವಾಗಿ ಪರಿಣಮಿಸೀತೆ?
ಶೇಕಡ ೨0ರಷ್ಟು ಪೋಷಕರು ತಮ್ಮ ಮಕ್ಕಳ ಭವಿಷ್ಯ ಹಾಳಾಗಬಾರದು ಎಂಬ ದೃಷ್ಟಿಕೋನದಿಂದ ಆನ್ಲೈನ್ ತರಗತಿಗೆ ಒಪ್ಪಿಗೆಕೊಟ್ಟರೂ ಉಳಿದ ಶೇಕಡಾ ೮0ರಷ್ಟು ಪೋಷಕರು ಆನ್ಲೈನ್ ತರಗತಿಯ ದುಷ್ಪರಿಣಾಮದಿಂದಾಗಿ ಸಹಕರಿಸುವುದಿಲ್ಲ…
ನೀವು ಹೇಳಿದ ಪ್ರಕಾರ ಇನ್ನೆರಡು ತಿಂಗಳಲ್ಲಿ ಸಂಪೂರ್ಣ ಸರಿಹೋದರೆ ಪೋಷಕರು ಸಹ ಎರಡು ತಿಂಗಳು ಕಾದು ಕುಳಿತು ಕೊಳ್ಳುವುದು ಉತ್ತಮವೆನಿಸುತ್ತದೆ.
“ಕತ್ತಲೆಯ ಕಾನನದಿ ನಿಂತಿರುವ ಮಕ್ಕಳು…!”
Thank you Krishna..
ನಿಮ್ಮ ವಿಶ್ಲೇಷಣೆ ಲೇಖನದ ಉದ್ದೇಶಕ್ಕೆ ಪೂರಕವಾಗಿದೆ. ಬೇಗ ಬೆಳಕು ಮೂಡಲಿ ಎಂಬುದು ಎಲ್ಲರ ಆಶಯ
ಲೇಖನ ತುಂಬ ಅರ್ಥಪೂರ್ಣವಾಗಿದೆ. ನಿಮಗೆ ಧನ್ಯವಾದಗಳು. ನೀವು ತಿಳಿಸಿರುವಂತೆ ಚಿಕ್ಕಮಕ್ಕಳ ಮೇಲೆ ಹಲವಾರು ತರಹದ ದುಷ್ಪರಿಣಾಮಗಳು ಉಂಟಾಗುತ್ತವೆ.ಬರೀ ಕಂಪೂಟರ್ ಮುಂದೆ ಹಲವಾರು ಘಂಟೆ ಮಕ್ಕಳು ಸುಮ್ಮನೆ ಕುಳಿತಿದ್ದರೆ ಯಾವುದೇ ತರಹದ ದೈಹಿಕ ಚಟುವಟಿಕೆ ಇಲ್ಲದೆ ಒಂದು ಅರ್ಧ ಘಂಟೆ ಉತ್ಸಾಹದಿಂದ ಇದ್ದು ತದನಂತರ ಬೇಸರಕ್ಕೊಳಗಾಗಿ ಕಲಿತಿರುವುದನ್ನು ಮರೆಯುವ ಸಂಬವವೇ ಹೆಚ್ಚು. ಕಲಿಯಬೇಕೆಂಬ ಉತ್ಸಾಹ ಮರೆಯಾದರೂ ಆಗಿ ಯಾವುದಾದರೂ ಅಡ್ಡ ದಾರಿಗೆ ಉತ್ಸುಕರಾಗಬಹುದು.
ಅದೂ ಅಲ್ಲದೆ ಈಗಿನ ಶಿಕ್ಷಣದಲ್ಲಿ ಬರೀ ಪುಸ್ತಕದಲ್ಲಿರುವುದನ್ನು ಬಿಟ್ಟು ಮಕ್ಕಳಿಗೆ ಇನ್ನು ಸಿಗಬೇಕಾದ ಹಲವಾರು ಜ್ಙಾನ ಸಿಗೋದು ಮರೀಚಿಕೆಯಾಗಿದೆ. ಮುಖ್ಯವಾಗಿ ಮಕ್ಕಳಿಗೆ ಅಜ್ಜಿ, ತಾತ, ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆ, ಮಾವ, ಅಕ್ಕ ಅಣ್ಣ, ತಂಗಿ, ತಮ್ಮ ಹೀಗೆ ಜೀವನದಲ್ಲಿ ಸರಿಯಾದ ಸಮಯದಲ್ಲಿ ಪ್ರೀತಿ, ವಿಶ್ವಾಸ, ಸಂತೋಷ, ಕುಣಿದು ಕುಪ್ಪಳಸುತ್ತಾ ಕಲಿಯುವ, ತಿಳಿದುಕೊಳ್ಳುವ, ಸಮಾನ ಜ್ಙಾನವೆಲ್ಲ ಮರೆಯಾಗಿ ಬರೀ ಪುಸ್ತಕ ದ ಹುಳಗಳಾಗಿವೆ. ಏನೋ ದೇವರೇ ದಯತೋರಿಸಿರುವ ಹಾಗೆ ಎಲ್ಲರೊಂದಿಗೂ ಬೆರೆಯುವ, ಸಂತೋಷದಿಂದ ಇರುವ ಹಾಗಾಗಿದೆ.
ಅದೂ ಅಲ್ಲದೆ ಎರಡು ಮೂರು ತಿಂಗಳು ಮಕ್ಕಳು ಹೀಗೇ ಇದ್ದರೆ ಏನು ಪ್ರಪಂಚವೇನೂ ಮುಳುಗೋಲ್ಲ.ಮಕ್ಕಳೇನೂ ಮೂಢರಾಗೋಲ್ಲ.
ಈ ಮೇಲಿನದು ಒಂದು ಕಡೆಯಾದರೆ ಇನ್ನು ಅವರ ತಂದೆ ತಾಯಗಳಿಗೆ ಇನ್ನೊಂದು ಹೊರೆ. ಶಾಲೆಗೆ ಕಟ್ಟಬೇಕಾದ ಫೀಸ್ ಕಟ್ಟೋದೆ ಕಷ್ಟವಾಗಿದೆ. ಅದರ ಮೇಲೆ ಆನ್ ಲೈನ್ ವಿಧ್ಯಾಬ್ಯಾಸಕ್ಕೆ ಬೇಕಾಗುವ ಮೊಬೈಲ್ ಖರ್ಚು, ಪ್ರತಿ ತಿಂಗಳು ಇಂಟರ್ನೆಟ್ ಖರ್ಚು ಎಲ್ಲವು ಹೊರೆ. ಈಗಾಗಲೆ ಲಾಕ್ಡೌನ್ ನಿಂದ ಎಷ್ಟೋ ಜನ ಜೀವನ ಸಾಗಿಸುವುದೇ ಕಷ್ಟಕರವಾಗಿದೆ.
ಇದನ್ನೆಲ್ಲ ಸಂಬಂದ ಪಟ್ಟವರು ಮರೆತಿದ್ದಾರೆ ಅನ್ನಿಸುತ್ತೆ
ಇದನ್ನೆಲ್ಲ ಸಂಬಂದಿಸಿದ ಅಧಿಕಾರಿಗಳು ಗಮನಹರಿಸಿದರೆ ಒಳಿತು.
ಲೇಖನ ತುಂಬ ಅರ್ಥಪೂರ್ಣವಾಗಿದೆ. ನಿಮಗೆ ಧನ್ಯವಾದಗಳು. ನೀವು ತಿಳಿಸಿರುವಂತೆ ಚಿಕ್ಕಮಕ್ಕಳ ಮೇಲೆ ಹಲವಾರು ತರಹದ ದುಷ್ಪರಿಣಾಮಗಳು ಉಂಟಾಗುತ್ತವೆ.ಬರೀ ಕಂಪೂಟರ್ ಮುಂದೆ ಹಲವಾರು ಘಂಟೆ ಮಕ್ಕಳು ಸುಮ್ಮನೆ ಕುಳಿತಿದ್ದರೆ ಯಾವುದೇ ತರಹದ ದೈಹಿಕ ಚಟುವಟಿಕೆ ಇಲ್ಲದೆ ಒಂದು ಅರ್ಧ ಘಂಟೆ ಉತ್ಸಾಹದಿಂದ ಇದ್ದು ತದನಂತರ ಬೇಸರಕ್ಕೊಳಗಾಗಿ ಕಲಿತಿರುವುದನ್ನು ಮರೆಯುವ ಸಂಬವವೇ ಹೆಚ್ಚು. ಕಲಿಯಬೇಕೆಂಬ ಉತ್ಸಾಹ ಮರೆಯಾದರೂ ಆಗಿ ಯಾವುದಾದರೂ ಅಡ್ಡ ದಾರಿಗೆ ಉತ್ಸುಕರಾಗಬಹುದು.
ಅದೂ ಅಲ್ಲದೆ ಈಗಿನ ಶಿಕ್ಷಣದಲ್ಲಿ ಬರೀ ಪುಸ್ತಕದಲ್ಲಿರುವುದನ್ನು ಬಿಟ್ಟು ಮಕ್ಕಳಿಗೆ ಇನ್ನು ಸಿಗಬೇಕಾದ ಹಲವಾರು ಜ್ಙಾನ ಸಿಗೋದು ಮರೀಚಿಕೆಯಾಗಿದೆ. ಮುಖ್ಯವಾಗಿ ಮಕ್ಕಳಿಗೆ ಅಜ್ಜಿ, ತಾತ, ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆ, ಮಾವ, ಅಕ್ಕ ಅಣ್ಣ, ತಂಗಿ, ತಮ್ಮ ಹೀಗೆ ಜೀವನದಲ್ಲಿ ಸರಿಯಾದ ಸಮಯದಲ್ಲಿ ಪ್ರೀತಿ, ವಿಶ್ವಾಸ, ಸಂತೋಷ, ಕುಣಿದು ಕುಪ್ಪಳಸುತ್ತಾ ಕಲಿಯುವ, ತಿಳಿದುಕೊಳ್ಳುವ, ಸಮಾನ ಜ್ಙಾನವೆಲ್ಲ ಮರೆಯಾಗಿ ಬರೀ ಪುಸ್ತಕ ದ ಹುಳಗಳಾಗಿವೆ. ಏನೋ ದೇವರೇ ದಯತೋರಿಸಿರುವ ಹಾಗೆ ಎಲ್ಲರೊಂದಿಗೂ ಬೆರೆಯುವ, ಸಂತೋಷದಿಂದ ಇರುವ ಹಾಗಾಗಿದೆ.
ಅದೂ ಅಲ್ಲದೆ ಎರಡು ಮೂರು ತಿಂಗಳು ಮಕ್ಕಳು ಹೀಗೇ ಇದ್ದರೆ ಏನು ಪ್ರಪಂಚವೇನೂ ಮುಳುಗೋಲ್ಲ.ಮಕ್ಕಳೇನೂ ಮೂಢರಾಗೋಲ್ಲ.
ಈ ಮೇಲಿನದು ಒಂದು ಕಡೆಯಾದರೆ ಇನ್ನು ಅವರ ತಂದೆ ತಾಯಗಳಿಗೆ ಇನ್ನೊಂದು ಹೊರೆ. ಶಾಲೆಗೆ ಕಟ್ಟಬೇಕಾದ ಫೀಸ್ ಕಟ್ಟೋದೆ ಕಷ್ಟವಾಗಿದೆ. ಅದರ ಮೇಲೆ ಆನ್ ಲೈನ್ ವಿಧ್ಯಾಬ್ಯಾಸಕ್ಕೆ ಬೇಕಾಗುವ ಮೊಬೈಲ್ ಖರ್ಚು, ಪ್ರತಿ ತಿಂಗಳು ಇಂಟರ್ನೆಟ್ ಖರ್ಚು ಎಲ್ಲವು ಹೊರೆ. ಈಗಾಗಲೆ ಲಾಕ್ಡೌನ್ ನಿಂದ ಎಷ್ಟೋ ಜನ ಜೀವನ ಸಾಗಿಸುವುದೇ ಕಷ್ಟಕರವಾಗಿದೆ.
ಇದನ್ನೆಲ್ಲ ಸಂಬಂದ ಪಟ್ಟವರು ಮರೆತಿದ್ದಾರೆ ಅನ್ನಿಸುತ್ತೆ
ಇದನ್ನೆಲ್ಲ ಸಂಬಂದಿಸಿದ ಅಧಿಕಾರಿಗಳು ಗಮನಹರಿಸಿದರೆ ಒಳಿತು.
ಸಾರ್ವಕಾಲಿಕ ಸತ್ಯ ಸರ್. ತುಂಬಾ ಚೆನ್ನಾಗಿ ಹೇಳಿದ್ದೀರಿ. ಧನ್ಯವಾದಗಳು . ತಮ್ಮ ಕಾರ್ಯದ ಒತ್ತಡದ ನಡುವೆಯೂ ಸಮಯ ಮೀಸಲಿಟ್ಟು ಅದ್ಭುತವಾಗಿ ವಿಶ್ಲೇಷಿಸಿದ್ದಇರಿ.
Very thoughtful and releavent presentation.
Thank you very much
Nice article 👍
Appreciate you and your article on online classes. Online classes are necessary now and slowly we have to adopt this but not for primary and middle classes and nursary students. 6 to 8 months teaching is enough for middle and primary school children’s so need to rush now for online classes. Let them happily spend the time with little home work to keep them on the study track. Very nice article Prabha Madam
Very well said sir.. Online classes are advisable to the children above a particular age. Considering the mental and physical health of the little children classed should be decided by following the proper norms.
At this point of time KG classes need not be online. Hope the situation will be fine soon.
Dear Prabha,
Your article is much influential. Loved it.
Eagerly waiting for the next one.
Thank you dear Tanu.. As a teacher , your views matter a lot. Being in the teaching field you know the pros and cons of the online education in India.
ಪ್ರಭ ಅವರ ಲೇಖನ ಅದ್ಭುತವಾಗಿತ್ತು. ಆದರೆ ಅದಕ್ಕಿಂತ ಹೆಚ್ವಾಗಿ ಅವರ ಲೇಖನಕ್ಕೆ ಬರುತ್ತಿರುವ ಪ್ರತಿಕ್ರಿಯೆ ಅತ್ಯಧ್ಭುತ.
ಹೌದು ಭಾರತಿ.. ಪ್ತತಿಕ್ರಿಯೆ ಬರೆದವರೆಲ್ಲ ತುಂಬ ವಿಶ್ಲೇಷಣೆ ಮಾಡಿ ಬರೆದಿದ್ದಾರೆ. ಇದರಿಂದ ನಮ್ಮ ಜ್ಞಾನ ವಲಯ ವಿಸ್ತಾರವಾಗುತ್ತೆ
Super ri medam🙏🙏🙏
ಉತ್ತಮ ಲೇಖನ… ಮನಮುಟ್ಟುವ ನಿರೂಪಣೆ..👍
ಉತ್ತಮ ಲೇಖನ.. ಚೆನ್ನೈನಲ್ಲೂ ಇದೇ ಸ್ಥಿತಿ