ರಾಜ್ಯಸಭೆ ಚುನಾವಣೆಯಲ್ಲಿ ರಾಯಚೂರಿನ ಅಶೋಕ ಗಸ್ತಿ ಮತ್ತು ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ನೀಡಿದ ಸಂದೇಶವಾದರು ಏನು? ಇದರ ಹಿಂದಿನ ರಾಜಕೀಯ ಲೆಕ್ಕಾಚಾರವಾದರು ಏನಿದ್ದೀತು ? ಇದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಆದ ಹಿನ್ನಡೆಯೇ ? ಈ ಎಲ್ಲಾ ಸಂಗತಿಗಳ ಬಗ್ಗೆ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಟ್ ಇದು. ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.
ಇದನ್ನೂ ಓದಿ : ರಾಜ್ಯ ಕೋರ್ ಕಮಿಟಿ ಶಿಫಾರಸ್ಸಿಗೆ ಕಿಮ್ಮತ್ತು ಕೊಡದ ಬಿಜೆಪಿ ಹೈ ಕಮಾಂಡ್
ನನ್ನ ಪ್ರಕಾರ ಇದು ಕೇವಲ ಬಿಎಸ್ ವೈ, ಯಡ್ಡಿಗೆ ಮಾತ್ರ ನೀಡಿದ ಸಂದೇಶವಲ್ಲ. ಎರಡು ಅಲಗಿನ ಕತ್ತಿಯ ರೀತಿಯ ತಂತ್ರ ಇದೆಂದು ಅನ್ನಿಸುತ್ತದೆ. ಒಂದು ಕಡೆ ದೇವೇಗೌಡರು, ಇನ್ನೊಂದು ಕಡೆ ಮಲ್ಲಿಕಾರ್ಜುನ ಖರ್ಗೆಗೆ ಟಿಕೆಟ್ ನೀಡಲಾಗಿದೆ. ಇದನ್ನು ನೋಡಿಕೊಂಡು ತಳಮಟ್ಟದಲ್ಲಿದ್ದರೂ ನಿಷ್ಠಾವಂತ ಕಾರ್ಯಕರ್ತರಾಗಿದ್ದರೆ ಅವರಿಗೆ ಟಿಕೆಟ್ ನಾವು ನೀಡುತ್ತೇವೆ ಎಂಬ ಬಿಜೆಪಿ ಹೈಕಮಾಂಡ್ ಯೋಚನೆ ಇರಬಹುದು. ಈ ಮೂಲಕ ಉಳಿದ ಪಕ್ಷಗಳಲ್ಲಿ ವರ್ಷ, ದಶಮಾನ, ಶತಮಾನಗಳಿಂದ ಬೇರು ಬಿಟ್ಟು ಕುಳಿತಿರುವ ನಾಯಕರ ವಿರುದ್ಧ ತಳಮಟ್ಟದ ಕಾರ್ಯಕರ್ತರು ಅಸಮಾಧಾನ ಹೊಂದುವಂತೆ ಮಾಡುವ ಕಾರ್ಯತಂತ್ರವೂ ಇದೆ ಎಂದು ಅನ್ನಿಸುತ್ತದೆ ಸರ್.