ಈ ವರೆಗೆ ಕೃಷಿಕನಲ್ಲದ ವ್ಯಕ್ತಿ ಜಮೀನು ಖರೀದಿಸಲು ಅವಕಾಶ ಇರಲಿಲ್ಲ. ಇನ್ನುಮುಂದೆ ರಾಜ್ಯದಲ್ಲಿರುವ ಕೃಷಿಕರಲ್ಲದವರೂ ಯಾವುದೇ ಅಡೆತಡೆ ಇಲ್ಲದೆ ಜಮೀನು ಖರೀದಿಸಬಹುದು. ಇಂಥ ಅವಕಾಶ ಕಲ್ಪಿಸಲು ಕರ್ನಾಟಕ ಭೂ ಸುಧಾರಣ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿದೆ. ಕೈಗಾರಿಕೋದ್ಯಮಿಗಳು ಈ ತಿದ್ದುಪಡಿಯನ್ನು ಸ್ವಾಗತಿಸಿದ್ದರೆ ರೈತ ಮುಖಂಡರು ಇದೊಂದು ವಿನಾಶಿಕಾರಿ ನಡೆ ಎಂದು ಬಣ್ಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದ ನಾಯಕ ಕೆ.ಟಿ . ಗಂಗಾಧರ್ ಅವರೊಂದಿಗೆ ಕನ್ನಡಪ್ರೆಸ್ .ಕಾಮ್ ನ ಚನ್ನಗಿರಿ ಸುಧೀಂದ್ರ ನಡೆಸಿದ ಪಾಡ್ಕಾಸ್ಚ್ ಇದು. ಆಲಿಸಿ ನಿಮ್ಮಅಭಿಪ್ರಾಯ ತಿಳಿಸಿ