ಕಳೆದ ಹತ್ತು ವರ್ಷಗಳಲ್ಲಿ IT ಕೆಲಸಗಳಲ್ಲಿ ಸಾಕಷ್ಟು ಬದಲಾವಣೆಗಳು, ಸುಧಾರಣೆಗಳು ಆಗುತ್ತಾ ಬಂದಿವೆ. ತಂತ್ರಜ್ಞಾನ ಬೆಳೆದಂತೆ ಕೆಲಸ ಮಾಡುವ ರೀತಿ, ಸಮಯ ಹಾಗು ಕ್ಷಮತೆ ಬದಲಾಗುತ್ತಾ ಹೋಗುತ್ತಿದೆ. ಅದರಲ್ಲೂ ಮೊಬೈಲ್ ನೆಟ್ವರ್ಕ್, ಫೈಬರ್ ನೆಟ್ ಹಾಗು ಹಾಟ್ ಸ್ಪಾಟ್ ಗಳ ಸಂಖ್ಯೆ ಜಾಸ್ತಿ ಆದಂತೆ ಹಾಗೂ ದಿನೇ ದಿನೇ ನಗರದ ಟ್ರಾಫಿಕ್ ಸಮಸ್ಯೆ ಹೆಚ್ಚಾದಂತೆ ಮನೆಯಿಂದ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋಗಿದೆ.
ಕರೋನ ತನ್ನಬಾಹುಗಳನ್ನು ಚಾಚಲು ಪ್ರಾರಂಭ ಮಾಡಿದ ಮೇಲೆ ಪ್ರಪಂಚದಾದ್ಯಂತ ಲಾಕ್ ಡೌನ್ ಹೇರಲಾಯಿತು. ಈ ಸಮಯದಲ್ಲಿ IT ಕೆಲಸ ಒಂದು ದಿನವೂ ನಿಲ್ಲಲಿಲ್ಲ . WFH ಕಲ್ಪನೆ (ಈಗ ವಾಸ್ತವ) IT ಕಂಪನಿಗಳಿಗೆ ಹೆಚ್ಚಿನ ನಷ್ಟ ತಪ್ಪಿಸಿರುವುದರ ಜೊತೆಗೆ ಭವಿಷ್ಯದ ಕಾಯಕ ಪರಿಕಲ್ಪನೆಗೂ ನಾಂದಿ ಹಾಡಿತು.
ಇನ್ನುಮುಂದೆ ಆಕಾಶದೆತ್ತರದ ಕಟ್ಟಡಗಳ ಗಾಜಿನ ಪಂಜರದೊಳಗೆ ನೀಟಾಗಿ ಇಸ್ತ್ರಿ ತಿಕ್ಕಿದ ಶರ್ಟ್, ಪ್ಯಾಂಟ್, ಸೂಟು ಬೂಟು ಹಾಕಿಕೊಂಡು ಕುತ್ತಿಗೆಗೆ ಟೈ ಬಿಗಿದುಕೊಂಡು ಕೆಲಸ ಮಾಡುವವರು ಕಾಣಿಸುವುದಿಲ್ಲ. ಕ್ಯಾಬ್ ಬಂದೇ ಬಿಡ್ತು ಎಂದು ಓಡುವವರು ಇರುವುದಿಲ್ಲ.ಬೆನ್ನಿಗೊಂದು ಲ್ಯಾಪ್ ಟಾಪ್ ಬ್ಯಾಗು ಹಾಕಿಕೊಂಡು ಸಂಜೆ 7ರ ವೇಳೆಗೆ ಬೈಯಪ್ಪನಹಳ್ಳಿಯಲ್ಲೋ, ಚರ್ಚ್ ಸ್ಟ್ರೀಟ್ ನ ಮೆಟ್ರೋ ನಿಲ್ದಾಣದ ಮುಂದೋ ಬಸವಳಿದು ನಿಂತಿರುವ ಹುಡುಗ ಹುಡುಗಿಯರ ಕ್ಯೂ ಕಾಣುವುದಿಲ್ಲ. ಈಗಾಗಲೆ ಐಟಿ ಕಂಪೆನಿಗಳಿಗೆಂದು ಕಟ್ಟಿರುವ ಕಟ್ಟಡಗಳು ಏನಾಗುವುದೆಂಬುದು ಗೊತ್ತಿಲ್ಲ. ಮನೆಯಲ್ಲಿಯೇ ಒಂದು ರೂಮಿನಲ್ಲಿ ಮೇಜು, ಕುರ್ಚಿ, docking System, Big Monitors, ಫ್ಯಾನ್, ಮೊಬೈಲ್, ಏಸಿ, ಬ್ಯಾಟರಿ ಬ್ಯಾಕಪ್, ಫೈಬರ್ ನೆಟ್ ಕನೆಕ್ಷನ್ ತೆಗೆದುಕೊಂಡು ಕುಳಿತು ಕೆಲಸ ಮಾಡುವ ವ್ಯವಸ್ಥೆ ಕಾಯಂ ಆಗುವ ಸಾಧ್ಯತೆಗಳೇ ದಟ್ಟವಾಗಿವೆ.
IT ಕಂಪನಿಗಳು ಸದ್ಯ ಆಫೀಸ್ ನಲ್ಲಿ ಒಂದು ಮೇಜಿಗೆ ತಿಂಗಳಿಗೆ ಸರಿ ಸುಮಾರು 25 ಸಾವಿರದಿಂದ 35 ಸಾವಿರದ ವರೆಗೆ ವ್ಯಯಿಸುತ್ತಿವೆ. ( ಸೆಕ್ಯೂರಿಟಿ , ಕಾಫೀ, ಟಿ,ಎಸಿ , ವಿದ್ಯುತ್, ನೆಟ್ ವರ್ಕ್, ಹೌಸ್ ಕೀಪಿಂಗ್ ಇತ್ಯಾದಿ ಒಳಗೊಂಡಂತೆ)ಇನ್ನು ಸಾವಿರಾರು ನೌಕರರಿರುವ IT ಕಂಪನಿಗಳಿಗೆ WFH ಪದ್ದತಿಯಿಂದ ಈ ಹಣ ಪೂರ್ತಿ ಉಳಿತಾಯವಾಗುತ್ತದೆ. ಮುಂದೆ ಕೇವಲ ದಿನನಿತ್ಯದ ಆಗುಹೋಗುಗಳಿಗೆ ಬೇಕಾದ ನೌಕರರನ್ನು ಒಂದು ಸಣ್ಣ ಆಫೀಸ್ ಸ್ಪೇಸ್ ನಲ್ಲಿ ಕಂಪನಿಗಳು ಕಾರ್ಯನಿರ್ವಹಿಸಿ, ಉಳಿದವರನ್ನೆಲ್ಲಾ WFH ವ್ಯವಸ್ಥೆಗೆ ಕಾಯಂ ಒಳಪಡಿಸಿ, ವಾರಕ್ಕೋ ತಿಂಗಳಿಗೋ ಒಮ್ಮೆ ಯಾವುದಾದರೂ ಹೋಟೆಲ್ / ಮೀಟಿಂಗ್ ಹಾಲ್ ನಲ್ಲಿ ಭೇಟಿ ಮಾಡುವ ವ್ಯವಸ್ಥೆ ಬರುವ ಲಕ್ಷಣ ಕಾಣಿಸುತ್ತಿವೆ.
ಎಷ್ಟು ಉಪಯೋಗವೋ ಅಷ್ಟೇ ಅನಾನುಕೂಲ
WFH ಎಷ್ಟು ಉಪಯೋಗವೋ ಅಷ್ಟೇ ಅನಾನುಕೂಲಗಳೂ ಇವೆ, ಈ ಬದಲಾದ ಪರಿಸ್ಥಿತಿಯಲ್ಲಿ ಏಕಾಗ್ರತೆ ಉಳಿಸಿಕೊಂಡು, ನಿರಂತರ ವಿದ್ಯುತ್, ನೆಟ್ವರ್ಕ್ ಸವಾಲುಗಳ ಮಧ್ಯೆ ಹಲವಾರು ಅಡತಡೆಗಳನ್ನು ಎದುರಿಸಿ ಮಾನಸಿಕ ಒತ್ತಡ ಇಟ್ಟು ಕೊಂಡೇ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದೊದಗುತ್ತದೆ.
ವಿಡಿಯೋ ಕಾಲ್ ಗಳಲ್ಲಿ ಮೇಲೆ ಕೋಟ್ ಹಾಕಿ ಕೆಳಗೆ ಶಾರ್ಟ್ಸ್ ಹಾಕಿಕೊಂಡು ಕೆಲಸ ಮಾಡುವ, ನಮ್ಮ ಹಿಂಬದಿಯಲ್ಲಿ ಮನೆ ಉಡುಗೆಯಲ್ಲೇ ಇದ್ದ ಮನೆಯವರು ಓಡಾಡುವುದನ್ನು ಪ್ರಪಂಚದ ಎಲ್ಲರಿಗೂ ಲೈವ್ ತೋರಿಸುವ, ಸ್ವಲ್ಪ ಯಾಮಾರಿದರೂ ವಿಡಿಯೋ ಕಾಲ್ ಗಳಲ್ಲಿ ಕೌಟುಂಬಿಕ ಕಲಹಗಳು ಏನಾದರೂ ಬಂದರೆ ಅದು ಬಿತ್ತರವಾಗಿ ಮಾನ ಹರಾಜು ಆಗುವ ಸಾಧ್ಯತೆಯೂ ಹೆಚ್ಚಿದೆ. ಎಷ್ಟೇ ಕೌಟುಂಬಿಕ ಕಲಹಗಳಿದ್ದರೂ ಮುಂಜಾನೆ ಆಫೀಸ್ ಹೋಗಿ ಎಲ್ಲವನ್ನು ಮರೆತು ಕೆಲಸ ಮುಗಿಸಿ ಸಂಜೆ ಮನೆ ಬರುವುದರಲ್ಲಿ ಶಮನವಾಗುತ್ತಿದ್ದ ಸಂದರ್ಭಗಳು ತಪ್ಪಿಹೋಗಲಿವೆ.
ಇವೆಲ್ಲಾ ತಪ್ಪಿಸಲು ‘ಹೋಮ್ ಆಫೀಸ್’ ಗಾಗಿ ಮನೆಯಲ್ಲಿಯೇ ಒಂದು ರೂಮ್ ಅನ್ನು ಕಾಯ್ದಿರಿಸಬೇಕಿದೆ. ಚಿಕ್ಕ ಚಿಕ್ಕ ಮನೆ ಇರುವವರಿಗೆ ಇದು ಒಂದು ಸವಾಲಾಗೇ ಉಳಿಯಲಿದೆ. ಒಂದು ಮನೆಯಲ್ಲಿ ಗಂಡ, ಹೆಂಡತಿ ಇಬ್ಬರೂ ಕೆಲಸ ಮಾಡುತ್ತಿದ್ದರೆ ಬೇರೆ ಬೇರೆ ರೂಮ್ ಗಳಲ್ಲಿ ಹೋಮ್ ಆಫೀಸ್ setup ಮಾಡಿಕೊಳ್ಳಬೇಕಾಗಿದೆ
ಜೊತೆಯಲ್ಲಿ ಈ ರೀತಿ ಮನೆಯಲ್ಲಿಯೇ ಕುಳಿತು ಎಂಟರಿಂದ ಹತ್ತುಗಂಟೆ ಕೆಲಸ ಮಾಡುವುದರಿಂದ ಮಾನಸಿಕ , ದೇಹದ ಹಾಗು ಆರೋಗ್ಯದ ಸಮತೋಲನ ಕಾಪಾಡಲು ಪ್ರತಿಯೊಬ್ಬ ನೌಕರರು ತಮ್ಮ ದೈನಂದಿನ ಚಟುವಟಿಕೆಗಳನ್ನು, ಅಭ್ಯಾಸಗಳನ್ನು, ಬದಲಾಯಿಸಬೇಕಾದ ಅನಿವಾರ್ಯತೆಯೂ ಇದೆ.ಕೆಲಸದ ಸಮಯದಲ್ಲಿ, ವರ್ಚುಯಲ್ ಮೀಟಿಂಗ್ ಗಳಲ್ಲಿ ನಿರತರಾಗಿದ್ದಾಗ ಮಕ್ಕಳನ್ನು ನೋಡಿಕೊಳ್ಳುವ, ಅವರು ಮಾಡುವ ತುಂಟತನ ಗಲಾಟೆಯನ್ನು ತಡೆಯಲು ಮೊಬೈಲ್ ಕೈಗೆ ಕೊಟ್ಟು ಕೆಲಸ ಮುಂದುವರಿಸುವ ಸಮಸ್ಯೆ ಇದೆ. ಮನೆಯಲ್ಲೇ ಇದ್ದರೂ ಮಕ್ಕಳು, ಅಪ್ಪ ಅಮ್ಮ, ಅತ್ತೆ ಮಾವನವರ ಹತ್ತಿರ ಮಾತನಾಡಲೂ ಆಗದೆ ಇರುವಂತೆ ಆಗುತ್ತಿದೆ. ಮನೆಗೆ ಬರುವ ನೆಂಟರಿಷ್ಟರಿಗೆ ಕೆಲಸ ಇದೆ, ಮೀಟಿಂಗ್ ಇದೆ, ಒಂದು ಗಂಟೆ ಕುಳಿತುಕೊಳ್ಳಿ ಎಂದು ಹೇಳಿ ಮತ್ತೆ ಏಕಾಗ್ರತೆ ಉಳಿಸಿಕೊಂಡು ಕೆಲಸ ಮಾಡುವ ಸವಾಲಿದೆ.
ಬ್ಯಾಚುಲರ್ಸ್ ಕಥೆ
ಇದೆಲ್ಲಕ್ಕಿಂತ ಹೆಚ್ಚಾಗಿ ಬ್ಯಾಚುಲರ್ಸ್ ಕಥೆ ಅಂತೂ ಇನ್ನೂ ವಿಚಿತ್ರ. ಮನೆಯಲ್ಲಿಯೇ ಇರುವುದರಿಂದ ಮೊಬೈಲ್ ನಲ್ಲಿ ಕೂಡ ಮಾತನಾಡಲಾಗದೆ, ವಾಟ್ಸ್ ಆಪ್ ಮೆಸೇಜ್ ಮೇಲೆ ಅವಲಂಬಿಸಬೇಕು. ಆಫೀಸ್ ಕೆಲಸ ಮುಗಿದು ಸಂಜೆ ಸುತ್ತಾಡಿ ಆಫೀಸ್ ಕೆಲ್ಸಜಾಸ್ತಿ ಅಂತ ಸುಳ್ಳು ಹೇಳಿ ಕಳೆಯುತ್ತಿದ್ದ ಕಾಲ ಸಂಪೂರ್ಣ ಈಗಗಾಲೇ ನಿಂತುಹೋಗಿದೆ.ಅದು ಮುಂದುವರಿಯುವುದು ನಿಶ್ಶಿತ. ಮಾಲ್, ಮೂವಿ, ಚಾಟ್ಸ್, ಪಾರ್ಕ್, ಲಾಂಗ್ ಡ್ರೈವ್, ಗುಂಡು, ತುಂಡು ಪಾರ್ಟಿಗಳು ಹಾಗು ಔಟಿಂಗ್ ಸಂಪೂರ್ಣ ನಿಲ್ಲುವ ಹಂತಕ್ಕೆ ಬಂದಿದೆ. ಕಂಪನಿಗಳಲ್ಲಿ ಅರಳುತ್ತಿದ್ದ ಪ್ರೇಮ ಕಥೆಗಳಿಗೆ ಪೂರ್ಣ ವಿರಾಮ ಬೀಳಲಿದೆ.
IT ಕಂಪೆನಿಗಳಲ್ಲಿ ಮೂರೂ ತಿಂಗಳಿಗೊಮ್ಮೆ ಟೀಮ್ ಬಿಲ್ಡಿಂಗ್ ಅನ್ನೋ ನೆಪದಲ್ಲಾದರೂ ಯಾವೊದೋ ರೆಸಾರ್ಟ್ ಅಥವಾ ಅಮ್ಯೂಸ್ಮೆಂಟ್ ಪಾರ್ಕ್ ಹೋಗಿ ಮನಸ್ಸು ಹಗುರ ಮಾಡಿಕೊಂಡು ಬರುತ್ತಿದ್ದ ಸಮಯ ಕರೋನ ಸಂಪೂರ್ಣ ಹತೋಟಿಗೆ ಬರುವವರೆಗೆ ಮತ್ತೆ ಶುರುವಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಈ ಹೊಸಾ ವ್ಯವಸ್ಥೆಗೆ IT ನೌಕರರು ಹೊಂದಿಕೊಳ್ಳುವದು ಕಳೆದ ಎರಡು ತಿಂಗಳಿಂದ ಸ್ವಲ್ಪ ಮಟ್ಟಿಗೆ ಸಾಧ್ಯವಾಗಿದ್ದರೂ, ಮುಂದೆ ಧೀರ್ಘ ಕಾಲ ಮನೆಯಲ್ಲಿಯೇ ಇದ್ದಾಗ ಆಗುವ ಮಾನಸಿಕ, ಸಾಮಾಜಿಕ ದುಷ್ಪರಿಣಾಮಗಳ ಅವಲೋಕನ ಮಾಡಬೇಕಾಗಿದೆ.
WFH ಕೇವಲ IT ಕಂಪನಿಗಳು ಮಾತ್ರ ಅನುಕೂಲತೆಗಳನ್ನು ಮಾಡಿದರೆ ಸಾಲದು ಮನೆಯೆಲ್ಲಿ ಕೆಲಸ ಮಾಡುವವರು, ಮಾಡದವರು ಒಟ್ಟಿಗೆ ಚರ್ಚಿಸಿ ಹಲವಾರು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಿದೆ. ಗಂಡ, ಹೆಂಡತಿ, ಮಕ್ಕಳು, ಪೋಷಕರು ಒಬ್ಬರಿಗೊಬ್ಬರು ಹೆಚ್ಚಿನ ಬೆಂಬಲ ಕೊಡಬೇಕಾಗಿದೆ.
ಈ WFH ನಲ್ಲಿ ಮಾನಸಿಕ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು, ಹಲವಾರು ಸಾಧಕ, ಭಾದಕಗಳ ಸುಧೀರ್ಘ ಚರ್ಚೆ, ಚಿಂತನೆ ನಡೆಸಿ, ನೌಕರರಿಗೆ ಬೇಕಾದ ಹಲವಾರು ಅನುಕೂಲತೆಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ IT ಕಂಪನಿಗಳು ಯೋಚಿಸಬೇಕಾಗಿದೆ. ವರ್ಚುಯಲ್ ಭ್ರಮಾಲೋಕ ತ್ರಿಶಂಕು ಸ್ವರ್ಗವಾಗದಿರುವಂತೆ ನೋಡಿಕೊಳ್ಳುವ ಹೆಚ್ಚಿನ ಜವಾಬ್ದಾರಿ ನಮ್ಮ ಸರ್ಕಾರಗಳ ಮೇಲೂ ಇದೆ.
👍👍👍👍👍
Thank you Ranjitha.
ಒಳ್ಳೆಯ ಬರಹ.. WFH ಒಳ್ಳೆಯದಲ್ಲ ಇದು ನೌಕರನ ಮಾನಸಿಕ ಮತ್ತು ಆರೋಗ್ಯ ದ ಮೇಲೆ ದುಷ್ಪರಿಣಾಮ ಬೀರುವ ಎಲ್ಲಾ ಲಕ್ಷಣಗಳು ಈ ಎರಡು ಮೂರು ತಿಂಗಳಲ್ಲಿ ಕೆಲವರ ಅನುಭವಕ್ಕೆ ಬಂದಿರಬಹುದು.
Thank you. khandita.. WFH ninda dusparinamagalu aguva sadhyategalive.
Hello prabhanjana,
E article nanna geleya barodirodu anta tiliyalu tumba khushiyagutte…yakandare Illi baredirova pratiyondu amshavu nooru pratishata Satya… e corona dindagi bari IT employees matra Walla pratiyobbara jeevanadallu badalawane agide…
Thank you sowmya. howdu sadyada mattige ee baraha IT navarigadru.. Karona yellara jeevana badalaavane maduttide.
👌👌
thank you.
👌👌🙏
WFH dushparinamgalu Chennagi torisiddira. WFH khayam madiddalli nirudyogavu ondu dushparinama. Cab drivers, Facility team, caterers heege baala beleyuttale hoguttade. Maneyalle iruvudarind domestic violence sadhyategalu, depression jaasti. Sarkara mattu companygalu idara baggeyu yochisabeku.
WFH dushparinamgalu Chennagi torisiddira. WFH khayam madiddalli nirudyogavu ondu dushparinama. Cab drivers, Facility team, caterers heege baala beleyuttale hoguttade. Maneyalle iruvudarind domestic violence sadhyategalu, depression jaasti. Sarkara mattu companygalu idara baggeyu yochisabeku.
Nija.. Supporting staff downsize agodu jotege office li lunch/dinner wendors, house keeping security avara kelsagalu kaledukolluva chances ide.. WFH is not the go forward option. it should be intermediate solution.
👌👌….. super prabhanjana.
Thank you chandrashekar
ಬೆಳಗಾಗೆದ್ದು ಕಾಫಿಕೊಟ್ಟು, ಡಬ್ಬಿ ಕೊಟ್ಟು ಕಳುಹಿಸಿದ್ದರೆ ಕೆಲಸ ಆಗಿಹೋಗುತ್ತಿತ್ತು, ಆದರೆ ಈಗ ಹಾಗಲ್ಲ ಕಾಫಿಗಂತೂ ಲೆಕ್ಕವೇ ಇಲ್ಲ, ತಿಂಡಿ, ಊಟ, ಸಾಯಂಕಾಲ snacks, ರಾತ್ರಿ ಊಟ ಎಲ್ಲಾ ಬಿಸಿ ಬಿಸಿ ಮಾಡಿ ಮಾಡಿ ಹೆಂಗಸರೆಲ್ಲ strike ಮಾಡೋದು ಬಾಕಿ.
Nija…. Home maker kelsa jasti agide.. jotege stress kuda.
ಲೇಖನ ತುಂಬಾ ಚೆನ್ನಾಗಿದೆ
Thank you ANil