26.2 C
Karnataka
Thursday, November 21, 2024

    ಸೂರ್ಯಗ್ರಹಣ: ಭಯ ಬೇಡ, ಸುರಕ್ಷಿತವಾಗಿ ವೀಕ್ಷಿಸಿ

    Must read

    ಹರೋನಹಳ್ಳಿ ಸ್ವಾಮಿ

    ನಾಳೆ ಭಾನುವಾರ ಬೆಳಿಗ್ಗೆ (10ಗಂ.12ನಿ.55ಸೆ.)  ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು ನಾವು ಪಾರ್ಶ್ವ ಸೂರ್ಯಗ್ರಹಣ ಮಾತ್ರ ನೋಡಬಹುದಾಗಿದೆ. ಸೂರ್ಯನ ಸುತ್ತಾ ಭೂಮಿ, ಭೂಮಿಯ ಸುತ್ತಾ ನಮ್ಮ ಚಂದ್ರ ದೀರ್ಘ ವೃತ್ತಾಕಾರದ ಪಥದಲ್ಲಿ ಸುತ್ತುತ್ತಿವೆ. ಕೆಲವು ಬಾರಿ ಸೂರ್ಯ ಭೂಮಿ ಮತ್ತು ಚಂದ್ರ ಒಂದೇ ಸರಳರೇಖೆಯಲ್ಲಿ ಬಂದಾಗ ಒಂದರ ನೆರಳು ಮತ್ತೊಂದರ ಮೇಲೆ ಬೀಳುವ ಮೂಲಕ ಗ್ರಹಣಗಳು ಸಂಭವಿಸುತ್ತವೆ.

    ಆದರೆ ನಾಳೆ ಚಂದ್ರನ ತೋರಿಕೆಯ ಗಾತ್ರವು ಸೂರ್ಯನ ತೋರುವಿಕೆಯ ಗಾತ್ರಕ್ಕಿಂತ ಕಡಮೆಯಿದ್ದು, ಚಂದ್ರನು ಸೂರ್ಯನ ಪೂರ್ಣ ಮುಖವನ್ನು ಮುಚ್ಚುವುದಿಲ್ಲ. ಬದಲಾಗಿ ಸೂರ್ಯನ ಅಂಚು ಬಳೆಯಾಕಾರದಲ್ಲಿ ಗೋಚರಿಸುವ ದೃಶ್ಯವೇ “ಕಂಕಣ ಸೂರ್ಯಗ್ರಹಣ” (Annular  Solar Eclipse) ಆದರೆ ನಮಗೆ ಆ ದೃಶ್ಯ ಕಾಣುವುದಿಲ್ಲ ಬದಲಾಗಿ, ಸೂರ್ಯನ ಶೇಕಡಾ ನಲವತ್ತು ಭಾಗ ಚಂದ್ರನಿಂದ ಮುಚ್ಚಲ್ಪಟ್ಟ ಪಾರ್ಶ್ವ ಸೂರ್ಯಗ್ರಹಣವನ್ನು  ನೋಡಬಹುದು.



    ಭಾನುವಾರ ಬೆಳಿಗ್ಗೆ 10.17 ಗಂಟೆಗೆ ಆರಂಭವಾಗಿ, ಮಧ್ಯಾಹ್ನ 1 ಗಂಟೆ 31 ನಿಮಿಷ ದವರಿಗೆ ಸುಮಾರು 3 ಗಂಟೆ 19 ನಿಮಿಷಗಳ ಕಾಲ ಗ್ರಹಣ ಜರುಗುತ್ತದೆ.

    ಎಲ್ಲೆಲ್ಲಿ ಗ್ರಹಣ ಗೋಚರ ವಾಗುತ್ತದೆ:- ಆಫ್ರಿಕಾ, ಫೆಸಿಫಿಕ್ ಮತ್ತು ಹಿಂದು ಮಹಾಸಾಗರ, ಪಾಕಿಸ್ತಾನ, ಭಾರತ  ಚೀನಾ, ಒಮಾನ್, ಯೆಮೆನ್ ದೇಶಗಳಲ್ಲಿ ಕಾಣಸಿಗುವುದು.

    ನೋಡುವ ಬಗೆ ಹೇಗೆ:

    1.ಯಾವುದೇ ಕಾರಣಕ್ಕೂ ಬರಿಗಣ್ಣಿನಿಂದ ಸೂರ್ಯ ಗ್ರಹಣ ವೀಕ್ಷಿಸಬಾರದು.
    2.ಎಕ್ಸ್ ರೇ,  ವೆಲ್ಡಿಂಗ್ ಗ್ಲಾಸ್ ಗಳ ಮೂಲಕವೂ ನೋಡಬಾರದು .

    3.ವೈಜ್ಞಾನಿಕ ಸಂಸ್ಥೆಗಳಿಂದ ದೊರೆಯುವ ಅಧಿಕೃತ “ಸೌರ ಕನ್ನಡಕ” Solar spect’ ನ ಮೂಲಕ ನೋಡಬಹುದು .

    4.ಸೌರ ಕನ್ನಡಕಗಳಿಂದಲೂ ನಿರಂತರವಾಗಿ ನೋಡದೆ,  ಕೆಲ ನಿಮಿಷಗಳ ಬಿಡುವು ನೀಡಿ ಕಣ್ಣಿಗೆ ಆಯಾಸವಾಗದಂತೆ ನೋಡಬೇಕು .

    5.ತೆಳುವಾದ ಕಾರ್ಡ್ ಬೋರ್ಡ್ ನಲ್ಲಿ ಸಣ್ಣ ರಂಧ್ರ ಮಾಡಿ, ಕನ್ನಡಿಯ ಮುಂಭಾಗದಲ್ಲಿಟ್ಟು ಸೂರ್ಯನ ಪ್ರತಿಬಿಂಬವನ್ನು ಗೋಡೆಯ ಮೇಲೆ ಬಿಟ್ಟು ನೋಡಬಹುದು .

    6.ಟಿಲಿಸ್ಕೋಪ್ ಗಳ ಮೂಲಕ ಸೂರ್ಯನ ಪರೋಕ್ಷ ಪ್ರತಿಬಿಂಬವನ್ನು ಪರದೆ ಮೇಲೆ ಬಿಟ್ಟು ವೀಕ್ಷಿಸಬಹುದು.

    ಹರೋನಹಳ್ಳಿ ಸ್ವಾಮಿ

    7.ಬೈನಾಕುಲರ್ ನಿಂದಲೂ ಸೂರ್ಯನ ನೇರ ವೀಕ್ಷಣೆ  ಮಾಡಬಾರದು. ಬದಲಾಗಿ ಸೂರ್ಯನ ಪ್ರತಿಬಿಂಬವನ್ನು ಮಾತ್ರ ನೋಡಬಹುದು.

    ಗ್ರಹಣ ಭಯವೇ?:  ಖಂಡಿತಾ ಸೂರ್ಯಗ್ರಹಣ, ಚಂದ್ರಗ್ರಹಣಗಳ ಭಯವಲ್ಲ, ಬದಲಾಗಿ ಪ್ರಕೃತಿ ಸಹಜ ನೆರಳು ಬೆಳಕಿನ ಆಟವಷ್ಟೇ. ಅನೇಕರು ಮಾಧ್ಯಮಗಳ ಮೂಲಕ ಗ್ರಹಣದಿಂದ ಅನೇಕರಿಗೆ ತೊಂದರೆ,  ಪ್ರಕೃತಿಯ ಅವಘಡಗಳಾಗುತ್ತವೆಂದು  ಅವೈಜ್ಞಾನಿಕವಾಗಿ ಹೆದರಿಸುತ್ತಾರೆ.  ಆದರೆ ಇದಕ್ಕೆ ಯಾವುದೇ  ಆಧಾರಗಳಿಲ್ಲ . ಸೂರ್ಯಗ್ರಹಣ ನಿಸರ್ಗದ ಅದ್ಭುತ ವಿದ್ಯಮಾನ. ಸುರಕ್ಷಿತವಾಗಿ ವೀಕ್ಷಿಸಿ ಆನಂದಿಸಬೇಕಷ್ಟೆ.


    2020ರ ಗ್ರಹಣಗಳು; ಈ ವರ್ಷ 2 ಸೂರ್ಯ ಗ್ರಹಣಗಳು ಮತ್ತು 4 ಚಂದ್ರಗ್ರಹಣಗಳು ಜರುಗುತ್ತವೆ. ಮುಂದಿನ ಸೂರ್ಯಗ್ರಹಣವು ಡಿಸೆಂಬರ್  14 ರಂದು ಜರುಗುತ್ತದೆ.

    spot_img

    More articles

    1 COMMENT

    1. ಇಂತಹ ಲೇಖನ ತುಂಬಾ ಪ್ರಚಾರವಾಗಬೇಕು. ಏನೋ ಮೂಢನಂಬಿಕೆ ಜನರಲಿದೆ. ನನ್ನ ಮಗ ಗ್ರಹಣದ ಸಮಯದಲೇ ಊಟ ತಿಂಡಿ ಮಾಡಿ ನನಗೂ ಮಾಡಬಹುದು ಅಂದರೂ ಮನಸು ಬರಲ್ಲ. ಎದುರು ನೋಡಲು ಭಯ. ಈಗಿನವರಾದರೂ ಇಂತಹದನು ತಿಳಿದಿರಲಿ. ವೈಚಾರಿಕ ಲೇಖನ

    LEAVE A REPLY

    Please enter your comment!
    Please enter your name here

    Latest article

    error: Content is protected !!