26.8 C
Karnataka
Sunday, September 22, 2024

    H1B ,L1 ಹಾಗೂ ವರ್ಕ್ ಪರ್ಮಿಟ್ ವೀಸಾ ಅಮಾನತು; ಕಮರಿದ ಅಮೆರಿಕಾ ಕನಸು

    Must read

    ಭಾರತದಲ್ಲಿ  ಎಂಜಿನಿಯರಿಂಗ್  ಓದುವ ವಿದ್ಯಾರ್ಥಿಗಳಿಗೆ  ಇಂಥ ಕನಸುಗಳು ಸಾಮಾನ್ಯವಾಗಿ ಇರುತ್ತವೆ. ಒಂದು  ಓದು ಮುಗಿದ ಮೇಲೆ ಒಳ್ಳೆಯ  ಐಟಿ  ಕಂಪೆನಿಯಲ್ಲಿ ಕೆಲಸ ಮಾಡಬೇಕು. ಎರಡು ಕೆಲಸದ  ಜೊತೆಗೆ ಒಂದು ಸಾರಿ ಅಮೆರಿಕಾಗೆ ಹೋಗಿಬರಬೇಕು. ಅಲ್ಲಿ  ಒಂದೆರೆಡು ವರ್ಷಗಳವರೆಗಾದರೂ ಕೆಲಸ ಮಾಡಿ ಒಂದಿಷ್ಟು ಹಣ ಸಂಪಾದಿಸಬೇಕು. ಆ ದುಡ್ಡಿನಲ್ಲಿ ಬೆಂಗಳೂರಿನಲ್ಲಿ ಒಂದು ಬಿಡಿಎ ಸೈಟು ಕೊಂಡು  ಸಾಲವಿಲ್ಲದೆ ಸ್ವಂತ ಮನೆ ಮಾಡಬೇಕು.  ಈ ಕನಸುಗಳು  ಕಳೆದ ಮೂರು ದಶಕದಿಂದ ಸಾಧ್ಯವಾಗಿತ್ತು. 

      
    ಅಧ್ಯಕ್ಷ ಟ್ರಂಪ್ ಭಾರತದ ಯುವಕರ ಈ ಕನಸಿಗೆ  ತಮ್ಮ ಒಂದು ಆದೇಶದಿಂದ ತಣ್ಣೀರು ಎರಚಿದ್ದಾರೆ. ಈ ವರ್ಷದ ಡಿಸೆಂಬರ್ ವರೆಗೂ    H1B, L1 ಹಾಗೂ ವರ್ಕ್ ಪರ್ಮಿಟ್  ವಲಸೆ  ಕೆಲಸಗಾರರ ವೀಸಾವನ್ನು ಅಮಾನತ್ತು ಮಾಡಿದ್ದಾರೆ. ಹೀಗಾಗಿ ಭಾರತದ ಮಧ್ಯಮ ವರ್ಗದ ಯುವಕರಿಗೆ ಅಮೆರಿಕಾದಲ್ಲಿ ಕೆಲಸ ಎಂಬುವುದು  ಮುಂದಿನ ಹಲವು ವರ್ಷದವರೆಗೆ ಕನಸಾಗೇ ಉಳಿಯಲಿದೆ. 

    ಕರೋನ ಪರಿಣಾಮ

    ಕರೋನ   ದಿನದಿಂದ ದಿನಕ್ಕೆ ಇಡೀ ಪ್ರಪಂಚದಲ್ಲಿ ವ್ಯಾಪಾರ, ವಹಿವಾಟು, ಪ್ರವಾಸ, ವಸ್ತುಗಳ ಪೂರೈಕೆ  ಸರಪಳಿಯಲ್ಲಿ ಹಲವಾರು ಬದಲಾವಣೆ ಮಾಡಿಕೊಳ್ಳಲೇ ಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿದೆ.  ಅಮೆರಿಕಾದಲ್ಲಿ ಸರಿ ಸುಮಾರು 20 ಲಕ್ಷ ಜನರು ಕಳೆದ 3 ತಿಂಗಳಿಂದ ಕೆಲಸವನ್ನು ಕಳೆದುಕೊಂಡಿದ್ದಾರೆ.  ಜೊತೆಗೆ ಅಮೆರಿಕಾದಲ್ಲಿ ಆಫ್ರಿಕನ್ ಅಮೆರಿಕನ್ ತಾರತಮ್ಯದ ಹೋರಾಟ ಭುಗಿಲೆದ್ದಿದೆ.  

    ಹೀಗಾಗಿ ಅಮೆರಿಕಾದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆ ತಂದೊಡ್ಡಿದೆ.    ಆಫ್ರಿಕನ್ ಅಮೆರಿಕನ್ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ  ಅಮೆರಿಕಾದ ಪೌರತ್ವವಿರುವವರಿಗೆ ಮೊದಲ ಕೆಲಸ ಕೊಡಬೇಕೆಂಬ ಆದ್ಯತೆ ಮೇರೆಗೆ, ಅಧ್ಯಕ್ಷ ಟ್ರಂಪ್,  ಈ ವರ್ಷದ ಡಿಸೆಂಬರ್ ವರೆಗೂ    H1B, L1 ಹಾಗು ವರ್ಕ್ ಪರ್ಮಿಟ್  ವಲಸೆ  ಕೆಲಸಗಾರರ ವೀಸಾವನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ. 

      
    ಕರೋನ ಹೀಗೆ ಮುಂದುವರೆದರೆ ಈ ಅಮಾನತು ಇನ್ನು ಹೆಚ್ಚಿನ ಸಮಯ ಮುಂದುವರಿಯುವ ಸಾಧ್ಯತೆಗಳಿವೆ. ಇದರ ಅರ್ಥ ಮತ್ತು ಪರಿಣಾಮ ಏನಾಗಬಹುದು ಎಂಬ ಕುತೂಹಲ H1B  ವೀಸಾದ  ಹೆಚ್ಚಿನ ಪಾಲುದಾರ ದೇಶವಾದ ಭಾರತೀಯರಿಗೆ ಇದ್ದೆ ಇದೆ. 

    H1B ,L1 ವೀಸಾ  ಅಂದರೇನು?

    H1B: ಹದಿನಾರು ವರ್ಷದ ವಿದ್ಯಾಭ್ಯಾಸ  (ಎಂಜಿನಿಯರಿಂಗ್ ನಲ್ಲಿ ಯಾವುದೇ ಪದವಿ) ನಂತರ ಯಾವುದೇ ವಿಷಯದಲ್ಲಿ ಕೌಶಲ್ಯ ಗಳಿಸಿದ  ಕಾರ್ಮಿಕನಿಗೆ/ತಂತ್ರಜ್ಞರಿಗೆ  (ವೈಟ್ ಕಾಲರ್ ಜಾಬ್ ) ಅಮೆರಿಕಾದಲ್ಲಿ ಕೆಲಸ ಮಾಡಲು ಕೊಡುವ ವೀಸಾ.  ಆರು ವರ್ಷದ ಪರಿಮಿತಿ ಹೊಂದಿದ ಈ ವೀಸಾ ಪಡೆದು ಅಮೆರಿಕಾದ ಯಾವುದೇ ಕಂಪೆನಿಗಳಲ್ಲಿ ನೇರವಾಗಿ ಕೆಲಸ ಮಾಡಬಹುದು ಹಾಗೂ ನವೀಕರಿಸಲೂ ಬಹುದು. 

    L1: ಇದು H1B ವೀಸಾ ಕಿಂತ ಸ್ವಲ್ಪ ಭಿನ್ನ,  ಈಗಾಗಲೇ ಭಾರತದಲ್ಲಿ ಇರುವ ಕಂಪೆನಿಗಳಲ್ಲಿ  ಕೆಲಸ ಮಾಡುವ ತಂತ್ರಜ್ಞರು ಅದೇ ಕಂಪನಿಯ ಅಥವಾ ಆ ಕಂಪನಿಯ ಒಡಂಬಡಿಕೆಯಲ್ಲಿ ಹೊಂದಿರುವ  ಅಮೆರಿಕಾದಲ್ಲಿ ಇರುವ ಕಂಪನಿಗೆ  ಕೌಶಲ್ಯ ತುಂಬಿದ ನುರಿತ  ಕೆಲಸ ಮಾಡಲು ಕಳುಹಿಸುವುದು. 

    ಅಮೆರಿಕಾದಲ್ಲಿ ವರ್ಷಕ್ಕೆ ಸರಿ ಸುಮಾರು 65,000  H1B ವೀಸಾವನ್ನು ಲಾಟರಿ ಮೂಲಕ ವಿತರಣೆ ಮಾಡುತ್ತಾರೆ.  ಇದರ ಜೊತೆ L1  ವೀಸಾ ದಡಿಯಲ್ಲಿ ಸುಮಾರು 70 ಸಾವಿರದಷ್ಟು ಜನರು ಭಾರತದಿಂದ ಅಮೆರಿಕಾಕ್ಕೆ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ.   ಅದರಲ್ಲಿ ಭಾರತದ  IT ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ವಿಪ್ರೊ, ಟಿಸಿಎಸ್   ಪಾಲೇ ಹೆಚ್ಚು. 


    ಅದರೊಟ್ಟಿಗೆ  ನೇರವಾಗಿ ಕನ್ಸಲ್ಟೆಂನ್ಸಿಗಳ ಮೂಲಕವೂ H1B ಕೆಲಸಕ್ಕೆ ಅರ್ಜಿಹಾಕಿ ಅಮೆರಿಕಾ ಹಾರುವವರ ಸಂಖ್ಯೆಯೂ ಜಾಸ್ತಿಯೇ ಇದೆ. 

    ಇನ್ನು ಮುಂದೆ ಹಲವು ವರ್ಷಗಳ ಕಾಲ ಅಮೆರಿಕಾ ಕೆಲಸದ ಕನಸು ಕನಸಾಗೇ ಉಳಿಯುವ ಸಾಧ್ಯತೆ ಹೆಚ್ಚಿದೆ.  ಆದರೆ ಜಾಗತಿಕ ಗ್ರಾಮ ಎಂಬ ಪರಿಕಲ್ಪನೆಯಲ್ಲಿ  ಪ್ರಪಂಚದಲ್ಲಿ ಯಾವ ಮೂಲೆಯಲ್ಲಿ ಇದ್ದರೂ ಇರುವಲ್ಲಿಯೇ ಕೆಲಸ ಮಾಡುವದಕ್ಕೆ ಹೊಸ ರೂಪ ಸಿಗಲಿದೆ. 

    ಇದರ ಮಧ್ಯ ಒಂದು ಸಮಾಧಾನಕರ ಸಂಗತಿ ಎಂದರೆ, ಈಗಾಗಲೇ  H1B ವೀಸಾ ಹೊಂದಿರುವವರು ಅದರ ಸಿಂಧುತ್ವ ಹೊಂದಿರುವ ವರೆಗೆ ಅಮೆರಿಕಾದಲ್ಲಿ ಕೆಲಸ ಮುಂದುವರಿಸಬಹುದಾಗಿದೆ. 

    ಮುಂದೆ ಏನಾಗಬಹುದು


    1. ಅಮೆರಿಕಾದಲ್ಲಿ ಅಲ್ಲಿಯ ಪೌರತ್ವ ಹೊಂದಿರುವವರಿಗೆ ಹೆಚ್ಚು ಕೆಲಸ ಸಿಗಲಿದೆ.  ಆದರೆ ಕೌಶಲ್ಯ ಭರಿತ ನುರಿತ ತಂತ್ರಜ್ಞರು ಕೆಲವೊಂದು ಕೆಲಸಗಳಿಗೆ ಸಿಗದಿದ್ದಾಗ  ಕಡಿಮೆ ವೆಚ್ಚದಲ್ಲಿ ಐಟಿ ಸೇವೆ ನೀಡುವ ?ದೇಶಗಳಲ್ಲಿ ಪ್ರಮುಖ ವಾದ ಭಾರತಕ್ಕೆ ಆ ಕೆಲಸಗಳು ಹರಿದು ಬರುವ ಸಾಧ್ಯತೆಗಳಿವೆ. 

     
    2. ಹೆಚ್ಚಿನ ಕೌಶಲ್ಯ ಭರಿತ ತಂತ್ರಜ್ಞರು ಅಮೆರಿಕಾದಲ್ಲಿ ಸಿಗದಿದ್ದಾಗ ಹೆಚ್ಚಾಗಿ  ಸಂಶೋಧನೆ ಒಳಪಡುವ ಕೆಲಸಗಳು ಅಮೆರಿಕಾದಿಂದ ಬೇರೆ ಸ್ಥಳಗಳಿಗೆ ರವಾನೆಯಾಗಲಿವೆ.  ಭಾರತದಲ್ಲಿ  ಕೌಶಲ್ಯಭರಿತ  ಮಾನವಶಕ್ತಿ ಸಿಗುವುದರಿಂದ  ವಿಶ್ವದ ಸಂಶೋಧನೆ ಕೆಲಸಗಳಿಗೆ ನಚ್ಚಿನ ತಾಣವಾಗಲಿದೆ.

     
    3. ಈಗಾಗಲೇ ಮನೆಯಿಂದಲೇ  ಕೆಲಸವನ್ನು –WFH- ನಿರ್ವಿಘ್ನವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ , ಭಾರತದ    ಕಂಪನಿಗಳು ಇನ್ನು ಮುಂದೆ ತನ್ನ ಯಾವುದೇ ತಂತ್ರಜ್ಞರನ್ನು ಅಮೆರಿಕಾಗೆ ಕಳುಹಿಸದೇ ಭಾರತದಿಂದಲೇ ತನ್ನ ಎಲ್ಲಾ ಸಾಫ್ಟ್ ವೇರ್  ಡೆವಲಪ್ಮೆಂಟ್ ಕೆಲಸವನ್ನು ವರ್ಚುಯಲ್ಆಗಿ ನಿರ್ವಹಿಸಿ ವಿತರಿಸುವ ಹಾದಿ ತುಳಿಯಲಿವೆ.  ಇದರಿಂದ ಐಟಿ ಕಂಪನಿಗಳಿಗೆ ನಷ್ಟಕ್ಕಿಂತ ಲಾಭವೇ ಹೆಚ್ಚು.  ಭಾರತದಿಂದ ಕಳುಹಿಸುವ ಪ್ರತಿಯೊಬ್ಬ ಉದ್ಯೋಗಿಗೆ ಸಂಬಳ, ಭತ್ಯೆ ಎಲ್ಲವನ್ನು ಅಮೆರಿಕನ್ ಡಾಲರ್ ಗಳಲ್ಲಿ ಪಾವತಿಸಬೇಕಾದ ಅನಿವಾರ್ಯತೆ ಇತ್ತು.  ಅದು ತಪ್ಪಲಿದೆ.

     
    4. ಭಾರತದಲ್ಲಿ ಅನುಭವ ಇರುವ ಐಟಿ ತಂತ್ರಜ್ಞರ ಸಂಬಳ ಜಾಸ್ತಿ ಯಾಗುವ ಹಾಗು ಹೆಚ್ಚಿನ ಸೌಲಭ್ಯ ಇಲ್ಲೇ ದೊರೆಯುವ ಸಾಧ್ಯತೆಯಿದೆ.   ಹೆಚ್ಚಿನ ಕೌಶಲ್ಯ  ನುರಿತ ತಂತ್ರಜ್ಞರು ಭಾರತದಲ್ಲಿ ಉಳಿಯುವುದರಿಂದ  ಐಟಿ ಕಂಪನಿಗಳಿಗೆ ಹೆಚ್ಚು ಲಾಭ. ಹೊಸ ಹಾಗೂ ಅನುಭವ ವಿರುವ  ಉದ್ಯೋಗಾಂಕ್ಷಿಗಳಲ್ಲಿ ಹೆಚ್ಚಿನ ಸ್ಪರ್ಧೆ ಏರ್ಪಡಲಿದೆ.

        
    5. ಈಗಾಗಲೇ H1B  ಹೊಂದಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಿರುವವರು H1B  ವೀಸಾದ ಸಿಂಧುತ್ವ ಮುಂದಿನ ಹಲವು ತಿಂಗಳಲ್ಲಿ ಮುಗಿದರೆ ಅದನ್ನು ನವೀಕರಿಸಲಾಗದೆ ಭಾರತಕ್ಕೆ ಹಿಂದಿರುಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. 

     

    ಪ್ರಭಂಜನ ಮುತ್ತಿಗಿ
    ಪ್ರಭಂಜನ ಮುತ್ತಿಗಿ
    ವೃತ್ತಿಯಿಂದ ಸಾಫ್ಟ್ ವೇರ್ ಎಂಜಿನಿಯರ್., ಶಾಲೆಗೆ ಹೋಗುವ ದಿನದಿಂದಲೂ ಕನ್ನಡದಲ್ಲಿ ಬರೆಯುವದು ಹವ್ಯಾಸ. ಕಥೆ  ,ಕವನ , ನಾಟಕಗಳನ್ನೂ ಬರೆದಿದ್ದಾರೆ. ಹವ್ಯಾಸಿ ಅಂಕಣಕಾರರಾಗಿ ಗುರುತಿಸಿಕೊಂಡಿದ್ದಾರೆ. 
    spot_img

    More articles

    10 COMMENTS

    1. Precise and informative article for people who has to give second thought for investing lacs of rupees for higher study in USA.

    2. ಅಮೆರಿಕಾದ ಹಲವು ವೀಸಾ ಬಗ್ಗೆ ಸರಳವಾಗಿ ವಿವರಿಸಲಾಗಿದೆ. ಸಾಮಾನ್ಯರಿಗೂ ಅರ್ಥವಾಗುವಂತೆ ಪ್ರಭಂಜನ ಬರೆದಿದ್ದಾರೆ.ಈ ಕರೋನಾ ಸೃಷ್ಟಿಸಿದ ಅವಾಂತರಗಳು ಒಂದೆರಡಲ್ಲ.

    3. ಲೇಖಕರು ಹೇಳಿರೋದು ನಿಜ. ಆದರೆ ಅಮೇರಿಕಾದಲಿ ಕೆಲಸ ಮಾಡೋ ರೀತಿಯೇ ಬೇರೆ . ನಾನು ಅಲಿ ಹೋದಾಗ ಗಮನಿಸಿದೆ. ನಮ್ಮಲಿ ಪಾಪ ಕೆಲವರು ಮನೆಗೆ ಬಂದ ಮೇಲೂ ಕೆಲಸ. ಟ್ರ ಂಪ್ ಮಾಡಿರೋದರಲಿ ಒಳೆಯದು ಇದೆ ಮೈನಸ್ ಇದೆ. ಆದರೆ ಇದು ಎಲ್ಲರಿಗೂ ತಿಳುವಳಿಕೆ ಮೂಡಿಸುವ ಲೇಖನ

    4. ಒಂದು ರೀತಿಯಲ್ಲಿ ನಮ್ಮಲ್ಲಿ ಇರುವ ಪ್ರತಿಭೆಗಳು ಇಲ್ಲಿಯೆ ಉಳಿದು ನಮ್ಮ ದೇಶಕ್ಕೆ ಒಳ್ಳೆಯದಾಗುವ ಸಾಧ್ಯತೆ ಗಳು ಇರುತ್ತದೆ . ವೀ ಸಾ ಬಗ್ಗೆ ಬಹಳ ವಿಸ್ತಾರ ವಾಗಿ ತಿಳಿಯುವಂತಾಯಿತು. ಧನ್ಯವಾದಗಳು,

    5. ಸದ್ಯದ ಕೊರೊನಾ ಭಯಾನಕತೆ ಗಮನಿಸಿದರೆ ಅಮೆರಿಕದಲ್ಲಿ ಬಿಡಿ, ಬೆಂಗಳೂರಿನಲ್ಲಿ ಕೆಲಸ ದೊರಕುವುದು ಕಷ್ಟ ಎನ್ನುವಂತಿದೆ. ವೃತ್ತಿ, ಬದುಕು, ಜೀವ ಮುಖ್ಯವೋ ಎಂಬ ಗೊಂದಲದಲ್ಲಿದೆ ಜಗತ್ತು. ಮೊದಲಿಗೆ ಜೀವ ಉಳಿಸಿಕೊಳ್ಳೋಣ. ಒಳ್ಳೆಯ ಲೇಖನ ಪ್ರಭಂಜನ.

    LEAVE A REPLY

    Please enter your comment!
    Please enter your name here

    Latest article

    error: Content is protected !!