ಇಂದಿನ ದಿನಗಳಲ್ಲಿ ಷೇರುಪೇಟೆ ಹೂಡಿಕೆಯು ಸ್ವಲ್ಪ ಮಟ್ಟಿನ ಯಶಸ್ಸು ಕಾಣಬೇಕಾದರೆ ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಲೇಬೇಕು ಕಾರಣ ಮಂತ್ರಕ್ಕಿಂತ ಮಾತೇ ಹೆಚ್ಚು ಎಂಬುವ ಪರಿಸ್ಥಿತಿ ಯಲ್ಲಿದ್ದೇವೆ. ಅಂದರೆ ಆಂತರಿಕ ಸಾಧನೆ ಇಲ್ಲದಿದ್ದರೂ ಅಲಂಕಾರಿಕ ಪ್ರಚಾರದಿಂದ ಷೇರಿನ ಬೆಲೆಗಳು ಗಗನಕ್ಕೇರುತ್ತಿವೆ
ಹೂಡಿಕೆಮಾಡಿದ ಹಣದ ಸುರಕ್ಷತೆಯನ್ನು ಸೂತ್ರವಾಗಿಸಿಕೊಂಡು, ಚಟುವಟಿಕೆ ಜಾಲ ಹರಡಬೇಕಾಗಿದೆ
ಸ್ಪರ್ಧಾತ್ಮಕವಾಗಿರುವ ಈಗಿನ ಸಮಯದಲ್ಲಿ ದೊರೆತಂತಹ ಲಾಭಗಳಿಕೆಯ ಅವಕಾಶವನ್ನು ಕೈಗೆಟುಕಿಸಿಕೊಳ್ಳುವುದು ಅನಿವಾರ್ಯ. ಕಾರಣ ಹಣಗಳಿಕೆಯೊಂದೇ ಇಂದಿನ ವಹಿವಾಟುದಾರರ ಗುರಿ. ಬೆಲೆ ಏರಿಕೆ ಸ್ಥಿರತೆ ಕಾಣಲು ಕಾರ್ಪೊರೇಟ್ ಸಾಧನೆಗಳು ಬೆಂಬಲಿಸುವ ಮಟ್ಟದಲ್ಲಿಲ್ಲ.
ಸಾಧ್ಯವಾದಷ್ಟು ಅಗ್ರಮಾನ್ಯ ಕಂಪೆನಿಗಳನ್ನೇ ಹೂಡಿಕೆಗೆ ಆಯ್ಕೆಮಾಡಿಕೊಳ್ಳುವುದು ಸೂಕ್ತ. ಕಾರಣ ಇಂತಹ ಕಂಪನಿಗಳಲ್ಲಿ ಹೂಡಿಕೆದಾರರ ಆಸಕ್ತಿ ಹೆಚ್ಚಾಗಿದ್ದು, ಡೆರಿವೆಟೀವ್ಸ್ ಪೇಟೆಗನುಗುಣವಾಗಿ ಬದಲಾಗುವುದರಿಂದ ಅಪಾಯದ ಮಟ್ಟ ಕಡಿಮೆಯಾಗಿರುತ್ತದೆ. ಒಂದು ವೇಳೆ ಹೂಡಿಕೆ ಧೀರ್ಘಕಾಲವಾದರೆ ಡಿವಿಡೆಂಡ್ ವಿತರಿಸುವ ಸಾಧ್ಯತೆ ಇರುತ್ತದೆ.
ಇಂದಿನ ದಿನಗಳಲ್ಲಿ ಹೂಡಿಕೆಯು ಸ್ವಲ್ಪ ಮಟ್ಟಿನ ಯಶಸ್ಸು ಕಾಣಬೇಕಾದರೆ ಸರಳ ಸೂತ್ರಗಳು:
- ಹೂಡಿಕೆಮಾಡಿದ ಹಣದ ಸುರಕ್ಷತೆಕಡೆ ಹೆಚ್ಚು ಗಮನ ನೀಡಬೇಕು.
- ಸ್ಪರ್ಧಾತ್ಮಕವಾಗಿರುವ ಈಗಿನ ಸಮಯದಲ್ಲಿ ದೊರೆತಂತಹ ಲಾಭಗಳಿಕೆಯ ಅವಕಾಶವನ್ನು ಕೈಗೆಟುಕಿಸಿಕೊಳ್ಳುವುದು ಅನಿವಾರ್ಯ.
- ಸಾಧ್ಯವಾದಷ್ಟು ಅಗ್ರಮಾನ್ಯ ಕಂಪೆನಿಗಳನ್ನೇ ಹೂಡಿಕೆಗೆ ಆಯ್ಕೆಮಾಡಿಕೊಳ್ಳುವುದು ಸೂಕ್ತ.
- ವ್ಯಾಲ್ಯೂ ಪಿಕ್ – ಪ್ರಾಫಿಟ್ ಬುಕ್ ಇಂದಿನ ಅಗತ್ಯ.
- ಕಂಪೆನಿಗಳ ಆಂತರಿಕ ಸಾಧನೆಗೆ ಹೆಚ್ಚು ಪ್ರಾಶ್ಯಸ್ತ್ಯವಿರಲಿ.
- ಕಾರ್ಪೊರೇಟ್ ಫಲಗಳನ್ನು ವಿತರಿಸುವ ಕಂಪೆನಿಗಳತ್ತ ಹೆಚ್ಚು ಒಲವಿರಲಿ.
- ಹೂಡಿಕೆ ದೀರ್ಘಕಾಲೀನವಾದರೂ – ಲಾಭಕಾಲೀನವಾಗಿರಲಿ, ದೊರೆತಂತಹ ಲಾಭದ ಅವಕಾಶ ನಗದೀಕರಣಕ್ಕೆ ಆದ್ಯತೆಯಿರಲಿ.
- ವಿಶ್ಲೇಷಣೆಗಳನ್ನು ಆಲಿಸಿ, ತುಲನೆಮಾಡಿ ವಾಸ್ತವ ಪೇಟೆಯ ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಿರಿ
ವ್ಯಾಲ್ಯೂ ಪಿಕ್ – ಪ್ರಾಫಿಟ್ ಬುಕ್ ಇಂದಿನ ಅಗತ್ಯ. ಕಾರಣ ರಭಸದ ಏರಿಳಿತಗಳಿದ್ದಲ್ಲಿ ಮಾತ್ರ ವಹಿವಾಟುದಾರರು ಲಾಭ ಗಳಿಸಲು ಸಾಧ್ಯ. ಉದಾಹರಣೆಗೆ ಬಯೋಕಾನ್, ಬಜಾಜ್ ಫೈನಾನ್ಸ್, ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಿಹೆಚ್ಇಎಲ್, ಭಾರತ್ ಪೆಟ್ರೋಲಿಯಂ, ಮುಂತಾದವು ಜೀಕುತ್ತಾ ಪ್ರದರ್ಶಿಸಿದ ಅವಕಾಶಗಳು ಅಪಾರ.
ಕಂಪೆನಿಗಳ ಆಂತರಿಕ ಸಾಧನೆಗೆ ಹೆಚ್ಚು ಪ್ರಾಶ್ಯಸ್ತ್ಯವಿರಲಿ. ಕಾರಣ ಈ ಕಂಪನಿಗಳು ಕಾರ್ಪೊರೇಟ್ ಫಲಗಳನ್ನು ವಿತರಿಸುವ ಸಾಧ್ಯತೆ ಹೆಚ್ಚು.
ಅಪಾರವಾದ ಏರಿಳಿತದ ಈ ದಿನಗಳಲ್ಲಿ ಹೂಡಿಕೆ ದೀರ್ಘಕಾಲೀನವಾದರೂ – ಲಾಭಕಾಲೀನವಾಗಿರಲಿ, ದೊರೆತಂತಹ ಲಾಭದ ಅವಕಾಶ ನಗದೀಕರಣಕ್ಕೆ ಆದ್ಯತೆಯಿರಲಿ. ಹಾಗಿದ್ದಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸುರಕ್ಷತೆ ಕಾಣಬಹುದು.
ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಶ್ಲೇಷಣೆಗಳನ್ನು ಆಲಿಸಿ, ತುಲನೆಮಾಡಿ ವಾಸ್ತವ ಪೇಟೆಯ ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಿರಿ. ಯಾವ ವಿಶ್ಲೇಷಣೆಗಳು ಪರಿಪೂರ್ಣವಾಗಿರದು.
ನೆನಪಿರಲಿ ಆನೆ ನಡೆದಿದ್ದೇ ದಾರಿ, ಪೇಟೆ ಪ್ರದರ್ಶಿಸಿದ್ದೇ ಸರಿ
ಷೇರುಪೇಟೆಯಲ್ಲಿ ವ್ಯವಹರಿಸುವಾಗ ಗಮನಿಸಬೇಕಾದ ವಿಷಯ ಗಳ ಬಗ್ಗೆ ವಿಷದವಾಗಿ ತಿಳಿಸಿದ್ದಾರೆ . ಲೇಖಕರಿಗೆ ನನ್ನ ಅಭಿನಂದನೆಗಳು.
ಲೇಖಕರು ಹಣ ಹೂಡಿಕೆದಾರರಿಗೆ ಉತ್ತಮ ಸಲಹೆ ನೀಡಿದಾರೆ . ಷೇರು ಹೂಡಿಕೆ ಮಾಡುವುದಾದರೆ ಏನೇನು ಗಮನಿಸಬೇಕು ಎಂದು ಎಚ್ಚರಿಸಿದಾರೆ. ನಿಜ ಆನೆ ನಡೆದದೇ ದಾರಿ. ಈಗ ಕರೋನಾ ನೀಡಿದ ಹೊಡೆತ ಹೇಗಿದೆ ಅಂದರೆ ದಿನ ನಿತ್ಯದ ಬದುಕೇ ದುಸ್ತರವಾಗಿದೆ. ಹೂಡಿಕೆದಾರರಿಗೆ ತುಂಬಾ ಉಪಯೋಗವಾಗುವ ಲೇಖನ
ಕೆ ಜಿ ಕೃಪಾಲ್ ರವರ ಈ ಲೇಖನ ಹೂಡಿಕೆದಾರರಿಗೇ ಸಮಂಜಸವಾದ ತಿಳುವಳಿಕೆ – Mr. Market is right!