ಷೇರುಪೇಟೆಯ ಇಂದಿನ ದಿನಗಳಲ್ಲಿ ಯಾವ ನಿಖರವಾದ ನಿಯಮಗಳಿಲ್ಲದೆ ಚಲಿಸುತ್ತಿರುವಂತಿದೆ. ವಹಿವಾಟುದಾರರು ನಡೆಸುವ ಚಟುವಟಿಕೆಯೇ ಅಂತಿಮ ಎಂಬಂತಿದೆ. ಷೇರುಪೇಟೆಗಳು ರಭಸದ ಏರಿಳಿತ ಪ್ರದರ್ಶಿಸುತ್ತಿರುವುದರ ಹಿಂದೆ ಯಾವುದೇ ಪ್ರಮುಖ ಕಾರಣಗಾಳಿಲ್ಲದಂತಿದೆ. ಆಂತರಿಕ ಸಾಧನೆ ಮೀರಿ ಸೂಚ್ಯಂಕಗಳು ಏರಿಕೆ ಕಂಪನಿಗಳ ಸಾಧನೆಗೂ ಷೇರಿನ ದರ ಏರಿಕೆಗೂ ಸಂಬಂಧವಿಲ್ಲದಂತಿದೆ. ಕೆಳಗಿನ ಉದಾಹರಣೆ ಈ ಅಂಶ ದೃಢಪಡಿಸುತ್ತದೆ.
ಆಂಧ್ರಾ ಪೇಪರ್ ಲಿಮಿಟೆಡ್ ಕಂಪನಿಯ ಷೇರಿನ ಬೆಲೆ ಗುರುವಾರದಂದು ಸುಮಾರು ೩೬ ರೂಪಾಯಿಗಳಷ್ಠು ಕುಸಿತಕ್ಕೊಳಗಾಯಿತು ಅದಕ್ಕೆ ಕಾರಣ ಕಂಪನಿಯ ಪ್ರವರ್ತಕರು ತಮ್ಮ ಭಾಗಿತ್ವದ ಶೇ.10 ರಷ್ಟನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟಮಾಡಲಿರುವ ಅಂಶ ಪ್ರಕಟವಾಗಿದ್ದು. ಅಂದು ರೂ.194 ರ ಸಮೀಪಕ್ಕೆ ಕುಸಿದಿದ್ದ ಷೇರಿನ ಬೆಲೆ ಸೋಮವಾರ ದಿಢೀರನೆ ಶೇ.20 ರಷ್ಟರ ಏರಿಕೆಯಿಂದ ಮಿಂಚಿದೆ. ಅಂದರೆ ಕಂಪನಿಯ ಆಂತರಿಕ ಸಾಧನೆಗೆ ಸಂಬಂಧವಿಲ್ಲದ ಸುದ್ದಿಗೆ ಪೇಟೆ ಪ್ರದರ್ಶಿಸಿದ ರೀತಿ ಫಂಡಮೆಂಟಲ್ಸ ಆಧಾರದ ಹೂಡಿಕೆದಾರರಿಗೆ ಗೊಂದಲಮೂಡಿಸುವುದು ಸಹಜ. ಮೂರೇ ದಿನದಲ್ಲಿ ರೂ.60 ರಷ್ಟರ ಏರಿಕೆ ಕಂಡಿದೆ. ಕೇವಲ ವ್ಯಾಲ್ಯೂ ಪಿಕ್ ಅಧಾರದ ಮೇಲೆ ಕೊಂಡವರಿಗೆ ಉತ್ತಮ ಲಾಭದ ಅವಕಾಶ ಪೇಟೆ ಒದಗಿಸಿದೆ ಈ ಸಂದರ್ಭ ಹೇಗೆ ಅವಕಾಶ ಸೃಷ್ಟಿಸಿಕೊಟ್ಟಿದೆ ಎಂದರೆ S B I Mutual Fund ತನ್ನ ವಿವಿಧ ಯೋಜನೆಗಳಡಿಯಲ್ಲಿ ಒಟ್ಟು 31,33,000 ಷೇರುಗಳನ್ನು ಈ ಆಫರ್ ಫಾರ್ ಸೇಲ್ ಮೂಲಕ ಖರೀದಿಸಿದೆ. ಸೋಮವಾರ ನಡೆದ ವಹಿವಾಟಿನಲ್ಲಿ ಶೇ.28.07 ರಷ್ಟು ಮಾತ್ರ ವಿಲೇವಾರಿ ವಹಿವಾಟಾಗಿರುವುದು. ಪೇಟೆಯಲ್ಲಿ ನಡೆಯುತ್ತಿರುವ ವಿಲೇವಾರಿ ರಹಿತ ಚಟುವಟಿಕೆಗೆ ಹಿಡಿದ ಕನ್ನಡಿಯಾಗಿದೆ.
ಈ ಕಂಪನಿಯ ಇತ್ತೀಚಿನ ವಹಿವಾಟಿನ ರೀತಿ ಈ ಕೆಳಕಂಡಂತಿದೆ.
ಈ ಷೇರಿನಲ್ಲಿ ಒಂದು ವಾರದ ಹೂಡಿಕೆ ಶೇ.2.7 ರಷ್ಟು ಏರಿಕೆ ಕಂಡಿದೆ.
ಒಂದು ತಿಂಗಳಲ್ಲಿನ ಹೂಡಿಕೆ ಶೇ.45 ರಷ್ಟು ಏರಿಕೆ ಕಂಡಿದೆ.
ಆರು ತಿಂಗಳಲ್ಲಿ ಈ ಕಂಪನಿ ಹೂಡಿಕೆ ಶೇ.18.67ರಷ್ಟು ಹಾನಿ ಕಂಡಿದೆ.
ಒಂದು ವರ್ಷದ ಹೂಡಿಕೆಯು ಶೇ.40.57 ರಷ್ಟು ಹಾನಿ ಕಂಡಿದೆ.
ಅಂದರೆ ಇತ್ತೀಚಿನ ದಿನಗಳಲ್ಲಿ ಈ ಷೇರು ಹೆಚ್ಚು ಹೆಚ್ಚು ಏರಿಕೆ ಕಂಡಿದೆ ಎಂಬುದು ಗಮನಿಸಬೇಕಾದ ಅಂಶ. 2011 ರ ನಂತರದಲ್ಲಿ ಈ ಕಂಪನಿ ಯಾವುದೇ ಡಿವಿಡೆಂಡ್ ನೀಡಿರದ ಈ ಕಂಪನಿ ಎಂತಹ ಮಟ್ಟದ ಲಾಭ ಗಳಿಸಿಕೊಟ್ಟಿದೆ. ಇಂತಹ ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಚಟುವಟಿಕೆ ನಡೆಸುವಾಗ ಅಪಾಯದ ಮಾಟ್ಟವನ್ನರಿತು ನಡೆಸುವುದು ಒಳಿತು.
ಬಂಡವಾಳ ಸುರಕ್ಷತೆಗೆ ವ್ಯಾಲ್ಯೂ ಪಿಕ್ – ಪ್ರಾಫಿಟ್ ಬುಕ್ ಗಳು ಜೊತೆ ಜೊತೆ ಇರಲೇಬೇಕು