ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಪದಗ್ರಹಣ ಮಾಡಿದ್ದಾರೆ. ತಮ್ಮದೆ ಶೈಲಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ ಕೆ ಶಿವಕುಮಾರ್, ಕೇಡರ್ ಆಧಾರಿತ ಪಕ್ಷ ಕಟ್ಟುವ ಮಾತಾನಾಡಿದ್ದಾರೆ. ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದ್ದಾರೆ. ಅವರು ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿ ಆಗಬಹುದು? ಅವರೇ ಹೇಳಿದಂತೆ ವಿಧಾನ ಸೌಧದ ಮೆಟ್ಟಿಲಿನ ಚಪ್ಪಡಿ ಕಲ್ಲಾಗಿ ಕಾಂಗ್ರೆಸ್ ಪಕ್ಷ ಮೂರನೆ ಮಹಡಿ ತಲುಪಿ ಅಧಿಕಾರ ಹಿಡಿಯುವಂತೆ ಮಾಡಬಲ್ಲರೆ ? ಈ ಬಗ್ಗೆ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಟ್ ಇದು. ಆಲಿಸಿ ನಿಮ್ಮ ಅಭಿಪ್ರಾಯ ತಿಳಿಸಿ.
ಶ್ರೀವತ್ಸ ನಾಡಿಗ್ ಹಾಗೂ ಕೂಡ್ಲಿ ಗುರುರಾಜ್ ಅವರು ಇಂದು ಡಿ,ಕೆ ಶಿವಕುಮಾರ್ ಅವರಪದಗ್ರಹಣ ಸಂದರ್ಭದಲ್ಲಿ ಮಾಡಿದ ಚರ್ಚೆ ಸಮಯೋಚಿತವಾಗಿತ್ತು.ಆದರೆ ಕಾಂಗ್ರೆಸ್ ಪಕ್ಷದ ಬೇರು ಸುಭದ್ರವಾಗಿಲ್ಲದಿರುವುದರಿಂದ ನೂತನ ಅಧ್ಯಕ್ಷರು ಹೇಳಿಕೊಳ್ಳುವಂತಹ ಪ್ರಗತಿಯನ್ನು ಸಾಧಿಸುವುದು ಕಷ್ಟ.ಇಂದಿನ ಸಮಾರಂಭದಲ್ಲಿ ಹಿರಿಯ ರಾಜಕಾರಣಿಗಳು ಭಾಗವಹಿಸಿದ್ದರೂ ಆಂತರಿಕವಾಗಿ ನೂತನ ಅಧ್ಯಕ್ಷರ ಬಗ್ಗೆ ತಳಮಳವಿದ್ದೇ ಇರುತ್ತದೆ . Future of congress is not as bright as these people are dreaming .
ಚರ್ಚೆಯ ವಿಷಯಗಳು ಸಮಯೋಚಿತ. ಹಾಗೆಯೇ DKS ಅವರ ಮೇಲಿನ ಹಗರಣ,ಅವರ ಜಾಮೀನು ಇವುಗಳ ಬಗ್ಗೆಯೂ ಪ್ರಸ್ತಾವಿಸಿದ್ದರೆ, ಚೆನ್ನಾಗಿರುತ್ತಿತ್ತು. ನ್ಯಾಯಾಂಗದ ಹುಳುಕುಗಳಲ್ಲಿ ಬೇಳೆ ಬೇಯಿಸುವ ಪ್ರವೃತ್ತಿ ಬಗ್ಗೆ ಸಾಮಾನ್ಯ ಜನರ ಆಕ್ರೋಶಕ್ಕೆ ಧ್ವನಿಯಾಗುವ ಅವಕಾಶ miss ಆಯ್ತೇನೋ ಅಂತ ನನ್ನ ಅಭಿಪ್ರಾಯ.
ಸಂಪಾದಕರು ಮತ್ತು ಕೂಡ್ಲಿ ಗುರುರಾಜ ಅವರ ಸಂವಾದ ತುಂಬಾ ಅರ್ಥ ಗರ್ಭಿತ ವಾಗಿತ್ತು. ಡಿ ಕೆ. ಶಿವಕುಮಾರ್. ಒಬ್ಬ ನುರಿತ ರಾಜಕಾರಣಿ ತಮ್ಮ ವಾಕ್ ಚಾತುರ್ಯದಿಂದ ಎಲ್ಲರನ್ನು ಆಕರ್ಷಣೆ ಮಾಡ್ತಾರೆ. ಆದ್ರೆ ಅವರು ಕೂಡ ನೆಹರು ಕುಟುಂಬ ದ ಕಟ್ಟಾ ಅಭಿಮಾನಿ. ಇನ್ನೊಂದು ವಿಷಯ. ನಮ್ಮ ಜನರ ಮನಸ್ಥಿತಿನೇ ಅರ್ಥವಾಗೋಲ್ಲ. ಕಾಂಗ್ರೆಸನವರಿಗೆ ಇವರಿಗಿಂತ ಬೇರೆಯವರು ಸಿಗಲೇ ಇಲ್ಲವೇ. ಮತ್ತೆ ಅವರನ್ನೇ ಅಧ್ಯಕ್ಷ ಪದವಿಗೆ ತಂದಿರುವುದನ್ನು ನೋಡಿದಾಗ. ಇದು ಕಾಂಗ್ರೆಸ್ ಪಕ್ಷ ದ ದೌರ್ಬಲ್ಯ ಮತ್ತು ನಮ್ಮ ಹಣೆಬರಹ ತೋರಿಸುತ್ತೆ.