21.7 C
Karnataka
Tuesday, December 3, 2024

    ದುಃಖತಪ್ತರಾದ ಸೀನಿಯರ್ಸ್; ಟಪ್ಪಾಂಗುಚ್ಚಿ ಹಾಕಿದ ಜೂನಿಯರ್ಸ್

    Must read

    ಫೇಸ್ ಬುಕ್ಕಲ್ಲಿ, ವಾಟ್ಸಾಪ್ , ಇನ್ಸ್ಟಾ ದಲ್ಲಿ ಕಳೆದು ಹೋಗುತ್ತಿರುವ ನಮ್ಮ ವಿದ್ಯಾರ್ಥಿ ಸಮುದಾಯದಲ್ಲಿ ಬರೆಯುವ ಅಭ್ಯಾಸವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡಪ್ರೆಸ್ ಆರಂಭಿಸುತ್ತಿರುವ ಕ್ಯಾಂಪಸ್ ಪ್ರೆಸ್ ಅಂಕಣದ ಚೊಚ್ಚಲ ಬರಹ ಇದು. ವಿಶ್ವವಿದ್ಯಾಲಯ ಕಾಲೇಜು ,ಮಂಗಳೂರು ಇಲ್ಲಿನ ಪ್ರಥಮ ಬಿಎ ವಿದ್ಯಾರ್ಥಿನಿ ಪ್ರಜ್ಞಾ , ಪದವಿ ಪರೀಕ್ಷೆಗಳು ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭಾವನೆಯನ್ನು ನವಿರಾದ ಹಾಸ್ಯದೊಂದಿಗೆ ಇಲ್ಲಿ ಹಂಚಿಕೊಂಡಿದ್ದಾರೆ.

    ಕೂತಲ್ಲಿ, ನಿಂತಲ್ಲಿ, ನಿದ್ದೆಯ ಮಂಪರಿನಲ್ಲಿ, ಲಾಕ್ಡೌನ್ ಮೋಜಿನಲ್ಲಿ, ಕೋರೋನ ಟೆನ್ಶನ್ನಲ್ಲಿ , ಮನೆಯವರ ಜತೆಗಿನ  ಜಗಳದಲ್ಲಿ, ಗೆಳೆಯರೊಂದಿಗಿನ ವಿಡಿಯೋ ಕಾಲ್‌ನಲ್ಲಿ, ವಾಟ್ಸಪ್ಪ್ನಲ್ಲಿ, ಫೇಸ್ಬುಕ್ನಲ್ಲಿ, ಎಲ್ಲೆಲ್ಲೂ  ಪದವಿ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷೆಯದ್ದೇ  ಚಿಂತೆ. ಅತ್ತ  ಎಕ್ಸಾಂ ಇಲ್ಲವೆಂಬ ಅತಿಯಾದ ವಿಶ್ವಾಸ, ಇತ್ತ ಒಂದೊಮ್ಮೆ ನಡೆಸಿಯೇ ಬಿಟ್ಟರೆ ಎಂಬ ಆತಂಕದಲ್ಲೇ ತಮ್ಮ ಅರ್ಧ  ಲಾಕ್ಡೌನ್  ರಜೆಯನ್ನೇ ಕಳೆದುಬಿಟ್ಟರು! 

    ಇನ್ನೇನು ʼಮುಂಗಾರು ಮಳೆʼಯ ಗಣೇಶನಂತೆ ತಮ್ಮ ಮೆದುಳಿನೊಳಗೆ ಕೈ ಹಾಕಿ ಪರಪರ  ಎಂದು ಕೆರೆದುಕೊಂಡು ದೊಡ್ಡ ಗಾಯ ಆಗುವಷ್ಟರಲ್ಲಿ  ಆಪತ್ಪಾಂಧವರಾಗಿ  ಬಂದ ಸಚಿವ ಅಶ್ವಥ್ ನಾರಾಯಣರು  ಎಕ್ಸಾಂ ಇಲ್ಲವೆಂದು  ಘೋಷಿಸಿಯೇ ಬಿಟ್ಟರಲ್ಲ!   

    ಎಕ್ಸಾಂ ಇಲ್ಲವೆಂದು ತಿಳಿಸಿದ ನಾರಾಯಣರು  ಕೊನೆಗೂ ಫೈನಲ್ ಯಿಯರ್ಸ್‌ಗೆ  ಪರೀಕ್ಷೆ  ಇದೆ  ಎಂದು  ಘೋಷಿಸಿ  ಬಿಟ್ಟರಲ್ಲ, ಅದೇ ಟ್ವಿಸ್ಟ್. ದುಃಖತಪ್ತರಾದ  ಸೀನಿಯರ್ಸ್  ಮನಸಲ್ಲೇ  ಬಯ್ಯುತ್ತಾ , ಶಾಪಹಾಕುತ್ತ  ಲಾಕ್ಡೌನ್‌ನಲ್ಲಿ ಮೂಲೆಸೇರಿದ್ದ, ಗುಜರಿ ಅಂಗಡಿಗೆ ಮೀಸಲಾಗಿರಿಸಿದ್ದ  ತಮ್ಮ  ಧೂಳು  ಹಿಡಿದ ಪುಸ್ತಕಗಳ  ಮೇಲೆ  ಒಂದೆರಡು  ಬಾರಿ  ಬಡಿದು  ಧೂಳ ತೆಗೆದು  ಮನಸಿಲ್ಲದ  ಮನಸ್ಸಿನಲ್ಲಿ  ಓದಲು ಕುಳಿತರಂತೆ. 

    ಇನ್ನೂ ಪ್ರಥಮ ಹಾಗೂ ದ್ವಿತೀಯ  ವರ್ಷದ ಪದವಿ ವಿದ್ಯಾರ್ಥಿಗಳಲ್ಲೂ  ಹಲವು  ವಿಧಗಳಿವೆ. ಛೆ.. ! ಈ ಭಾರಿ  ಚೆನ್ನಾಗಿ ಓದಿ  100ಕ್ಕೆ  101 ಅಂಕಗಳಿಸಬೇಕೆಂದಿದ್ದೆ ಎಲ್ಲ  ನೀರಲ್ಲಿ  ಹೋಮ  ಮಾಡಿದಂತಯಿತು , ಎಂದು  ಫಸ್ಟ್ಬೆಂಚರ್ಸ್  ತಲೆ ಜಜ್ಜಿಕೊಂಡರೆ , ಇತ್ತ ಎಕ್ಸಾಮ್  ಇದ್ರೂ , ಇರದಿದ್ರೂ  ಓಕೆ  ಎಂಬ  ಮನಸ್ಥಿತಿ  ಮಿಡಲ್ ಬೆಂಚರ್ಸ್  ಹೊಂದಿದ್ದರು.  ಅತ್ತ  ಕ್ಲಾಸಿನ  ಮುಖ್ಯ  ಆಕರ್ಷಣೆ  ಅಂದರೆ ಲಾಸ್ಟ್ ಬೆಂಚ್‌  ಸ್ಟೂಡೆಂಟ್ಸ್  ಟಪ್ಪಾಂಗುಚ್ಚಿ   ಹಾಡಿಗೆ  ಸ್ಟೆಪ್ಸ್  ಹಾಕಿ  ಸೋಶಿಯಲ್  ಮೀಡಿಯಾ ದಲ್ಲಿ  ತಮ್ಮ ಸಂತಸವನ್ನು  ಹಂಚಿಕೊಂಡಿದ್ದಾರೆ!

    Photo by Roberto Arias on Unsplash

    ಪ್ರಜ್ಞಾ
    ಪ್ರಜ್ಞಾ
    ಮಂಗಳೂರು ವಿವಿ ಕಾಲೇಜಿನ ದ್ವಿತೀಯ ಬಿ ಎ ವಿದ್ಯಾರ್ಥಿನಿ
    spot_img

    More articles

    3 COMMENTS

    1. ವಾಸ್ತವ ಚಿತ್ರಣ ನವಿರಾದ ಹಾಸ್ಯದಲ್ಲಿ‌ ಚೆನ್ನಾಗಿ ಮೂಡಿ‌ ಬಂದಿದೆ
      ಅಭಿನಂದನೆಗಳು

    2. ಯಾವುದೇ ವಿಷಯವನ್ನು ತಮ್ಮದೇ ಶೈಲಿಯಲ್ಲಿ ವಿಮರ್ಶಿಸುವ ಮತ್ತು ವಿಶ್ಲೇಷಿಸುವ ಶಕ್ತಿ ಉತ್ತಮ ಬರಹಗಾರರಿಗೆ ಮಾತ್ರ ಇರುತ್ತದೆ ಅಂತಹ ಉತ್ತಮ ಬರಹಗಾರರಲ್ಲಿ ಅತ್ಯುತ್ತಮವಾದ ಬರಹಗಾರ್ತಿಯಾಗಿ ನೀವು ಪದವಿ ವಿದ್ಯಾರ್ಥಿಗಳ ಮನಸ್ಥಿತಿಯನ್ನು ವಿಶ್ಲೇಷಿಸಿದ್ದೀರಿ ನಿಮಗೆ ಅಭಿನಂದನೆಗಳು ನಿಮ್ಮ ಬರಹಗಳು ಹೀಗೆ ಮುಂದುವರೆಯಲಿ.

    LEAVE A REPLY

    Please enter your comment!
    Please enter your name here

    Latest article

    error: Content is protected !!