ಭೂಮಿಯಲ್ಲಿರುವ ಮಾನವರು ನಾವೇ ಶ್ರೇಷ್ಠರು, ನಮ್ಮಷ್ಟು ವಿಜ್ಞಾನ-ತಂತ್ರಜ್ಞಾನದಲ್ಲಿ ಮುಂದುವರಿದವರು ಇಲ್ಲ ಎಂದು ಹೆಮ್ಮೆಯಿಂದ ಬೀಗುತ್ತಿದ್ದೇವೆ. ಆದರೆ, ಈ ಬ್ರಹ್ಮಾಂಡದಲ್ಲಿ ಅದೆಷ್ಟು ಭೂಮಿಯಂತಹ ಗ್ರಹಗಳು ಇವೆಯೋ ಮತ್ತು ಅವು ಎಷ್ಟು ಸಹಸ್ರ ವರ್ಷಗಳ ಹಿಂದೆಯೇ ಹುಟ್ಟಿದ್ದು, ಆ ಮೂಲಕವೇ ಅಂತಹ ಗ್ರಹಗಳಲ್ಲಿ ಇರುವ ಜೀವಿಗಳು ಅಂದರೆ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಅನ್ಯಗ್ರಹ ಜೀವಿಗಳು (ಯುಎಫ್ಒ- ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ಸ್- ಆಕ್ಸ್ ಫರ್ಡ್ ಇಂಗ್ಲಇಂಗ್ಲಿಷ್ ಡಿಕ್ಷನರಿ) ನಾನಾ ರೀತಿಯಲ್ಲಿ ವಿಜ್ಞಾನ-ತಂತ್ರಜ್ಞಾನದಲ್ಲಿ ಅಗಣಿತ ಪರಿಣತಿಯನ್ನು ಸಾಧಿಸಿವೆಯೋ ಎಂಬ ಬಗ್ಗೆ ಇನ್ನೂ ನಾವು ಭೂಮಿಯಲ್ಲಿರುವ ಜನರು ಅಜ್ಞಾನಿಗಳಾಗಿಯೇ ಇದ್ದೇವೆ. ಯಾವುದೇ ಸಂದರ್ಭ, ಸನ್ನಿವೇಶದಲ್ಲಿ ಇಂತಹದ್ದೊಂದು ಕಾಣಿಸಿತ್ತಂತೆ, ಎಂಬ ಮಾತಿನಲ್ಲೇ ನಾವು ಆ ಕುರಿತು ಯೋಚನೆ ಮಾಡುತ್ತಿದ್ದೇವೆ.
ಇಷ್ಟೆಲ್ಲಾ ಪೀಠಿಕೆ ಮಾತು ಯಾಕೆಂದರೆ ಇತ್ತೀಚೆಗೆ ಅನ್ಯಗ್ರಹ ಜೀವಿಗಳ ಬಗ್ಗೆ ಖಾಸಗಿಯಾಗಿ ಅವಿರತವಾಗಿ ಸಂಶೋಧನೆ ಮಾಡುತ್ತಿರುವ ಸುಪ್ರಸಿದ್ಧ ಏಲಿಯನ್ ಹಂಟರ್ ಸ್ಕಾಟ್ ಸಿ ವಾರಿಂಗ್ ಈ ಕುರಿತು ಹೊಸ ವಿಷಯವನ್ನು ಹೊರ ಹಾಕಿದ್ದಾರೆ.
ಅವರ ಪ್ರಕಾರ ಮಂಗಳ ಗ್ರಹದಲ್ಲಿ ವಿನೂತನ ಯಂತ್ರವೊಂದು ಕಂಡು ಬಂದಿದ್ದು, ಇದು ಕೆಂಪು ಗ್ರಹದಲ್ಲಿ ಜೀವಿಸುತ್ತಿರುವ ಏಲಿಯನ್ಸ್ ನದ್ದು ಎಂದವರು ಪ್ರತಿಪಾದಿಸಿದ್ದಾರೆ. ನಾಸಾ ಕ್ಯೂರಿಸಿಟಿ ರೋವರ್ ಕ್ಯಾಮರಾದಲ್ಲಿ ಕಂಡು ಬಂದ ಈ ವಿಶಿಷ್ಟ ವಾಹನ ಅಥವಾ ಯಂತ್ರದ ವಿಶ್ಲೇಷಣೆಯನ್ನು ತಾವು ಮಾಡಿದ್ದು, ಈ ಮೂಲಕ ಇಂತಹ ಪ್ರತಿಪಾದನೆ ಮಾಡಿರುವುದಾಗಿ ಅವರು ಹೇಳಿದ್ದಾರೆ.
ಉದ್ದವಾದ, ಸಿಲಿಂಡರ್ ಆಕೃತಿಯ ಲೋಹದ ವಸ್ತುವೊಂದು ತಾನು ಬಳಸಿದ ದೂರದರ್ಶಕದಲ್ಲಿ ಕಂಡು ಬಂದಿದ್ದು, ಇದು ಏಲಿಯನ್ಸ್ ಗಳು ನಮ್ಮಿಂದ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದೆ ಹೋಗಿವೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ತಾನು ಏಲಿಯನ್ಸ್ ಇರುವಿಕೆಯ ಬಗ್ಗೆ ಸದೃಢವಾದ ಪುರಾವೆಯನ್ನು ತೋರಿಸಬಲ್ಲೆ ಎಂದವರು ಹೇಳಿದ್ದು, ಮಂಗಳ ಗ್ರಹದಲ್ಲಿ ವಿಮಾನವನ್ನೇ ಹೋಲುವ ಪ್ರಾಚೀನ ವಸ್ತುವೊಂದು ಕಾಣಿಸಿಕೊಂಡಿದ್ದು, ಇದು ಬಹುತೇಕ ಈಗಿನ ಜೆಟ್ ವಿಮಾನಗಳನ್ನೇ ಹೋಲುತ್ತಿದೆ. ಇದರಿಂದ ಅನ್ಯಗ್ರಹ ಜೀವಿಗಳು ನಮ್ಮಿಂದ ತುಂಬಾ ಹಿಂದೆಯೇ ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೆ ಎಂಬುದು ತಿಳಿಯುತ್ತದೆ ಎಂದು ವಿವರಿಸಿದ್ದಾರೆ.
ಈ ವಿಮಾನ ರೀತಿಯ ವಸ್ತು ಹಳೆಯದಾಗಿರಬಹುದು, ದೂಳಿನಿಂದಅಚ್ಛಾದಿತವಾಗಿರಬಹುದು ಆದರೆ, ನಮ್ಮಿಂದ ಮೊದಲೇ ಮಂಗಳ ಗ್ರಹದಲ್ಲಿ ಇಂತಹ ವಿಶೇಷ ವಾಹನ ಸಿದ್ಧವಾಗಿತ್ತು ಎಂಬುದಕ್ಕೆ ಇದು ಸಾಕ್ಷಿ ಎಂದಿದ್ದಾರೆ. ಈ ಬಗ್ಗೆ ತಮ್ಮ ಇಟಿ ಡೇಟಾಬೇಸ್ ಎಂಬ ಬ್ಲಾಗ್ ನಲ್ಲಿ ಅವರು ಸವಿವರವಾಗಿ ವಿಷಯ ತಿಳಿಸಿದ್ದಾರೆ.
ಈಗ ಕಂಡು ಬಂದಿರುವ ವಾಹನವು ತಾಮ್ರ ಅಥವಾ ಚಿನ್ನದಿಂದ ನಿರ್ಮಿತವಾಗಿರಬಹುದು ಎಂದವರು ಅಂದಾಜಿಸಿದ್ದಾರೆ. ಮಂಗಳ ಗ್ರಹದಲ್ಲಿದ್ದ ಜೀವಿಗಳು ತಮ್ಮ ರಕ್ಷಣೆಗಾಗಿ ಮೊರೆ ಹೋದ ದೇವರ ಚಿತ್ರವು ಇದರಲ್ಲಿದೆ ಎಂದು ಹೇಳಬಹುದು. ವಾಹನವು ಸಿಲಿಂಡರ್ ಆಕೃತಿಯಲ್ಲಿದ್ದರೂ ಅದನ್ನು ದೇವರ ವಿಗ್ರಹವೆಂದು ಪರಿಗಣಿಸಲು ಸಾಧ್ಯವಿದೆ. ಯಾಕೆಂದರೆ ಇಲ್ಲಿಂದ ಅದನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ. ಆದರೆ ಬುದ್ಧಿವಂತರಾದ ಜೀವಿಗಳು ಮಂಗಳ ಗ್ರಹದಲ್ಲಿ ಜೀವಿಸಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದರ ಮಧ್ಯೆಯೇ ಸ್ಕಾಟ್ ಅವರ ವೆಬ್ ಸೈಟ್ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಇದರಿಂದಾಗಿ ಅಮೆರಿಕ ಸರಕಾರ ಇಂತಹ ವಿಷಯಗಳ ಬಗ್ಗೆ ಸಾಕಷ್ಟು ರಹಸ್ಯವನ್ನು ಕಾಪಾಡುತ್ತಿದೆಯಾ ಎಂಬ ಅನುಮಾನ ಕಾಡಲಾರಂಭಿಸಿದೆ. ಯಾಕೆಂದರೆ ಈಗಾಗಲೇ ಅಮೆರಿಕದ ನೌಕಾಪಡೆಯ ನೆಲೆಯೊಂದು ಟಾಪ್ ಸಿಕ್ರೆಟ್ ಪಟ್ಟಿಯನ್ನು ಕಟ್ಟಿಕೊಂಡಿದೆ. ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ ಮಾತ್ರವಲ್ಲ ಅಲ್ಲಿ ಏನಿದೆ ಹಾಗೂ ಏನಾಗುತ್ತಿದೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಬಹುತೇಕ ನಂಬಿಕೆಯ ಪ್ರಕಾರ ಅಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸಿಕ್ಕಿದ ಅನ್ಯಗ್ರಹ ಜೀವಿಯ ದೇಹದ ಕುರಿತು ಸಂಶೋಧನೆ ನಡೆಯುತ್ತಿದೆ ಎಂಬ ಮಾಹಿತಿ ಇದೆ.
Nice
ಚೆನ್ನಾಗಿದೆ. ಅಲ್ಲಿ ಕೊರೋನ ವೈರಸ್ ಇಲ್ಲವಾದ್ದರಿಂದ ಸುಖವಾಗಿ ನೆಲೆಸಿರಬಹುದು
ಕನ್ನಡ ಪ್ರೆಸ್ಸ್ ನಲ್ಲಿ ಸಂಚಿಕೆಗಳು ಚೆನ್ನಾಗಿ ಮೂಡಿ ಬರುತ್ತಿವೆ. ತಮಗೆ ಹಾಗೂ ಶ್ರೀವತ್ಸ ಮತ್ತು ಕೂಡಲಿ ಗುರುರಾಜ್ ಇವರಿಗೆ ನಮ್ಮ ಧನ್ಯ ವಾದಗಳು.
👍🏻👍🏻Very interesting