19.9 C
Karnataka
Sunday, September 22, 2024

    ಗಣಿತ ಮತ್ತು ತಾಯ್ತನದ ಸಂಗಮ

    Must read

     ಇಂದು ಅಮೆಜಾನ್  ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಅವರ ಜೀವನ ಕಥೆಯನ್ನು ಆಧರಿಸಿ ತಯಾರಾಗಿರುವ ಶಕುಂತಲಾ ದೇವಿ ಚಿತ್ರ 2013ರ ವರೆಗೂ ನಮ್ಮೊಡನೆ ಇದ್ದ  ಶಕುಂತಲಾ ದೇವಿ ಅವರ ಜೀವನದ ನಾನಾ ಹಂತಗಳನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತಾ ಹೋಗುತ್ತದೆ.  ಪುತ್ರಿ ಅನುಪಮ ಬ್ಯಾನರ್ಜಿ  ಕಂಡಂತೆ ಶಕುಂತಲಾದೇವಿ ಚಿತ್ರದ ಕಥೆ ಹೆಣೆಯಲಾಗಿದೆ  ಎಂದು  ನಿರ್ದೇಶಕ  ಅನು ಮೆನನ್  ಚಿತ್ರ ಆರಂಭವಾಗುವ ಮೊದಲೇ ಹೇಳಿ ಮುಂದೆ ಬರಬಹುದಾದ ವಿವಾದಗಳಿಗೆ ಕೇವಿಯಟ್ ತೆಗೆದುಕೊಂಡು ಬಿಡುತ್ತಾರೆ. ಹೀಗಾಗಿ ಚಿತ್ರ  ಮಗಳ ದೃಷ್ಟಿಕೋನದಿಂದಲೇ ಸಾಗುತ್ತದೆ.

    ಶಕುಂತಲಾ ದೇವಿಯ ಪುತ್ರಿ ಅನುಪಮ ಬ್ಯಾನರ್ಜಿ  (ಸನ್ಯಾ ಮಲ್ಹೋತ್ರ)  ತನ್ನ ತಾಯಿಯ ವಿರುದ್ಧವೆ ಕ್ರಿಮಿನಲ್ ಕೇಸ್ ಹಾಕುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅದು 2001. ತಾಯಿಯ ವಿರುದ್ಧವೇ ಕೇಸು ದಾಖಲಿಸುವ ತನ್ನ ಖಚಿತ ನಿರ್ಧಾರದೊಂದಿಗೆ ಅನುಪಮಾ ಹೊರಬರುತ್ತಿದ್ದಂತೆ ಅಲ್ಲಿ ಕೆಂಪು ಸೀರೆಯಲ್ಲಿ ಕುಳಿತ್ತಿದ್ದ ಶಕುಂತಲಾ ದೇವಿ ಕಾಣಿಸುತ್ತಾರೆ . ಮಗಳೇ ಕೇಸು ಹಾಕಲು ಕಾರಣ ಏನು ಎಂಬುದನ್ನು ನಾನು ಇಲ್ಲಿ ಹೇಳುವುದಿಲ್ಲ. ಆದರೆ ಅಮ್ಮ ಮಗಳ ಸಂಬಂಧ ಎಂಥದ್ದು ಎಂಬುದನ್ನು ಅರಿಯಲು ನೀವು ಈ ಕೇಸಿನ ಬಗ್ಗೆ ತಿಳಿದುಕೊಳ್ಳಬೇಕು. ಅದು ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಅಮ್ಮ ಎನ್ನುವುದು ಎರಡಕ್ಷರ ಇರಬಹುದು. ಆದರೆ ಅದು ಮಾಡುವ ಪರಿಣಾಮ ಆಗಾಧ. ಚಿತ್ರ  ಮುಗಿದ  ಮೇಲೆ ಅಮ್ಮ ಮಗಳ ನಡುವಿನ ಸಂಬಂಧವನ್ನು  ನೀವು ನೋಡುವ ಬಗೆ ಬದಲಾಗಬಹುದು.

    ನಾವು ಕಂಡಂತೆ ಶಕುಂತಲಾ ದೇವಿ ಗಣಿತದ ಅದ್ಭುತ. ಅಷ್ಚು ಮಾತ್ರ ನಮಗೆ ಗೊತ್ತು. ಮಗಳು, ಸಹೋದರಿ, ಹೆಂಡತಿ, ತಾಯಿ ಹೀಗೆ ಅವರ ಜೀವನದ ನಾನಾ ಮಜಲುಗಳು ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ.

    ಕರ್ನಾಟಕದಲ್ಲಿ ಶಕುಂತಲಾ ದೇವಿ ಕಳೆಯುವ ಬಾಲ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಅವರ ತಂದೆ ಕನ್ನಡದ ಅಜೇಯ ಪತ್ರಿಕೆ ಓದುತ್ತಿರುವ ದೃಶ್ಯದ ಮೂಲಕ ಅದು ಕರ್ನಾಟಕ ಎಂದು ನಿರ್ದೇಶಕರು ತೋರಿಸುತ್ತಾರೆ.   ಬೆಂಗಳೂರು ಜಂಟಲ್ಮನ್ ಕ್ಲಬ್ ನಲ್ಲಿ  ಆಕೆ ಬಿಡಿಸುವ  ಗಣಿತ ಲೆಕ್ಕ ಆಕೆ ಮುಂದೆ ಮಾನವ ಕಂಪ್ಯೂಟರ್ ಆಗುವ ಹಾದಿಯ ಆರಂಭ.

    ಇದು ಒಂದು ಕಡೆಯಾದರೆ ಮತ್ತೊಂದು ಕಡೆ ತಾಯಿ ಮಗಳ ನಡುವಿನ ಸಂಬಂಧ . ಅದನ್ನು ನಿರ್ದೇಶಕರು ತುಂಬ ಮನೋಜ್ಞವಾಗಿ  ತೆರೆದಿಟ್ಟಿದ್ದಾರೆ. ಇಡೀ ಚಿತ್ರದಲ್ಲಿ  ಆಕೆ ತಾನು ಕ್ಷಮೆ ಕೇಳುವುದೆ ಇಲ್ಲವೆನ್ನುವ ರೀತಿ ನಡೆದುಕೊಳ್ಳುವುದು ಸ್ಫೂರ್ತಿದಾಯಕವಾಗಿದೆ. 1950ರಲ್ಲಿ ಒಬ್ಬಳೇ ಲಂಡನ್ ಹೋಗಿ ತನ್ನ ಜೀವನವನ್ನು ತಾನೆ ಕಟ್ಟಿಕೊಳ್ಳುವದು ಆಕೆಯ ಸ್ವಾಭಿಮಾನವನ್ನು ತೋರಿಸುತ್ತದೆ.  ತನ್ನ ಎರಡು ಜಡೆ ಹಾಗೂ ಸೀರೆಯ ಮೇಲೆ ಆಕೆಗೆ ಇರುವ ಪ್ರೀತಿ ಸಿನಿಮಾದಲ್ಲಿ ಸೊಗಸಾಗಿ ಮೂಡಿ ಬಂದಿದೆ.

    ಪುರುಷನ ಸಹಾಯವೇ ಇಲ್ಲದೆ ಮಹಿಳೆಯೊಬ್ಬಳು ಹೇಗೆ ಯಶಸ್ವಿಯಾಗಬಹುದು ಎಂಬುದನ್ನು ತೋರಿಸಲು ಆಕೆ ಪಡುವ ಶ್ರಮ ಅನೇಕ ಒಬ್ಬಂಟಿ ಮಹಿಳೆಯರಿಗೆ ಸ್ಫೂರ್ತಿ  ತರಬಲ್ಲದು. ಕಂಪ್ಯೂಟರ್ ಗಿಂತ ತಾನೇ ಬೆಸ್ಟ್ ಎಂದು ಸಾಧಿಸುವ ಕ್ಷಣವಂತೂ ಅದ್ಭುತ. ಮ್ಯಾಥ್ ಮೆಟಿಕ್ಸ್  ಮತ್ತು ಮದರ್ ಹುಡ್ ನ ಮಹಾಸಂಗಮವಾಗಿ  ಚಿತ್ರ ಮೂಡಿಬಂದಿದೆ.

    ಇಡೀ ಚಿತ್ರವನ್ನು ಆವರಿಸಿರುವುದು ವಿದ್ಯಾಬಾಲನ್.  ತಾಯಿಯಾಗಿ, ಗಣಿತ ತಜ್ಞೆಯಾಗಿ ವಿದ್ಯಾಬಾಲನ್ ಅಮೇಜಿಂಗ್. ಗಣಿತದ ಲೆಕ್ಕ ಸುಲುಭವಾಗಿ ವೀಕ್ಷಕರಿಗೂ ಅರ್ಥವಾಗುವಂತೆ ಬಳಸಿರುವ ಗ್ರಾಫಿಕ್ ಗಳು ಸಿನಿಮಾವನ್ನು  ಸುಲಭವಾಗಿಸಿದೆ.

    ಒಮ್ಮೊಮ್ಮೆ ತಮಾಷೆ. ಒಮ್ಮೊಮ್ಮೆ ಗಂಭೀರ,ಮತ್ತೊಮ್ಮೆ ವಿಷಾದ . ಹೀಗೆ ಸ್ಪೂರ್ತಿ ನೀಡುವ ಚಿತ್ರವಾಗಿ ಶಕುಂತಲಾ ದೇವಿ ಹೊರ ಹೊಮ್ಮಿದೆ.

    ನೀವು ಕೂಡ ಅಮೆಜಾನ್ ಪ್ರೈಮ್ ಮೆಂಬರ್ ಆಗುವ ಮೂಲಕ ಶಕುಂತಲಾದೇವಿ ವೀಕ್ಷಿಸಬಹುದು. ಅದಕ್ಕಾಗಿ ಈ ಕೆಳಗಿನ ಲಿಂಕ್ ಅಮೆಜಾನ್ ಪ್ರೈಮ್ ಲಿಂಕ್ ಒತ್ತಿ.

    ಹರ್ಷಿತಾ ನಾಡಿಗ್
    ಹರ್ಷಿತಾ ನಾಡಿಗ್
    ಕಾಮರ್ಸ್ ಓದು. ಬರವಣಿಗೆಯಲ್ಲಿ ಆಸಕ್ತಿ. ಕುಕ್ಕಿಂಗ್ ಇಷ್ಟ
    spot_img

    More articles

    20 COMMENTS

    1. The SHAKUNTALA DEVI biopic movie on Amazon is a nice episodic segments from the Maths Genius Life.
      As usual Vidya Balan is good,supported by all the others.
      Vidya Kasam !

    2. Good work harshu.
      I am very happy that you started writing. I am yet to see the movie. Definitely I will see. Keep up the practice of writing.

    3. ಹರ್ಷಿತಾ ನಾಡಿಗ್ ಅವರ ಬರವಣಿಗೆ ಸೊಗಸಾಗಿ ಮೂಡಿಬಂದಿದೆ, ಇದನ್ನು ಮುಂದುವರಿಸಿಕೊಂಡು ಹೋಗಲಿ

    4. ಹರ್ಷಿತಾ ನಾಡಿಗ್ ಅವರ ವಿಮರ್ಶೆಯನ್ನು ಓದಿ
      ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಅವರ ಚಿತ್ರವನ್ನು ನೋಡಲೇಬೇಕೆಂದು ಅನಿಸುತ್ತಿದೆ.

    5. Young lady Harshita Nadig review of biopic movie Shakuntala Devi has been written very well taking deep insight of the movie where human computer is faced with human emotions. The write has done well in not revealing the entire content of the movie and had left readers to have their experience of watching movie personally. Good article and wish to see more interesting article from young and dynamic Harshitha Nadig

    6. ವಾವ್… ಸಿನೆಮಾ ನೋಡುವ ಮನಸ್ಸಾಗ್ತಿದೆ…

    7. Very well written Harshitha. Loved the way you have analysed. Movie sounds interesting. Looking forward to watching the movie now.

    8. I finished Watching shakuntala Devi just now!!
      An amazing cinema about an impossible woman🙏🙏🙏
      As the title message says ‘ we see our mom only as mother and never as another women’. If she did not fit the image of what we perceive as ‘ normal’ we think she is not right. How true! How wrong!!!!
      As a child I always saw shankuntala Devi’s astrology adverts but I did not know much about her. I now understand what a storm she was. It was possibly a punishment for her to live among the common us ( so called ‘Normal’ people) She is a miracle , a true genius who never had a chance even to go to school.
      If it were now, the media era,her name would reached new heights .
      Harshita has written such a good article about her on the day of the cinema release.congratulations.💐
      Yesterday BBC news broadcasted a lengthy report about shakuntala Devi with great respect and spoke about this cinema completing with Vidya Balan’s Interview.

    9. ನಾನೂ ನಿನ್ನೆಯೇ ನೋಡಿದೆ. ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಒಂದು ಹಂತದಲ್ಲಿ ನನ್ನ ಕಣ್ಣಂಚಿನಲ್ಲೂ ನೀರು ಬಂತು.

    10. ನಾನು ಪ್ರತೀ ದಿನ ಮನೆ ಯಿಂದ ನನ್ನ ಕಲಾಶಾಲೆಗೆ ಹೋಗುವ ದಾರಿಯಲ್ಲಿ (ಅಶೋಕ್ ನಗರ ರಸ್ತೆ ಮೂಲಕ ಬಸವನಗುಡಿ ಡಿ ವಿ ಜಿ ರಸ್ತೆ ಗೆ) ಶಕುಂತಲಾ ದೇವಿ ಯವರ ಮನೆ ಇದೆ ದೊಡ್ಡದಾದ ಬೋರ್ಡ್ ಇದೆ . ತೊಂಬತ್ತರ ದಶಕದಲ್ಲಿ ಬೇಸಿಗೆ ಶಿಬಿರಗಳನ್ನು ಮಾಡುತ್ತಿದ್ದರು ಈಗಲೂ ಕೂಡ ಬೋರ್ಡ್ ಇದೆ. ಅವರ ಬಗ್ಗೆ ಸಿನಿಮಾದ ಲೇಖನ ಓದಿ ಆ ಸಿನಿಮಾ ನೋಡಲೇ ಬೇಕಾದ ಹಾಗೆ ಮಾಡಿದೆ ಈ ಲೇಖನ ಲೇಖಕರಿಗೆ ನನ್ನ ಅಭಿನಂದನೆ ಗಳು

    11. ಹರ್ಷಿತಳ ಬರಹ ಓದಿದ ನಂತರ ಫಿಲ್ಮ್ ನೋಡಲೇ ಬೇಕೆನ್ನಿಸಿ , ನಿನ್ನೆಯೇ ನೋಡಿದ್ದಾಯಿತು
      ಫಿಲ್ಮೂ ಚೆನ್ನಾಗಿದೆ ಅದಕ್ಕಿಂತಲೂ ಹರ್ಷಿತಳು ಮಾಡಿಕೊಟ್ಟ ಫಿಲ್ಮಿನ ಪರಿಚಯ ತುಂಬಾ ಚೆನ್ನಾಗಿತ್ತು
      ಒಟ್ಟಿನಲ್ಲಿ ಕನ್ನಡ ಪ್ರೆಸ್.ಕಾಮ್ ನನ್ನಂಥ ಅತೀ ಕಡಿಮೆ ಫಿಲ್ಮ್ ನೋಡುವವನೂ ಒಳ್ಳೊಳ್ಳೆ ಫಿಲ್ಮ್ ನೋಡುವಂತೆ ಮಾಡಿದೆ
      ನಾಡಿಗರೇ ಧನ್ಯನಾದೆ 🙏

    12. ನಾನು ಚಿಕ್ಕವಳಿದ್ದಾಗ ನಡೆದಾಡುವ ಕಂಪ್ಯೂಟರ್ ಎಂದು ಕರೆಯುತ್ತಿದ್ದ ಶಕುಂತಲಾ ದೇವಿ ಜೀವನ ಚರಿತ್ರೆ ಆಧಾರಿತ ಚಲನಚಿತ್ರ ನೋಡಲೇಬೇಕು ಎಂಬ ಕುತೂಹಲ ಮೂಡಿಸಿದೆ. ಚಿತ್ರ ಪರಿಚಯಿಸಿದ ಹರ್ಷಿತಾ ಗೆ ಧನ್ಯವಾದಗಳು.

    13. ಸೂಪರ್ . ಬರವಣಿಗೆ ಹೀಗೆ ಸಾಗಲಿ. ಸಿನಿಮಾ ನೋಡುವ ಮನಸಾಗಿದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!