ಇಂದು ನಾಡಿನಾದ್ಯಂತ ಶ್ರೀವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ನೆರೆ ಹೊರೆಯವರೆಲ್ಲಾ ಸಂಭ್ರಮದಿಂದ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಸಡಗರದಿಂದ ಆಚರಿಸುತ್ತಿದ್ದ ಈ ಹಬ್ಬ ಈ ಬಾರಿ ಕೋವಿಡ್ ಕಾರಣದಿಂದ ಅವರವರ ಮನೆಗೆ ಸೀಮಿತವಾಗಿದೆ.
ಶ್ರಾವಣ ಮಾಸವೇ ಹಾಗೆ. ಹಬ್ಬಗಳ ಸಾಲು. ಈ ಮಾಸದ ಎರಡನೇ ಶುಕ್ರವಾರ ಹೆಂಗಳೆಯರಿಗಂತೂ ಸಂಭ್ರಮದ ದಿನ. ಮನೆಯಲ್ಲಿ ಲಕ್ಶ್ಮಿ ಪೂಜೆಯ ಸಡಗರ. ನಮ್ಮ ದಾಸವರೇಣ್ಯರು ಲಕ್ಷ್ಮಿಯನ್ನು ಸ್ತುತಿಸುವುದನ್ನು ಕೇಳುವುದೇ ಸೊಗಸು. ಅದರ ಜೊತಗೆ ನಮ್ಮಲ್ಲಿ ಸಂಪ್ರದಾಯ ಗೀತೆಗಳು ಅನೇಕ. ಇವುಗಳನ್ನೆಲ್ಲಾ ಒಂದೆಡೆ ಸೇರಿಸಿ ಈ ದಿನ ನಾಡಿನ ಜತೆಗೆ ಈ ವಿಶೇಷ ಪಾಡ್ಕಾಸ್ಟ್ ಅನ್ನು ಕನ್ನಡಪ್ರೆಸ್.ಕಾಮ್ ಅರ್ಪಿಸುತ್ತಿದೆ. ಭಾರತಿ ಅವರು ಪ್ರಸ್ತುತ ಪಡಿಸಿದ ಈ ಪಾಡ್ಕಾಸ್ಚ್ ಗೆ ಅರುಣ್ ಕುಮಾರ್ , ಜಯಶೀಲ,ಸುಮನ್, ಗೀತಾ ಗಣೇಶ್, ಮೀರಾ ನಾಗರಾಜ್, ಶ್ಯಾಮಲಾ ಮತ್ತು ಮಮತಾ ಅವರು ಹಾಡಿನ ಮೂಲಕ ಜತೆಯಾಗಿದ್ದಾರೆ. ಆರ್. ಶ್ರೀನಿವಾಸ್ ಕೀ ಬೋರ್ಡ್ ನುಡಿಸಿದ್ದಾರೆ.
ಪುರಂದರದಾಸರ ಜನಪ್ರಿಯ ಭಾಗ್ಯದ ಲಕ್ಷ್ಮಿ ಬಾರಮ್ಮ ಗೀತೆಯೊಂದಿಗೆ ಆರಂಭವಾಗುವ ಈ ಸಂಗೀತ ಯಾತ್ರೆ ಆರತಿ ಹಾಡಿನೊಂದಿಗೆ ಮಂಗಳವಾಗುತ್ತದೆ. ಆಲಿಸಿ .ಸಂಭ್ರಮಿಸಿ.ಹಂಚಿ
ಚೆನ್ನಾಗಿ ಬಂದಿದೆ.ಭಾರತಿಯವರ ನಿರೂಪಣೆ ಸಕಾಲಿಕ.
ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದು ಖುಷಿ ಕೊಟ್ಟಿದ್ದು ,ಇಷ್ಡವಾಯಿತು
ಕರೊನಾದಿಂದ ಪೂಜೆ,ದರ್ಶನ,ದೇವರುಗಳೆಲ್ಲ online ಆಗುವಾಗ, ಕನ್ನಡ ಪ್ರೆಸ್.ಕಾಮ್ ಸಹಾ ಪಾಡ್ಕಸ್ಟ್ ರೂಪದಲ್ಲಿ ,ವರಮಹಾಲಕ್ಷ್ಮಿ ಹಬ್ಬದ ಸಡಗರವನ್ನು ಹಂಚಿಕೊಳ್ಳುವ ಹೊಸ ಪ್ರಯತ್ನ ಇಷ್ಟವಾಯ್ತು…..
Thank you very for your encouraging words doctor.
ಕಾರ್ಯಕ್ರಮ ಚೆನ್ನಾಗಿದೆ.ಸರಳ ಹಾಗೂ ಮಾಹಿತಿಯುಕ್ತ ನಿರೂಪಣೆ ಮತ್ತು ಸುಮಧುರ ಗೀತೆಗಳು ಮನಸೂರೆಗೊಂಡಿತು.
ಪಾಡ್ಕಾಸ್ಟ್ ತುಂಬಾ ಚೆನ್ನಾಗಿದೆ. ಭಾರತಿಯವರ ನಿರೂಪಣೆ ಹಾಗೂ ಮಮತಾ ಹಾಡಿರುವ ಆರತಿ ಹಾಡು ಚೆನ್ನಾಗಿತ್ತು ಹಾಗೂ ನಮ್ಮ ತಾಯಿಯವರು ಹಾಡುತ್ತಿದ್ದು ಕೇಳಿದಂತಾಯಿತು.
ಶ್ರೀಮತಿ ಭಾರತೀಯವರ ನಿರೂಪಣೆ ಸುಂದರ ವಾಗಿ ಮೂಡಿಬಂದಿದೆ. ಶ್ರೀ ವರಮಹಾಲಕ್ಷ್ಮಿಯ ಭಕ್ತಿಗೀತೆ ಹಬ್ಬದ ದಿನಕ್ಕೆ ಹೊಂದಿಕೊಂಡು ಚೆನ್ನಾಗಿ ಬಂದಿದೆ. ಆದರಲ್ಲಿ ನನಗೂ ಅವಕಾಶ ಕೊಟ್ಟಿದಕ್ಕೆ ಧನ್ಯವಾದಗಳು.🙏🙏🙏
🌹 ಸ್ಪಷ್ಟವಾದ,ಸ್ಪುಟವಾದ ನಿರೂಪಣೆ.ಅಚ್ಚುಕಟ್ಟಾದ ಕಾರ್ಯಕ್ರಮ ಜೋಡಣೆ. ಧನ್ಯವಾದಗಳು 💐🙏🏼
Nice programe. special appreciation for anchoring and key board
Very nice podcast.. spl mention to Mamata , Srinivas and the narrator.. 😊
ಬಂದಾಳೆ ಮಹಾಲಕ್ಷ್ಮಿ ಹಾಡನ್ನು ಬೆಳಗ್ಗೆಯಿಂದ ಕೇಳಿ, ಕಲಿತು ಈಗ comment ಹಾಕುತ್ತಿದ್ದೇನೆ. ಇಬ್ಬರ voice ಚೆನ್ನಾಗಿ ಹೊಂದುತ್ತಿತ್ತು. Thanks for good song.