19.9 C
Karnataka
Sunday, September 22, 2024

    ಮಾತಿಲ್ಲದೆ ಅರಳುವ ಪ್ರೇಮ ವೈಭವ್ ಮಹಾದೇವ್ ಅವರ ಜೆನ್ನಿ ಎಂಬ ಕಿರುಚಿತ್ರ

    Must read

    ಆಕೆ ಮಾತನಾಡುವುದಿಲ್ಲ. ಆದರೆ ಆಕೆಯ ಪ್ರತಿಯೊಂದು ಚರ್ಯೆಯೂ ಹೇಳುತ್ತದೆ. ಹೋಟೆಲಿನಲ್ಲಿ ತಿನಿಸು ಸಿದ್ಧಪಡಿಸುವುದು ಆಕೆಯ ಕೆಲಸ. ಆಕೆ ಒಂದು ಜ್ಯೂಸ್, ಐಸ್ ಕ್ರೀಂ ಇನ್ನೇನನ್ನೇ ಕೊಡಲಿ ಅದರಲ್ಲಿ ಪ್ರೀತಿಯ ತುಸು ಸೇರ್ಪಡೆ ಇರುತ್ತದೆ. ಪ್ರೀತಿ ಹೆಚ್ಚಾದರೆ ಜ್ಯೂಸ್ ಲೋಟದ ಅಂಚಿಗೆ ಇನ್ನೊಂದು ಚೆರಿ ಹಣ್ಣು ಹೆಚ್ಚಾಗುತ್ತದೆ. ಆಕೆ ತನ್ನ ಕೆಲಸದಲ್ಲಿ ಸದಾ ಸಂತೋಷ ಕಾಣುವವಳು. ಬಂದ ಗ್ರಾಹಕರಿಗೆ ಪ್ರೀತಿಯಿಂದ ತಿನಿಸು ಸಿದ್ಧಪಡಿಸುವವಳು.

    ಅಂತಹ ಹುಡುಗಿಗೆ ಕಣ್ಣು ಕಾಣದ ಗ್ರಾಹಕನೊಬ್ಬನಲ್ಲಿ ಪ್ರೀತಿ ಹುಟ್ಟುತ್ತದೆ. ಇನ್ನೇನು ತನ್ನ ಪ್ರೀತಿಯನ್ನು ಸಂವಾದಿಸಬೇಕು ಎಂದುಕೊಳ್ಳುವಷ್ಟರಲ್ಲಿ ಆತನೊಂದಿಗೆ ಒಬ್ಬ ಹುಡುಗಿ!

    ನಿರ್ದೇಶಕ ವೈಭವ್

    ಆಗಷ್ಟೇ ಚಿಗುರಿದ ಪ್ರೀತಿ ಕಮರುತ್ತದೆ. ಅದು ಆಕೆ ಪೂರೈಸುವ ತಿನಿಸಿನಲ್ಲೂ ವ್ಯಕ್ತವಾಗುತ್ತದೆ. ಗಾಜಿನ ಲೋಟಕ್ಕೆ ಅಂಟಿಸಿದ ಹಣ್ಣನ್ನು ಅರ್ಧ ಕತ್ತರಿಸಿ ನೀಡುತ್ತಾಳೆ. ಕಷ್ಟಪಟ್ಟು ಬ್ರೇಲ್ ಕಲಿತು ಬರೆದಿದ್ದ ಪ್ರೇಮಪತ್ರ ಕಸದ ಬುಟ್ಟಿ ಸೇರುತ್ತದೆ. ಆದರೆ ಬಂದ ಹುಡುಗಿ ಆತನ ಸಹೋದರಿ ಎಂದ ಕೂಡಲೇ ಈಕೆಯ ಉತ್ಸಾಹ ಮತ್ತಷ್ಟು ಇಮ್ಮಡಿಯಾಗುತ್ತದೆ. ಆಕೆಯ ಪ್ರೀತಿ ಗೆಲ್ಲುತ್ತದೆಯೇ ಎನ್ನಲು “ಜೆನ್ನಿ” ಎಂಬ ವಿಶಿಷ್ಟ ಕಿರುಚಿತ್ರ ನೀವು ವೀಕ್ಷಿಸಬೇಕು.

    ಸಿನಿಮಾ ಬಗೆಗಿನ ಅಪಾರ ಪ್ರೀತಿ ಈ ಚಿತ್ರದ ಪ್ರತಿ ಫ್ರೇಮಿನಲ್ಲೂ ಅಭಿವ್ಯಕ್ತಗೊಳ್ಳುತ್ತದೆ. ಇದೊಂದು ಮಾತಿಲ್ಲದ ಚಿತ್ರ. ಆದರೆ ಪ್ರತಿ ಫ್ರೇಮ್ ಕೂಡಾ ತನ್ನಷ್ಟಕ್ಕೆ ತಾನು ಹೇಳಬೇಕಾದುದನ್ನು ಹೇಳಿ ಮುಂದಕ್ಕೆ ಹೋಗುತ್ತಿರುತ್ತದೆ.

    ಖ್ಯಾತ ರೂಪದರ್ಶಿ, ನಟಿ ಹಾಗೂ ಗಾಯಕಿ ಅಂಜಲಿ ಸಿವರಾಮನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ,ಈ ಚಿತ್ರದ ಕಲಾವಿದರೆಲ್ಲರು ಪ್ರಾಗ್ ಫಿಲ್ಮ್ ಸ್ಕೂಲ್ ನಲ್ಲಿ ಸಿನಿಮಾ ತರಬೇತಿ ಪಡೆದಿದ್ದಾರೆ.

    ಎಂಜಿನಿಯರ್ ಆಗಿರುವ ವೈಭವ್ ಮಹಾದೇವ್ ಈ ಸುಂದರ ಕಿರುಚಿತ್ರ ಕಟ್ಟಿಕೊಟ್ಟಿದ್ದಾರೆ. ಅಜಿನ್ ಬಸಂತ್ ಛಾಯಾಗ್ರಹಣ ಪ್ರತಿ ಫ್ರೇಮ್ ಅನ್ನೂ ಒಂದು ಕಲಾಕೃತಿಯಾಗಿಸಿದೆ.

    ನಾಗಭೂಷಣ್ ದೇಶಪಾಂಡೆ ಸಹಾಯಕ ನಿರ್ದೇಶಕರಾಗಿದ್ದಾರೆ. ಜೋಯೆಲ್ ಸಾಕಾರಿ ಅವರ ಮಧುರ ಸಂಗೀತ ಚಿತ್ರವನ್ನು ಆಸಕ್ತಿದಾಯಕವಾಗಿಸುತ್ತದೆ. ಮಹೇಶ್ ಪತ್ತಾರ್ ಅವರ ಕಲಾ ನಿರ್ದೇಶನ ಹೊಂದಿದೆ. ಉದ್ಯಮಿ, ಭರತನಾಟ್ಯ ಕಲಾವಿದೆ ಜಲ್ಪ ಮಹದೇವ್ ಕಾರ್ಯ ನಿರ್ವಾಹಕ ನಿರ್ಮಾಪಕಿಯಾಗಿದ್ದಾರೆ. ಶ್ರೀಮತಿ ಶಿಖಾ ಚವ್ಹಾಣ್ ನಟಿಸಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಂದೀಪ್ ಸಾಗರ್ ಮತ್ತು ಪ್ರತೀಕ್ಷಾ ಕಡೂರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    ಚಿತ್ರ ನಿರ್ದೇಶಕ ವೈಭವ್ ಮಹಾದೇವ್ ಈ ಚಿತ್ರ ಮುಂದಿನ ಚಿತ್ರಗಳಿಗೆ ಒಂದು ಪರಿಚಯ ಪತ್ರದಂತೆ ಎನ್ನುತ್ತಾರೆ. ವಿದೇಶದಲ್ಲಿ ಕಲಿತರೂ ಕನ್ನಡ ಚಲನಚಿತ್ರ ನಿರ್ದೇಶನ ಮಾಡಬೇಕು ಎನ್ನುವುದು ಅವರ ಹಂಬಲ. ವಿದೇಶಗಳಲ್ಲಿ ಕೆಲಸ ಮಾಡಿದರೆ ತಂತ್ರಜ್ಞರಾಗಿ ಉಳಿದುಬಿಡುತ್ತೇವೆ. ಇಲ್ಲಿ ಸ್ವತಂತ್ರ ನಿರ್ದೇಶನ ಮಾಡುವುದು ಸಾಧ್ಯ. ಅದಕ್ಕೆ ಸೂಕ್ತವಾದ ಸಿದ್ಧತೆ ಈ ಚಿತ್ರ ಎನ್ನುತ್ತಾರೆ. ಅದಮ್ಯ ಸಿನಿಮಾ ಪ್ರೀತಿಯಿಂದ ತನ್ನ ವೃತ್ತಿ ತ್ಯಜಿಸಿ ಈ ಚಿತ್ರ ನಿರ್ದೇಶನ ಮಾಡಿರುವ ಬೆಂಗಳೂರಿನ ಹುಡುಗ ವೈಭವ್ ಮಹಾದೇವ್ ಅವರ ನಿರ್ದೇಶನದ ಚಿತ್ರ ವರಮಹಾಲಕ್ಷ್ಮಿ ದಿನದಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಲಿಂಕ್ ಇಲ್ಲಿದೆ:


    ವಿ. ಎಲ್. ಪ್ರಕಾಶ್
    ವಿ. ಎಲ್. ಪ್ರಕಾಶ್
    ವಿ.ಎಲ್.ಪ್ರಕಾಶ್ ವಿದ್ಯಾರ್ಥಿ ದೆಸೆಯಿಂದಲೇ ಬರಹದ ವ್ಯವಸಾಯ. ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಣೆ. ಪ್ರಸ್ತುತ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕ.
    spot_img

    More articles

    5 COMMENTS

    1. Jenny a silent short film has enormous words blended more effectively than spoken dialogues . Outstanding work by entire team and deserves standing ovation from the viewers. In such a short time all the aspects of story acting dancing and flow of movie has been engrossing. Special appreciation to young director Bangalore boy Vaibhav Mahadev and cute model Anjali Sivaraman for their fabulous work. Wish we see more such silent but remains in viewers memory for ever as a classic masterpiece. Indeed it is a masterpiece.

    2. ಈ ಶಾರ್ಟ್ ಮೂವಿ ತುಂಬು ಭಾವನೆಗಳನ್ನು ತುಂಬಿದೆ. ಪ್ರೀತಿಗೆ ಅಂಗವೈಕಲ್ಯ ಮೀರುವ ಶಕ್ತಿ ಇದೆಯೆಂದು, ಎಲ್ಲರಲ್ಲೂ ಪ್ರೀತಿ ಇರುತ್ತದೆಂದು ತೋರಿಸಿದೆ. ಧನ್ಯವಾದಗಳು

    3. ನೋಡಿದೆ. ಸೊಗಸಾದ ಕಿರು ಚಿತ್ರ. ವರದಿ ಪ್ರಕಟಿಸಿದ ತಮಗೆ ಧನ್ಯವಾದ.

    4. ಮೌನ ಮಾತಾದಾಗ,ಭಾವನೆಗಳ ಸ್ಪಷ್ಟತೆ ಸ್ಪಟಿಕವಂತೆ. ಜೆನ್ನಿ ಅದನ್ನ ನಿರೂಪಿಸಿದ್ದಾಳೆ. ಅದ್ಭುತವಾದ ಕಲ್ಪನೆಯನ್ನು ಕಥೆಯಾಗಿಸಿರುವ ಕಲೆ ತುಂಬಾ ಮೆಚ್ಚುಗೆಯಾಯ್ತು….ಭಾವನೆಗಳ ಬೇರುಗಳನ್ನು ಹಸಿ ವಾಸನೆಯೊಂದಿಗೆ ತನ್ನ ಓದುಗರಿಗೆ ತಲುಪಿಸುತ್ತಿರುವ ಕನ್ನಡ ಪ್ರೆಸ್.ಕಾಮ್ ಗೆ ಸಲಾಂ….

    LEAVE A REPLY

    Please enter your comment!
    Please enter your name here

    Latest article

    error: Content is protected !!