26.2 C
Karnataka
Thursday, November 21, 2024

    ಶಿವಗಂಗೆ ಕೋತಿ ಉಳಿಸಲು ಟೆಕ್ಕಿಗಳ ಅಭಿಯಾನ

    Must read

    ಶಿವಗಂಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಗಿರಿಕ್ಷೇತ್ರ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಡಾಬಸ್ ಪೇಟೆಯಿಂದ ದಕ್ಷಿಣಕ್ಕೆ ಹತ್ತು ಕಿ.ಮೀ ಸಾಗಿದರೆ ತಲುಪಬಹುದು. ಬೆಂಗಳೂರಿನಿಂದ ಒಟ್ಟು 50 ಕಿ.ಮೀ. ದೂರದಲ್ಲಿದೆ. ಹೆಸರೇ ಸೂಚಿಸುವಂತೆ ಒಳಕಲ್ ತೀರ್ಥದಲ್ಲಿ ಗಂಗೆಯನ್ನು ಸ್ಪರ್ಶಿಸಲು ನಿತ್ಯ ಸಾವಿರಾರು ಭಕ್ತರ ಸಮಾಗಮ. ಹೊನ್ನದೇವಿಯ ಆವಾಸಸ್ಥಾನ. ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ.

    ಬೆಟ್ಟದ ತಪ್ಪಲಲ್ಲಿರುವ ಪುಟ್ಟಗ್ರಾಮ ಶಿವಗಂಗೆ. ಬೆಟ್ಟದ ತುದಿ ತಲುಪಲು 1500 ಅಡಿ ಮೆಟ್ಟಿಲೇರಬೇಕು. ಗವಿ, ಕಲ್ಯಾಣಿ, ಕಾಡು ಮೇಡುಗಳಿಂದ ಆವೃತ ಕಡಿದಾದ ಬೆಟ್ಟ. ಈಚೆಗೆ ಖಡ್ಗ ಸಂಘದ ಟೆಕ್ಕಿಗಳು ಪವಿತ್ರ ಸ್ಥಳ ಭೇಟಿಗೆ ತೆರಳಿದ್ದರು. ಅವರ ಗಮನ ಸೆಳೆದಿದ್ದು ಅಲ್ಲಿದ್ದ ನೂರಾರು ಕೋತಿಗಳು. ಅವುಗಳ ಸ್ಥಿತಿ-ಗತಿ ಬಗ್ಗೆ ಗಮನ ಅವಲೋಕನ. ಅವುಗಳ ರಕ್ಷಣೆಗಾಗಿ ಯೋಜನೆ ರೂಪಿಸುವ ಸಂಕಲ್ಪ ಅವರಲ್ಲಿ ಮೊಳಕೆಯೊಡೆಯಿತು.

    ಬೋಳು ಬೆಟ್ಟದ ತುದಿಯಲ್ಲಿ ಕೋತಿಗಳಿಗೆ ನಿತ್ಯ ಬೇಟಿ ನೀಡುವ ಪ್ರವಾಸಿಗರ ಕೈಯನ್ನೆ ಎದುರು ನೋಡುತ್ತಿರುತ್ತವೆ. ಭಯದಿಂದ ಹತ್ತಿರ ಬಾರದೆ. ಏನಾದರೂ ಎಸೆದರಷ್ಟೆ ಹೊಟ್ಟೆ ಪಾಡು. ಇಲ್ಲವಾದರೆ ಹಸಿವೆಯಿಂದ ಬಡಕಲಾದ ದೇಹದಲ್ಲಿ ಬಳುಕುವ ದಂಡು ಎಲ್ಲೆಲ್ಲೂ ಕಾಣ ಸಿಗುತ್ತವೆ. ಪ್ರವಾಸಿಗರಿಂದ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಷ್ಟು ಸಿಕ್ಕರೆ ಪುಣ್ಯ. ವನ್ಯಾಧಾರಿತ ಆಹಾರದ ಗಣಿಯೂ ಅಲ್ಲಿಲ್ಲ. ಹಾಗಾಗಿ ಸೊಪ್ಪು, ಸೆದೆಯಲ್ಲಿಯೇ ಹೊಟ್ಟೆ ತುಂಬಿಸಿಕೊಂಡ ಬದುಕುವ ಹೊಣೆ.

    ಈ ಚಿತ್ರಣ ಟೆಕ್ಕಿಗಳ ಮನ ತಲ್ಲಣಗೊಳಿಸಿತು. ಅಲ್ಲಿಯೇ ಕೋತಿಗಳಿಗೆ ನಿತ್ಯ ಆಹಾರ ಒದಗಿಸಲು ಯೋಜನೆ ರೂಪಿಸಲು ದೃಢ ನಿರ್ಧಾರ ಮಾಡಿದರು. ಬೆಂಗಳೂರಿಗೆ ಹಿಂತಿರುಗಿ ‘SAVE MONKEYS SHIVAGANGE’ ಎಂಬ ವ್ಯಾಟ್ಸಪ್ ಗ್ರೂಪ್ ತಯಾರಿಸಿದರು. ಸದಸ್ಯರಿಗೆ ಲಿಂಕ್ ಮೂಲಕ ಸದಸ್ಯತ್ವಕ್ಕೆ ಆಹ್ವಾನಿಸಿದರು. ಈಗಾಗಲೇ ಸಾಕಷ್ಟು ಸದಸ್ಯರು ಗ್ರೂಪ್ ಸೇರಿದ್ದಾರೆ. ಉದ್ದೇಶ ಇಷ್ಟೆ ತಿಂಗಳಲ್ಲಿ ಒಂದು ದಿನ ಶಿವಗಂಗೆ ಬೆಟ್ಟದ ಕೋತಿಗಳಿಗೆ ಆಹಾರಕ್ಕಾಗಿ ಧನಸಹಾಯ ಮಾಡಲು ಘೋಷಿಸುವುದು. ಖಡ್ಗ ಸಂಘದ ರಘು ಪ್ರತಿ ತಿಂಗಳ 1 ನೇ ದಿನ ಕೋತಿಗಳ ಆಹಾರಕ್ಕಾಗಿ ಹಣ ಒದಗಿಸಲು ಘೋಷಣೆ ಮಾಡಿದ್ದಾರೆ. ನಿತಿನ್ ದೇವರಾಜ್ 2ನೇ ದಿನ, ಸಂತೋಷ ಕುಮಾರ್ ಶಿಕ್ಷಕ 3ನೇ ದಿನ… ಹೀಗೆ ಅನೇಕರು ಕೋತಿಗಳಿಗೆ ಆಹಾರ ನೀಡಲು ಧನ ಸಹಾಯಕ್ಕೆ ನೊಂದಾಯಿಸಿಕೊಂಡಿದ್ದಾರೆ. ತಿಂಗಳ ಅಂತ್ಯದವರೆಗೆ ಆಹಾರ ಒದಗಿಸಲು ನೊಂದಾಯಿಸಲಾಗುತ್ತಿದೆ.

    ಸದ್ಯ ರೂ.100 ನ್ನು ಕೋತಿಗಳ ಆಹಾರಕ್ಕೆ ಕೊಡಲು ನಿಗದಿಗೊಳಿಸಲಾಗಿದೆ. ಸದಸ್ಯರ ಸಂಖ್ಯೆ ಹೆಚ್ಚಾದಲ್ಲಿ ಹೆಚ್ಚು ಆಹಾರ ಒದಗಿಸಲು ಸಾಧ್ಯವಾಗಲಿದೆ. ಅಲ್ಲಿನ ಅರ್ಚಕರೊಬ್ಬರಿಗೆ ಖಾತೆಗೆ ಪ್ರತಿ ದಿನ ಹಣವನ್ನು ಪೇಟಿಎಂ ಮೂಲಕ ಹಾಕಲಾಗುವುದು. ಅವರು ಆ ಹಣದಿಂದ ಕೋತಿಗಳಿಗೆ ನಿತ್ಯ ಆಹಾರ ನೀಡಲು ಒಪ್ಪಿದ್ದಾರೆ. ಭಕ್ತರು ಕೋತಿಗಳಿಗೆ ಒಂದಿಷ್ಟು ಆಹಾರ ನೀಡಿದರೆ. ಮೂಕ ಪ್ರಾಣಿಗಳ ಹೊಟ್ಟೆ ತುಂಬಲು ಸಹಾಯವಾಗಲಿದೆ ಎಂಬುದು ಟೆಕ್ಕಿಗಳ ಮನವಿ.

    ಮುಂದಿನ ದಿನಗಳಲ್ಲಿ ಹೆಚ್ಚು ಸದಸ್ಯರಾದಲ್ಲಿ ಹೆಚ್ಚಿನ ಆಹಾರ ನೀಡಲು ಗುರಿ ಹೊಂದಲಾಗಿದೆ. ಈಗಾಗಲೇ ಖಡ್ಗ ಸಂಘ ಚನ್ನಗಿರಿ ತಾಲ್ಲೂಕಿನ ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆ ಉಳಿಸಲು ಸಾಕಷ್ಟು ಹೋರಾಟ ನಡೆಸಿದೆ. ಸಾಮಾಜಿಕ ಕಳಕಳಿಯುಳ್ಳ ಸಂಘದ ಸದಸ್ಯರಿಗೆ ಸಾಧ್ಯವಾದಷ್ಟು ಸಾಥ್ ನೀಡಿದಲ್ಲಿ ಸಮಾಜದ ಋಣ ತೀರಿಸಲು ಸಣ್ಣ ಕೋಡುಗೆ ನೀಡಿದಂತಾಗುವುದು.

    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ರಘು ಖಡ್ಗ ಸಂಘ: ಮೊಬೈಲ್ ನಂ: 9972414251

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    11 COMMENTS

    1. ಶಿವಗಂಗೆ ಗಿರಿ ಯಲ್ಲಿ ಇರುವ ಕೋತಿಗಳಿಗೆ ಮಳೆಗಾಲದಲ್ಲಿ ಸ್ವಲ್ಪ ಆಹಾರ ಸಿಗುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಆಹಾರದ ಕೊರತೆ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಒಂದು ನೀರಿನ ಆಸರೆ ಅಂದರೆ ಕೆರೆ ಕಟ್ಟೆ ನಿರ್ಮಾಣ ಆಗಬೇಕು. ಎರಡು ಗಿಡ ಮರಗಳನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಶಿವಗಂಗೆ ಗಿರಿ ಪ್ರದಕ್ಷಿಣೆ ಟ್ರಸ್ಟ್ ಅಧ್ಯಕ್ಷ ಎಚ್ ಚಂದ್ರಪ್ಪ ಅವರು ಸ್ವಲ್ಪ ಕೆಲಸ ಮಾಡುತ್ತಿದ್ದಾರೆ. ಅವರ ಸಹಯೋಗ ಪಡೆಯಬಹುದು. ಇನ್ನು ನಾನು ಡಾ ರುದ್ರೇಶ್ ಅದರಂಗಿ ಶಿವಗಂಗೆ ಗಿರಿ ಸುತ್ತ ಮುತ್ತ ಬೀಜ ಬಿತ್ತನೆ ಕಾರ್ಯ ಮಾಡುತ್ತಿರುವೆ. ನಾನು ಕೂಡ ಕೈಜೋಡಿಸುವೆ. ನಿಮ್ಮ ಕಾರ್ಯ ಸ್ತುತ್ಯಾರ್ಹ ಅಭಿನಂದನೆಗಳು

    2. ಗಹನವಾದ ವಿಚಾರ,ಸಮರ್ಥವಾಗಿ ಓದುಗರನ್ನು ತಲುಪಲು ಲೇಖನ ಸಹಕಾರಿಯಾಗಿದೆ,ನುರಿತ ಲೇಖಕರಿಂದ.

    3. ಒಂದು ಹೃದಯಸ್ಪರ್ಶಿ ಲೇಖನ ಮತ್ತು ಮಾದರಿ ಆಂದೋಲನ. ಮಾನವೀಯತೆ ಅಂದರೆ, ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡುವುದು ಮಾತ್ರವಲ್ಲ, ಮೂಖ ಪ್ರಾಣಿಗಳ ನೋವಿಗೆ ಸ್ಪಂಧಿಸುವುದೂ ಕೂಡ ದೇವರು ಮೆಚ್ಚುವಂತ್ತದ್ದು. ಟೆಕ್ಕಿಗಳ ‘ಸೇವ್ ಮಂಕೀಸ್ ಶಿವಗಂಗೆ’ ಕಾರ್ಯ ಶ್ಲಾಘನೀಯ. ನಾನೂ ಈ ಕಾರ್ಯದಲ್ಲಿ ಭಾಗಿಯಾಗಲು ಸಂತೋಷ ಪಡುತ್ತೇನೆ. ಇಂತಹ ನಿಸರ್ಗಕ್ಕೆ ಹತ್ತಿರವಾಗುವ ಕೆಲಸ ಹೆಚ್ಚು ಹೆಚ್ಚು ಆಗಲಿ. ಈ ಕಾರ್ಯದಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆಗಳು ಮತ್ತು ಕೃತಜ್ಞತೆಗಳು.

    4. ವೀರೇಶ್ ಸರ್ ನಿಮ್ಮ ಈ ಬರಹ ಹಲವು ಪರಿಸರ ಪ್ರೇಮಿಗಳು ಮತ್ತು ಪ್ರಾಣಿ ಪ್ರಿಯರನ್ನು ವಿವಿಧ ಸ್ಥಳಗಳಿಂದ ಪ್ರೇರೇಪಿಸಿರುತ್ತದೆ.

      ಹಲವು ಜನರು ಕರೆಯ ಮೂಲಕ ಅಭಿನಂದನೆಗಳನ್ನು ತಿಳಿಸಿರುತ್ತಾರೆ.

      ಧನ್ಯವಾದಗಳು kannadapress
      🙏🙏🙏💐💐💐💐

    5. ಪ್ರಾಣಿ ದಯಾಸಂಘವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಖಡ್ಗ ಸಂಘದ ಕುರಿತು ವರದಿ ಉತ್ತಮ ವಾಗಿದೆ ಅಣ್ಣ. ವೃತ್ತಿ ಯಾವುದಾದರೇನು ಮಾನವೀಯತೆ ಎಲ್ಲರಲ್ಲೂ ಇರಬೇಕು ಎಂದು ಆ ಟೆಕ್ಕಿಗಳು ಆದರ್ಶವಾಗಿದ್ದಾರೆ ಅಭಿನಂದನೆಗಳು

    6. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಕಂಕಣ ತೊಟ್ಟು ನಿಂತಿರುವ ವೀರರು ಒಂದು ಕಡೆಯಾದರೆ …ಶಿವಗಂಗೆಯಲ್ಲಿ ರಾಮನ ಬಂಟ ಹನುಮನ ಪ್ರತಿರೂಪವಾಗಿರುವ ಕೋತಿಗಳ ಸಂರಕ್ಷಣೆಗೆ ಪಣತೊಟ್ಟು ನಿಂತಿರುವ ಖಡ್ಗ ಸಂಘದ ವೀರರು ಇನ್ನೊಂದು ಕಡೆ …ಒಳ್ಳೆಯದಾಗಲಿ ….
      ಜೈ ಆಂಜನೇಯ

    7. ಸರ್ ಮನುಷ್ಯನಲ್ಲಿರುವ ಪ್ರಾಣಿಗಳ ಮೇಲೆ ದಯೆಯನ್ನು ನಿಮ್ಮ ಈ ಬರಹದಿಂದ ಹೊರಹಾಕಲ್ಪಡುತ್ತದೆ ಹಾಗೂ ಅಂತಹ ನಿರ್ಧಾರ ಕೈಗೊಂಡ ಆ ಟಕ್ಕಿಗಳ ಸಂಘ ಕೂಡ ಹೃದಯಮಯಿ ಕಾಯಕ ಮಾಡುತಿದೆ ಒಳ್ಳೆಯ ಮಾಹಿತಿಯನ್ನು ಸಂಗ್ರಹಿಸಿದ ನಿಮ್ಮ ಕಾಯಕಕ್ಕೆ ಅಭಿನಂದನೆಗಳು ಸರ್

    LEAVE A REPLY

    Please enter your comment!
    Please enter your name here

    Latest article

    error: Content is protected !!