ಕನ್ನಡಪ್ರೆಸ್.ಕಾಮ್ ನಲ್ಲಿ ಶಕುಂತಲಾದೇವಿಯವರ ಚರಿತ್ರೆಯ ಚಲನಚಿತ್ರದ ಬಗ್ಗೆ ಓದಿದ ನಂತರ ಅದನ್ನು ನೋಡಿದೆ. ಅಪ್ರತಿಮ ಪ್ರತಿಭೆಯ ಶಕುಂತಲಾದೇವಿಯವರ ಜೀವನಗಾಥೆಯನ್ನು ಬಹಳ ಸೊಗಸಾಗಿ ತೆರೆಯಮೇಲೆ ತಂದಿದ್ದಾರೆ.
ಅತ್ಯಂತ ಪ್ರಬಲವಾದ ವ್ಯಕ್ತಿತ್ವ ಮತ್ತು ಅತಿ ಬುದ್ಧಿವಂತರಾದ ಹೆಣ್ಣುಮಕ್ಕಳಿಗೆ ವಿವಾಹ ಎಂಬುದು ಒಂದು ಬಂಧನವಾಗಿ ಹೋಗುತ್ತದೆ. ಅತ್ಯಂತ ಒಳ್ಳೆಯವನಾದ ಬ್ಯಾನರ್ಜಿ ಜೀವನದಲ್ಲಿ ತನ್ನ ಹೆಂಡತಿಯಿಂದಲೂ ಹಾಗೂ ಪ್ರೀತಿಯಿಂದ ನೋಡುತ್ತಿದ್ದ ಮಗಳಿಂದಲೂ ದೂರವಾಗಿ ಜೀವನವನ್ನು ದುರ್ಭರವಾಗಿ ಕಳೆಯಬೇಕಾಯಿತು.
ಶಕುಂತಲಾ ದೇವಿಯ ಸಾಮರ್ಥ್ಯ ಆಕೆಗೆ ದೇವರಿಂದ ಸಿಕ್ಕಿದ್ದು. ಇಂಗ್ಲಿಷ್ ನಲ್ಲಿ ಗಾಡ್ ಗಿಫ್ಟ್ ಅನ್ನುತ್ತಾರಲ್ಲ ಹಾಗೆ. ಇಂಥ ವ್ಯಕ್ತಿಯನ್ನು ನಾನು ನೋಡಲಿಲ್ಲ ಅಥವಾ ಕೇಳಿಯೂ ಇಲ್ಲ. ತಾಯಿ ಮಕ್ಕಳ ಬಾಂಧವ್ಯಕ್ಕಿಂತ ಜಗತ್ತಿನಲ್ಲಿ ಅಮೂಲ್ಯವಾದುದು ಮತ್ತೇನೂ ಇಲ್ಲ.
ತನ್ನ ಮಗಳ ಪ್ರೀತಿಗಾಗಿ ಹಂಬಲಿಸುವ ಶಕುಂತಲಾದೇವಿಯವರ ಮಾನಸಿಕ ಹೋರಾಟ,ತ್ಯಾಗ ಮೆಚ್ಚುಗೆಗೆ ಪಾತ್ರವಾಗಿದೆ. ಕ್ರೂರವಾದ ಹುಲಿ, ಸಿಂಹಗಳು ತನ್ನ ಮಕ್ಕಳನ್ನು ಕಾಪಾಡಿ ಆಹಾರ ಕೊಟ್ಟು ಪ್ರೀತಿಯಿಂದ ನೋಡುತ್ತವೆ .ಬುದ್ಧಿ ಮತ್ತು ಸಂವೇದನೆಯಿರುವ ಮನುಷ್ಯ ತನ್ನ ಸಂತತಿಯನ್ನು ಜೀವನ ಪಣಕ್ಕಿಟ್ಟು ಸಂರಕ್ಷಿಸುವುದಿಲ್ಲವೇ ?.
ಈ ಚಿತ್ರ ನೋಡುತ್ತಿದ್ದಂತೆ ಶಕುಂತಲಾದೇವಿಯವರೊಂದಿಗೆ ನನ್ನ ಒಡನಾಟ ನೆನಪಿಗೆ ಬಂತು . ನಾನು ಅವರನ್ನು ನೋಡಿದ್ದು ಬಹಳ ಚಿಕ್ಕವಳಿದ್ದಾಗ. ಎಲ್ಲರೂ ಶಕುಂತಲಾದೇವಿ ನಮ್ಮ ಸ್ಕೂಲಿಗೆ ಬರುತ್ತಿದ್ದಾರೆ ಎಂದು ಸಂಭ್ರಮದಲ್ಲಿಇದ್ದರು. ನಾನು ಭಾಗಾಕಾರ ಕಲಿಯುತ್ತಿದ್ದಾಗ ಅವರು cube, cube ಎನ್ನುತ್ತಿದ್ದರು. ಅವರನ್ನು ನೋಡಿದ ನೆನಪು ಮಾತ್ರ ಅಷ್ಟೆ .
ಮತ್ತೊಮ್ಮೆ ನನಗೆ ಮಹಾಪ್ರತಿಭಾಶಾಲಿ ಆದ ಶಕುಂತಲಾದೇವಿಯವರನ್ನು ನೋಡುವ ಸದಾವಕಾಶ ಅಮೇರಿಕಾದಲ್ಲಿ ದೊರೆಯಿತು.ನಮ್ಮ ಮಗಳ ಮನೆ ನ್ಯೂಜೆರ್ಸಿಯಲ್ಲಿದೆ. ದೊಡ್ಡ ಮನೆಗಳು ,ಚೆಂದವಿರುವ ಹೂತೋಟ ,ಎಲ್ಲವೂ ನೋಡಲು ಸಂತೋಷವಾಗುತ್ತದೆ. ನಿಜವೆಂದರೆ ನಾವು ಯಾವುದೋ ಬೇರೆ ಪ್ಲಾನೆಟ್ ನಲ್ಲಿ ಇರುವಂತೆ ಭಾಸವಾಗುತ್ತದೆ. ನಮಗೆ ಇಲ್ಲಿ ಮನೆ ಮುಂದೆ ನೂರಾರು ವಾಹನ ಸಂಚಾರ, ಹೂ ,ತರಕಾರಿ ಮಾರುವವರ ಕೂಗು ಎಲ್ಲವೂ ಜೀವನಕ್ಕೆ ಒಗ್ಗಿ ಹೋಗಿದೆ.ಯಾರಾದರೂ ಮಾತನಾಡುವುದಕ್ಕೆ ಏನು ಸಮಾಚಾರವಿಲ್ಲದಿದ್ದರೂ ಸಿಗುತ್ತಾರೆ .ಆದರೆ ಅಲ್ಲಿ ಒಂದಿಬ್ಬರು ಸಿಕ್ಕರೂ ಮುಗುಳ್ನಗೆಯಷ್ಟೆ.
ನೂರಾರು ದೇಶಗಳಿಂದ ಬಂದಿರುವ ಅವರಿಗೆ ಇಂಗ್ಲಿಷ್ ಬರುತ್ತೆ ಅಂತ ತಿಳಿಯಬಾರದು.ಲ್ಯಾಟಿನ್ ಸ್ಪ್ಯಾನಿಷ್ ರಷ್ಯಾದಿಂದ ಬಂದವರಾಗಿರುತ್ತಾರೆ .ಅವರಿಗೆ ಇಂಗ್ಲಿಷ್ ಬರುವುದೇ ಇಲ್ಲ.ಅಲ್ಲಿ ಆಂಧ್ರಪ್ರದೇಶದಿಂದ ಬಂದಿದ್ದ ಯುವತಿಯೊಬ್ಬಳಿಗೆ ಪಕ್ಕದ ಮನೆಯ ಇಂಗ್ಲಿಷ್ ಬಲ್ಲ ಚೀನಿಯವಳೊಬ್ಬಳು ಲಾರೆನ್ಸ್ ವಿಲ್ಲಾದಲ್ಲಿ ವರ್ಲ್ಡ್ ಫೇಮಸ್ mathamatician ಬಂದಿದ್ದಾರೆ ,ಅದೂ ನಿಮ್ಮ ಇಂಡಿಯಾದಿಂದ ಎಂದು ಹೇಳಿದಳಂತೆ .ಈ ಮಾತನ್ನು ತನ್ನ ಹಿಂದಿ ಸ್ನೇಹಿತೆಯೊಬ್ಬಳಿಗೆ ಹಿಂದಿಯಲ್ಲಿ ಹೇಳುತ್ತಿದ್ದಳು. ನಾನು ತಕ್ಷಣ ನಾನೂ ಸಹ India, that too from Bangalore ಎಲ್ಲಿದೆ ಮನೆ ಎಂದಾಗ ಇಂಥ ಕಡೆ ಎಂದು ಹೇಳಿದರು. ಇಂತಹ ಜಗದ್ವಿಖ್ಯಾತ ದೇವಿಯವರನ್ನು ನೋಡಲು ನಾನು ಹೊರಟೇಬಿಟ್ಟೆ.
ಬೆಲ್ ಒತ್ತಿದ ತಕ್ಷಣ ಸ್ಫುರದ್ರೂಪಿಯಾದ ಯುವತಿಯೊಬ್ಬಳು ಬಾಗಿಲು ತೆಗೆದು ಕುಳಿತುಕೊಳ್ಳಲು ಹೇಳಿದಳು. ನಾನು ಸಂಕೋಚದಿಂದ ಶಕುಂತಲಾ ದೇವಿಯವರನ್ನು ನೋಡಲು ಬಂದಿದ್ದೇನೆ ಎಂದೆ. ಒಳಗೆ ಹೋಗಿ ಶಕುಂತಲಾದೇವಿಯವರನ್ನು ಶಾಲುಹೊದಿಸಿ ಕರೆದುಕೊಂಡು ಬಂದಳು. ನಾನು ಅವರಿಗೆ ನಮಸ್ಕಾರ ಮಾಡಿದೆ ಪ್ರೀತಿಯಿಂದ you are from south India ಎಂದು ಕೇಳಿದರು. ನಾನು ಬೆಂಗಳೂರು ಎಂದೊಡನೆ ಕನ್ನಡದಲ್ಲಿ ಮಾತನಾಡಲು ಶುರುಮಾಡಿದರು.
ಬೆಂಗಳೂರಿನವರಿಗೆ ಕಾಫಿ ಎಂದರೆ ಪಂಚಪ್ರಾಣ ಮೊದಲು ಎರಡು ಕಾಫಿ ತೆಗೆದುಕೊಂಡು ಬಾ ಎಂದು ಆ ಯುವತಿಗೆ ಹೇಳಿದರು .ಬೆಂಗಳೂರಿನ ರಾಜಕೀಯ ಹವಾಗುಣ ಸಂಸ್ಕೃತಿ ಸಂಪ್ರದಾಯ ಎಲ್ಲವನ್ನೂ ಪ್ರೀತಿಯಿಂದ ಮಾತನಾಡಿದರು ನಾನು ನೀವು ನಮ್ಮ ದೇಶದ ಅದೂ ನಮ್ಮ ಕರ್ನಾಟಕದ ಜನತೆಯ ಹೆಮ್ಮೆ, ನಾನು ಇನ್ನೂ ಹಾಗೇ ಹೀಗೆ ಎಂದು ಬಡಬಡಿಸಿದೆ. ಆದರೆ ಒಂದು ಬಾರಿಯಾದರೂ ತಮ್ಮನ್ನು ಅವರು ವಿಶೇಷ ವ್ಯಕ್ತಿ ಎನ್ನುವಂತೆ ಮಾತನಾಡಲಿಲ್ಲ ಬಾಗಿಲತನಕ ಬಂದು ಪ್ರೀತಿಯಿಂದ ಬೀಳ್ಕೊಟ್ಟರು .
ಇದನ್ನೂ ಓದಿ : ಗಣಿತ ಮತ್ತು ತಾಯ್ತನದ ಸಂಗಮ
.
ಶಕುಂತಲಾ ದೇವಿಯವರ ಹೋರಾಟ, preeti, tyaga ,ಎಲ್ಲವೂ ಒಂದು ನಿಮಿಷ ಮಾತು ಮರೆಸುತ್ತದೆ. ಈಗ ಒಂದು ಮಾತು ಹೇಳ ಬಯಸುವೆ. ಲೇಖಕಿಯವರು ಹೇಳಿದ ಹಾಗೆ ಅಮೇರಿಕಾದಲಿ ಕನ್ನಡ ಭಾಷೆ ಖುಷಿ ತರುವುದು. ನಾನು ಹೋದಾಗ ಅಮೇರಿಕಾಗೆ ಅಲಿರುವ ಬಹುತೇಕ ಕನ್ನಡಿಗರು ನಾವು ಮಾತಾಡುವುದಕಿಂತ ಉತ್ತಮ ಕನ್ನಡ ಮಾತಾಡುವರು ಖುಷಿಯಾಗುತ್ತದೆ.
Wow. I had goosebumps while reading your experience of meeting world famous mathematician Mrs Shakuntala Devi. She had visited our school when I was in Highschool. Who can forget her.