19.9 C
Karnataka
Sunday, September 22, 2024

    ವಿಮಾನ ಅಪಘಾತಕ್ಕೆ ಅಸಲಿ ಕಾರಣಗಳಾದರು ಏನು

    Must read

    ಮೊನ್ನೆ ಶುಕ್ರವಾರ ರಾತ್ರಿ 9 ಗಂಟೆ. ದಿನದ ಆಗು ಹೋಗುಗಳನ್ನು ಅರಿಯಲು ಪ್ರೈಮ್ ಟೈಮ್ ನ್ಯೂಸ್ ನೋಡಲು ಕುಳಿತವರಿಗೊಂದು ಆಘಾತಕಾರಿ ಸುದ್ದಿ. ದುಬೈನಿಂದ ಬಂದು ಇನ್ನೇನು ಕೇರಳದ ಕೋಜಿಕ್ಕೋಡು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಇಂಡಿಯನ್ ಏರ್ ಲೈನ್ ಎಕ್ಸಪ್ರೆಸ್ ಗೆ ಸೇರಿದ ವಿಮಾನ ರನ್ ವೇ ನಲ್ಲಿ ನೆಲಕ್ಕಪ್ಪಳಿಸಿ ಎರಡು ಹೋಳಾಯಿತು.ಪೈಲಟ್ ಸೇರಿ ಹಲವು ಪ್ರಯಾಣಿಕರು ಮೃತಪಟ್ಟರು. ವಿಮಾನ ಕೆಳಗೆ ಬಿದ್ದಾಗ ಬೆಂಕಿ ಹೊತ್ತದ ಕಾರಣ ಅನೇಕರ ಜೀವ ಉಳಿಯಿತು.

    ಆಗಸಕ್ಕೆ ಹಾರಿದ ಕ್ಷಣದಿಂದ ಇಳಿಯುವರೆಗೆ ರಾಡರ್ ನ ಕಣ್ಗಾವನಲ್ಲೇ ಇರುವ ವಿಮಾನಗಳು ಅಪಘಾತಕ್ಕೆ ಈಡಾದಾಗ ಜನಮಾನಸದಲ್ಲಿ ಹೆಚ್ಚಿನ ಆತಂಕ. ಬಸ್ಸು , ರೇಲು ಅಫಘಾತಗಳಿಗಿಂತ ಹೆಚ್ಚಾಗಿ ವಿಮಾನ ಅಪಘಾತದ ಸುದ್ದಿ ವಿಮಾನದಲ್ಲಿ ಒಂದು ಬಾರಿಯೂ ಪ್ರಯಾಣಿಸದವರಿಗೂ ಆತಂಕ ತರುವ ಸಮಾಚಾರವಾಗುತ್ತದೆ. ಹಲವಾರು ಪರೀಕ್ಷೆಗೆ ಒಳಗಾಗಿ, ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡುರೂ ವಿಮಾನಗಳು ಅಪಘಾತಕ್ಕೆ ಈಡಾಗವುದಾದರು ಏಕೆ- ಇದು ಅನೇಕರನ್ನು ಕಾಡುವ ಪ್ರಶ್ನೆ.

    ಸುಮಾರು 25-30 ವರುಷದ ಹಿಂದೆ ವಿಮಾನ ಪ್ರಯಾಣ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಮಧ್ಯಮ ವರ್ಗದವರು ವಿಮಾನಗಳು ಹಾರಾಡುವುದನ್ನು ನೋಡುತ್ತಾ ಹಕ್ಕಿಯಂತೆ ಹಾರುವುದು ತಮಗೊಂದು ಕನಸೇ ಎಂದು ಭಾವಿಸಿದ್ದರು. ಆದರೆ ಖಾಸಗಿ ಆಪರೇಟರ್ ಗಳಿಗೂ ವಿಮಾನ ಯಾನದ ಅವಕಾಶ ಸಿಕ್ಕಮೇಲೆ ಸಹಜವಾಗಿಯೇ ಬೆಲೆಗಳು ಇಳಿದು ಹೆಚ್ಚೆಚ್ಚು ಪ್ರಯಾಣಿಕರು ವಿಮಾನದ ಪ್ರಯಾಣದ ಸುಖ ಅನುಭವಿಸುವಂತೆ ಆಯಿತು. ಪರಿಣಾಮ ವಿಮಾನಗಳು ಹೆಚ್ಚಿದವು, ಪ್ರಯಾಣಿಕರು ಹೆಚ್ಚಿದರು ಜೊತೆಗೆ ಅಪಘಾತಗಳು ಹೆಚ್ಚಿದವು.

    ಒಂದೇ ಒಂದು ನಿರ್ದಿಷ್ಟ ಕಾರಣದಿಂದ ವಿಮಾನ ಅಪಘಾತಗಳು ಎಂದಿಗೂ ಸಂಭವಿಸುವುದಿಲ್ಲ. ವಿಮಾನ ಅಪಘಾತ ಅಥವಾ ಘಟನೆಗೆ ಕಾರಣವಾಗುವ ಅನೇಕ ಅಂಶಗಳು ಯಾವಾಗಲೂ ಇರುತ್ತವೆ. ಕೆಟ್ಟ ಹವಾಮಾನ ಮತ್ತು ತಾಂತ್ರಿಕ ಸಮಸ್ಯೆ, ಮಾನವ ಸಹಜ ತಪ್ಪುಗಳು ಇದಕ್ಕೆ ಕಾರಣವಾಗುತ್ತವೆ.

    ವಿಮಾನಗಳು ಹಾರುವ ಮೊದಲು ಮತ್ತು ಇಳಿದ ನಂತರವೂ ತಪಾಸಣೆ ನಡಸಲಾಗುತ್ತದೆ. ಒಮ್ಮೊಮ್ಮೆ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ ಎಂದು ನಂಬಿ ಹಾರಾಟಕ್ಕೆ ಅನುಮತಿ ಕೊಟ್ಟಾಗ ಅವು ಇಳಿಯುವ ಸಮಯದಲ್ಲಿ ಕೈ ಕೊಟ್ಟರೆ ಅಪಘಾತ ನಿಶ್ಛಿತ.ಇನ್ನೊಮ್ಮೆ ಪೈಲಟ್ ಗಳು ಹೊರಗಿನ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸುವುದು , ಇಂಥದ್ದು ನಾನೆಷ್ಟು ನೋಡಿಲ್ಲ ಎಂದು ತೆಗೆದುಕೊಳ್ಳುವ ರಿಸ್ಕೂ ಅಪಘಾತಕ್ಕೆ ಕಾರಣವಾಗುತ್ತದೆ.

    ನೀರು ನಿಲ್ಲುವುದು ತುಂಬಾ ಅಪಾಯಕಾರಿ

    ರನ್‌ ವೇ ನಲ್ಲಿ ನೀರು ನಿಲ್ಲುವುದು ತುಂಬಾ ಅಪಾಯಕಾರಿ.ನೀರು ನಿಲ್ಲದೆ ಹರಿದು ಹೋಗುವಂಥ ವ್ಯವಸ್ಥೆ ಇರಬೇಕು. ವಿಮಾನಗಳು ಇಳಿಯುವ ಹಂತದಲ್ಲಿ ವಿಮಾನದ ಚಕ್ರಗಳು ಲಾಕ್ ಆಗಿರುತ್ತವೆ. ಭೂ ಸ್ಪರ್ಶ ಆಗುತ್ತಿದ್ದಂತೆ ಅವು ರಿಲೀಸ್ ಆಗಬೇಕು. ಅಂಥ ಸಮಯದಲ್ಲಿ ರನ್ ವೇ ನಲ್ಲಿ ನಿಗದಿತ ಮಟ್ಟಕ್ಕಿಂತ ನೀರಿದ್ದರೆ ಅವು ವಿಮಾನವನ್ನು ಯಾವುದೇ ದಿಕ್ಕಿಗೂ ಎಳೆಯಬಹುದು ಎಂದು 2010 ರ ಮಂಗಳೂರು ವಿಮಾನ ದುರಂತವನ್ನು ತನಿಖೆ ಮಾಡಿದ್ದ ಏರ್ ಮಾರ್ಷಲ್ (ನಿವೃತ್ತ) ಭೂಷಣ್ ಗೋಖಲೆ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಮೊನ್ನೆ ಅಪಘಾತ ನಡೆದದ್ದು ಟೇಬಲ್ ಟಾಪ್ ವಿಮಾನ ನಿಲ್ದಾಣ. ಹಾಗೆಂದು ಟೇಬಲ್ ಟಾಪ್ ವಿಮಾನ ನಿಲ್ದಾಣಗಳ ಬಗ್ಗೆ ಭಯ ಪಡುವ ಅಗತ್ಯವಿಲ್ಲ . ಆದರೆ ಇಂಥ ನಿಲ್ದಾಣಗಳು ಅನುಭವಿ ಪೈಲಟ್ ಗಳನ್ನು ಬಯಸುತ್ತವೆ. ಭಾರತದಲ್ಲಿ ಐದು ಟೇಬಲ್ ಟಾಪ್ ರನ್ ವೇ ಗಳಿವೆ .ಮಂಗಳೂರು, ಕೋಝಿಕ್ಕೋಡ್, ಶಿಮ್ಲಾ , ಪಕ್ಯಾಂಗ್ (ಸಿಕ್ಕಿಂ) ಮತ್ತು ಮಿಜೋರಾಮ್ ನ ಲಿಂಫು.

    ಮೊನ್ನೆ ವಿಸಿಬಿಲಿಟಿ ಕಡಿಮೆ ಇದ್ದರೂ ಪೈಲಟ್ ಅಲ್ಲಿ ವಿಮಾನ ಇಳಿಸುವ ನಿರ್ಧಾರ ಮಾಡಿದರೆ ? ಇತ್ಯಾದಿ ವಿವರಗಳು ತನಿಖೆಯಿಂದ ಗೊತ್ತಾಗಬೇಕಿದೆ. ಅಪಾಯದ ವಾಸನೆ ಅರಿತು ಬೆಂಕಿ ಹತ್ತದಂತೆ ವಿಮಾನ ಇಳಿಸದ ಪೈಲಟ್ ದೀಪಕ್ ಸೇಥಿಗೆ ಪ್ರಶಂಸೆ ವ್ಯಕ್ತವಾಗಿದೆ.

    ಪೈಲಟ್‌ಗಳು ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿದಾಗ, ಹವಾಮಾನ ಪರಿಸ್ಥಿತಿಗಳನ್ನು ತಪ್ಪಾಗಿ ಗ್ರಹಿಸಿದಾಗ ಅಥವಾ ಯಾಂತ್ರಿಕ ದೋಷಗಳನ್ನು ಸರಿಯಾಗಿ ಪರಿಹರಿಸಲು ವಿಫಲವಾದಾಗ ಅನೇಕ ವಾಯುಯಾನ ಅಪಘಾತಗಳು ಸಂಭವಿಸುತ್ತವೆ. ವಿಮಾನಗಳು ಅಪಘಾತಕ್ಕೀಡಾಗಲು ಪೈಲಟ್ ದೋಷವನ್ನು ಪ್ರಥಮ ಕಾರಣವೆಂದು ಪರಿಗಣಿಸಲಾಗುತ್ತದೆ.

    ಅನುಭವಿ ಪೈಲಟ್

    ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಿಂದ ಭಾರತಕ್ಕೆ ಬಂದ ಈ ವಿಮಾನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ 1344 ಹದಿಮೂರು ವರ್ಷಗಳಿಗಿಂತಲೂ ಹಳೆಯದಾಗಿತ್ತು.ವಿಂಗ್ ಕಮಾಂಡರ್ ದೀಪಕ್ ಸಾಥೆ (ಏಪ್ರಿಲ್ 24, 1961 – ಆಗಸ್ಟ್ 7, 2020) ಈ ನತದೃಷ್ಟ ವಿಮಾನದ ಕ್ಯಾಪ್ಟನ್ . ಮಾಜಿ ಭಾರತೀಯ ವಾಯುಪಡೆಯ ಅಧಿಕಾರಿಯಾಗಿದ್ದು, 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮಿಗ್ -21 ಸೂಪರ್ಸಾನಿಕ್ ಜೆಟ್ ಫೈಟರ್ ಅನ್ನು ಹಾರಿಸುವ ಮೂಲಕ ಭಾರತೀಯ ವಾಯುಸೇನೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ವಿಂಗ್ ಕಮಾಂಡರ್ ಆಗಿ 2003 ರಲ್ಲಿ ನಿವೃತ್ತರಾದರು ಮತ್ತು 2005 ರಲ್ಲಿ ಏರ್ ಇಂಡಿಯಾ ಸೇರಿದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು ಮತ್ತು ಅವರ ತರಬೇತಿ ಕೋರ್ಸ್‌ನಲ್ಲಿ ಸ್ವೋರ್ಡ್ ಆಫ್ ಆನರ್ ಪ್ರಶಸ್ತಿಯನ್ನು ಪಡೆದಿದ್ದರು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಪರೀಕ್ಷಾ ಪೈಲಟ್ ಕೂಡ ಆಗಿದ್ದರು ಮತ್ತು ಬೋಯಿಂಗ್ 737 ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿದ್ದರು.

    .ಆಗಸ್ಟ್ 7, 2020 ರಂದು, ಭಾರೀ ಗಾಳಿಯಿಂದಾಗಿ ಅನೇಕ ಸ್ಥಗಿತಗೊಂಡ ಲ್ಯಾಂಡಿಂಗ್ ಪ್ರಯತ್ನಗಳ ನಂತರ, ವಿಮಾನವು ಕೋಝಿಕ್ಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ರನ್ ವೇ ಕೊನೆಯಲ್ಲಿ 9–10.5 ಮೀ (30–35 ಅಡಿ) ಕಮರಿಗೆ ಇಳಿಯಿತು.

    ತಪ್ಪು ಆಗಿದ್ದೆಲ್ಲಿ ಎಂಬುದು ತನಿಖೆಯಿಂದಷ್ಟೆ ಗೊತ್ತಾಗಬೇಕು. ಹಾಗೆಂದು ಜೀವನದ ಪ್ರಯಾಣ ಸಾಗಲೇ ಬೇಕು. ವಿಮಾನಗಳು ಹಾರಾಡಲೇ ಬೇಕು. ಮುಂದಿನ ದಿನಗಳಲ್ಲಿ ಇಂಥ ಅಪಘಾತಗಳು ಮರುಕಳಿಸದಿರಲಿ.

    happy takeoff and happy landing

    ಮಧುಸೂಧನ್
    ಮಧುಸೂಧನ್
    ಭಾರತೀಯ ವಾಯು ಪಡೆಯಲ್ಲಿ 20 ವರ್ಷಗಳ ಸೇವೆ. ನಂತರ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ. ಈಗ ಸೇವೆಯಿಂದ ನಿವೃತ್ತ. ಪ್ರವೃತ್ತಿಯಿಂದ ಬರಹಗಾರ
    spot_img

    More articles

    27 COMMENTS

    1. ವಿಮಾನ ದುರಂತಕೆ ಏನೆಲಾ ಕಾರಣವಿರುತ್ತದೆ ಎಂದು ಗೆಳೆಯ ಮಧು ಬರೆದ ಲೇಖನದಿಂದ ತಿಳಿಯಿತು. ವಿಮಾನಯಾನ ಮಾಡಿದರೂ ಇವು ತಿಳಿದಿರಲ್ಲ. ಈಗ ತಿಳಿದಾಗ ನಿನ್ನ ಕುರಿತು ಇನೂ Hemme ಅನಿಸಿತು. ನೀನು ಸೇವೆ ಮಾಡುವಾಗಿನ ಕೆಲವು ಅನುಭವಗಳು ಲೇಖನವಾಗಿ ಹೊರ ಬರಲಿ

    2. ಮೊದಲು ಸ್ವಾಗತ.. ಮಧು. ನಿಮ್ಮ ಈ ಲೇಖನ ದಿಂದ ವಿಮಾನ ಹಾರಾಟ ದಲ್ಲಿರುವ ತಾಂತ್ರಿಕ ತೊಂದರೆಗಳು ಏನು ಮತ್ತು ಎಷ್ಟು ಕಷ್ಟ ಎನ್ನುವುದು ತಿಳಿಯಿತು. ವಿಮಾನ ಪ್ರಯಾಣ ಈಗ ಎಲ್ಲರಿಗೂ ಲಭ್ಯ. ವಿಮಾನ ಅಪಘಾತ ನೋಡಿದಾಗ ಮೊಟ್ಟ ಮೊದಲಿಗೆ ಪ್ರಯಾಣ ಮಾಡುವ ಜನರಿಗೆ ಭಯ ವಾಗುತ್ತೆ. ಆದರೆ ಎಲ್ಲ ಸಮಯ ಒಂದೇ ತರ ಇರೋಲ್ಲ. ಎಲ್ಲ ವಿಷಯ ವನ್ನು ಸರಿಯಾದ ರೀತಿ ತಿಳಿಸಿ. ಭಯ ಬೇಡ ಎನ್ನುವ ಸಂದೇಶ್ ನೀಡಿದಿರಾ. ಧನ್ಯವಾದಗಳು. ವಾಯು ಪಡೆಯಲ್ಲಿ ಸೇವೆ ಸಲ್ಲಿಸಿ. ದೇಶ ಸೇವೆ ಮಾಡಿರುವ ನೀವು ನಮ್ಮ ಬಾಲ್ಯ ದ ಗೆಳೆಯ ಎಂದು ಹೇಳಿಕೊಳ್ಳಲು ಹೆಮ್ಮೆ. ಹಾಗೆ ವಾಯು ಪಡೆಯ ಬಗ್ಗೆ. ಇನ್ನು ಇನ್ನು ವಿಷಯ ಗಳ ಬಗ್ಗೆ ಬರೆಯಿರಿ. ಮತ್ತೊಮ್ಮೆ ಧನ್ಯವಾದಗಳು ಗೆಳೆಯ.

    3. ಕೋಝಿಕ್ಕೋಡ್ ದುರಂತ ಅತ್ಯಂತ ದುರದೃಷ್ಟಕರ. ಉತ್ತಮ ವಿಚಾರ ತಿಳಿಸಿದ್ದೀರಿ. ಧನ್ಯವಾದಗಳು.

    4. very interesting n meaningful article, thank u sir for very informative n wonderful written article, looking forward for ur future articles,

    5. ಹಲವಾರು ವಿಮಾನ ಅಪಘಾತಗಳನ್ನು ಪರಾಮರ್ಶಿಸಿದಾಗ, ಪ್ರತಿ ಅಪಘಾತವು ವಿವಿಧ ಕಾರಣಗಳಿಂದಲೇ ಆಗಿರುವುದು ತಿಳಿದು ಬರುತ್ತದೇ ಹೊರತು ಯಾವುದೇ ಒಂದೂ ಸಾಮಾನ್ಯ ಕಾರಣ ಕಂಡುಬರುವುದಿಲ್ಲ. ವಿಮರ್ಶೆಗಳು ಸಹ ಪ್ರತಿಬಾರಿಯೂ ಬೇರೆ ಬೇರೆಯೇ ಆಗಿರುತ್ತವೆ. ಹೀಗಿರುವಾಗ ತಾಂತ್ರಿಕ ಮಾಹಿತಿ ಜನ ಸಾಮಾನ್ಯರ ತಿಳುವಳಿಕೆಯ ಹೊರಗೆ ಉಳಿದು ಬಿಡುವುದು ವಿಷಾದವೂ ವಿಪರ್ಯಾಸವು ಆಗಿದೆ

    6. Nice article, very informative. Common person like me got to read and know minute details about Airways and significance of Pilot. Keep up the good work. Kudos to the editor.

      May your soul rest in peace Captain Deepak Sathe.

    7. Hi Madhu..!!
      Tumba vivhara halavu janarige tilidirodilla ella vichara sanksiptavagi tilisiddiya..idu prasamshaniya .
      Higey janopakari vicharagalanna bareyuttiru.
      -Keshava

    8. Great beginning madhu, I never knew your writing skills although we are friends for last 36 years & started the Air Force career together, come out with different topics, eagerly waiting for your next article.

    9. Thank you dear friends for all for your supportive comments, it made me to write more.. thanks to dear friend Vatsa who made this to happen…

    10. ಕೇರಳದಲ್ಲಿ ಸಂಭವಿಸಿದ ದುರದೃಷ್ಟಕರ ಅಪಘಾತದ ಬಗ್ಗೆ ಲೇಖಕರು ತಮ್ಮ ಅಭಿಪ್ರಾಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ . ಇದು ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ ಅವರ ಅಪಾರ ಜ್ಞಾನವನ್ನು ತೋರಿಸುತ್ತದೆ.
      ಹವಾಮಾನ ಪರಿಸ್ಥಿತಿಗಳು, ಫ್ಲೈಟ್ ಡಾಟಾ ರೆಕಾರ್ಡರ್ (ಬ್ಲ್ಯಾಕ್ ಬಾಕ್ಸ್) ಗಳ ಅಧ್ಯಯನದ ನಂತರವಷ್ಟೆ ಅಪಘಾತಕ್ಕೆ ಕಾರಣ ಕಂಡುಹಿಡಿಯಬಹುದು. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಈ ಸತ್ಯ ಶೋಧನೆಯ ಪ್ರಕ್ರಿಯೆಯಲ್ಲಿ ಅಪಾರ ಸಹಾಯ ಮಾಡುತ್ತದೆ. ಪ್ರಯಾಣಿಕರು ದೀರ್ಘ ಕಾಯುವಿಕೆಯ ನಂತರ ತಮ್ಮ ಕುಟುಂಬವನ್ನು ಸೇರಲು ಸುರಕ್ಷಿತವಾಗಿ ಇಳಿಯಲು ಬಯಸುತ್ತಿದ್ದರು. ತನಿಖಾ ತಂಡದ ವಿಚಾರಣೆಯಿಂದ ಕಾರಣ ಗೊತ್ತಾಗಬೇಕಿದೆ.

    11. Awesome article and very good info for common people even I didn’t this information until I read this…please start circulating this kind Of info to the people and its definitely useful info

    LEAVE A REPLY

    Please enter your comment!
    Please enter your name here

    Latest article

    error: Content is protected !!