ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ. ಕೋವಿಡ್ ಕಾರಣದಿಂದ ಈ ಬಾರಿ ಮನೆಯಿಂದಲೆೇ ಜನ್ಮಾಷ್ಟಮಿ ಆಚರಿಸಬೇಕಾದ ಅನಿವಾರ್ಯತೆ.ಆದರೆ ಹಬ್ಬದ ಸಡಗರಕ್ಕೆ ಮನೆಯಾದರೇನು ಮಂದಿರವಾದರೇನು . ಎಲ್ಲಿ ನಿನ್ನ ಭಕ್ತರೋ ಅಲ್ಲೇ ದೇವಾಲಯ.
ನಮ್ಮ ಕೃಷ್ಣ ಮಕ್ಕಳ ಪ್ರೀತಿಯ ದೇವರು. ಬಾಲ್ಯದಲ್ಲಿ ಎಲ್ಲರೂ ಒಮ್ಮೆಯಾದರು ಕೃಷ್ಣ ರಾಧೆಯಾಗಿ ಶಾಲೆಯ ಕಾರ್ಯಕ್ರಮದಲ್ಲಿ ನಲಿದವರೆ. ಇನ್ನೂ ಶ್ರೀಕೃಷ್ಣನ ಬಾಲ ಲೀಲೆಗಳನ್ನು ಮಕ್ಕಳ ಬಾಯಿಂದ ಕೇಳಿದರಂತೂ ಅದರ ಸೊಗಸೆ ಬೇರೆ. ಹೀಗಾಗಿ ನಮ್ಮಈ ಪಾಡ್ಕಾಸ್ಟ್ ನಲ್ಲಿ ಮಕ್ಕಳ ಕಲರವವನ್ನು ಕೇಳಿಸುತ್ತಿದ್ದೇವೆ. ಅವರ ತೊದಲ ನುಡಿಗಳಲ್ಲಿ ಶ್ರೀಕೃಷ್ಣ ಲೀಲಾಮೃತವನ್ನು ಕೇಳಿ ಆನಂದಿಸಿ.
ಏಳು ವರ್ಷದ ರಾಮಪ್ರಿಯ ನ ಕೃಷ್ಣಾಷ್ಟಕಂ ನಿಂದ ಆರಂಭವಾದ ಈ ಪಾಡ್ಕಾಸ್ಟ್ ನಲ್ಲಿ ಮುಂದೆ ನಾಲ್ಕು ವರ್ಷದ ಮಿಹಿರಾ ಜಯ ಜನಾರ್ದನ ಎಂದು ಕೃಷ್ಣನ ಗುಣಗಾನ ಮಾಡಿದ್ದಾಳೆ.ಮುಂದೆ ರಾಧೆ ಗೋವಿಂದ ಎನ್ನುವ ಮೂಲಕ ಎಂಟು ವರ್ಷದ ಶ್ರೀಯಾ ರಾಧಾ ಕೃಷ್ಣರ ಪ್ರೀತಿಯನ್ನು ಭಕ್ತಿ ತುಂಬಿ ಹಾಡಿದ್ದಾಳೆ. ದೂರದ ಅಮೆರಿಕಾದಿಂದ ದನಿಗೂಡಿಸಿರುವ ಐದು ವರ್ಷದ ಶ್ರೀಯಶ್ ಅಚ್ಯುತಂ ಕೇಶವಂ ಎಂದು ಅಲ್ಲಿನ ಶೈಲಿಯಲ್ಲೇ ಕೃಷ್ಣನನ್ನು ಪಠಿಸುತ್ತಾನೆ. ಆಡ ಪೋಗೋಣ ಬಾರೋ ರಂಗ ಎಂದು ಸಿಂಗಾಪುರದಿಂದ ಕೃಷ್ಣನನ್ನುಆಟಕ್ಕೆ ಕರೆದಿದ್ದಾಳೆ ಮೂರು ವರ್ಷದ ಸಾನ್ವಿ. ಮುಂದೆ ಒಂಭತ್ತು ವರ್ಷದ ನಿತ್ಯಶ್ರೀ ಕಾಳಿಂಗ ಮರ್ಧನದ ಕಥೆ ಹೇಳಿದ್ದಾಳೆ. ಎಲ್ಲಾಡಿ ಬಂದೆ ಎಂದು ಕೃಷ್ಣನನ್ನು ಕೇಳಿದ್ದಾಳೆ ಹತ್ತು ವರುಷದ ಮಾನ್ಯಾ. ನನ್ನನ್ನು ಎತ್ತಿಕೊಳ್ಳಮ್ಮಎಂದು ಯಶೋದೆಯನ್ನು ಕೇಳುತ್ತಾಳೆ ಮೈಸೂರಿನಿಂದ ಆರು ವರ್ಷದ ಅವನಿ. ಕೊನೆಯಲ್ಲಿ ಎಂಟು ವರ್ಷದ ಧನ್ಯಶ್ರೀ ಲಾಲಿ ಹಾಡಿದ್ದಾಳೆ. ಕಾರ್ಯಕ್ರಮದ ಮಧ್ಯದಲ್ಲೇ ಬರುವ ಕವಿ ಎಚ್. ಎಸ್ .ವಿ ಅವರ ಅಮ್ಮಾ ನಾನು ದೇವರಣೆ ಬೆಣ್ಣೆ ಕದ್ದಿಲ್ಲಮ್ಮ.. ಹಾಡಿದ್ದು ಪ್ರಿಯಾಂಕ. ನಿರೂಪಣೆ ಭಾರತಿ .
ಆಲಿಸಿ, ಪ್ರತಿಕ್ರಿಯಿಸಿ.
ತುಂಬಾ ಚೆನ್ನಾಗಿದೆ . ಪುಟ್ಟ ಮಕ್ಕಳ ಬಾಯಿಂದ ಕೇಳಿದ ಈ ಸೂಗಸಾದ ಹಾಡುಗಳು ಕೇಳಿ ತುಂಬಾ ಖುಷಿಯಾಗಿತ್ತು. ಸಿ ಕೃಷ್ಣ ಎಲ್ಲರಿಗೂ ಸುಖ ಸಂತೋಷ ಅರೋಗ್ಯ ಹಾಗು ಯಶಸ್ಸನ್ನು ಕೊಡಲಿ .
ಕೃಷ್ಣನನ್ನು ಪುಟಾಣಿಗಳ ಮುದ್ದಾದ ತೊದಲು ನುಡಿಗಳಲ್ಲಿ ತೋರಿಸುವ ಕನ್ನಡ ಪ್ರೆಸ್. ಕಾಮ್ ನ ಈ ಪ್ರಯತ್ನ ತುಂಬಾ ಮುದ ನೀಡಿತು. ವಿನೂತನ ಪ್ರಯತ್ನಗಳೇ ಯಶಸ್ಸಿಗೆ ಸೋಪಾನ….ಭಾರತಿಯವರ ನಿರೂಪಣೆ ಚೆನ್ನಾಗಿತ್ತು.
ಪುಟ್ಟ ಮಕ್ಕಳ ಬಾಯಲ್ಲಿ ಹಾಡು ಕೇಳುವುದಕ್ಕಿಂತ ಆನಂದ ಬೇಕೆ. ಧನ್ಯವಾದಗಳು ಕನ್ನಡಪ್ರೆಸ್
😍😍👌👌
ಸೂಪರ್ ಮಕ್ಕಳೇ ದೇವರು. ಅವರ ನುಡಿನೂ ಚಂದ ಹಾಡು ಮತೂ ಚಂದ. ಮಕ್ಕಳಾ ಸೂಪರ್. ಭಾರತಿ…..ಚಂದ ನಿರೂಪಣೆ
Superb singing from all the kids.. Happy krishna janmastami..
ಮುದ್ದು ಮಕ್ಕಳ ಬಾಯಲ್ಲಿ,ಇಂಪಾದ ಹಾಡು ಕೆಳಿ ತುಂಬಾ ಖುಷಿ ಆಯಿತು. ಶ್ರೀಮತಿ ಭಾರತಿ ಯವರ ನೀರೂಪಣೆ ಆಮೂಘವಾಗಿತ್ತು.ಹೀಗೆ ಹೊಸ ಹೊಸ ಪ್ರಯತ್ನ ಮಾಡುತ್ತಿರಿ.ಧನ್ಯವಾದ ಗಳು.🙏🙏🙏🙏
Beautiful songs to celebrate the birth of Godhead, Lord shriKrishna , by the wonderful kids in their devotion,
Wishing all Happy Krishna Janmashtami
Beautiful songs to celebrate the birth of Godhead Lord shriKrishna, by the wonderful kids
Wishing all Happy Krishna Janmashtami 🙏
ಮುದ್ದು ಮುದ್ದು ಮಕ್ಕಳ ಹಾಡುಗಳನ್ನು ಕೇಳಿ ಶ್ರೀ ಕೃಷ್ಣ ಅಷ್ಟಮಿ ದಿನ ತುಂಬಾ ಸಂತೋಷ ಆಯ್ತು. ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.
Thank you all for your comments & support. In turn I thank editor, srivatsa nadig for giving me the opportunity to host the show.
Adbhuthavaagi moodi bandide Sogasaada niroopane Makkalanthuu chennagi maadiddare Fine Heege idereethi innu chennagi moodibaruththirali
Nirupane akashavaani karyakramavannu nenapisuvantittu.makkalu Ella chennagi haadiddare.
Kannadapress.comge sada krishna ashirvada irli.beleyali belagali kannadapress.com
ಮುದ್ದು ಮಕ್ಕಳ ಮುದ್ದಾದ ಹಾಡುಗಳನ್ನು ಕೇಳಿ ತುಂಬಾ ಸಂತೋಷವಾಯಿತು.
Songs sung by priyanka very very nice.
ತೊದಲು ಧ್ವನಿಯಲ್ಲಿ ಸುಂದರವಾಗಿತ್ತು
All children have sung very well.nirupane was also very good.i enjoyed the programme.keep doing such programmes.
Very nice kids Krishna songs&dialogue and Super anchoring by Bharathi
very well anchored and children Krishna songs are very nice.
ಬಹಳ ಸುಂದರವಾದ ನಿರೂಪಣೆ