ಕಾವೇರಿ ನದಿ ಬತ್ತಿ ಹೋಗುತ್ತಿದೆ ಎಂಬ ಕೂಗು ಇಂದು, ನಿನ್ನೆಯದಲ್ಲ, ಕಳೆದ ಅನೇಕ ವರ್ಷಗಳಿಂದ ಇಂತಹ ಕೂಗು ಎದ್ದಿದೆ. ಇಂತಹ ಮಯದಲ್ಲಿಕಾವೇರಿ ನದಿಯನ್ನು ಪುನರುಜ್ಜೀವಗೊಳಿಸಲು ಎಲ್ಲರ ಬೆಂಬಲದೊಂದಿಗೆ ಧೃಡ ಸಂಕಲ್ಪದಿಂದ ಹೊರಟಿದ್ದಾರೆ ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು.
ಸದ್ಗುರು ಅವರ ನೇತೃತ್ವದಲ್ಲಿ ಕಾವೇರಿ ನದಿ ಪಾತ್ರದ ಕರ್ನಾಟಕ ಮತ್ತು ತಮಿಳುನಾಡು ಎರಡೂ ಕಡೆಗಳಲ್ಲಿಕಳೆದ ವರ್ಷ ಕಾವೇರಿ ಕೂಗು ಅಭಿಯಾನ ಆರಂಭವಾಗಿದೆ. ಸರಕಾರಗಳು, ಸಾಧು ಸಂತರು, ರೈತರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
ಕಾವೇರಿ ಕೂಗು ಅಭಿಯಾನ ಕಾವೇರಿ ನದಿಯನ್ನು ಉಳಿಸುವುದರ ಜೊತೆಗೇ ರೈತರಿಗೂ ಆರ್ಥಿಕವಾಗಿ ಆದಾಯ ತಂದುಕೊಡುವ ಯೋಜನೆಯಾಗಿದೆ. ಮರ ವ್ಯವಸಾಯದ ಈ ಅಭಿಯಾನದಲ್ಲಿರೈತರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕಾವೇರಿ ಕೂಗು ಪರಿಸರದ ಸಮಸ್ಯೆಗೆ ಆರ್ಥಿಕ ಪರಿಹಾರವಾಗಿದೆ.
ಇದು ಕಾವೇರಿ ಜಲಾನಯನ ಪ್ರದೇಶದಲ್ಲಿಮರ ವ್ಯವಸಾಯವನ್ನು ಉತ್ತೇಜಿಸುತ್ತದೆ. ಹೆಚ್ಚಿನ ಮೌಲ್ಯವಿರುವ 242 ಕೋಟಿ ಮರಗಳನ್ನು ಬೆಳೆಸಲು 50 ಲಕ್ಷ ರೈತರ ಕೈಗಳನ್ನು ಬಲಪಡಿಸುವ ಗುರಿ ಹೊಂದಿದೆ. ಇದು ಜಲಾನಯನ ಪ್ರದೇಶದ ಮೂರನೇ ಒಂದು ಭಾಗವನ್ನು ನೆರಳಿನಡಿಯಲ್ಲಿತಂದು ಮಣ್ಣಿನ ಆರೋಗ್ಯ ಮತ್ತು ಅಂತರ್ಜಲದ ಮಟ್ಟವನ್ನು ಮುಖ್ಯವಾಗಿ ಸುಧಾರಿಸುತ್ತದೆ. ಇದು ರೈತರ ಆದಾಯವನ್ನು 5 ರಿಂದ 7 ವರ್ಷಗಳಲ್ಲಿ3 ರಿಂದ 8 ಪಟ್ಟು ಹೆಚ್ಚಿಸಲಿದೆ . ಇದು ಈ ಅಭಿಯಾನದ ಪ್ರಮುಖ ಅಂಶಗಳು.
ನಿರೀಕ್ಷೆಯ ಪ್ರಕಾರ ಇದು 12 ಲಕ್ಷ ಕೋಟಿ ಲೀಟರ್‌ಗಳಷ್ಟು ನೀರನ್ನು ಜಲಾನಯನ ಪ್ರದೇಶದಲ್ಲಿಯೇ ಹಿಡಿದಿಟ್ಟುಕೊಂಡು ನೀರಿನ ಸ್ಥಾವರ ಹಾಗೂ ಕಾವೇರಿ ನದಿಯ ಹರಿವಿನ ಮೂಲವನ್ನು ವೃದ್ಧಿಸಲಿದೆ.
ಸದ್ಗುರು ಇತ್ತೀಚೆಗೆ ವೆಬಿನಾರ್‌ನಲ್ಲಿ ಕಾವೇರಿ ಕೂಗುವಿನ ಒಂದು ವರ್ಷದ ಪ್ರಗತಿಯ ಸಂಕ್ಷಿಪ್ತ ವಿವರವನ್ನು ನೀಡಿದರು. ರಾಜ್ಯ ಅರಣ್ಯ ಇಲಾಖೆ, ರೈತರು, ಕಾವೇರಿ ಕೂಗಿನ ಸ್ವಯಂ ಸೇವಕರು ಹಾಗೂ ಮಾಧ್ಯಮದವರಿಂದ ದೊರೆತ ಬೆಂಬಲದಿಂದ ಕರೋನಾ ಮಹಾಮಾರಿಯ ನಿರ್ಬಂಧಗಳ ಹೊರತಾಗಿಯೂ ಯೋಜನೆಯು ಸರಿಯಾದ ಮಾರ್ಗದಲ್ಲಿಸಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಕೃಷಿ ಇಲಾಖೆ ಸಿಬ್ಬಂದಿ ತುಂಬಾ ಉತ್ಸಾಹದಿಂದ ಈ ಅಭಿಯಾನವನ್ನು ಬೆಂಬಲಿಸಿದ್ದಾರೆ ಎಂದರು.ಕರ್ನಾಟಕ ಮತ್ತು ತಮಿಳುನಾಡಿನ ರೈತರಿಗೆ ಕಳೆದ ಎರಡು ತಿಂಗಳಿನಲ್ಲಿ61 ಲಕ್ಷ ಸಸಿಗಳನ್ನು ವಿತರಿಸಲಾಗಿದೆ. ಕರ್ನಾಟಕದಲ್ಲಿಯೇ 50 ಲಕ್ಷ ಸಸಿಗಳನ್ನು ವಿತರಿಸಲಾಗಿದೆ. ಕೊರೊನಾದಿಂದಾಗಿ ನಿರೀಕ್ಷಿಸಿದಷ್ಟು ಸಸಿಗಳನ್ನು ನೆಡೆಸಲು ಸಾಧ್ಯವಾಗಿಲ್ಲ. ಮಣ್ಣಿನ ಫಲವತ್ತತೆ ಉಳಿದು ಬೆಳೆಯಬೇಕೆಂದರೆ ಮರ ಸಸಿಗಳನ್ನು ನೆಡಬೇಕು. ರೈತರಿಗೆ ಮರ ವ್ಯವಸಾಯದಲ್ಲಿಆಸಕ್ತಿ ಕಂಡು ಬಂದಿದೆ ಎಂದು ವಿವರಿಸಿದರು ಸದ್ಗುರು.
ಕಾವೇರಿ ಕೂಗು ಯೋಜನೆಯು ವಿಶ್ವದ ಎಲ್ಲಉಷ್ಣವಲಯ ಪ್ರದೇಶಗಳ ನದಿಗಳ ಪುನರುಜ್ಜೀವನಕ್ಕೆ ಜಾಗತಿಕ ನೀಲನಕ್ಷೆ ತಯಾರಿಸುವ ಅವಕಾಶ. ಇದು ಅಲ್ಲಿವಾಸಿಸುವ 4.7 ಶತಕೋಟಿ ಜನರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂದರು.
ಮುಂದಿನ 12 ವರ್ಷಗಳಲ್ಲಿಕಾವೇರಿಯನ್ನು ತನ್ನ ನಿಜವಾದ ವೈಭವದಲ್ಲಿಪುನರ್ ಸ್ಥಾಪಿಸುವುದು ಈ ಇಡೀ ತಲೆಮಾರಿನ ಜವಾಬ್ದಾರಿಯಾಗಿದೆ ಎಂದರು ಸದ್ಗುರು.