20.6 C
Karnataka
Sunday, September 22, 2024

    ಕೋವಿಡ್ -19 ಲಸಿಕೆಯ ಶೀತಲ ಸಮರದಲ್ಲಿ ರಷ್ಯಾ ಗೆದ್ದು ಬಿಟ್ಟಿತೇ ?

    Must read

    ಮಹಾಯುದ್ಧಗಳ ಕಾಲ ಮುಗಿದಿದೆ. ಈಗೇನಿದ್ದರೂ ಸೈಬರ್, ಜೈವಿಕ, ವೈರಸ್ ಸಮರಗಳ ಯುಗ. ಸದ್ಯ ರಷ್ಯಾವು ಕೋವಿಡ್ -19 ವಿರುದ್ಧ ಮೊದಲ ಲಸಿಕೆಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೆ ಅಲ್ಲಿನ ಸರಕಾರದ ಅನುಮೋದನೆಯೂ ಸಿಕ್ಕಿದೆ. ಸ್ವತಃ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ತಮ್ಮ ಇಬ್ಬರು ಪುತ್ರಿಯರ ಪೈಕಿ ಒಬ್ಬಳ ಮೇಲೆ ಇದರ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಗಿದೆ. ಆಕೆ ಕೊರೊನಾ ವೈರಸ್ ವಿರುದ್ಧ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿದ್ದು ಸಾಬೀತಾಗಿದೆ ಎಂದು ಘೋಷಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಇದರ ಪರಿಣಾಮದ ದೃಢೀಕರಣ (ವೆರಿಫಿಕೇಶನ್) ಇನ್ನೂ ಆಗಿಲ್ಲ.

    ಆದರೆ, ಈ ಸಂದರ್ಭದಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ಸ್ಪುಟ್ನಿಕ್ –ವಿ ಹೆಸರಿನ ಈ ಲಸಿಕೆ ಮತ್ತೊಂದು ಶೀತಲ ಸಮರದ ಮುನ್ಸೂಚನೆಯೇ ಎಂಬುದು. ಇಲ್ಲಿ ಸ್ಪುಟ್ನಿಕ್ ಹೆಸರಿನ ಬಗ್ಗೆಯೇ ವಿಶ್ಲೇಷಣೆ ನಡೆಸದೆ ಮುಂದುವರಿಯುವಂತಿಲ್ಲ.

    ರಷ್ಯಾದ ತಂತ್ರಜ್ಞಾನದ ಪ್ರತೀಕ

    1957ರಲ್ಲಿ ರಷ್ಯಾ (ಆಗ ರಷ್ಯಾ ಯುಎಸ್ಎಸ್ಆರ್ ಆಗಿತ್ತು) ಸ್ಪುಟ್ನಿಕ್ ಎಂಬ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾಯಿಸಿತು. ಬಳಿಕ ಸ್ಪುಟ್ನಿಕ್ -2 (ಅದರ ಹೆಸರನ್ನು ಬಳಿಕ ಸ್ಪುಟ್ನಿಕ್ -3) ಎಂದು ಬದಲಾಯಿಸಲಾಯಿತು. ಅದರಲ್ಲಿ ಬಾಹ್ಯಾಕಾಶಕ್ಕೆ ಲೈಕಾ ಎಂಬ ನಾಯಿಯನ್ನು ರಷ್ಯಾ ಕಳುಹಿಸಿತು. ಇದಕ್ಕಾಗಿ  ರಷ್ಯಾದ ಬಾಹ್ಯಾಕಾಶ ಸಂಸ್ಥೆ ಬೀದಿ ನಾಯಿಯನ್ನೇ ಆರಿಸಿಕೊಂಡಿತ್ತು. ಇದರಲ್ಲಿ ಚಳಿ, ಬಿಸಿಲು, ಹಸಿವು ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೆಚ್ಚಿದೆ ಎಂಬುದು ಅದರ ನಿರ್ಣಯವಾಗಿತ್ತು. ಬಳಿಕ ಲೈಕಾ ಬಾಹ್ಯಾಕಾಶ ಪ್ರವಾಸ ಮುಗಿಸಿ ಯಶಸ್ವಿಯಾಗಿ ಭೂಮಿಗೆ ಇಳಿದಿದ್ದು ಇತಿಹಾಸ.

    ಆ ಸಂದರ್ಭದಲ್ಲೇ ವಿಶ್ವದ ದೊಡ್ಡಣ್ಣ ಎಂದು ಹೊಗಳಲ್ಪಡುತ್ತಿದ್ದ ಅಥವಾ ಗುರುತಿಸಿಕೊಂಡಿದ್ದ ಅಮೆರಿಕಗೆ ಹೊಟ್ಟೆ ಉರಿ ಆರಂಭವಾಯಿತು. ಇದರ ಪರಿಣಾಮವಾಗಿಯೇ ಚಂದ್ರನ ಅಂಗಳದಲ್ಲಿ ನೀಲ್ ಆರ್ಮ ಸ್ಟ್ರಾಂಗ್ ಇಳಿದಿದ್ದು. ಇದರ ಕುರಿತು ಸಾಕಷ್ಟು ವಿವಾದಗಳು ಇವೆ ಎಂಬುದು ನಿಜ. ಆದರೂ ಸ್ಪರ್ಧೆಗೆ ಬಿದ್ದಿದ್ದು ಅಂತೂ ಸುಳ್ಳಲ್ಲವಲ್ಲ ? ಹೀಗಾಗಿಯೇ ಲಸಿಕೆಗೆ ಸ್ಪುಟ್ನಿಕ್ –ವಿ ಎಂದು ರಷ್ಯಾ ಹೆಸರಿಟ್ಟಿರುವುದು ಕುತೂಹಲ ಮೂಡಿಸಿದೆ.

    ಲಸಿಕೆ ರಾಜಕೀಯ

    ಈಗ ಕೊರೊನಾ ಎಂಬ ಮಹಾಮಾರಿ (ಘೋಷಿತ) ವಿಶ್ವದೆಲ್ಲೆಡೆ ಹಾವಳಿ ಎಬ್ಬಿಸುತ್ತಿರುವ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷರು ತಾವು ಜಗತ್ತಿನ ಮೊದಲ ಲಸಿಕೆ ಸಿದ್ಧ ಪಡಿಸಿದ್ದೇವೆ. ಮಾತ್ರವಲ್ಲ ಅದನ್ನು ಸ್ವತಃ ತಮ್ಮ ಮಗಳ ಮೇಲೆಯೇ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ ಎಂದು ಘೋಷಿಸಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಾಕೆ ಮರಿಯಾ ಪುಟಿನ್ ಇನ್ನೊಬ್ಬಾಕೆ ಯೆಕಟೆರಿನಾ ಪುಟಿನ್. ಇವರ ಪೈಕಿ ಯಾರ ಮೇಲೆ ಇದರ ಪ್ರಯೋಗ ಆಗಿದೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲವೇ ಇಲ್ಲ. ಆದರೆ, ಸ್ಪುಟ್ನಿಕ್ –ವಿ ಎಂದು ಹೆಸರಿಡುವ ಮೂಲಕ ಮತ್ತೊಂದು ಸುತ್ತಿನ ಪರೋಕ್ಷ ಶೀತಲ ಸಮರಕ್ಕೆ ನಾಂದಿ ಹಾಡಿದ್ದಾರೆಯೇ ಎಂಬ ಅನುಮಾನ ಉದ್ಭವ ಆಗದಿರುವುದಿಲ್ಲ.

    ಏನೇ ಆಗಲಿ, ಸದ್ಯದ ಮಟ್ಟಿಗೆ ಮನುಕುಲಕ್ಕೆ ಶಾಪವಾಗಿ ದೇಶ, ವಿಶ್ವದ ಆರ್ಥಿಕತೆಯನ್ನೇ ಹದಗೆಡುವಂತೆ ಮಾಡಿದ ಕೋವಿಡ್ -19 ಸಾಂಕ್ರಾಮಿಕವನ್ನು ತಡೆಯುವ ನಿಟ್ಟಿನಲ್ಲಿ ಮೊದಲ ಪ್ರಯತ್ನವಂತೂ ಆಗಿದೆ. ಆದರೆ, ಇದರ ನಡುವೆ ಇನ್ನೆಷ್ಟು ರಾಜಕಾರಣ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    ವಾಗೀಶ್ ಕುಮಾರ್ ಜಿ ಎ
    ವಾಗೀಶ್ ಕುಮಾರ್ ಜಿ ಎ
    ಪತ್ರಕರ್ತ, ಸಮಕಾಲೀನ ಸಂಗತಿಗಳ ಬಗ್ಗೆ ಆಸಕ್ತಿ
    spot_img

    More articles

    6 COMMENTS

    1. COVID-19 ವಿರುದ್ಧ ಲಸಿಕೆ ತಯಾರಿಸಲು ಅನೇಕ ದೇಶಗಳು ಸ್ಪರ್ಧಾತ್ಮಕವಾಗಿ ಪ್ರಯತ್ನಿಸುತ್ತಿವೆ.
      ಭಾರತವೂ ಸೇರಿದಂತೆ ಎಲ್ಲಾ ದೇಶಗಳು ಮೊದಲು ಲಸಿಕೆ ಬಿಡುಗಡೆ ಮಾಡುವ ಧಾವಂತದಲ್ಲಿವೆ. ನಿಯಮಿತವಾಗಿ, ಯಾವುದೇ ಬಯೋಮೆಡಿಕಲ್ ಉತ್ಪನ್ನವು ಮಾರ್ಕೆಟಿಂಗ್ ಅನುಮೋದನೆ ಪಡೆಯಲು 10-15 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಸಹಜವಾಗಿ, ಹೊಸ ತಳಿಯ ಕರೋನವೈರಸ್ ತ್ವರಿತಗತಿಯಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಡಿಸುವ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಆದರೆ, COVID-19 ಅನ್ನು ತಡೆಗಟ್ಟುವಲ್ಲಿ ರಷ್ಯಾದ ಲಸಿಕೆ ಎಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ಲಸಿಕೆ ಯಾವುದೇ ದೇಶದಿರಬಹುದು, ಕೋವಿಡ್ -೧೯ ಮಹಾಮಾರಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿ ಎನ್ನುವುದೇ ಎಲ್ಲರ ಆಶಯ.

    2. COVID-19 ವಿರುದ್ಧ ಲಸಿಕೆ ತಯಾರಿಸಲು ಅನೇಕ ದೇಶಗಳು ಸ್ಪರ್ಧಾತ್ಮಕವಾಗಿ ಪ್ರಯತ್ನಿಸುತ್ತಿವೆ.
      ಭಾರತವೂ ಸೇರಿದಂತೆ ಎಲ್ಲಾ ದೇಶಗಳು ಮೊದಲು ಲಸಿಕೆ ಬಿಡುಗಡೆ ಮಾಡುವ ಧಾವಂತದಲ್ಲಿವೆ. ನಿಯಮಿತವಾಗಿ, ಯಾವುದೇ ಬಯೋಮೆಡಿಕಲ್ ಉತ್ಪನ್ನವು ಮಾರ್ಕೆಟಿಂಗ್ ಅನುಮೋದನೆ ಪಡೆಯಲು 10-15 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಸಹಜವಾಗಿ, ಹೊಸ ತಳಿಯ ಕರೋನವೈರಸ್ ತ್ವರಿತಗತಿಯಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಡಿಸುವ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಆದರೆ, COVID-19 ಅನ್ನು ತಡೆಗಟ್ಟುವಲ್ಲಿ ರಷ್ಯಾದ ಲಸಿಕೆ ಎಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ಲಸಿಕೆ ಯಾವುದೇ ದೇಶದಿರಬಹುದು, ಕೋವಿಡ್ -೧೯ ಮಹಾಮಾರಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿ ಎನ್ನುವುದೇ ಎಲ್ಲರ ಆಶಯ. ವಾಗೀಶ್ ಕುಮಾರ್ ಜಿ ಎ . ಅವರ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ.

    3. ಬಹುಷಃ ನನಗನ್ನಿಸುವುದು, ರಷ್ಯಾ ವ್ಯಾಕ್ಸಿನ್ ಇನ್ನೂ human trial ಹಂತದಲ್ಲಿದ್ದು, ಅಧ್ಯಕ್ಷ ಪುಟಿನ್ ಅವರ ಮಕ್ಕಳು ಅದರಲ್ಲಿ volunteers for trial ಆಗಿರಬಹುದು. ವ್ಯಾಕ್ಸಿನ್ ಕೊಟ್ಟ ನಂತರ ಜ್ವರ ಕಮ್ಮಿ ಆಗಿದೆ ಅನ್ನುತ್ತಾರೆ. ಈ ವಿಷಯ ನಗು ಬರುವಂತಿದೆ. ಯಾಕೆಂದರೆ ಯಾವುದೇ ವ್ಯಾಕ್ಸಿನ್ ಅನ್ನು ರೋಗ ತಡೆಗಟ್ಟುವುದಕ್ಕೆ ಮಾತ್ರ ಉಪಯೋಗಿಸಬಹುದು. ರೋಗ ಚಿಕಿತ್ಸೆಗೆ ಅಲ್ಲ.

    4. ಡಾ.ಪ್ರಹ್ಲಾದ್ ರವರ comment ಸರಿ ಎನ್ನಿಸಿತು . Vaccine ರೋಗ ತಡೆಗಟ್ಟಲು, ರೋಗ ಚಿಕಿತ್ಸೆ ಗಲ್ಲ.

    LEAVE A REPLY

    Please enter your comment!
    Please enter your name here

    Latest article

    error: Content is protected !!