19.9 C
Karnataka
Sunday, September 22, 2024

    ಮೌನದ ಪ್ರೀತಿ ಮಾತಾದಾಗ

    Must read

    ಅನೇಕ ಹೊಸ ಲೇಖಕರು ಕನ್ನಡಪ್ರೆಸ್. ಕಾಮ್ ನ ಮೇಲೆ ಪ್ರೀತಿ ಇಟ್ಟು ತಮ್ಮ ಬರಹಗಳನ್ನು ಕಳಿಸುತ್ತಿದ್ದಾರೆ. ತಮ್ಮ ಬರಹಗಳು ಫೇಸ್ ಬುಕ್ ಆಚೆಗಿನ ಅನೇಕ ಓದುಗರನ್ನು ಸೇರಬೇಕೆಂಬ ಬಯಕೆ ಅವರದ್ದು . ಹೀಗಾಗಿ ಇಂಥ ಲೇಖನಗಳಿಗೆ ಅವಕಾಶ ನೀಡಲು ಈ ವೇದಿಕೆ ಆರಂಭಿಸುತ್ತಿದ್ದೇವೆ. ಇದು ನಿಮ್ಮದೇ ವೇದಿಕೆ. ನಿಮ್ಮ ಬರಹಗಳನ್ನು [email protected] ಇಲ್ಲಿಗೆ ಇ ಮೇಲ್ ಮಾಡಿ

    ಮಮತಾ ಕುಲಕರ್ಣಿ

    ಧಾರವಾಡದ ಮಮತಾ ಕುಲಕರ್ಣಿ ಓದಿದ್ದು ಸಿವಿಲ್  ಎಂಜಿನಿಯರಿಂಗ್. ಸಧ್ಯ ಇರುವುದು ದುಬೈ. ಮೊದಲು ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಆಗಿ ವೃತ್ತಿಯಲ್ಲಿದ್ದು ಈಗ ಹೋಮ್ ಮೇಕರ್ .ಕವನ, ಸಾಹಿತ್ಯ ರಚನೆ ಹವ್ಯಾಸ . ಬರಹ ಕೌಶಲ್ಯವನ್ನು ಬೆಳೆಸಿಕೊಳ್ಳುವ ಆಸಕ್ತಿ. ಪತಿ ವಿಜಯ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

    ನೂರಾರು ಬಣ್ಣ ಬಣ್ಣದ ಮನಸ್ಸುಗಳಿಂದ ಕೂಡಿದ ಈ ಜಗತ್ತಲ್ಲಿ ಪ್ರೀತಿಯೆಂಬ ಸಿಂಚನ ಇಲ್ಲದೆ ಇದ್ದರೆ ಏನು ಚೆನ್ನ. ಪ್ರೀತಿಯೆಂದರೆ ಕೇವಲ ಯೌವನಕ್ಕೆ ಮಾತ್ರ ಸೀಮಿತವಲ್ಲ.

    ಪೋಷಕರ ಮಕ್ಕಳ ಪ್ರೀತಿ, ಅಣ್ಣ-ತಂಗಿ ಅಕ್ಕ ತಮ್ಮ, ಸ್ನೇಹಿತರ ನಡುವೆ….. ಹೀಗೆ ಪ್ರತಿಯೊಂದು ಜೀವಿಗಳ ಮನದ ಮೂಲೆಯಲ್ಲಿ ಪ್ರೀತಿಯು ಅವಿತು ಕುಳಿತಿರುತ್ತದೆ. ಹಾಗೆ ನೋಡಿದ್ರೆ ಮೂಕಪ್ರಾಣಿಗಳ ಮಧ್ಯೆಯು ಪ್ರೀತಿಯ ಬಾಂಧವ್ಯ ಇರುತ್ತೆ. ಅವು ಕೂಡ ತನ್ನದೇ ಆದ  ರೀತಿಯಲ್ಲಿ ವ್ಯಕ್ತಪಡಿಸುತ್ತವೆ. ಆದರೆ ಅತೀ ಬುದ್ಧಿಜೀವಿ ಪ್ರಜ್ಞಾವಂತ ಪ್ರಾಣಿ ಎನಿಸಿಕೊಂಡ ಮನುಷ್ಯ ತನ್ನಲ್ಲಿ ಇತರರ ಪರ ಇರುವ ಪ್ರೇಮ ಭಾವನೆಯನ್ನು ಕೇವಲ ಮನಸ್ಸಲ್ಲಿ ಮುಚ್ಚಿಟ್ಟು ವ್ಯಕ್ತಪಡಿಸದೇ ಪ್ರಯತ್ನಿಸದಿದ್ದರೆ ಎಷ್ಟೊ ಸಾರಿ ಸಂಬಂಧಗಳು ಮೂಕಸನ್ನೆಯಲ್ಲಿ ಬತ್ತಿ ಹೋಗುತ್ತವೆ.

    ಎಷ್ಟೋ ಸಾರಿ ಅತೀ ಚಿಕ್ಕ ವಿಷಯಗಳಲ್ಲಿ ವಿಶ್ವಾಸದ ಮಾತುಗಳಿಂದ ಬಂಧಗಳ ಬುಡಗಳು ಗಟ್ಟಿಯಾಗುತ್ತವೆ. ಎಷ್ಟೋ ಕನಸುಗಳಿಗೆ ಹುಮ್ಮಸ್ಸು ನೀಡುತ್ತವೆ. ಮನೆಯ ಎಲ್ಲರನ್ನೂ  ಪ್ರೀತಿಸುವ ಗೃಹಿಣಿಗೆ ತನ್ನ ಪತಿ ಬಂದು ನಿನ್ನ ಮನಸ್ಸು ತುಂಬಾ ಒಳ್ಳೇದು ಅಂತ ಅಂದರೆ ಸಾಕು ಅವಳ ನಗುವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ವಯಸ್ಸಾದವರ ಜೊತೆ ನಗುನಗುತ್ತ ಏನೇ ಮಾತನಾಡಿದರು ಅವರಿಗೆ ಖುಷಿ. ಹೀಗೆ ಸಹಸ್ರಾರು ಸಂದರ್ಭಗಳಲ್ಲಿ ಮಾತಿನಿಂದ ನಿಮ್ಮ ಭಾವನೆಗಳನ್ನು ಪ್ರೇಮವನ್ನು ಹೇಳಿಕೊಂಡರೆ ನಿಮ್ಮ ಖುಷಿ ದ್ವಿಗುಣವಾಗುವುದಲ್ಲದೆ, ಸಂಬಂಧಗಳು ಚಿರಕಾಲ ಆನಂದದಿಂದ ಇರುತ್ತವೆ.

    ಸಂಕಷ್ಟದ ಸಮಯದಲ್ಲಿ ಸಾಂತ್ವನ ಹಾಗೂ ಪ್ರೀತಿಯಿಂದ ಆಡಿದ ಎರಡು ಮಾತುಗಳು ಎಷ್ಟೋ ಬತ್ತಿಹೋದ ದಣಿದ ಮನಸ್ಸನ್ನು ಪುಳಕಗೊಳಿಸುತ್ತವೆ. ಅದಕ್ಕೆ ‘ಮಧುರವಾದ ಪ್ರೀತಿಯ ಮಾತುಗಳನ್ನು ಹೇಳಿ ನಿಮ್ಮ ನಾಲಿಗೆಯೊಳ್’ ಎಂಬುದು ಒಂದು ಅನಿಸಿಕೆ. 

    Photo by Jasmine Carter from Pexels

    spot_img

    More articles

    31 COMMENTS

    1. ಪ್ರೀತಿ ಎಂಬುದರ ನಾನಾ ಆಯಾಮಗಳನ್ನು ಲೇಖಕಿ ಸೊಗಸಾಗಿ ವಿವರಿಸಿದ್ದಾರೆ.

    2. ನಿಜ… ಪ್ರೀತಿಗೆ ನಾನಾರ್ಥ.. ಪ್ರೀತಿ ನಮಗೆ ಬೇಕು ಅಂದ್ರೆ ನಾವು ಪ್ರೀತಿಯನ್ನು ಕೊಡ ಬೇಕು ಎಂದು ಮಮತಾರವರು ಬಹಳ ಸೊಗಸಾಗಿ ಬರೆದಿದ್ದಾರೆ.

    3. ನಿಜ.. ಪ್ರೀತಿಗೆ ನಾನಾರ್ಥಗಳು ಇವೆ. ಪ್ರೀತಿಯನ್ನು ಕೊಟ್ಟು ಪಡೆದಾಗಲೇ ಸಾರ್ಥಕತೆ ಎಂಬುದನ್ನು ಮಮತಾರವರು ಬಹಳ ಚೆನ್ನಾಗಿ ಬರೆದಿದ್ದಾರೆ

    4. ಹೌದು…ಪ್ರೀತಿ ವ್ಯಕ್ತ ಆಗುವುದು ಮುಖ್ಯ.
      ಆದರೆ ಅದಕ್ಕೆ ಮಾತೇ ಬೇಕೆ.?
      ಮೌನದಲ್ಲೂ ಪ್ರೀತಿ ವ್ಯಕ್ತ ಪಡಿಸ ಬಹುದಲ್ಲವೆ?
      ಕಣ್ಣೋಟ ದಲ್ಲೂ ಪ್ರೀತಿ ವ್ಯಕ್ತ ವಾಗದೆ?

      ಕೆ ಎಸ್ ನ ಅವರು
      ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ…
      ಅಂದಿದ್ದರು…

      ಬರಹ ಚೆ ನ್ನಾಗಿದೆ. ಆದರೆ ಬಹಳ ಚಿಕ್ಕದಾಯಿತು ಅಲ್ಲವೇ?

      • ಧನ್ಯವಾದಗಳು ಸರ್.

        ನೀವು ಹೇಳುವುದು ನಿಜ. ಆದರೆ ಮೌನದ ಪ್ರೀತಿ ಒಂದು ಗುಲಾಬಿ ಹೂ ,, ಆದರೆ ವ್ಯಕ್ತಪಡಿಸುವ ಪ್ರೀತಿ ಗುಲಾಬಿ ಹೂವಿನ ಗಿಡದಂತೆ ಅನ್ನೊ ಭಾವನೆಯಿಂದ ಬರೆದಿದ್ದೇನೆ. .

    5. One of the nature gift is Love…Love is not expression…love is not feeling…it will be only admired… Beautiful article on love…Must read article!!!

    6. Words wonderfully framed Mamatha.. keep going and growing 👍 write and post as many as possible and keep inspiring… really feel proud being your friend.. loads of love

    7. ಚಿಕ್ಕದಾದರೂ ಚೊಕ್ಕ ಬರಹ. ಬೇಗ ಮುಗಿಯಿತಲ್ಲ ಎಂಬ ಬೇಸರವೂ ಅಷ್ಟೇ ಬೇಗ ಮರೆಯಾಗುತ್ತದೆ.

    8. ನಮಸ್ಕಾರ ಮಮತಾ

      ಪ್ರೀತಿ ಪ್ರೇಮದ ಪ್ರಾಮುಖ್ಯತೆ ಶಬ್ದಗಳಿಂದ ಪೋಣಿಸಿ ಉಣಬಡಿಸಿದ್ದೀರಿ.. ತಮ್ಮ ಸಾಹಿತ್ಯ ಕೃಷಿ ನಿರಂತರವಾಗಿ ಸಾಗಲಿ..

    9. Each word in the article is worth ton of gold and each sentence is pearls of wisdom. Nice words from near and dear is always soothing and Ms.Mamatha Kulkarni has written an insightful and inspiring article.

    10. Spectacular.!
      Of all those ambiguous intellectuals out there trying to integrate the true meaning of love so far. It’s inevitably the best read.
      Pat on your shoulder mamata.😊👏
      Well written..!!
      Keep us enlightening..!!🤗

    11. ತುಂಬಾ ಚೆನ್ನಾಗಿದೆ ಪ್ರತಿಯೊಬ್ಬರು ನಿಜ ಜೀವನದಲ್ಲಿ ಪಾಲಿಸವುದು ಕಷ್ಟ ಆದ್ರೂ ಪ್ರಯತ್ನಪಟ್ಟರೆ ಯಾವ್ದು ಕಷ್ಟ ಇಲ್ಲಾ

      ಬರವಣಿಗೆ ಮುಂದುವರೆಯಲಿ…

      ಶಿವಪ್ರಕಾಶ್

    12. ಪ್ರೀತಿಯೇ ಜೀವಂತಿಕೆಯ ಮೂಲ ಹಿಂಜರಿಯದೆ ಹೇಳಿ ಪ್ರೀತಿಯನು ಪದಗಳಲಿ ಎಂದು ಮೂಕ ಪ್ರೀತಿ ವೇದನೆಗೆ ಮುಲಾಮು ನೀಡಿದ್ದಾರೆ ಲೇಖಕಿ. ಹೇಳದೇ ಮನಸಲ್ಲಿಟ್ಟುಕೊಂಡು ಅರ್ಥ ಮಾಡ್ಕೋಬೇಕು ಅಂತ ಅರ್ಧ ಸಮಯ ವ್ಯರ್ಥ ಮಾಡ್ಕೊಳ್ಳದೆ ತುಂಬು ಜೀವನ ಸಾಗಿಸಲು ಅತ್ಯುತ್ತಮ ಸಲಹೆ ನೀಡಿದ್ದೀರ ಧನ್ಯವಾದಗಳು ಮೇಡಂ

    LEAVE A REPLY

    Please enter your comment!
    Please enter your name here

    Latest article

    error: Content is protected !!