17.5 C
Karnataka
Sunday, November 24, 2024

    ಅರಿಷಿಣ ಗಣಪ,ಪರಿಸರ ಗಣಪ, ನೀವೇ ಮಾಡಿದ ಗಣಪ

    Must read

    ಕೋವಿಡ್ ಮಧ್ಯೆಯೇ ಗಣೇಶ ಚತುರ್ಥಿ ಆಗಮಿಸುತ್ತಿದೆ. ಈ ಬಾರಿ ಯಾವ ಹಬ್ಬದಲ್ಲೂ ಅಂಥ ಸಂಭ್ರಮ ಕಾಣುತ್ತಿಲ್ಲ. ಯುಗಾದಿಯಿಂದ ಆರಂಭವಾದ ಕೋವಿಡ್ ಗದ್ದಲ ಗಣೇಶ ಹಬ್ಬ ಬಂದರೂ ಮುಗಿಯುವಂತೆ ಕಾಣುತ್ತಿಲ್ಲ. ಗಣೇಶ ಹಬ್ಬವೆಂದರೆ ಅದೊಂದು ಸಾರ್ವಜನಿಕ ಉತ್ಸವ.  ಬೀದಿ ಬೀದಿಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ ಸಂಭ್ರಮಿಸುವ ಪರಂಪರೆ ಭಾರತೀಯರದ್ದು. ಈ ಬಾರಿ ಸರಕಾರ ಅದಕ್ಕೆ ಕೆಲವು ನಿಯಮಗಳನ್ನು ರೂಪಿಸಿ ಅನುಮತಿ ನೀಡಿದೆ. ಕೋವಿಡ್ ಕಾರಣದಿಂದ ಹೆಚ್ಚು ಜನ ಸೇರಬಾರದೆಂತಲೂ. ಮೂರ್ತಿಯನ್ನು ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆ ಬೇಡ ಎಂತಲೂ ಹೇಳಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿ ಪ್ರತಿಷ್ಟಾಪಿಸುವ ಗಣೇಶ ಮೂರ್ತಿಗಳನ್ನು ಮನೆ ಮನೆಗಳಲ್ಲೇ ವಿಸರ್ಜಿಸುವಂತೆಯೂ ಸಲಹೆ ನೀಡಿದೆ.

    ಅರಿಷಿಣ ಗಣಪತಿ

    ಪರಿಸರ ನಿಯಂತ್ರಣ ಮಂಡಳಿ ಈ ಬಾರಿ ಅರಿಷಿಣ ಗಣಪತಿಯ ಕಾನ್ಸೆಪ್ಟನ್ನು ಹರಿಯ ಬಿಟ್ಟಿದೆ. ಆದರೆ ಎಲ್ಲರಿಗೂ ಗಣೇಶನ ಆಕಾರ ಮಾಡಲು ಬರಬೇಕಲ್ಲ. ಅರಿಶಿಣ ಜೊತೆ ಒಂದಿಷ್ಟು ಮೈದಾ ಮತ್ತು ಸಕ್ಕರೆ ಸೇರಿಸಿದರೆ  ಮೂರ್ತಿ ಮಾಡಲು ಸುಲಭವಾಗುತ್ತದೆ. ಪರಿಸರ ನಿಯಂತ್ರಣ ಮಂಡಳಿಯ ಈ  ವಿಡಿಯೋ ಗಮನಿಸಿ.

    ಈ ಬಾರಿ ಕೋವಿಡ್ ಕಾರಣದಿಂದ ಪೇಟೆಯಿಂದ ಗಣೇಶನ್ನು ಮನೆಗೆ ತರಲು ಹಲವರು ಹಿಂಜರಿಯುತ್ತಿದ್ದಾರೆ. ಕೆಲವವರಂತೂ ಒಂದು ವಾರ ಮೊದಲೇ ಗಣೇಶನನ್ನು ಮನೆಗೆ ತಂದು ಬಿಟ್ಟಿದ್ದಾರೆ. ಗಣೇಶ ಹಬ್ಬಕ್ಕೆ ತಿಂಗಳ ಮುಂಚೆಯೇ ಬೀದಿ ಬದಿಯಲ್ಲಿ ಕಾಣುತ್ತಿದ್ದ ಗಣೇಶ ಮೂರ್ತಿಗಳೂ ಈ ಬಾರಿ ಕಾಣುತ್ತಿಲ್ಲ. ಅನೇಕರು ಆನ್ ಲೈನ್ ನಲ್ಲಿ ಸಿಗುವ  ಡೂ ಇಟ್ ಯುವರ್ ಸೆಲ್ಫ್ ಕಿಟ್ ಗಳನ್ನು ಮನೆಗೆ ತರಿಸಿಕೊಂಡು ಅದರಿಂದಲೇ ಗಣೇಶನ್ನು ತಯಾರಿಸಿಕೊಳ್ಳುತ್ತಿದ್ದಾರೆ.

    ಮನೆ ಮನೆ ಗಣೇಶಕ್ಕೆ ಬೇಡಿಕೆ

    ಶಿವಕುಮಾರ ಹೊಸಮನಿ

    ಕೋವಿಡ್ ಕಾರಣದಿಂದ ಈ ಬಾರಿ ಸಾರ್ವಜನಿಕ ಗಣೇಶೋತ್ಸವಗಳ ಸಂಖ್ಯೆ ಕಡಿಮೆಯಾಗಿರುವುದು ಹಾಗೂ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಿರುವುದರಿಂದ ಮನೆಯಲ್ಲಿ ಗಣೇಶನ್ನು ಇಟ್ಟು ಪೂಜಿಸುವವರ ಸಂಖ್ಯೆ ಹೆಚ್ಚಾಗಿದೆ  ಎಂದು ಸಮರ್ಪಣಾ ಸಂಸ್ಥೆಯ ಶಿವಕುಮಾರ ಹೊಸಮನಿ ಅಭಿಪ್ರಾಯ ಪಡುತ್ತಾರೆ.

    ಕುಂಬಾರಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅವರು ಅನೇಕ ವರ್ಷಗಳಿಂದ ಕುಂಬಾರರರನ್ನು  ಬೆಂಗಳೂರಿಗೆ ಕರೆಸಿ ಅವರಿಂದ  ಪರಿಸರ ಗಣೇಶ ಮೂರ್ತಿಗಳನ್ನು ಮಾಡಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡುತ್ತಿದ್ದಾರೆ.

    ಸರಕಾರ ಈ ಬಾರಿ ಅರಿಶಿಣ ಗಣಪನನ್ನು ಮನೆಯಲ್ಲೇ ಮಾಡಿ ಪೂಜಿಸಿ ಎನ್ನುತ್ತಿದ್ದಾರೆ. ಅದು ಕೇಳಲು ಚೆನ್ನಾಗಿದೆ. ಆದರೆ ಅನೇಕರು  ಅರಿಶಿಣದಿಂದ ಮೂರ್ತಿ ಮಾಡಲು ಹೋಗಿ ಅದು ರೂಪ ಪಡೆಯದಿದ್ದಾಗ ನಿರಾಶರಾಗಿದ್ದಾರೆ. ಹೀಗಾಗಿ ನಮ್ಮ ಬಳಿ ಬರುತ್ತಿದ್ದಾರೆ. ನಾವು ಮಣ್ಣನಿಂದ ಮಾಡಿದ ಗಣೇಶ ಮೂರ್ತಿಗೆ ಅರಿಷಿಣ ಲೇಪನ ಮಾಡುತ್ತಿದ್ದೇವೆ ಇದು ಕೂಡ ಹಲವರಿಗೆ ಇಷ್ಟವಾಗಿದೆ ಎನ್ನುತ್ತಾರೆ ಅವರು . ಅದೇ ರೀತಿ ಸ್ಚೀಲ್ ಬಟ್ಟಲಿನಲ್ಲಿ ಗಣೇಶನನ್ನು ಮಾಡಿ ಪೂಜಿಸಿ ಅಲ್ಲಿಯೇ ವಿಸರ್ಜಿಸುವ ಕಳೆದ ವರ್ಷದ ಪದ್ಧತಿ ಈ ವರುಷವೂ ಜನಪ್ರಿಯವಾಗಿದೆ ಎನ್ನುತ್ತಾರೆ ಅವರು. ವಿಸರ್ಜಿಸಿದ ನಂತರ ಅದರಲ್ಲೇ ಸಸಿ ಬೆಳೆಯುತ್ತದೆ

    ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮನೆಯಲ್ಲೇ ಇಟ್ಟು ಪೂಜಿಸಲು ಬಯಸುವವರ ಸಂಖ್ಯೆ ಹೆಚ್ಚಾಗಿದೆ .ಜೊತೆಗೆ ಕೆಲವು ಆಪರ್ಟ್ಮೆಂಟ್ ಗಳಿಗೆ ಹೋಗಿ ಗಣೇಶ ಮೂರ್ತಿಯನ್ನ ತಯಾರಿಸಿಕೊಡುವ ಕೆಲಸವನ್ನು ಅವರ ತಂಡ ಮಾಡಿದೆ.

    ಗಣಪ ಹೇಗಾದರು ಇರಲಿ ಭಕ್ತಿ ಮುಖ್ಯ

    ಆನಂದ ತೀರ್ಥಾಚಾರ್.

    ಈ ಬಾರಿ ದಾವಣಗೆರೆಯಲ್ಲಿ ದೊಡ್ಡ  ಮೂರ್ತಿಗಳ ಸಂಖ್ಯೆ ಕಡಿಮೆ ಇದೆ .ಆದರೆ ಮನೆ ಮನೆಗಳಲ್ಲಿ ಗಣೇಶ ನ್ನು ಪೂಜಿಸುವ ಪದ್ಧತಿ ಅಬಾಧಿತವಾಗಿ ಮುಂದುವಿರಿಯಲಿದೆ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ಸಿ.ಕೆ ಆನಂದ ತೀರ್ಥಾಚಾರ್.

    ಅರಿಷಿಣದಲ್ಲಿ ಮನೆಯಲ್ಲೇ ಮಾಡುವ ಗಣಪತಿ ರೂಪ ಪಡೆಯುವುದು ಕಷ್ಟ. ಅದಕ್ಕೆ ಗಣಪನನ್ನು ಮಾಡುವ ಕಲೆ ಗೊತ್ತಿರಬೇಕು.  ಗೋಮಯಕ್ಕೆ ಗರಿಕೆಯನ್ನು ಸೇರಿಸಿ ಗಣಪನೆಂದು ಪೂಜಿಸುವ ಪದ್ಧತಿ ನಮ್ಮಲ್ಲಿಇದೆ. ‌ಇದನ್ನು ಪೂಗಿ ಗಣಪ ಎಂದು ಕರೆಯುತ್ತಾರೆ . ಇನ್ನೂ ಕೆಲವು ಶುಭ ಕಾರ್ಯಗಳಲ್ಲಿ  ಅಡಿಕೆಯನ್ನೇ ಗಣಪನೆಂದು ಭಾವಿಸುವ ಪದ್ಧತಿ ಇದೆ . ಹೀಗಾಗಿ ಅನಿವಾರ್ಯ  ಸಂದರ್ಭದಲ್ಲಿ ನಿಶ್ಚಿತ ಆಕಾರ ಪಡೆಯದಿದ್ದರೂ ಭಕ್ತಿಯಿಂದ ಪೂಜಿಸಬಹುದು ಎನ್ನುತ್ತಾರೆ ಅವರು.

    ಈ ಬಾರಿಯದು ವಿಶೇಷ ಸಂದರ್ಭ. ಸರಕಾರ ರೂಪಿಸಿದ ಸುರಕ್ಷಿತ ನಿಯಮಗಳನ್ನು ಪಾಲಿಸುವುದರ ಜೊತೆಗೆ  ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ಕೋವಿಡ್ ಬೇಗ ದೂರವಾಗಿ ಎಂದಿನಂತೆ ಎಲ್ಲವೂ ಸಹಜ ಸ್ಥಿತಿಗೆ ಬಹು ಬೇಗ ಮರಳಲಿ ಎಂದು ಆಶಿಸೋಣ.

    spot_img

    More articles

    7 COMMENTS

    1. ಆಚರಣೆ ಹೇಗಾದರು ಇರಲಿ ಭಕ್ತಿ ಮುಖ್ಯ ಎಂಬ ಮಾತು ಅಕ್ಷರಶಃ ಸತ್ಯ

    2. ಆಚರಣೆ ಹೇಗಾದರು ಮಾಡೋಣ.ಆಡಂಭರವಿಲ್ಲದೆ ಸರಳವಾಗಿ ಆಚರಿಸೋಣ. ಗಣಪತಿ ಮಾಡುವವರಿಗೆ ಈ ಬಾರಿ ಕಷ್ಟವಾಗಿದೆ. ಆದರೆ ಆರೋಗ್ಯ ಮುಖ್ಯ. ಯಾವ ಗಣಪ ಬಂದರೂ ಖುಷಿಯಿಂದ ಪೂಜೆ ಮಾಡೋಣ

    3. ಅರಿಶಿನ ಗಣಪತಿ ಮಾಡುವ ವಿಧಾನ ಸರಳವಾಗಿದೆ. ಈ ಬಾರಿ ಆದಷ್ಟು ಸರಳವಾಗಿ ಹಬ್ಬದ ಆಚರಣೆ ಮಾಡುವುದು ಸಂಧರ್ಭಕ್ಕೆ ತಕ್ಕಂತೆ ಎಲ್ಲರೂ ಸರಳವಾಗಿ ಆಚರಿಸುವುದು ಸೂಕ್ತ . ಸಮಯೋಚಿತ ಲೇಖನ .

    4. 🌿😷 ಸಮಯೋಚಿತ ಲೇಖನ. ” ಕೋವಿಡ್ ಕಾರಣದಿಂದ, 2020ರ ‘ಎಲ್ಲವೂ ಇಲ್ಲ’ ಗಳ ನಡುವೆ ‘ಮಿನಿ ಗಣಪ ‘ ನ ಪ್ರತಿಷ್ಟಾಪನೆ & ಸರಳ ಆಚರಣೆಯ ಮಾಗ೯ಸೂಚಿ ಕಡತಕ್ಕೆ ಅಂಕಿತ ಹಾಕಿದ ‘ರಾಜಾಹುಲಿ’ ಗೆ ಧನ್ಯವಾದಗಳು.

    5. ಆಧುನಿಕ ಸಮಾಜಕ್ಕೆ ಇದು ಸರಳವಾದ ಹಬ್ಬದ ಹಾಗೆ ಕಂಡರೂ ಇದೇ ನಿಜವಾದ ಹಬ್ಬದ ಆಚರಣೆ ವಿಧಾನ. ಹಬ್ಬಕ್ಕೆ ತನ್ನದೇ ಆದ ಸಂಪ್ರದಾಯ ವಿಧಿ ವಿಧಾನಗಳು ಇವೆ. ಅವುಗಳ ಪಾಲನೆಯಾಗಬೇಕು. ಹೊರತು ಆಡಂಬರ ಅನವಶ್ಯಕ.

    LEAVE A REPLY

    Please enter your comment!
    Please enter your name here

    Latest article

    error: Content is protected !!