ಐವತ್ತೆಂಟು-ಅರುವತ್ತು ಎನ್ನುವುದು ಒಂದು ಕಾಲದಲ್ಲಿ ನಿವೃತ್ತಿಯಾಗುವ ವಯಸ್ಸು. ಆದರೆ ಅದೇ ಮಾತನ್ನು ಈಗ ಹೇಳಲು ಬರುವುದಿಲ್ಲ. ಒಂದು ಅಂಕಿ ಅಂಶದ ಪ್ರಕಾರ 1950ರ ಆಜೂ ಬಾಜಿನಲ್ಲಿ ಹುಟ್ಟಿದವರು ತಮ್ಮ ಅರವತ್ತನೇ ವಯಸ್ಸಿಗೆ ನಿವೃತ್ತರಾದರೆ , ಇತ್ತೀಚಿನ ತಲೆಮಾರು ಅಂದರೆ 90ರ ನಂತರ ಹುಟ್ಟಿದವರ ನಿವೃತ್ತಿ ವಯಸ್ಸು 45 ಆಗಿಬಿಟ್ಟಿದೆ. ಇದಕ್ಕೆ ಪ್ರಮುಖ ಕಾರಣ ವರ್ಕ್ ಲೈಫ್ ಬ್ಯಾಲೆನ್ಸ್. ಹಿಂದೆಲ್ಲಾ 8 ಗಂಟೆ ಕೆಲಸ, ಇನ್ನು 8ಗಂಟೆ ಫ್ಯಾಮಿಲಿ ಸಮಯ. ಕಚೇರಿ ಬಿಟ್ಟು ಮನೆಗೆ ಬಂದ ಮೇಲೆ ಮನೆಯಲ್ಲಿ ಕೆಲಸ ಮಾಡಲು ಲ್ಯಾಪ್ ಟಾಪ್ ಇರಲಿಲ್ಲ, ಇಂಟರ್ ನೆಟ್ಟೂ ಇರಲಿಲ್ಲ. ಆಫೀಸಿನ ಕೆಲಸ ಆಫೀಸಲ್ಲೇ ಮುಗಿಯಬೇಕು. ಆದರೆ ಈಗ ನೋಡಿ ಹಲವರು ಆಫೀಸಿಗಿಂತ ಮನೆಯಲ್ಲೇ ಹೆಚ್ಚು ಕೆಲಸ ಮಾಡುವ ಸ್ಥಿತಿ ಬಂದಿದೆ . ಈ ಮಧ್ಯೆ ಕೋವಿಡ್ ಬೇರೆ. ಅನೇಕ ಕಂಪನಿಗಳು 45 -50 ವರ್ಷವಾದವರಿಗೆ ಕಡ್ಡಾಯ ನಿವೃತ್ತಿ ಕೊಟ್ಟು ಬಿಟ್ಟಿವೆ. ಹೀಗಾಗಿ ಈಗ 45 ವರ್ಷ ದಾಟಿತೆಂದರೆ ನಿವೃತ್ತಿ ಅಂಚಿಗೆ ಬಂದರೆಂದು ವ್ಯಾಖ್ಯಾನಿಸಬಹುದು.
ಕೆಲವರು ಯಾವಾಗಲೂ ಕೆಟ್ಟದ್ದನ್ನೇ ಯೋಚಿಸುತ್ತಿರುತ್ತಾರೆ. ಅವರಂತೂ ನಿವೃತ್ತಿ ಜೀವನದ ಬಗ್ಗೆ ಯಾವಾಗಲೂ ಆತಂಕಭರಿತರಾಗಿರುತ್ತಾರೆ. ಆದಾಯ ಕಡಿಮೆಯಾಗುತ್ತದೆ, ಆಫೀಸಿಗೆ ಹೋಗುವಂತಿಲ್ಲ, ಇನ್ನು ಜೀವನವೇ ಮುಗಿದು ಹೋಯಿತು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ತಮ್ಮ ಜೀವಿತಾವಧಿಯ ಅರ್ಧವಷ್ಟೇ ಕಳೆದಿದ್ದೇವೆ, ಇನ್ನೂ ಸುದೀರ್ಘ ಜೀವನ ಇದೆ ಎಂಬುದನ್ನು ಮರೆತೇ ಬಿಡುತ್ತಾರೆ. ಯಾರಾದರು ಎದುರಿಗೆ ಸಿಕ್ಕವರು ಹೇಗಿದ್ದೀರಿ ಎಂದು ಕೇಳಿದರೆ ನಮ್ಮದೇನಿದೆ ಬೋನಸ್ ಪಿರಿಯಡ್ ಅಷ್ಟೇ ಎಂದು ತಾವೇ ಹೇಳಿಕೊಂಡು ಎಲ್ಲಾ ಮುಗಿದೇ ಹೋಯಿತು ಎಂಬಂತೆ ಮುಖ ಮಾಡುತ್ತಾರೆ.
ನನ್ನ ವೃತ್ತಿ ಜೀವನವನ್ನೊಮ್ಮೆ ಹಿಂತಿರುಗಿ ನೋಡಿದರೆ ನನಗೆ ಸಂತೃಪ್ತಿ ಇದೆ. ಕುಟುಂಬಕ್ಕೆ ಹಣಕಾಸು ಮತ್ತು ನೈತಿಕ ಬೆಂಬಲ ನೀಡಿದ ತೃಪ್ತಿ ಇದೆ. ನಾವು ವಿದ್ಯಾಭ್ಯಾಸ ಮುಗಿಸಿದಾಗ ನಮ್ಮನ್ನು ಯಾರೂ ಮುಂದೇನು ಮಾಡುತ್ತೀಯ ಎಂದು ಕೇಳಲಿಲ್ಲ. ಕೆಲಸವೊಂದು ಸಿಗಬೇಕು, ಸಂಬಳ ಬರಬೇಕು ,ಅದಷ್ಟೇ ನಮ್ಮ ಮುಂದಿದ್ದ ಗುರಿ. ಹೀಗಾಗಿ ಅನೇಕರು ಆ ಸಮಯದಲ್ಲಿ ತಮಗೆ ಬಂದದ್ದನ್ನು ಸ್ವೀಕರಿಸಿದರಷ್ಚೆ. ಈಗಿನ ಹುಡುಗರಂತೆ ಅದೇ ಆಗಬೇಕು, ಹೀಗೆ ಮಾಡಬೇಕು ಎಂದು ಪ್ಲಾನ್ ಮಾಡಿ ಓದಿದವರು ಕಡಿಮೆ.
ಈಗ ನಿವೃತ್ತಿಯ ನಂತರ ಜೀವನ ಒತ್ತಡದಿಂದ ಮುಕ್ತವಾಗಿದೆ. ಬೆಳಿಗ್ಗೆ ಬೇಗ ಎದ್ದು ಗಡಿಬಿಡಿಯಲ್ಲಿ ರೆಡಿಯಾಗಬೇಕಿಲ್ಲ. ಬದುಕಿರುವವರೆಗೂ ದುಡಿಯಬೇಕೆಂಬ ಧಾವಂತ ಇಲ್ಲ. ನಿವೃತ್ತಿ ಎಂದರೆ ಹೊಸ ಜೀವನಕ್ಕೆ ನಾಂದಿ. ನಿಮ್ಮ ಇಷ್ಟದ ಕೆಲಸವನ್ನು ಮಾಡಲು ಸಿಕ್ಕ ಸೆಕೆಂಡ್ ಇನ್ನಿಂಗ್ಸ್. ನಿವೃತ್ತಿ ನಿಮ್ಮ ಮುಂದೆ ಹೊಸ ಲೋಕ ತೆರೆದಿಡುತ್ತದೆ. ಇಷ್ಟು ದಿನ ನಾವು ಮಾಡುತ್ತಿದ್ದ ಕೆಲಸಕ್ಕಿಂತ ಪ್ರಪಂಚ ಎಷ್ಟು ಹೊಸತನದಿಂದ ಕೂಡಿದೆ ಎಂಬುದು ಅರಿವಾಗುವುದು ಈಗಲೇ. ನಿವೃತ್ತಿ ಹೊಂದುವುದು ಎಂದರೆ ಇದುವರೆವಿಗೂ ನಾವು ಮಾಡುತ್ತಿದ್ದ ಕೆಲಸದಿಂದ ಬಿಡುಗಡೆ ಹೊಂದುವುದು. ಟಾರ್ಗೆಟ್ ಗಳ ಒತ್ತಡವಿಲ್ಲ. ಬಾಸ್ ನ ಪ್ಲೀಸ್ ಮಾಡುವ ಅನಿವಾರ್ಯತೆ ಇಲ್ಲ. ಗೊತ್ತು ಗುರಿ ಇಲ್ಲದ ಮೀಟಿಂಗ್ ನಲ್ಲಿ ಬಾಸ್ ಹೇಳುವುದಕ್ಕೆಲ್ಲಾ ಹೂಂ ಅನ್ನುವ ಜರೂರತ್ತೂ ಇರುವುದಿಲ್ಲ. ವಾಹ್ ಎಂತ ಗುಡ್ ಫೀಲಿಂಗ್.
ರಿಟೈರ್ ಆದ ಮೇಲೆ ನೀವು ಏನೆಲ್ಲಾ ಆಗಬಹುದು. ಫ್ರೀ ಲಾನ್ಸ್ ರ್ ಆಗಬಹುದು , ಸಂಗೀತಗಾರನಾಗಬಹುದು, ಹೊಸದನ್ನು ಕಲಿಯಬಹುದು, ಮನೆಯಿಂದಲೇ ಆಪರೇಟ್ ಮಾಡುವ ಸಕ್ಸೆಸ್ ಫುಲ್ ಯೂ ಟ್ಯೂಬರ್ ಆಗಬಹುದು, ನಿಮ್ಮ ಇಷ್ಟದ ಎನ್ ಜಿ ಓ ದಲ್ಲಿ ಸ್ವಯಂ ಸೇವಕರಾಗಬಹುದು, ಯಾವುದಾದರೂ ಧಾರ್ಮಿಕ ಸಂಸ್ಥೆಗಳಲ್ಲಿ ಭಕ್ತಾದಿಗಳಿಗೆ ಮಧ್ಯಾಹ್ನದ ಊಟ ಬಡಿಸಬಹುದು….ಹೀಗೆ ನಿಮ್ಮ ಮನಸ್ಸಿಗೆ ಸಂತಸ ತರುವ ಏನಾದರು ಮಾಡಬಹುದು.
ಆದರೆ ನಿವೃತ್ತರಾದಮೇಲೆ ಕೆಲವು ಬದಲಾವಣೆಗಳು ಅಗತ್ಯ. ಅದಕ್ಕೆ ತಕ್ಕಂತೆ ಮನಸ್ಥಿತಿಯನ್ನು ಹೊಂದಿಸಿಕೊಳ್ಳಬೇಕು. ಮೊದಲಿನಂತೆ ಉಡುಗೆ ತೊಡುಗೆಯ ಅಗತ್ಯ ಬೀಳುವುದಿಲ್ಲ. ಕೋಟು ತೊಡಬೇಕು,ಟೈ ಹಾಕಬೇಕು,ಫಾರ್ಮಲ್, ಕ್ಯಾಸುಯಲ್ ಎಂಬ ಗೊಂದಲ ಇರುವುದಿಲ್ಲ. ಈ ಕರೋನಾ ಕಾಲದಲ್ಲಿ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಅನೇಕರಿಗೆ ಇದು ಅನುಭವಕ್ಕೆ ಬಂದಿರಲಿಕ್ಕೂ ಬೇಕು. ಇಷ್ಟೊಂದು ಬಟ್ಟೆ ಬರೆಯಾದರು ಏಕೆ ಬೇಕು ಎಂದು ಹಲವರಿಗೆ ಅನ್ನಿಸಿರಲಿಕ್ಕೂ ಸಾಕು. ನಿಮ್ಮ ಅಂತಸ್ತು , ಹುದ್ದೆಗೆ ಅಗತ್ಯವಾದ ಉಡುಗೆ ತೊಡುಗೆಗಳು ಈಗ ಬೇಕಾಗುವುದಿಲ್ಲ. ಹಾಗೇಯೆ ನಿಮ್ಮ ಉನ್ನತ ಸ್ಥಾನದಿಂದಾಗಿ ನಿಮ್ಮನ್ನ ಸುತ್ತುವರಿಯುತ್ತಿದ್ದ ಮಂದಿಯೂ ಈಗ ಕಾಣುವುದಿಲ್ಲ. ನಿಮಗೆ ಈಗ ಸಿಗುವವರೇ ನಿಮ್ಮ ನಿಜವಾದ ಸ್ನೇಹಿತರು. ಅವರೊಂದಿಗೆ ವಾಕಿಂಗ್ ಹೋಗಿ ,ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ.
ಹಾಗೆ ಊಟ ತಿಂಡಿಗೂ ಕೊರತೆ ಮಾಡಿಕೊಳ್ಳಬೇಡಿ. ನಿದ್ರೆ ಜಾಸ್ತಿ ಬಂದರೆ ಆರಾಮಾಗಿ ಮಾಡಿ. ಬೆಳಿಗ್ಗೆ ಬೇಗ ಎದ್ದು ಓಡಬೇಕಾದ ಜರೂರತ್ತಂತೂ ಇರುವುದಿಲ್ಲ. ನಾಲಿಗೆಗೆ ಹಿತವಾಗುವ, ಆರೋಗ್ಯಕ್ಕೆ ಪೂರಕವಾದ ಹೊಸ ರುಚಿಗಳನ್ನು ಟ್ರೈ ಮಾಡಿ ಅಥವಾ ಯೂ ಟ್ಯೂಬ್ ನೋಡಿ ನೀವೇ ಮಾಡಿ ನೋಡಿ.
ನಿವೃತ್ತ ರಾಗುವ ಮುನ್ನ ಅಥವಾ ಹಾಲಿ ಮಾಡುತ್ತಿರುವ ಉದ್ಯೋಗದಿಂದ ಹೊರಬರುವ ಮುನ್ನ ನೀವು ಕೆಲವು ಜವಾಬ್ದಾರಿಗಳನ್ನು ಮುಗಿಸಲೇಬೇಕು. ನಿಮ್ಮ ಹೂಡಿಕೆ ಇರಲಿ, ಆಸ್ತಿ ಇರಲಿ, ನಿಮ್ಮ ಮುಂದಿನ ಜೀವನಕ್ಕೆ ಬೇಕಾದಷ್ಟು ಇಟ್ಟುಕೊಂಡು ಹೆಚ್ಚೆನಿಸಿದ್ದನ್ನು ನಿಮ್ಮ ಪ್ರೀತಿಪಾತ್ರರಿಗೆ ಕಾನೂನು ಬದ್ಧವಾಗಿ ವರ್ಗಾಯಿಸಿಬಿಡಿ. ಜೀವನ ಸರಳವಾಗಿರಲಿ. ನಿಮ್ಮ ಉಳಿತಾಯದಿಂದ ಒಮ್ಮೊಮ್ಮೆ ಹೆಚ್ಚು ಖರ್ಚು ಮಾಡಬೇಕಾಗಿ ಬಂದರೆ ಚಿಂತೆ ಮಾಡಬೇಡಿ, ನೀವು ಕೂಡಿಟ್ಟ ಹಣ ನಿಮ್ಮ ಜೀವನ ಅನುಭವಿಸಲೆಂದೇ ಇರುವುದು ಎಂಬುದನ್ನು ಮರೆಯದಿರಿ. ದೊಡ್ಡ ಬಂಗಲೆಯಲ್ಲಿ ಇದ್ದರೆ ಅದನ್ನು ಬಿಟ್ಟು ನಿರ್ವಹಿಸಲು ಸೂಕ್ತವಾಗುವ ಸಣ್ಣ ಮನೆಗೆ ಹೋಗಬಹುದು. ಈ ಸಮಯದಲ್ಲಿ ನನ್ನ ಗೆಳೆಯರೊಬ್ಬರ ಉದಾಹರಣೆ ಹೇಳಲೇಬೇಕು. ಮನೆ, ಒಡವೆ ಆಸ್ತಿ ಅಂತ 20 ಕೋಟಿ ರೂ .ಗಳ ಆಸ್ತಿ ಮಾಡಿದರು. ಯಾರಿಗಾಗೋ ಗೊತ್ತಿಲ್ಲ.ಅವರ ಮಕ್ಕಳೋ ಮೂರು ದಶಕಗಳ ಹಿಂದೆಯೇ ಫಾರಿನ್ ನಲ್ಲಿ ಸೆಟ್ಲ್ ಆದವರು. ಅವರಿಗೆ ಈ ಆಸ್ತಿ ಬೇಕಾಗಿಯೇ ಇಲ್ಲ, ಇಲ್ಲಿಗೆ ವಾಪಸ್ಸು ಬರುವವರೂ ಅಲ್ಲ. ಅವರೇ ಬೇಕಾದಷ್ಟು ಸಂಪಾದಿಸಿರುತ್ತಾರೆ. ಇಂಥ ಸ್ಥಿತಿಯಲ್ಲಿ ಹೆಚ್ಚು ಆಸ್ತಿ ಮಾಡಿ ಉಪಯೋಗವಾದರು ಏನು?
ನಿವೃತ್ತಿ ಸಮಯದಲ್ಲಿ ಆಸ್ತಿ ಕೊಂಡು ಯಾವ ಉಪಯೋಗವೂ ಆಗುವುದಿಲ್ಲ. ಹೀಗಾಗಿ ಈ ವಯಸ್ಸಿನಲ್ಲಿ ಒಳ್ಳೆಯ ಕೆಲಸಕ್ಕೆ ದಾನ ಮಾಡುವುದಿದ್ದರೆ ಮಾಡಿ ಬಿಡಿ. ಈ ವಯಸ್ಸಿನಲ್ಲಿ ಒಳ್ಳೆಯ ಬಟ್ಟೆ ಬರೆ, ಹೊಸ ಗ್ಯಾಜೆಟ್ , ಆಭರಣಗಳು, ಆಸ್ತಿ ಪಾಸ್ತಿಗಳಿಗಿಂತ ಸಂಗೀತ ಕೇಳುವುದು, ಪ್ರವಾಸ ಹೋಗುವುದು, ಒಳ್ಳೆಯ ತಿನಿಸು ಸೇವಿಸುವುದು, ಹಳೆಯ ಗೆಳೆಯರ ಒಡನಾಟ, ಮನೆಯವರೊಡನೆ ಸಮಯ ಕಳೆಯುವುದು, ಅವರಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುವುದರಲ್ಲಿ ಹೆಚ್ಚಿನ ಸಂತಸ ಸಿಗುತ್ತದೆ.
ಆರೋಗ್ಯವಂತೂ ಮುಖ್ಯ ಅದನ್ನಂತೂ ಚೆನ್ನಾಗಿ ನೋಡಿಕೊಳ್ಳಲೇ ಬೇಕು. ಕೆಲಸದ ಜಂಜಾಟವಿಲ್ಲದೆ , ದುಡಿಯಲೇಬೇಕೆಂಬ ಹಪಾ ಹಪಿ ಇಲ್ಲದೆ ಇದ್ದಾಗ ಅದು ಸಹಜವಾಗಿ ಚೆನ್ನಾಗಿಯೇ ಇರುತ್ತದೆ.
ಒಟ್ಟಿನಲ್ಲಿ ಸಂತೋಷವಾಗಿರಿ, ಖುಷಿ ಖುಷಿಯಾಗಿರಿ.
Photo by Jeremy Bishop on Unsplash
Very good write up and suggestion keep going with more useful write up
ನಿವೃತ್ತಿ ಜೀವನ ಎನ್ನುವುದು ಪ್ರತಿ ಮನುಷ್ಯರ ಜೀವನದಲ್ಲಿ ಬರುವಂತಹ ಸಮಯ. ಇದನ್ನು ಖುಷಿಯಾಗಿ ಸ್ವೀಕಾರ್ ಮಾಡಬೇಕು. ಸರ್ ನೀವು ಬರೆದಂತ ಲೇಖನ ಎಲ್ಲರಿಗೂ ಉಪಯೋಗ ವಾಗುತ್ತೆ. ಬರುವಂತಹ ಈ ಸಮಯವನ್ನು ಹೇಗೆ ಕಳೆಯಬೇಕು . ಮತ್ತು ನಮ್ಮ ಮನಸ್ಥಿತಿ ಯಾವ ತರ ಇರಬೇಕು ಎಂಬ ವಿಷಯ ದ ಬಗ್ಗೆ ನೀವು ನೀಡಿರುವ ಮಾಹಿತಿ ಯನ್ನು. ಪ್ರತಿಯೊಬ್ಬರೂ ಅಳವಡಿಕೊಂಡರೆ ಸಂತೋಷ ದಿಂದ. ಕಾಲ ಕಳೆಯ ಬಹುದು. ಧನ್ಯವಾದಗಳು. ಸರ್
ಧನ್ಯವಾದಗಳು
ನನ್ನ ವೃತ್ತಿ ಜೀವನವನ್ನೊಮ್ಮೆ ಹಿಂತಿರುಗಿ ನೋಡಿದರೆ ನನಗೆ ಸಂತೃಪ್ತಿ ಇದೆ. ಕುಟುಂಬಕ್ಕೆ ಹಣಕಾಸು ಮತ್ತು ನೈತಿಕ ಬೆಂಬಲ ನೀಡಿದ ತೃಪ್ತಿ ಇದೆ. ನಾವು ವಿದ್ಯಾಭ್ಯಾಸ ಮುಗಿಸಿದಾಗ ನಮ್ಮನ್ನು ಯಾರೂ ಮುಂದೇನು ಮಾಡುತ್ತೀಯ ಎಂದು ಕೇಳಲಿಲ್ಲ. ಕೆಲಸವೊಂದು ಸಿಗಬೇಕು, ಸಂಬಳ ಬರಬೇಕು ,ಅದಷ್ಟೇ ನಮ್ಮ ಮುಂದಿದ್ದ ಗುರಿ. ಹೀಗಾಗಿ ಅನೇಕರು ಆ ಸಮಯದಲ್ಲಿ ತಮಗೆ ಬಂದದ್ದನ್ನು ಸ್ವೀಕರಿಸಿದರಷ್ಚೆ. ಈಗಿನ ಹುಡುಗರಂತೆ ಅದೇ ಆಗಬೇಕು, ಹೀಗೆ ಮಾಡಬೇಕು ಎಂದು ಪ್ಲಾನ್ ಮಾಡಿ ಓದಿದವರು ಕಡಿಮೆ.
Above is the real fact I was also a part of it after graduation….really you have explained nicely the retirement life and lot of things left to do further….you are great…kindly exhibit your talent and guide all of us.
ಬಹಳ ಚೆನ್ನಾಗಿ ಬಂದಿದೆ ಬರಹ. ಎಲ್ಲವೂ ಸೂಕ್ತ ವಿಚಾರಗಳು , ಬರಹವನ್ನು ಮುಂದುವರಿಸಿದರೆ ಸಂತೋಷವಾಗುತ್ತದೆ.
H S ಶ್ರೀನಾಥ್ ನಿಮ್ಮ ಸಹದ್ಯೋಗಿ.
ಧನ್ಯವಾದಗಳು ಖಂಡಿತ ಒಳ್ಳೆಯ ಲೇಖನ ಬರೆಯುವ ಪ್ರಯತ್ನ ಮಾಡುತ್ತೇನೆ
Very nice Article u hv written Mr. R. srinivas. Indeed all the lines make us to read again n again. Nice👍🏽
Xlnt write up
Very useful
Thanks
ಪ್ರಯತ್ನವನ್ನೇನೋ ಮಾಡುತಿದ್ದೇವೆ…ಸಫಲರಾಗುವುದು ಅವನ ಕೈಯಲ್ಲಿ… ಆದರೆ ಈ ಕೆಳಗಂಡ ವಾಕ್ಯಗಳು ಒಪ್ಪ ಬೇಕಾದ ಮಾತು. ಆರೋಗ್ಯವಂತೂ ಮುಖ್ಯ ಅದನ್ನಂತೂ ಚೆನ್ನಾಗಿ ನೋಡಿಕೊಳ್ಳಲೇ ಬೇಕು. ಕೆಲಸದ ಜಂಜಾಟವಿಲ್ಲದೆ , ದುಡಿಯಲೇಬೇಕೆಂಬ ಹಪಾ ಹಪಿ ಇಲ್ಲದೆ ಇದ್ದಾಗ ಅದು ಸಹಜವಾಗಿ ಚೆನ್ನಾಗಿಯೇ ಇರುತ್ತದೆ.
ಒಟ್ಟಿನಲ್ಲಿ ಸಂತೋಷವಾಗಿರಿ, ಖುಷಿ ಖುಷಿಯಾಗಿರಿ…….Srinivas no doubt it is a ಸೂಪರ್ ರೇನ್ಡಿಷನ್ ..👍👍🙏
ಶ್ರೀನಿವಾಸರವರ ಲೇಖನ ಬಹಳ ಸರಳವಾಗಿ ಹಾಗೂ ಸುಂದರವಾಗಿ ಮೂಡಿ ಬಂದಿದೆ .. ಹಾಗೂ ಸಮಯೋಚಿತವಾಗಿದೆ. ಲೇಖಕರಿಗೆ ಧನ್ಯವಾದಗಳು.
ಧನ್ಯವಾದಗಳು
ಶ್ರೀ. ಆರ್. ಶ್ರೀನಿವಾಸ್ ರವರ ನಿವೃತ್ತಿ ನಂತರ ಎಂಬ ವಿಷಯದ ಬಗ್ಗೆ ಎಳೆ ಎಳೆ ಯಾಗಿ ತಿಳಿಸಿದ್ದಾರೆ. ಅದ್ಭುತವಾಗಿ ಮೂಡಿಬಂದಿದೆ. ಅವರಿಗೆ ಧನ್ಯವಾದಗಳು.
ಧನ್ಯವಾದಗಳು
R. ಶ್ರೀನಿವಾಸ್ ಅವರ “ನಿವೃತ್ತಿ ನಂತರ” ಲೇಖನ ಸಮಯೋಚಿತವಾಗಿ ಮತ್ತು ಅದ್ಭುತವಾಗಿ ಮೂಡಿಬಂದಿದೆ. ಬರಹದಲ್ಲಿ ತಿಳಿಸಿದ ಅಂಶಗಳು ಸತ್ಯಕ್ಕೆ ಸಮೀಪವಾಗಿವೆ. ಎಲ್ಲರೂ ಜೀವನದಲ್ಲಿ ಈ ಅಂಶಗಳನ್ನು ಅಳವಡಿಸಿಕೊಂಡಲ್ಲಿ ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆದು, ಸಾರ್ಥಕತೆ ಪಡೆಯಬಹುದು.
ನಿಮ್ಮ ಪ್ರೋತ್ಸಾಹವೆ ನಮಗೆ ಸ್ಪೂರ್ತಿ. ಧನ್ಯವಾದಗಳು
ಲೇಖನ ತುಂಬಾ ಚೆನ್ನಾಗಿದೆ, ನಮ್ಮದೇ ಅನುಭವ ವನ್ನು ನಿಮ್ಮ ಮಾತಿನಲ್ಲಿ ಓದಿದಂತಿದೆ. ಸಲಹೆಗಳು ಉಪಯುಕ್ತವಾಗಿವೆ. ನಿಮ್ಮ ಲೇಖನ ಓದಿಸಿಕೊಂಡು ಹೋಗುವ ಗುಣ ಹೊಂದಿದೆ. ಬರವಣಿಗೆ ಮುಂದುವರೆಸಿರಂದು ಸಲಹೆ.
ಧನ್ಯವಾದಗಳು
Very nice article Srinivas, wish you all the best. Keep going…
Good information .we have to follow.
ಈ ನಿನ್ನ ಹೊಸ ಆಯಾಮ ಪ್ರಶಂಸನೀಯ. .ಮುಂದುವರೆಸು.
ತುಂಬಾ ಚೆನ್ನಾಗಿದೆ. ದಯವಿಟ್ಟು ಈ ಬರವಣಿಗೆಯನ್ನು ಮುಂದುವರೆಸಿ
ಬೇಗ retire ಆಗಿ ಬಿಡುವ ಅನ್ನಿಸ್ತಿದೆ,ನಿಮ್ಮ ಲೇಖನ ಓದುತ್ತಾ ಇದ್ದರೆ. ಹೌದು ಯಾವುದೇ ನಮ್ಮ ಪಾಲಿನ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದಾಗ ಸಿಗುವ ಆನಂದವೇ ಬೇರೆ.
“ನಿಮ್ಮ ಮುಂದಿನ ಜೀವನಕ್ಕೆ ಬೇಕಾದಷ್ಟು ಇಟ್ಟುಕೊಂಡು ಹೆಚ್ಚೆನಿಸಿದ್ದನ್ನು ನಿಮ್ಮ ಪ್ರೀತಿಪಾತ್ರರಿಗೆ ಕಾನೂನು ಬದ್ಧವಾಗಿ ವರ್ಗಾಯಿಸಿಬಿಡಿ. ಜೀವನ ಸರಳವಾಗಿರಲಿ” ತುಂಬಾ ಇಷ್ಟ ಆಯ್ತು.