21.2 C
Karnataka
Sunday, September 22, 2024

    ಶಿಲ್ಪಗಳು ಗೊತ್ತು ಶಿಲ್ಪಿ ಗೊತ್ತಾ

    Must read

    ಬಳಕೂರು ವಿ. ಎಸ್ . ನಾಯಕ

    ಪ್ರತಿಯೊಬ್ಬರೂ ಕೂಡ ತಮ್ಮ ಜೀವಿತದ ಅವಧಿಯಲ್ಲಿ ಏನನ್ನಾದರೂ ಸಾಧನೆಯನ್ನುಮಾಡಿರುತ್ತಾರೆ .ಅದರಲ್ಲಿ ಕೆಲವೊಂದು ಮಾತ್ರ ನಮ್ಮ ನೆನಪಿನ ಪುಟದಲ್ಲಿರುತ್ತದೆ. ಕವಿ ವಾಣಿಯಂತೆ ನಾವು ಸತ್ತು ಬದುಕಬೇಕು ಎಂದು ಹೇಳುತ್ತಾರೆ ಅಂದರೆ ಸತ್ತ ಮೇಲೂ ನಮ್ಮ ಸಾಧನೆಯ ಕಾರ್ಯ ಎಲ್ಲರ ನೆನಪಿನಲ್ಲಿ  ಚಿರಸ್ಥಾಯಿ ಆಗಬೇಕು ಎಂದುಕೊಳ್ಳುತ್ತಾರೆ .

    ಒಂದು ಕುಟುಂಬದ ವ್ಯವಸ್ಥೆಯ ಅಡಿಯಲ್ಲಿ ಬದುಕುತ್ತಿರುವವರು ಒಬ್ಬರಿಗೊಬ್ಬರು ಅಷ್ಟೊಂದು ಪ್ರಿಯರಾಗಿರುತ್ತಾರೆ.  ಅವರ ಅಕಾಲಿಕ ಸಾವು ಅವರಿಗೆ ಮರೆಯಲು ಸಾಧ್ಯವಿಲ್ಲ. ಆದರೆ ಅವರು ನಮ್ಮೊಂದಿಗೆ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೊಳ್ಳುವವರಿಗೇನು ಕಡಿಮೆಯಿಲ್ಲ .

    ಹಾಗೆ ಇಲ್ಲಿಯ ಒಂದು ಕುಟುಂಬ ಶ್ರೀನಿವಾಸ ಗುಪ್ತಾ.   ಅವರ ಮಡದಿ ಮಾಧವಿ ಅಕಾಲಿಕ ಮರಣಕ್ಕೆ ಒಳಪಟ್ಟಾಗ ಇಷ್ಟು ವರ್ಷ ನೋಡಿದ ಕಣ್ಣುಗಳಿಂದ ಮರೆಯಲಾರದ ಸ್ಥಿತಿ .ಅವರ ಮಕ್ಕಳಿಗೂ ಕೂಡ ಆಗಾಗ ಅವರ ನೆನಪು ಕಾಡುತ್ತಿತ್ತು. ಹಾಗಾದರೆ ಏನಾದ್ರೂ ಮಾಡಿ ಅವರ ನೆನಪನ್ನು ಜೀವಂತವಾಗಿಸುವ ನಿಟ್ಟಿನಲ್ಲಿ ಅವರ ಶಿಲ್ಪವನ್ನೋ ಅಥವಾ ಚಿತ್ರವನ್ನೋ  ಬಿಡಿಸಬೇಕೆಂದುಕೊಂಡಿದ್ದರು.

    ಶ್ರೀಧರ ಮೂರ್ತಿ. ಅವರ ಕಲೆಯಲ್ಲಿ ಮೂಡಿ ಬಂದ ಮಾಧವಿ ಅವರ ಶಿಲ್ಪ

    ಆದ್ರೆ ಶಿಲ್ಪದಲ್ಲಿ  ಅಥವಾ ಚಿತ್ರದಲ್ಲಿ ಎಲ್ಲವನ್ನೂ ಚಿತ್ರಿಸಿ ಮೂಡಿಸಬಹುದು ಆದರೆ ಅವರು ನಮ್ಮ ಜೊತೆಯಾಗಿ ಇದ್ದ ಹಾಗೇ ಅನಿಸುವುದಿಲ್ಲ ಎಂಬ ಭಾವನೆ ಅವರಿಗಿತ್ತು.

    ಹೀಗಾಗಿ ಅವರು ಸೂಕ್ತ ಕಲಾವಿದರ ಹುಡುಕಾಟ ನಡೆಸಿದರು. ಆಗ ಅವರ ನೆನಪಿಗೆ ಬಂದದ್ದು ಶ್ರೀ ತೋಂಟದಾರ್ಯ ಸ್ವಾಮೀಜಿಯವರ ಮೂರ್ತಿ ಮಾಡಿದ ಶಿಲ್ಪಿ ಶ್ರೀಧರ ಮೂರ್ತಿ. ಶಿಲ್ಪಿ ಶ್ರೀಧರ್ ಅವರು ಇವರ ಬೇಡಿಕೆ ಆಸಕ್ತಿಯನ್ನು ಗಮನಿಸಿ ಏನನ್ನಾದರೂ ಹೊಸತನದ ಹುಡುಕಾಟದಲ್ಲಿ ಇದ್ದ ಅವರಿಗೆ ಸಿಲಿಕಾನ್ ರಬ್ಬರ್ ಬಳಸಿ ಒಂದು ಸುಂದರವಾದ ಅದೇ ರೀತಿ ಹೋಲುವ ಕಲಾಕೃತಿ ಮಾಡಲು ಆರಂಭಿಸಿದ್ದರು.  ಸುಮಾರು ಹದಿನೈದು ಕಲಾವಿದರ ಶ್ರಮ ಶ್ರೀಧರ ಮೂರ್ತಿಯವರ ನೇತೃತ್ವದಲ್ಲಿ ಸುಮಾರು 4 ತಿಂಗಳುಗಳ ಕಾಲ ಈ ಪ್ರತಿಮೆ ಮಾಡಲು ಬೇಕಾಯಿತು. ಮಾಧವಿಯವರ ಈ ಪ್ರತಿಮೆ ನೋಡಿದರೆ ಸಾಕ್ಷಾತ್ ಮಾಧವಿಯವರೀ ಬಂದು  ಆಸೀನರಾಗಿದ್ದಾರೆ . ಆ ನಗು ಮುಖ, ನೋಟ  ವೇಷಭೂಷಣ ಎಲ್ಲವೂ ಯಾರೂ ಕೂಡ ಶಿಲ್ಪವೆಂದು ತಿಳಿಯಲು ಸಾಧ್ಯವಿಲ್ಲ

    ಮನೆತನವೆಲ್ಲ ಕಲಾವಿದರೇ

    ಶ್ರೀಧರಮೂರ್ತಿಯವರು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು .ಖ್ಯಾತ ಶಿಲ್ಪಿ ಶ್ರೀ ಕಾಶೀನಾಥರವರ ಮಗ .ಇವರ ಮನೆತನವೆಲ್ಲ ಕಲಾವಿದರೇ. ಇವರ ಚಿಕ್ಕಪ್ಪ ನಾರಾಯಣ್ ರಾವ್  ಕಾವಟೇಕರ್ ಕೂಡ ಪ್ರಸಿದ್ಧ ಶಿಲ್ಪಿಗಳು.

    ನಾವು ಪ್ರವಾಸಿ ತಾಣಗಳನ್ನು ಭೇಟಿ ಕೊಟ್ಟಾಗ ಅದರಲ್ಲಿಯೂ ಮುರುಡೇಶ್ವರ ನೂರ ಇಪ್ಪತ್ತಮೂರು ಅಡಿ ಎತ್ತರದ ಶಿವನ ಭವ್ಯ ಮೂರ್ತಿ ಉತ್ತರ ಕನ್ನಡ ಜಿಲ್ಲೆಗೆ ಮುಕುಟ ಪ್ರಾಯವಿದ್ದಂತೆ. ತಪೋಭಂಗಿಯಲ್ಲಿ ಕುಳಿತಿರುವ ಶಿವನ ಮೂರ್ತಿಯು ಜಗತ್ಪ್ರಸಿದ್ಧವಾಗಿದೆ. ಈ ಮೂರ್ತಿಯ ಕೆಳಭಾಗದಲ್ಲಿ ಒಂದು ಗುಹೆಯಲ್ಲಿ ಭೂ ಕೈಲಾಸದ ಕಥಾವಳಿಯನ್ನು ಸಾರುವ ಶಿಲ್ಪಗಳು ನಿಜಕ್ಕೂ ವಿಭಿನ್ನ ಸಂದೇಶವನ್ನು ಕೊಡುತ್ತದೆ.  ಅದರ ಪಕ್ಕದಲ್ಲಿ ಶ್ರೀಕೃಷ್ಣನ ಗೀತೋಪದೇಶದ ಪ್ರತಿಮೆ ಸಿದ್ಧವಾಗಿದ್ದು ಅದಕ್ಕೆ ಬಂಗಾರದ ವರ್ಣ ಲೇಪನ ಮಾಡಲಾಗಿದೆ .ಇದರ ಜೊತೆಗೆ ವಿಭಿನ್ನ ದೃಶ್ಯಕಾವ್ಯವನ್ನು ನೆನಪು ಮಾಡುವ ಲಂಡನ್ ಲ್ಯಾಂಬೆತ್ ನಗರದ ಥೇಮ್ಸ್ ನದಿಯ ದಡದಲ್ಲಿ albert embankment  ಪ್ರದೇಶದಲ್ಲಿ ನಿರ್ಮಿಸಿರುವ ಬಸವಣ್ಣನವರ ಪ್ರತಿಮೆ ಲೋಕ ಪ್ರಸಿದ್ಧಿಯಾಗಿದೆ. . ಬೆಂಗಳೂರಿನ ಕೆಂಪ್ ಪೋರ್ಟ್ ನಲ್ಲಿ ಇರುವ ಶಿವನ ವಿಗ್ರಹ, 2004ನಲ್ಲಿ ನಿರ್ಮಿಸಿದ ಜಬಲ್ಪುರದ ನೂರು ಅಡಿ ಎತ್ತರದ ಆಂಜನೇಯ ವಿಗ್ರಹ,  ಸೂರತ್ ನಲ್ಲಿ 85 ಅಡಿ ಎತ್ತರದ ಕೈಲಾಸವಾಸಿ ಶಿವನ  ವಿಗ್ರಹ,  ಬಸವಕಲ್ಯಾಣದ ಶಿವನು ಕುಳಿತ ಭಂಗಿಯಲ್ಲಿರುವ ಶಿಲ್ಪಾ . ಕೇಂದ್ರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಿಕ್ಕಿಂನಲ್ಲಿ ಹನ್ನೆರಡು ಜ್ಯೋತಿರ್ಲಿಂಗ ಮಧ್ಯೆ ಇರುವ  ಶಿವನ ವಿಗ್ರಹ , ಗದಗದ ತೋಂಟದಾರ್ಯ ಮಠದ ಆವರಣದಲ್ಲಿ 75 ಅಡಿ ಎತ್ತರದ ಲೋಟಸ್ ದೇವಾಲಯ ,ಬೆಂಗಳೂರಿನ ನೆಲಮಂಗಲದಲ್ಲಿ ಗೀತೋಪದೇಶದ ಕಾಂಕ್ರೀಟ್ ವಿಗ್ರಹ ,ಹೀಗೆ ಬಹಳಷ್ಟು ಕಲಾಲೋಕವನ್ನೇ ಸೃಷ್ಟಿಸಿದ್ದಾರೆ .

    ಈಗ ಬೆಂಗಳೂರಿನಲ್ಲಿ ಬೊಂಬೆಮನೆ ಕಲಾ ಗ್ಯಾಲರಿ ಸ್ಥಾಪಿಸಿ ವಿಭಿನ್ನ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ ಇವರ ಪ್ರಕಾರ ಯಾವುದೇ  ಕಲಾಕೃತಿ ರಚಿಸುವಾಗ ಮೂಲ ವಿಷಯ ಸರಿಯಾಗಿ ಗ್ರಹಿಸಬೇಕು ಆಗಿದೆ ಮಾತ್ರ ಉತ್ತಮ ಕಲಾಕೃತಿ ಮೂಡಿ ಬರುತ್ತದೆ.  ಸುಮಾರು 30 ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿರುವ ಶ್ರೀಧರ ಅವರಿಗೆ ಹೃದಯಾಂತರಾಳದ ನಮನಗಳು. 

    ವಿ. ಎಸ್ . ನಾಯಕ

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸಕರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    spot_img

    More articles

    9 COMMENTS

    1. ಅಪರೂಪವೆನಿಸುವ
      ಸಾಧಕರ ಪರಿಚಯ
      ಚೆನ್ನಾಗಿ‌ ಮೂಡಿ ಬಂದಿದೆ

    2. Mr.V S NAYAKA has given good information about sculptor Mr.Sridhar Murthy. Amazing artist who has done wonderful work . The latest masterpiece is lady sitting as good as living one. I remember work of great sculptors Rodin Michelangelo, Donatello who were innovative visionaries have gifted creativity to bring subject to life and manipulate materials to defy expectations of spectators. Mr. Sridhar Murthy is one among great in our contemporary period. Salute to great sculptor.

    3. ಅಪರೂಪದ ಕಲಾವಿದ. ಮುರುಡೇಶ್ವರದ ಶಿವನನ್ನು ನೋಡಿದ್ದೆ. ಆದರೆ ಶಿಲ್ಪಿಯ ಬಗ್ಗೆ ಗೊತ್ತಾಗಿದ್ದೆ ಇವತ್ತು. ಪರಿಚಯಿಸಿದ ನಾಯಕ್ ಅವರಿಗೆ ಧನ್ಯವಾದ

    4. ಕಲಾವಿದ ಶ್ರೀಧರ ಮೂರ್ತಿ ಅವರಿಗೆ 🙏🙏🙏🙏.ಪರಿಚಯಿಯಿಸಿದ ನಾಯಕ್ ಅವರಿಗೆ ಧನ್ಯವಾದ

    5. ಇಂಥಹ ಅದ್ಭುತ ಶಿಲ್ಪಿ ಒಬ್ಬರು ನಮ್ಮ ಕನ್ನಡ ನಾಡಲ್ಲೇ ಇರುವುದು ನಮಗೆಲ್ಲ ಹೆಮ್ಮೆಯ ವಿಷಯ. ಇಷ್ಟೊಂದು ನೈಜತೆ ಇರುವ ಕಲಾಕೃತಿಗಳು ಜಗತ್ತಿನೆಲ್ಲೆಡೆ ಕಾಣಸಿಗಲಿಕ್ಕಿಲ್ಲ. ಅದ್ಭುತ ಶಿಲ್ಪಿ ಮತ್ತು ಅವರ ಕುಟುಂಬವನ್ನು ಪರಿಚಯಿಸಿದ ಲೇಖಕರಿಗೆ ಧನ್ಯವಾದಗಳು.

    6. ತುಂಬಾ ಚೆನ್ನಾಗಿದೆ ಪರಿಚಯ. ಕಲಾವಿದ ಶ್ರೀಧರ ಮೂರ್ತಿಯವರ ಶಿಲ್ಪ ಕಲೆ ಅಧ್ಬುತ. ನಮೂನೆಗಳು.

    7. ಶಿಲ್ಪಿಗಳ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ.
      ಅದ್ಭುತ ಕಲಾವಿದ ಅವರು

    LEAVE A REPLY

    Please enter your comment!
    Please enter your name here

    Latest article

    error: Content is protected !!