ಚೀನಾ ದೇಶದಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಕರೋನಾ ವೈರಸ್ (ಕೋವಿಡ್-19) ಪ್ರಪಂಚದ ಎಲ್ಲಾ ದೇಶಗಳಲ್ಲಿಸಾಕಷ್ಟು ಹಾನಿಯುಂಟುಮಾಡಿತು. ಹಾಗೂ ಹಲವಾರು ಸಾವು ನೋವುಗಳ, ಆರ್ಥಿಕ ಹಿಂಜರಿತ ಮತು ಉದ್ಯೋಗ ನಷ್ಟ ಸೃಷ್ಟಿಸಿತು. ಈ ಪರಿಸ್ಥಿತಿ ಇನ್ನೂ ಎಷ್ಟು ದಿನ ಮುಂದುವರೆಯುತ್ತದೆ ಮತ್ತು ಮೊದಲಿನ ಸ್ಥಿತಿ ಯಾವಾಗ ಬರುತ್ತದೆ ಎನ್ನುವ ಪ್ರಶ್ನೆ ಎಲ್ಲರನ್ನುಕಾಡುತ್ತಿದೆ.
ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದ್ದು ಸಾವಿನ ಪ್ರಮಾಣ ಕಡಿಮೆಯಾಗುತ್ತಿರುವುದು ಒಂದು ಆಶಾಕಿರಣ. ಕರೋನಾ ಸೋಂಕಿನ ಬಗ್ಗೆ ಸ್ಪಷ್ಟ ನಿಖರತೆ ಇಲ್ಲದೆ ಇರುವುದು ಹಲವು ಗೊಂದಲಕ್ಕೀಡುಮಾಡಿದೆ.
ಐವತ್ತುವರ್ಷಕ್ಕಿಂತ ಮೇಲಿರುವರು ಮತ್ತು ಐವತ್ತು ವರ್ಷಕ್ಕಿಂತ ಕಡಿಮೆ ಇರುವವರಲ್ಲಿನ ರೋಗ ಲಕ್ಷಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡು ಬರುತ್ತಿಲ್ಲ. ಆರೋಗ್ಯದಿಂದಿರುವವರು ಮತ್ತು ಯುವಕರೂ ಕೂಡ ಕರೋನಾದಿಂದ ಸಾವನ್ನಪ್ಪಿದ್ದಾರೆ. ವಯಸ್ಸಾದವರು ಮತ್ತು ಈಗಾಗಲೇ ಹಲವಾರು ರೋಗಗಳಿಂದ ಬಾಧಿತರಾದವರು ಸೋಂಕಿನಿಂದ ಪಾರಾಗಿ ಬದುಕುಳಿದಿದ್ದಾರೆ.ಇಲ್ಲಿಯವರೆಗೆ ಸುರಕ್ಷಿತದಿಂದಿರುವ ಪ್ರದೇಶಗಳು ಕೂಡ ಹೆಚ್ಚು ಹಾನಿಗೊಳಗಾಗುತ್ತಿವೆ.
ಇಲ್ಲಿಯವರೆಗಿನ ಅಂಕಿ ಅಂಶಗಳನ್ನು ವಿಶ್ಲೇಷಿಸಿದರೆ ವಿಶ್ವದಲ್ಲಿ ಸೋಂಕಿತರ ಸಂಖ್ಯೆಮಾರ್ಚನಲ್ಲಿ 5.7 ಲಕ್ಷವಾಗಿದ್ದು ಈಗ 2.7 ಕೋಟಿಗೆ ತಲುಪಿದೆ. ಮಾರ್ಚನಲ್ಲಿದೈನಂದಿನ ಸೋಂಕಿತರ ಪ್ರಮಾಣ 78,000ವಿದ್ದು ಜೂನ್‌ನಲ್ಲಿ 2,50,000 ಇದ್ದು ನಂತರ 2,80,000ಕ್ಕೆ ಸ್ಥಿರಗೊಳ್ಳುತ್ತಿದೆ. ಸೋಂಕಿತರಲ್ಲಿ ಸಾವಿನ ಪ್ರಮಾಣ ಮಾರ್ಚ್‌ನಲ್ಲಿ ಶೇಕಡಾ 30ರಷ್ಟು ಇದ್ದು ಈಗ ಶೇಕಡಾ 2.5ಕ್ಕೆ ಸ್ಥಿರವಾಗಿದೆ.
ನಮ್ಮ ದೇಶದಲಿ ದೈನಂದಿನ ಸೋಂಕಿತರ ಸಂಖ್ಯೆ ಮಾರ್ಚನಲ್ಲಿ 1,800 ಇದ್ದು ಪ್ರಸ್ತುತ 90,000ಕ್ಕೆ ಏರಿದೆ. ಮಾರ್ಚನಲ್ಲಿ ದಿನಕ್ಕೆ ಸಾವಿನ ಸಂಖ್ಯೆ 130 ಇದ್ದು ಜೂನನಲ್ಲಿ 600ಕ್ಕೆ ಏರಿ ಪ್ರಸ್ತುತ ಸುಮಾರು 1000ಕ್ಕೆ ಸ್ಥಿರವಾಗಿದೆ .
ಯಾವುದೇ ರೋಗ ಲಕ್ಷಣಗಳನ್ನು ಉಂಟುಮಾಡಿ ಕೊನೆಗೆ ಸಾವನ್ನುಉಂಟು ಮಾಡುವ ವೈರಸ್‌ನ್ನು ಹಾನಿಕಾರಕ ವೈರಸ್ ಎಂದು ಕರೆಯಲಾಗುತ್ತದೆ. ಇಂಥ ವೈರಸ್ ರೋಗ ನಿರೋಧಕ ಶಕ್ತಿ ಇರುವವರ ದೇಹವನ್ನು ಪ್ರವೇಶಿಸಿದಾಗ ಹೆಚ್ಚಿನ ತಂಟೆ ಮಾಡದೆ ಸೊರಗುತ್ತದೆ. ಹೀಗಾಗಿ ಇಂಥ ವ್ಯಕ್ತಿಗಳಲ್ಲಿ ಯಾವುದೇ ರೋಗ ಲಕ್ಷಣ ಕಾಣುವುದಿಲ್ಲ. ಈ ವ್ಯಕ್ತಿಗಳಲ್ಲಿ ಮೊದಲೆ ಸೊರಗಿದ್ದ ವೈರಸ್ ಮತ್ತೊಬ್ಬರನ್ನು ಪ್ರವೇಶಿಸಿದಾಗ ಮತ್ತಷ್ಟು ಸೊರಗಿರುತ್ತದೆ . ಇದನ್ನೇ Mutation ಎನ್ನಲಾಗುತ್ತದೆ.
ಈ ರೀತಿ ರೂಪಾಂತರಗೊಂಡ ಸೌಮ್ಯ ವೈರಸ್ ಸೋಂಕಿತ ವ್ಯಕ್ತಿಯಲ್ಲಿ ಕಡಿಮೆ ಅಥವಾ ಯಾವುದೇರೋಗ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಹೀಗಾಗಿ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದ್ದರೂ ಅದರಿಂದ ಆಗುವ ತೀವ್ರ ರೋಗ ಲಕ್ಷಣಗಳು ಮತ್ತು ಸಾವುಗಳು ಕ್ರಮೇಣ ಕಡಿಮೆಯಾಗುತ್ತವೆ ಮತ್ತು ಸಾವುಗಳು ಸಂಖ್ಯೆಯ ತೀರಾ ನಗಣ್ಯವಾಗುತ್ತವೆ ಎನ್ನಬಹುದು.
ಮುಂದಿನ ದಿನಗಳಲ್ಲೂ ಕರೋನಾ ವೈರಸ್ ಸೋಂಕಿತ ವ್ಯಕ್ತಿಗಳು ಇರುತ್ತಾರೆ ಆದರೆ ಅವರೆಲ್ಲರೂ ತುಂಬಾ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿರುತ್ತಾರೆ ಅಥವಾ ಯಾವುದೇ ಲಕ್ಷಣಗಳು ಇರುವುದಿಲ್ಲ. ಆದರೆ ಸಾವು ಬಹಳ ಕಡಿಮೆ ಇರುತ್ತದೆ ಎಂದು ಭಾವಿಸಲಾಗಿದೆ
ಸೌಮ್ಯವೈರಸ್‌ನಿಂದ ಸೋಂಕಿತಗೊಂಡ ಸೋಂಕಿತರು ನೈಸರ್ಗಿಕ ವ್ಯಾಕ್ಸಿನೇಷನ್ ಹೊಂದಿದಂತೆ ವೈರಸ್‌ನ್ನು ನಿಗ್ರಹಿಸುವ ಶಕ್ತಿ ಹೊಂದಿರುತ್ತಾರೆ. ಈಗಿನ ಸಾವಿನ ಸಂಖ್ಯೆಗೆ ಹೋಲಿಸಿದರೆ ಕೋವಿಡ್-19ನಿಂದಾಗುವ ಸಾವಿನ ಸಂಖ್ಯೆಪ್ರತಿದಿನ 1000ಇದ್ದುಕರೋನಾ ವೈರಸ್ ಇಲ್ಲದ ದಿನಗಳಲ್ಲಿ ಸಾವಿನ ಸಂಖ್ಯೆ ಪ್ರತಿದಿನ 25 000 ಇತ್ತು ಎಂಬುದನ್ನು ಗಮನಿಸಬೇಕು.
ಆದರೆ ಮ್ಯೂಟೇಷನ್ ಆದ ವೈರಸ್ ಉಗ್ರರೂಪ ತಾಳಬಹುದು ಎಂಬ ವಾದವೂ ಇದೆ. ಆದರೆ ಹಿಂದಿನ ಸಾರ್ಸ್ ಮತ್ತು ಚಿಕನ್ ಗುನ್ಯಾ ವೈರಸ್ ಗಳನ್ನು ಗಮನಿಸಿದರೆ ಮ್ಯೂಟೇಷನ್ ಹಂತ ತಲುಪಿದ ನಂತರ ವೈರಸ್ ಗಳು ಸೌಮ್ಯವಾಗುವುದೆ ಹೆಚ್ಚು ಎಂದು ಭಾವಿಸಲಾಗಿದೆ.
ಹಾಗೆಂದು ಮೈ ಮರೆಯದಿರಿ ಸರಕಾರ ಮುಂದೆ ತಿಳಿಸುವವರೆಗೆ ಎಲ್ಲಾ ಸುರಕ್ಷಿತ ಕ್ರಮಗಳನ್ನು ಪಾಲಿಸುವುದನ್ನು ಬಿಡಬಾರದು.
ಒಳ್ಳೆಯ ಮಾಹಿತಿ ಒಳಗೊಂಡ ಲೇಖನ. ಲಸಿಕೆ ತಯಾರಾಗಿ ಬರುವುದು ಸೌಮ್ಯ ವೈರಸ್ಗೋ ಅಥವಾ ಉಗ್ರ ವೈರಸ್ಗೋ ? ವೈರಸ್ ನ ಎಲ್ಲ ಸಂಭಾವ್ಯ ಲಕ್ಷಣಗಳಿಗೂ ಲಸಿಕೆ ತಯಾರಿಸುತ್ತಾರೆ ಅಂತ ಕೇಳಿದ ನೆನಪು.
Good article 👍
ಮಾಹಿತಿ ಪೂರ್ಣ. ಕರೋನಾ ಬಗ್ಗೆ ನೆಗಟೀವ್ ಸುದ್ದಿಗಳನ್ನೇ ಓದುತ್ತಿದ್ದ ನಮಗೆ ಒಳ್ಳೇ ಸುದ್ದಿ ಕೊಟ್ಟಿದ್ದೀರಿ. ಆದರೂ ಮೈ ಮರೆಯದೆ ನಮ್ಮ ಎಚ್ಚರಿಕೆಯಲ್ಲಿ ಇರಬೇಕು. ದೀಪಾವಳಿಯನ್ನಾದರು ಸಂಭ್ರಮದಿಂದ ಆಚರಿಸುವಂತಾಗಲಿ.
ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ವಿವರವಾಗಿ ಕರೋನಾ ವೈರಸ್ ಬಗ್ಗೆ ಜಿ.ಪಿ ಬರೆದಿರುವ ಲೇಖನ ಸ್ವಲ್ಪ ಮಟ್ಟಿಗೆ ಭಯ ಕಡಿಮೆಯಾಗುವಂತೆ ಮಾಡಿತು. ಕಾರಣ ಎಷ್ಟೋ ಜನ ಭಯ ಪಟ್ಟು ಕೊಂಡೆ ಜಾಸ್ತಿ ತೊಂದರೆಗೆ ಒಳಗಾಗಿರುವರು. ಅಂತೂ ಮುಂದಿನ ದಿನಗಳಲ್ಲಿ ಕಾಳಜಿಯ ಜೊತೆಗೆ ಆರಾಮಾಗಿ ರಬಹುದು. ಥ್ಯಾಂಕ್ಸ್ ಜಿ.ಪಿ
Objective writing.Inspires confidence.
ಹಿಂದಿನ ಸಾರ್ಸ್ ಮತ್ತು ಚಿಕನ್ ಗುನ್ಯಾ ವೈರಸ್ ಗಳನ್ನು ಗಮನಿಸಿದರೆ ಮ್ಯೂಟೇಷನ್ ಹಂತ ತಲುಪಿದ ನಂತರ ವೈರಸ್ ಗಳು ಸೌಮ್ಯವಾಗುವುದೆ ಹೆಚ್ಚು ಎಂದು ಭಾವಿಸಲಾಗಿದೆ ಎಂಬ ಪಾಸಿಟಿವ್ ಭಾವನೆಯೊಂದಿಗೆ ಆಶಾಭಾವನೆ ತಂದಿದಕ್ಕೆ ಧನ್ಯವಾದಗಳು ಪ್ರಸಾದ್ 👍
ಧನ್ಯವಾದಗಳು ಪ್ರಸಾದ್ 👍
ರೋಗ ನಿರೊಧಕ ಶಕ್ತಿ ಎಷ್ಟು ಮುಖ್ಯವೊ ಆಸ್ಟೇ ಮುಖ್ಯ ಮನೊಬಲ …
ಒಳ್ಳೆಯ ಲೇಖನ GP … think you
ಮ್ಯೂಟೇಷನ್ …
Lets hope for the best…
ರೋಗ ನಿರೊಧಕ ಶಕ್ತಿ ಎಷ್ಟು ಮುಖ್ಯವೊ ಆಸ್ಟೇ ಮುಖ್ಯ ಮನೊಬಲ …
ಒಳ್ಳೆಯ ಲೇಖನ GP … thank you
ಮ್ಯೂಟೇಷನ್ …
Lets hope for the best…
Informative article with statistical data. The novel Coronavirus is a mutant version of the SARS virus, with a stronger binding affinity. Usually mutation occurs with more adaptive features. In other words, it makes more stronger. Mutation also leads to generation of new strains, and many new strains of the Coronavirus have been identified. Fear factor may be responsible for high rate of death compared to the current scenario. Now people became psychological more stronger compared to initial days of COVID-19 pandemic. Thanks to the author for an informative article.
ವೈರಾಣುಗಳ ಲಕ್ಷಣ ಹಾಗೂ ಅಂಕಿ ಅಂಶಗಳ ಸಹಿತ ಪರಿಪೂರ್ಣ ಲೇಖನ.
ಸ್ವಲ್ಪ ನಿರಾಳವಾಯಿತು.
ಈಗಿನ ಭಯದ ವಾತಾವರಣದಿಂದ ಮರೆಮಾಚಿ ನೆಮ್ಮದಿ ಜೀವನ ಶೈಲಿ ನಡೆಸಲು ಲೇಖನ ಉಪಯುಕ್ತವಾಗಿದೆ.
ಕೋವಿಡ್ 19 ಬಂದು 6 ತಿಂಗಳು ಕಳೆದು ಹೋಗಿದೆ ಆದ್ರೆ ಅದರ ಬಗ್ಗೆ ಯಾವುದೇ ನಿಖರವಾದ ಮಾಹಿತಿಯನ್ನು ಯಾರು ನೀಡಲು ಸಾಧ್ಯವಾಗಿಲ್ಲ. ಇಡೀ ಭೂಮಂಡಲ ಇದರ ಕರಿ ಛಾಯೆ ಯಿಂದ. ತತ್ತರಿಸಿ ಹೋಗಿದೆ. ಜನ ಪ್ರಾಣ ಕೈಲಿ ಹಿಡಿದುಕೊಂಡು ಬದುಕು ಸಾಗಿಸುತ್ತಿರುವ. ಇಂತ ಸಮಯದಲ್ಲಿ. ಈ ವೈರಾಣು ಬಗ್ಗೆ. ಸಮಯೋಚಿತ ಮಾಹಿತಿಯನ್ನು ನೀಡಿ ಜನರ ಭಯವನ್ನು ಕಡಿಮೆ ಮಾಡಿದೀರಾ. ಈ ವೈರಾಣು ಹೇಗೆ ರೂಪಾಂತರ ಹೊಂದಿ ಅದರ ತೀವ್ರತೆ ಹೇಗೆ ಕಡಿಮೆ ಆಗುತ್ತೆ ಅನ್ನುವ ವಿಷಯ ತಿಳಿದು ಕೊಂಡು ಇದ್ದುದರಲ್ಲೇ ಸ್ವಲ್ಪ ನಿಟ್ಟು ಉಸಿರು ಬಿಡಲು ಈ ಲೇಖನ ತುಂಬಾ ಸಹಾಯ ಮಾಡುತ್ತೆ. ಧನ್ಯವಾದಗಳು. Gp.
Nice Article sir.Nature is also mutating day by day..Thanku for information
ಕೋವಿಡ್ 19 ಬಂದು ಈಗಾಗಲೇ 6 ತಿಂಗಳು ಆಯಿತು ಜನರೆಲ್ಲಾ ಈ ಮಹಾಮಾರಿ ರೋಗ ದಿಂದ ತತ್ತರಿಸಿ ಹೋಗಿದಾರೆ. ಯಾವತ್ತು ನಮಗೆ ಇದರಿಂದ ಮುಕ್ತಿ ಎಂದು ಜಾತಕ ಪಕ್ಷಿಯಂತೆ ಕಾಯುವಂತೆ ಆಗಿದೆ. ಯಾರನ್ನು ನೋಡಿದರು ಅನುಮಾನ ಪಡುವಂತೆ ಆಗಿದೆ ಇಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ. ಇಡೀ ಭೂಮಂಡಲ ಪ್ರಾಣವನ್ನು ಕೈಲಿ ಹಿಡಿದು ಜೀವನ ಸಾಗಿಸುತ್ತ ಇದೆ. ನಿಖರ ವಾದ ಮಾಹಿತಿ ಸಿಗದೇ ಮಾಧ್ಯಮಗಳು ವೈಭವೀಕರಿಸುವ ಸುದ್ದಿ ನೋಡಿ ಕೇಳಿ ಭಯದಲ್ಲಿ ಇರುವ ಇಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ. ಈ ವೈರಾಣು ರೂಪಾಂತರ ಹೊಂದಿರುವ ಬಗ್ಗೆ ಸ್ಪಷ್ಟವಾಗಿ ಜನ ಸಾಮಾನ್ಯರಿಗೆ ಅರ್ಥ ವಾಗುವಂತೆ ಮೂಡಿಬಂದಿದೆ ಈ ಲೇಖನ. ಇದು ಉಸಿರು ಕಟ್ಟಿ ಸಾಯುವ ಮಂದಿಗೆ ಉಸಿರು ನೀಡುವಲ್ಲಿ. ತುಂಬಾ ಉಪಯೋಗ ವಾಗುತ್ತೆ. ಎನ್ನಬಹುದು. ಧನ್ಯವಾದಗಳು Gp.ಮುಳುಗುವ ವ್ಯಕ್ತಿಗೇ ಮರದ ಕೊಂಬೆ ಸಿಕ್ಕಿದ ಹಾಗೆ. ಇದೆ .
Very much useful information dear Dr. Very much appreciated your way of analysing facts. Thanks
Thanks for your information about the future of our country is going to be a great time at the same thing with my friends are you going to have been in the world
ಒಳ್ಳೆಯ ಮಾಹಿತಿ
Gd work Dr Gangaprasad sir Gd luck wish u all success in yr future research work thank u
Informative and useful article….surely it will bring some cheers and happiness into sadened hearts
ಕೊರೊನಾ, ಕೋವಿಡ್-೧೯, ಕ್ವಾರಂಟೇನ್, ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್, ಕೊರೊನಾ ವಾರಿಯರ್‍ಸ್ ಮೊದಲಾದ ಪದಗಳನ್ನೆಲ್ಲಾ ಕೇಳಿದ್ದೆ. ಈ ಮ್ಯುಟೇಷನ್ ಪದ ಕಿವಿಗೆ ಬಿದ್ದಿರಲಿಲ್ಲ. ಗಂಗಾಪ್ರಸಾದ್ ಅದನ್ನೂ ವಿವರವಾಗಿ ತಿಳಿಸಿಕೊಟ್ಟರು. ಇಮ್ಯುನಿಟಿ (ರೋಗ ನಿರೋಧಕ ಶಕ್ತಿ) ಚೆನ್ನಾಗಿದ್ದವರ ದೇಹವನ್ನು ಹೊಕ್ಕರೂ ಕೊರೊನಾ ವೈರಾಣು ಸೊರಗುತ್ತದೆ ಎಂಬ ಮಾಹಿತಿ ಮನಸ್ಸಿಗೆ ತುಸು ಸಮಾಧಾನ ಉಂಟು ಮಾಡಿತು.
ನಮ್ಮ ಮೈಸೂರಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ೧೨೯೦ರವರೆಗೂ ಹೋಗಿತ್ತು. ಕಳೆದ ಕೆಲವು ವಾರಗಳಿಂದ ಸೋಂಕಿತರ ಸಂಖ್ಯೆಯೂ ಇಳಿಮುಖವಾಗಿದೆ. ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಕಳೆದ ವಾರ ೨ ದಿನ ಒಂದೂ ಸಾವು ಇರಲಿಲ್ಲ. ಇದೆಲ್ಲವೂ ಜನರಲ್ಲಿ ಭಯ ಹೋಗಿಸಿ ಮತ್ತೆ ಧೈರ್ಯ ತುಂಬಿಕೊಳ್ಳಲು ಕಾರಣವಾಗಿದೆ. ಹಾಗಾಗಿ ದೀಪಾವಳಿ ಖರೀದಿಗೂ ಮಾರುಕಟ್ಟೆಯಲ್ಲಿ ನುಗ್ಗಾಟ ನಡೆಸಿದ್ದರು. ಒಟ್ಟಿನಲ್ಲಿ ಜನ ನಿದಾನವಾಗಿ ಕೊರೊನಾ ಜತೆಗೇ ದಿನ ದೂಡುವುದನ್ನು ರೂಢಿಸಿಕೊಂಡಿದ್ದಾರೆ. ಬಹುಶಃ ಮೈಸೂರಿನಲ್ಲಿಯೂ ಮ್ಯುಟೇಷನ್ ಹಂತದಲ್ಲಿದೆಯೇನೋ?
ಬರಹ ಮಾಹಿತಿ ಪೂರ್ಣವಾಗಿದೆ. ಸರಳವಾಗಿದೆ, ಸರಾಗ ಓದಿಸಿಕೊಂಡು ಹೋಗುತ್ತದೆ. ಧನ್ಯವಾದ ಗಂಗಾಪ್ರಸಾದ್.