ಇದೊಂದು ಬಹುದೊಡ್ಡ ಜಿಜ್ಞಾಸೆ. ಅನ್ಯಗ್ರಹದಲ್ಲಿ ಜೀವಿಗಳಿವೆಯಾ ಎಂಬುದು. ಈಗ ಶುಕ್ರ ಗ್ರಹದಲ್ಲಿ ಅಂತಹದ್ದೊಂದು ಪುರಾವೆಯನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ನೇಚರ್ ಆಸ್ಟ್ರಾನಮಿ ಎಂಬ ಜನಪ್ರಿಯ ನಿಯತಕಾಲಿಕದಲ್ಲಿ ಈ ಕುರಿತು ವಿವರ ಪ್ರಕಟವಾಗಿದೆ.
ಏನಿದು ಪುರಾವೆ
ಶುಕ್ರ ಗ್ರಹದಲ್ಲಿ ಇರುವ ಫೋಸ್ಪೀನ್ (phosphine-ಕೊಳೆತ ಮೀನಿನ ವಾಸನೆ ಅಥವಾ ಬೆಳ್ಳುಳ್ಳಿ ವಾಸನೆ ಹೊಂದಿರುವ ಅನಿಲ) ಇದಕ್ಕೆಲ್ಲಾ ಮೂಲ. ಇದು ಭೂಮಿಯಲ್ಲೂ ಇದೆಯಂತೆ. ಹೀಗಾಗಿ ಭೂಮಿಯನ್ನು ಹೊರತಾದ ಇತರ ಗ್ರಹಗಳಲ್ಲಿ ಈ ಅನಿಲ ಇದ್ದರೆ ಖಚಿತವಾಗಿಯೂ ಅಲ್ಲಿಯೂ ಜೀವಿಗಳು ಇದ್ದಾವೆ ಎಂದವರು ತರ್ಕಿಸಿದ್ದಾರೆ.
ಆದರೆ ಯಾವ ರೀತಿಯ ಜೀವಿಗಳು ಇರಬಹುದು ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿಲ್ಲ. ಆದಾಗ್ಯೂ, ಇಂತಹ ಅನಿಲ ಸೃಷ್ಟಿಯಾಗುವುದೇ ಬ್ಯಾಕ್ಟೀರಿಯಾಗಳಿಂದ, ಅವುಗಳು ಹೊರ ಸೂಸುವ ಆಮ್ಲಜನಕವು ಆ ವಾತಾವರಣದಲ್ಲಿ ಭೂಮಿಯಲ್ಲಿ ಸೃಷ್ಟಿಯಾಗುವ ರೀತಿಯಲ್ಲೇ ಫೋಸ್ಪೀನ್ ಅನಿಲವನ್ನು ಸೃಷ್ಟಿಸುತ್ತದೆ. ಹೀಗಾಗಿ ಅಲ್ಲೂ ಜೀವಿಗಳು ಇರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಹವಾಯಿಯ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ ವೆಲ್ ಟೆಲಿಸ್ಕೋಪಿಕ್ ಅನ್ನು ಉಲ್ಲೇಖಿಸಿ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
ನೇಚರ್ ಆಸ್ಟ್ರಾನಮಿಕಿಗೆ ಸಂದರ್ಶನ ನೀಡಿದ ಹಿರಿಯ ವಿಜ್ಞಾನಿ (ವೇಲ್ಸ್ ವಿವಿ) ಜಾನ್ ಗ್ರೀವ್ಸ್ ಅವರು, ಇದೊಂದು ಆಚ್ಚರಿದಾಯಕ ಸಂಶೋಧಕ. ನಿಜವಾಗಿಯೂ ನಾನು ಇದರಿಂದ ಸ್ತಂಭೀಭೂತನಾದೆ.
ದೀರ್ಘ ಕಾಲದ ಪ್ರಶ್ನೆ
ವಿಜ್ಞಾನ ಇಷ್ಟು ಮುಂದುವರಿದಿದೆ ನಿಜ. ಆದರೆ, ಅನ್ಯಗ್ರಹ ಜೀವಿಗಳ ಬಗ್ಗೆ ಇನ್ನೂ ಇದಮಿತ್ಥಂ ಅನ್ನುವ ಉತ್ತರ ಸಿಕ್ಕಿಲ್ಲ. ಕೇವಲ ಊಹಾಪೋಹಗಳು ಮಾತ್ರ ಹಬ್ಬಿವೆ. ಈ ಹಿನ್ನೆಲೆಯಲ್ಲಿ ಈ ಸಂಶೋಧನೆ ಮಹತ್ವ ಪಡೆದಿದೆ. ಜೀವಿಯೊಂದರ ಹುಟ್ಟು, ಬೆಳವಣಿಗೆಗೆ ಬೇಕಾದ ಅನಿಲವೊಂದು ಶುಕ್ರನಂತಹ (ವೀನಸ್) ಗ್ರಹದಲ್ಲಿ ಕಂಡು ಬಂದಿದೆ ಎಂಬುದು ಇಲ್ಲಿ ಗಮನಾರ್ಹ.
ಜೀವ ಕಾರಣ
ಜೀವ ಕಾರಣಕ್ಕೆ ಅಂದರೆ ಜೀವಿಯೊಂದರ ಉಗಮ ಮತ್ತು ಬೆಳವಣಿಗೆಯಲ್ಲಿ ಫೋಸ್ಪೀನ್ ಅನಿಲ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಶುಕ್ರ ಗ್ರಹದಲ್ಲಿ ಅಂತಹ ಅನಿಲ ಇದೆಯೆಂದ ಕೂಡಲೇ ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ನಡೆಯಬೇಕಾಗಿದೆ. ಯಾಕೆಂದರೆ, ಸಾಕಷ್ಟು ಜನರು ಅನ್ಯಗ್ರಹ ಜೀವಿಗಳನ್ನು ನೋಡಿದ್ದೀವಿ ಎಂದು ಹೇಳುತ್ತಾರೆ. ಜತೆಗೆ ಅಂತಹ ಸಾಧ್ಯತೆಗಳನ್ನೂ ನಾವು ನೇರವಾಗಿ ಅವೈಜ್ಞಾನಿಕವಾಗಿ ಅಲ್ಲಗಳೆಯುವಂತಿಲ್ಲ ಎಂದು ಮೆಸಾಶುವೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಲೆಕ್ಯುಲರ್ ಆಸ್ಟ್ರೋಲಜಿಸ್ಟ್ ಕ್ಲಾರ್ ಸೌಸಾ ಸಿಲ್ವಾ ಕೂಡ ಹೇಳುತ್ತಾರೆ.
ಈ ಸಂಶೋಧನೆಯು ಯಾಕೆ ಮಹತ್ವದ್ದೆಂದರೆ, ಫೋಸ್ಪೀನ್ ಅನಿಲವು ಅಲ್ಲಿದ್ದರೆ ಅದು ಖಚಿತವಾಗಿಯೂ ಯಾವುದಾದರೂ ಜೀವಿಯ ಅಸ್ತಿತ್ವವನ್ನು ತೋರಿಸುತ್ತದೆ. ಅದಿಲ್ಲದಿದ್ದರೆ ಬ್ಯಾಕ್ಟೀರಿಯಾ ಸೇರಿದಂತೆ ಯಾವುದೇ ಜೀವಿ ಅಲ್ಲಿ ಬದುಕಲು ಸಾಧ್ಯವಿಲ್ಲ. ಅವುಗಳು ಹೊರ ಸೂಸುವ ಈ ಅನಿಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಗ ಅಲ್ಲಿ ಇನ್ನೊಂದು ಜೀವಿಯ ಅಸ್ತಿತ್ವವನ್ನು ಪರಿಗಣಿಸಲು ಸಾಧ್ಯ ಎಂದವರು ವಿವರಿಸುತ್ತಾರೆ.
Good knowledge full article
Thank u ma’am