21.2 C
Karnataka
Sunday, September 22, 2024

    ಈ ಸಲ ಕಪ್ ಯಾರ್ಗೆ ಗುರೂ..

    Must read

    ನಾವೆಲ್ಲ ಕಾತುರದಿಂದ ಎದುರು ನೋಡುತ್ತಿರುವ  ಐ.ಪಿ.ಎಲ್  ಪಂದ್ಯ ನಾಳೆಯಿಂದ  ಶುರುವಾಗುತ್ತಿದೆ.  ಕೊರೋನ ಸಾಂಕ್ರಾಮಿಕ ರೋಗದಿಂದ  ಭಯಭೀತಿಗೊಂಡ  ಜನರ ಮನಸ್ಸನ್ನು ಮನರಂಜನೆಯತ್ತ ಒಯ್ಯುವಲ್ಲಿ ಐಪಿಎಲ್ ಖಂಡಿತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು. ಬಿಸಿಸಿಐ ನ ಉತ್ಸಾಹ, ವಿಶ್ವಾಸದಿಂದ ಈ ಟೂರ್ನಿ ಸಾಧ್ಯವಾಗುತ್ತಿದೆ.

    ಕ್ರಿಕೆಟ್ನಲ್ಲಿ ಐದು  ದಿನಗಳ ಟೆಸ್ಟ್ ಪಂದ್ಯವಿದೆ,
    ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯವಿದೆ ಮತ್ತು 2008 ರಲ್ಲಿ ಬಿಸಿಸಿಐ  ಎಲ್ಲಾ ದೇಶಗಳನ್ನೊಳಗೊಂಡ  ಲೀಗ್ ಆಧಾರಿತ ಪಂದ್ಯವನ್ನು ಜನರಿಗೆ ಪರಿಚಯಿಸಿತು. ಎರಡೂ ಟೀಂ ಗಳು ಟ್ವೆಂಟಿ  20  ಓವರ್ ಮಾಡಬೇಕು ಮತ್ತು  ಆಟವೂ ಬೇಗ ಮುಗಿಯುತ್ತದೆ.  ಇದು ಎಷ್ಟು ಜನಪ್ರಿಯವಾಯಿತೆಂದರೆ , 12 ವರ್ಷಗಳ ಕಡಿಮೆ ಅವಧಿಯಲ್ಲಿ ಇದು ವಿಶ್ವದ 10 ಜನಪ್ರಿಯ ಕ್ರೀಡಾ ಲೀಗ್‌ಗಳಲ್ಲಿ 6 ನೇ ಸ್ಥಾನವನ್ನು ಪಡೆದುಕೊಂಡಿತು. 

    ಲೀಗ್‌ ಆಟಗಳ ಜನಪ್ರಿಯತೆಯನ್ನು ಕ್ರೀಡಾಂಗಣದಲ್ಲಿ ಸೇರುವ  ಪ್ರೇಕ್ಷಕರ ಮತ್ತು  ಟಿವಿ ವೀಕ್ಷಕರ ಸಂಖ್ಯೆಯನ್ನು ಪರಿಗಣಿಸಿ ತೀರ್ಮಾನ ಮಾಡಲಾಗುತ್ತದೆ  . ಈ ಎರಡು ಅಂಶಗಳನ್ನು ಒಟ್ಟು  ಗಮನಿಸಿದಾಗ,  ಪ್ರಪಂಚದ ನಾನಾ ದೇಶಗಳಲ್ಲಿ ಆಡುವ ಲೀಗ್ ಪಂದ್ಯಗಳ  ಕ್ರಮಾಂಕ ಕೆಳಗಿನಂತಿದೆ:

    1. ಯು. ಎಸ್.ಎ –  ಎನ್.ಎಫ್.ಎಲ್ (ರಗ್ಬಿ ಲೀಗ್) 
    2. ಜರ್ಮನ್    –      ಬುಂಡೆಸ್ಲಿಂಗ (ಫುಟ್ಬಾಲ್),
    3. ಯು.ಎಸ್  – ಕಾಲೇಜ್ ಫುಟ್ಬಾಲ್ ವಿಭಾಗ I ,
    4. ಇಂಗ್ಲಿಷ್ ಪ್ರೀಮಿಯಂ ಲೀಗ್ (ಫುಟ್ ಬಾಲ್),
    5. ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್
    6. ಐ ಪಿ ಎಲ್

    ಭಾರತದಲ್ಲಿ  ಕ್ರಿಕೆಟ್ನಷ್ಟು ಜನಪ್ರಿಯ ಆಟ ಬೇರೊಂದಿಲ್ಲ.  ಕಾರಣ ಬ್ಯಾಟೇ ಬೇಕು ಅಂತ ಇಲ್ಲ ಒಂದು  ಹಲಗೆ ಮತ್ತು ರಬ್ಬರ್ ಚೆಂಡಿದ್ದರೂ ಸಾಕು ಈ ಆಟ ಆಡಬಹುದು. ಹಾಗಾಗಿ ಗಲ್ಲಿ ಗಲ್ಲಿಗಳಲ್ಲೂ ಈ ಆಟ ಪ್ರಸಿದ್ಧವಾಗಿದೆ . ಬಡವರಿಂದ ಶ್ರೀಮಂತರವರೆಗೂ  ಜನಪ್ರಿಯವಾಗಿದೆ. ಐ.ಪಿ.ಎಲ್ ವಿಶ್ವದ ಎಲ್ಲೆಡೆಯೂ ಹೆಚ್ಚು ವೀಕ್ಷಿಸುವ  ಲೀಗ್‌ ಪಂದ್ಯಗಳಲ್ಲಿ  ಒಂದಾಗಿದೆ.  ಐ.ಪಿ.ಎಲ್  ಪ್ರಸ್ತುತ ಎಂಟು  ಫ್ರ್ಯಾಂಚೈಸ್ ಹೊಂದಿದೆ. ಪ್ರತಿ ಪಂದ್ಯದಲ್ಲೂ ಸರಾಸರಿ 32000 ವೀಕ್ಷಕರ ಹಾಜರಾತಿ ಇರುತ್ತದೆ ಎಂದು ಸಮೀಕ್ಷೆ ಹೇಳುತ್ತದೆ. ಐಪಿಎಲ್ ಶುರುವಾಯಿತೆಂದರೆ ಫೀವರ್ ಬಂತು ಅಂತಾನೆ ಲೆಕ್ಕ.

    ಐಪಿಎಲ್ ನ 13ನೇ ಆವೃತ್ತಿ 19.09.2020 ರಿಂದ  10.11.2020  ರವರೆಗೆ ಯುನೈಟೆಡ್ ಅರಬ್ ಎಮರೈಟ್ಸ್ ನ   ದುಬೈ, ಅಬುದಾಭಿ ಮತ್ತು ಶಾರ್ಜಾ ನಗರಗಳಲ್ಲಿ  ನಡೆಯುತ್ತದೆ . ಒಟ್ಟು 53 ದಿನಗಳ ಕಾಲ ನಡೆಯುವ  ಈ ಪಂದ್ಯದಲ್ಲಿ   56 ಲೀಗ್ ಪಂದ್ಯಗಳು, 4 ಪ್ಲೇ-ಆಫ್  ಸೇರಿ ಒಟ್ಟು 60 ಪಂದ್ಯಗಳು ನಡೆಯಲಿವೆ. ಐಪಿಎಲ್ ನ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಪಂದ್ಯಾವಳಿಯನ್ನು ಭಾರತದಿಂದ  ಹೊರಗೆ ನಡೆಸಲಾಗುತ್ತಿದೆ.  

    ಮೊದಲು ನಡೆದದ್ದು 2009ರಲ್ಲಿ  ದಕ್ಷಿಣ ಆಫ್ರಿಕಾದಲ್ಲಿ. ಕಾರಣ  ಭಾರತದಲ್ಲಿ ಆಗ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿತ್ತು . ಎರಡನೆಯದು  2014ರಲ್ಲೂ ಚುನಾವಣೆಯ ಕಾರಣಕ್ಕೆ ಮೊದಲ 20 ಪಂದ್ಯ ಗಳನ್ನು ಯುಎಇ ನಲ್ಲಿ ನಡೆಸಿದ್ದರು. ಈ ವರ್ಷ  ಕೋವಿಡ್ -19 ಪ್ರಕರಣಗಳು ದೇಶದಲ್ಲಿ ದಿನದಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪುನ: ಯುಎಇ ನಲ್ಲಿ ನಡೆಯುತ್ತಿದೆ.

    ಫ್ಯಾಂಟಸಿ ಕ್ರಿಕೆಟ್ ಲೀಗ್ ಪ್ಲಾಟ್‌ಫಾರ್ಮ್ ಡ್ರೀಮ್ 11  ಪ್ರಾಯೋಜಕತ್ವದ  ಹಕ್ಕನ್ನು ಪಡೆದಿದ್ದಾರೆ . ಇಂಡಿಯನ್ ಆನ್ಲೈನ್ ಎಜುಕೇಷನ್ ಟೆಕ್ನಾಲಜಿ ಕಂಪನಿ ಅನ್ಅಕ್ಯಾಡಮಿ ಐಪಿಎಲ್ ನ ಅಧಿಕೃತ ಪಾಲುದಾರರಾಗಿದ್ದಾರೆ. ಸ್ಟಾರ್ ಸ್ಪೋರ್ಟ್ಸ್  ಲೈವ್ ಟಿವಿ ಪ್ರಸಾರ ಮತ್ತು ಡಿಸ್ನಿ ಹಾಟ್‌ಸ್ಟಾರ್  ಡಿಜಿಟಲ್ ಪ್ಲಾಟ್‌ ಫಾರ್ಮ್  ಪ್ರಸಾರದ ಹಕ್ಕನ್ನು ಪಡೆದುಕೊಂಡಿವೆ.

    ಟ್ವೆಂಟಿ 20  ಪಂದ್ಯವನ್ನು ನೀವು  ಕ್ರೀಡಾಂಗಣಕ್ಕೆ ಹೋಗಿ ನೋಡುವ ಮಜವೇ ಬೇರೆ. ಇಡೀ ಕ್ರೀಡಾಂಗಣದಲ್ಲಿ  ಆರ್ ಸಿ ಬಿ, ಆರ್ ಸಿ ಬಿ ಎಂದು   ಗಂಟಲು ಹರಿಯುವಂತೆ ಕೂಗಿ ಆಟಗಾರರನ್ನು    ವೀಕ್ಷಕರು ಪ್ರೋತ್ಸಾಹಿಸುತ್ತಿದ್ದರೆ ಅದು ನಿಮ್ಮ ಕಿವಿಗೆ ಅಲೆಅಲೆಯಾಗಿ ಬಂದು ಅಪ್ಪಳಿಸುತ್ತಿರುತ್ತದೆ.  ವಯಸ್ಸಿನ ಹಂಗಿಲ್ಲದೆ ಪ್ರತಿಯೊಬ್ಬರೂ  how is the josh ಎಂದರೆ high sir  ಎನ್ನುವಂತಿರುತ್ತದೆ. ಒಟ್ಟಿನಲ್ಲಿ ಇಡೀ  ವಾತಾವರಣದಲ್ಲಿ ಕರೆಂಟ್ ಹರಿಯುತ್ತಿರುತ್ತದೆ. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಎರಡೂ ಕಡೆ ಉತ್ಸವದ ವಾತಾವರಣವಿರುತ್ತದೆ.

    ಖಾಲಿ ಕ್ರೀಡಾಂಗಣ

    ಈ ಬಾರಿಯ ವಿಶೇಷತೆ ಎಂದರೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಅನುಪಸ್ಥಿತಿ. ಈ ಸಲ ಖಾಲಿ ಆಟದ ಮೈದಾನದಲ್ಲಿ ಅಭಿಮಾನಿಗಳ ಬೆಂಬಲವಿಲ್ಲದೆ ಹೇಗೆ ಆಟಗಾರರು ಸ್ಫೂರ್ತಿ ಪಡೆಯುತ್ತಾರೆ ಎನ್ನುವುದೇ ದೊಡ್ಡ ಕುತೂಹಲ. ಬಿಸಿಸಿಐ ಸಹ ಐಪಿಎಲ್ ಅನ್ನು ಕೊರೋನದಿಂದ ಕಾಪಾಡಲು ಸಾಕಷ್ಟು ಕಠಿಣ ಕ್ರಮಗಳನ್ನು  ಹಾಗೂ ನಿಯಮಗಳನ್ನು ರೂಪಿಸಿದೆ.

    ಈ ಬಾರಿ ಆಡುತ್ತಿರುವ ಎಂಟು ತಂಡಗಳ ನಾಯಕರು ಹೀಗಿದ್ದಾರೆ:

    1. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ

    2.ಚೆನ್ನೈ ಸೂಪರ್ ಕಿಂಗ್ ನಾಯಕ ಎಂ ಎಸ್ ಧೋನಿ

    3.ಕೋಲ್ಕತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್ 

    4.ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ 

    5. ಕಿಂಗ್ಸ್ 11ಪಂಜಾಬ್ ನಾಯಕ ಕೆ ಎಲ್ ರಾಹುಲ್

    6.ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್

    7.ರಾಜಸ್ಥಾನ್ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್

    8.ಸನ್ ರೈಸರ್ಸ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್. 

    ಸಮೀಕ್ಷೆಯ ಪ್ರಕಾರ ಅಗ್ರ ಸ್ಥಾನದಲ್ಲಿರುವ ನಾಲ್ಕು ತಂಡಗಳು :

    1.ಮುಂಬೈ ಇಂಡಿಯನ್ಸ್ (ಎಂಐ),
    2.ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ),
    3.ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು 4.ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ).

    1983ರ ಆ ಪಂದ್ಯ

    ಕ್ರಿಕೆಟ್  ಎಂದ ತಕ್ಷಣ ನನಗೆ ಜ್ಞಾಪಕಕ್ಕೆ   ಬರುವುದು 1983ರ ಭಾರತ- ವೆಸ್ಟ್ ಇಂಡೀಸ್  ODI  Finals.  ಅಬ್ಬಾ ! ನಮ್ಮ ತಂದೆಯವರು ಆದಿನ ನನ್ನ ಗೆಳೆಯರೊಡನೆ ಆಟವನ್ನು ಎಂಜಾಯ್ ಮಾಡಿದ ರೀತಿ ನವಯುವಕರನ್ನೂ ನಾಚಿಸುವಂತಿತ್ತು.

    ಒಟ್ಟಿನಲ್ಲಿ ಈ ಸಲದ ಐಪಿಎಲ್ ಪಂದ್ಯವು ಕುತೂಹಲಕಾರಿ,  ಮನೋರಂಜನಾ ಮತ್ತು ಸ್ಪರ್ಧಾತ್ಮಕವಾಗಿ ಇರುತ್ತದೆ . ವರ್ತಮಾನಕ್ಕೆ ಯಾವತ್ತೂ ಇತಿಹಾಸ ವ್ಯರ್ಥ ಎಂದು  ಸಾಬೀತಾಗುತ್ತದೆ.

    ಎಲ್ಲಾ ಟೀಮಿನವರು ಸಮನಾಗಿ ಇರುವ ಕಾರಣ ಯಾರು ಫೈನಲ್ಸ್ ಗೆ ಬಂದರೂ ಆ ದಿನ ಉತ್ತಮವಾಗಿ ಆಡಿದರೆ ಹಾಗೂ ಅವರ ಅದೃಷ್ಟ ಚೆನ್ನಾಗಿದ್ದರೆ ಅವರಿಗೆ ಕಪ್ ಸಿಗುವುದರಲ್ಲಿ  ಯಾವ ಸಂದೇಹವೂ ಇಲ್ಲ .

    ಆದರೆ  ಆರ್ ಸಿ ಬಿ ಹಾರ್ಡ್ ಕೋರ್ ಫ್ಯಾನ್ಸ್ ಎಲ್ಲರಿಗೂ  ಈ ಸಲ  ಆರ್ ಸಿ ಬಿ ಕಪ್ ಗೆದ್ದೇ ಗೆಲ್ಲುತ್ತದೆ  ಎನ್ನುವ   ನಂಬಿಕೆ  ದೃಢವಾಗಿದೆ.  ನಾವೆಲ್ಲಾ  ಟಿವಿಯ ಮುಂದೆ ಕುಳಿತೇ  ಆಟಗಾರರನ್ನು ಪ್ರೋತ್ಸಾಹಿಸೋಣ ಅಲ್ಲವೇ?

    .

    ಆರ್. ಶ್ರೀನಿವಾಸ್
    ಆರ್. ಶ್ರೀನಿವಾಸ್
    ನಿವೃತ್ತ ಬ್ಯಾಂಕರ್. ಬೆಂಗಳೂರು ನಿವಾಸಿ. ಬರವಣಿಗೆಯಲ್ಲಿ ಆಸಕ್ತಿ
    spot_img
    Previous article
    Next article

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!