ಮಧ್ಯ ಕರ್ನಾಟಕದ ಬೃಹತ್ ಕೆರೆ ಸೂಳೆಕೆರೆ. ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆ ಎಂಬ ಖ್ಯಾತಿ. ಪ್ರವಾಸಿಗರ ಮೆಚ್ಚಿನ ತಾಣ. ಮುಂಗಾರು ಮಳೆ ನೀರು ಹರಿದು ತುಂಬಿ ತುಳುಕುತ್ತಿದೆ. ಸ್ವಚ್ಛ ಪರಿಸರದಲ್ಲಿ ಸುರ್ಯೋದಯ ಹಾಗೂ ಸೂರ್ಯಾಸ್ತದ ನೀರವತೆಯಲ್ಲಿ ವಿಹಂಗಮ ನೋಟ ಸವಿಯುವುದೇ ಮುದ ನೀಡುತ್ತಿದೆ.
ಹರಿದ್ರಾವತಿ ಹಳ್ಳದಿಂದ ಸ್ವಾಭಾವಿಕ ಜಲ ಹಾಗೂ ಭದ್ರಾ ನಾಲೆ ಬಿಡುಗಂಡಿಯಿಂದ ಸತತ ಹರಿದ ನೀರಿನಿಂದ ಸತತ ಎರಡನೇ ವರ್ಷವೂ ಭರ್ತಿ ಆಗಿದೆ. ಗರಿಷ್ಠ ಮಟ್ಟ 28 ಅಡಿ ನೀರು ತುಂಬಿದೆ. ಬಸವನ ನಾಲಾ ಬಿಡುಗಂಡಿ ಮಂಟಪದ ಮೇಲೆ ನೀರು ನಿಂತಿದೆ. ಸಾಗರೋಪಾದಿ ನಿಂತ ನೀರು ಕೆರೆ ಪಕ್ಕ ಸಾಗುವ ಪ್ರಯಾಣಿಕರಿಗೆ ಮನೊಲ್ಲಾಸ ನೀಡುತ್ತಿದೆ.
ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಅನೇಕ ಪಟ್ಟಣ ಹಾಗೂ ಗ್ರಾಮಗಳಿಗೆ ಈ ಕೆರೆಯೇ ಕುಡಿಯುವ ನೀರಿನ ಮೂಲ. ಭರ್ತಿಗೊಂಡ ಹಿನ್ನೆಲೆಯಲ್ಲಿ ಬೇಸಿಗೆ ನೀರಿನ ಬವಣೆಯಿಂದ ಮುಕ್ತಿಗೊಳಿಸಿದೆ. ಸುಮಾರು 108 ಹಳ್ಳಿಗಳಿಗೆ ನೀರು ನೀಡುವ ಅನೇಕ ಪಂಪ್ ಹೌಸ್ ಗಳು ಕೆರೆ ಸುತ್ತ ಕಾರ್ಯನಿರತವಾಗಿವೆ.
ಕೆರೆ ಎರಡು ಬದಿಯಲ್ಲಿಯನ ಗುಡ್ಡಗಳಲ್ಲಿ ಮಳೆಯಿಂದಾಗಿ ಹಚ್ಚ ಹಸಿರು ಹೊದ್ದಿವೆ. ಕೆರೆ ಏರಿ ಎದುರಿನ ಭದ್ರಾ ನಾಲೆಯ ಅಕ್ವಾಡೆಕ್ಟ್ ಪ್ರವಾಸಿಗರು ನಡೆದಾಡುವ ತಾಣ. ಇಲ್ಲಿ ಸೆಲ್ಫಿ ತೆಗೆಯುವ ಯುವಕರ ಸಾಹಸ ನಿತ್ಯ ನಡೆಯುತ್ತಿದೆ. . ಕೆರೆ ಏರಿ ಕೆಳಭಾಗದಲ್ಲಿ ಹಸಿರು ಗದ್ದೆ, ಅಡಿಕೆ ತೋಟಗಳು ನಡೆದಾಡುವ ಪರಿಸರದ ಮೌನ ಕಣಿವೆ ನೆನಪಿಸುತ್ತವೆ. ಇತ್ತೀಚೆಗೆ ಅಕ್ವಾಡೆಕ್ಟ್ ಎರಡು ಬದಿಯಲ್ಲಿ ರಕ್ಷಣಾ ಕಂಬಿಗಳಿಂದ ಸುರಕ್ಷತೆಗೆ ಕ್ರಮಕೈಗೊಳ್ಳಲಾಗಿದೆ.
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿ ಕುಸಿದಿದೆ. ದೋಣಿ ವಿಹಾರ ಕೇಂದ್ರದಲ್ಲಿಯೂ ಹೆಚ್ಚಿನ ಚಟುವಟಿಕೆ ಕಂಡು ಬರುತ್ತಿಲ್ಲ. ಸೋಂಕಿನ ಭೀತಿಯಲ್ಲಿಯೇ ಸೂಳೆಕೆರೆ ಸೌಂದರ್ಯ ಪೂರ್ಣಮಟ್ಟದಲ್ಲಿ ಸವಿಯಲು ಅಡಚಣೆ ಇದ್ದೆ ಇರುತ್ತದೆ. ಐತಿಹಾಸಿಕ ಸಿದ್ದೇಶ್ವರ ದೇಗುಲ ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಾಮಾನ್ಯ.
ಪೂರ್ಣ ಮಟ್ಟದ ನೀರು ತುಂಬಿದ ಕಾರಣ ಹಿನ್ನೀರಿನಲ್ಲಿ ಕೆಲ ಬೆಳೆಗಳು ಮುಳುಗಿವೆ. ಹೂಳು ತುಂಬಿದ ಕಾರಣ ಸಾಮರ್ಥ್ಯದಷ್ಟು ನೀರು ತುಂಬಲಾಗುತ್ತಿಲ್ಲ. ಖಡ್ಗ ಸಂಘ ಸರ್ವೇ ನಡೆಸಿ ಬೌಂಡರಿ ನಿರ್ಧರಿಸಲು ಹೋರಾಟ ನಡೆಸಿದೆ. ಹೂಳು ತೆಗೆಯಿಸಲು ಪ್ರಯತ್ನ ನಡೆಸಿದೆ. ಇದುವರೆಗೂ ಹೇಳಿಕೊಳ್ಳುವಂತ ಪ್ರಗತಿ ಆಗಿಲ್ಲದಿರುವುದು ಬೇಸರ ತಂದಿದೆ.
ರಾಜ್ಯದ ನೆಚ್ಚಿನ ಪ್ರವಾಸಿ ತಾಣವನ್ನಾಗಿಸಲು ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಂಡಿಲ್ಲ. ಕೇರಳ ರಾಜ್ಯದಲ್ಲಿನ ಪ್ರವಾಸಿ ತಾಣ ಅಭಿವೃದ್ಧಿ ನಡೆಸಬೇಕು. ಒಂದಿಷ್ಟು ಅಭಿವೃದ್ಧಿ ನಡೆದರೂ ಹೇಳುಕೊಳ್ಳುವ ಪ್ರಗತಿ ಅಲ್ಲ. ಸೂಳೆಕೆರೆ ಅಭಿವೃದ್ಧಿಗಾಗಿಯೇ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದಲ್ಲಿ ಸರ್ಕಾರಕ್ಕೆ ಆದಾಯವೂ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಚಿಂತನೆ ಅಗತ್ಯ ಎನ್ನುತ್ತಾರೆ ಪ್ರವಾಸಿಗರು.
ಕೆರೆಯನ್ನು ನೋಡಬೇಕೆನಿಸುತ್ತಿದೆ.ಚಿತ್ರಗಳು ಚೆನ್ನಾಗಿವೆ.
ಅಬ್ಬಾ ಎಂತ ರುದ್ರ ರಮಣೀಯ. ಈ ಸಾಗರ.ಇದಕ್ಕೆ ಒಂದು ರೋಚಕವಾದ ಕಥೆ ಇದೆ ಅಂತ ಕೇಳಿದ್ದೆ. ಪ್ರತಿಯೊಬ್ಬ ಕನ್ನಡಿಗರು ಒಮ್ಮೆ ನೋಡಲೇ ಬೇಕು. ವೀರೇಶ್ ಪ್ರಸಾದ್. ನಿಮ್ಮ ನಿರೂಪನೇ ತುಂಬಾ ಸೊಗಸಾಗಿದೆ. ಈಗಲೇ ನೋಡಬೇಕು ಅನ್ನುವ ಅಸೆ ನೂರಾರು ಊರುಗಳಿಗೆ ನೀರು. ಒದಗಿಸುತ್ತಿರುವ ಈ ಸೂಳೆಕೆರೆ. ಪ್ರವಾಸಿಗರ ತಾಣವಾಗಲಿ. ಇಂತ ಮುಖ್ಯ ಮಾಹಿತಿಯನ್ನು ನೀಡಿದಕ್ಕಾಗಿ ಧನ್ಯವಾದಗಳು. ಇನ್ನು ಇನ್ನು. ಉತ್ತಮ ಲೇಖನ ನಿಮ್ಮಿಂದ ಬರಲಿ.
ಶ್ರೀ ವೀರೇಶ್ ಪ್ರಸಾದ್ ರ ಲೇಖನ ಉತ್ತಮವಾಗಿದೆ. ಸೂಳೆ ಕೆರೆ ಜಾಗತಿಕ ಮಟ್ಟದಲ್ಲಿ ಪ್ರವಾಸಿ ತಾಣವಾಗಬೇಕು. ಈ ಬರಹ ಪ್ರವಾಸೋದ್ಯಮ ಇಲಾಖೆ ತಲುಪಲಿ…ಒಂದಿಷ್ಟು ಅಭಿವೃದ್ಧಿ ಕಾಣಲಿ
ಫೈಜ್ನಟ್ರಾಜ್
ಏಷ್ಯಾ ಖಂಡದಲ್ಲೇ ಅತೀ ದೊಡ್ಡ ಕೆರೆ .ಚನ್ನಗಿರಿ ಯಿಂದ ದಾವಣಗೆರೆಗೆ ಬಸ್ಸಿನಲ್ಲಿ ಹೋಗುವಾಗ ಅದರ ಸುಂದರ ಸೊಬಗು ನೋಡಬೇಕು. ಅದರಲ್ಲೂ ಸೂಳೆಕೆರೆಯ ಭವ್ಯತೆಯನ್ನು ವಿ.ಪಿ ಲೇಖನದಲ್ಲಿ ಸೊಗಸಾಗಿ ವಿವರವಾಗಿದೆ. ಅದು ಪ್ರವಾಸೋದ್ಯಮ ಇಲಾಖೆಯ ಗಮನ ಸೆಳೆಯಿತು. ಎಲ್ಲದಕ್ಕಿಂತ ಮುಖ್ಯವಾಗಿ ಅನೇಕ ಊರುಗಳಿಗೆ ನೀರುಣಿಸುತ್ತಿರುವ ಸೂಳೆಕೆರೆ ಎಲ್ಲರ ಗಮನ ಸೆಳೆಯುತ್ತಿದೆ . ಪ್ರಗತಿ ಹೇಳಿಕೊಳ್ಳುವಂತಾದು ಆಗಿಲ್ಲ ಎನ್ನುವುದು ಲೇಖಕ ವಿ.ಪಿ ಯ ಬೇಸರ. ನಮ್ಮ ವ್ಯವಸ್ಥೆ ಯೇ ಹಾಗೆ ಅಲ್ಲವೇ . ಗೆಳೆಯ ವಿ.ಪಿ ಯಿಂದ ಇಂತಹ ಜನೋಪಯೋಗಿ ಲೇಖನಗಳು ಬರಲಿ.
ಉತ್ತಮ ಪ್ರವಾಸಿತಾಣ ಆಗಲಿ. ಉಪಯುಕ್ತ ಮಾಹಿತಿಗಳನ್ನು ಹೊಂದಿದ ಲೇಖನ.