ನವರಾತ್ರಿಯನ್ನು ನಮ್ಮ ದೇಶದಲ್ಲಿ ಹಿಂದೂಗಳು ಬಹಳ ವಿಧವಾಗಿ ಆಚರಿಸುತ್ತಾರೆ. ಕೆಲವರು ಉಪವಾಸ ವ್ರತ ಮಾಡಿದರೆ ಕೆಲವರು ವಿಜೃಂಭಣೆಯಿಂದ ದೇವಿಯನ್ನು ಆರಾಧಿಸುತ್ತಾರೆ.
ಹಬ್ಬವನ್ನು ಅವರವರ ಪ್ರಾದೇಶಿಕ ಸಂಸ್ಕೃತಿಯಂತೆ ಆಚರಿಸುತ್ತಾರೆ.ಮಳೆಗಾಲ ಮುಗಿದ ನಂತರ ಚಳಿಗಾಲ ಆರಂಭದ ಮೊದಲು ಬರುವ ಈ ಹಬ್ಬವನ್ನು ನವರಾತ್ರಿ ಎಂದೂ ಕರೆಯುತ್ತಾರೆ. ಎಲ್ಲೆಲ್ಲೂ ದುರ್ಗಾ ದೇವಿಯ ಆರಾಧನೆ ನಡೆಯುತ್ತದೆ.
ನಮ್ಮ ದೇಶದ ಪೂರ್ವ ಮತ್ತು ಈಶಾನ್ಯದಲ್ಲಿ ದುರ್ಗಾಪೂಜೆ ನವರಾತ್ರಿಯ ಬಹು ಮುಖ್ಯವಾದ ಆಚರಣೆ . ವಾಯುವ್ಯ ಭಾಗದಲ್ಲಿ ಈ ಹಬ್ಬವನ್ನು ರಾಕ್ಷಸ ರಾವಣನನ್ನು ಕೊಂದು ಶ್ರೀರಾಮ ವಿಜಯ ಆದ ಕಥೆಯನ್ನು ರಾಮಲೀಲಾ ಎಂಬುದಾಗಿ ಆಚರಿಸುತ್ತಾರೆ. ಇನ್ನೂ ದಕ್ಷಿಣ ಭಾಗದಲ್ಲಿ ರಾಮನ ಗೆಲುವನ್ನು ಮತ್ತು ದೇವಿಯ ಪೂಜೆಯನ್ನು ಮಾಡುತ್ತಾರೆ. ಯಾರು ಹೇಗೆ ಆಚರಿಸಿದರೂ ಮೂಲವಾಗಿ ಅಧರ್ಮವನ್ನು ನಾಶಮಾಡಿ ಧರ್ಮವನ್ನು ಸ್ಥಾಪಿಸುವುದೇ ಆಗಿರುತ್ತದೆ.
ದಕ್ಷಿಣದಲ್ಲಿ ಮನೆಮನೆಯಲ್ಲೂ ಬೊಂಬೆಗಳನ್ನು ಅಲಂಕಾರವಾಗಿ ಜೋಡಿಸಿ ಎಲ್ಲರನ್ನೂ ಕರೆದು ಸಡಗರಿಸುತ್ತಾರೆ.ಗುಜರಾತ್ ನಲ್ಲಿ ಗರ್ಭ ನೃತ್ಯ ಮಾಡಿ ಜನರು ಸಂತೋಷದಿಂದ ದೇವಿಯ ಪೂಜೆ ಮಾಡುತ್ತಾರೆ.
ಬಂಗಾಳಿಗರು ಅತ್ಯಂತ ದೊಡ್ಡದಾದ ಪೆಂಡಾಲ್ ಹಾಕಿ ದೇವಿ ಪೂಜೆಯನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ಅವರಲ್ಲಿ ತುಂಬಿದ ಮಣ್ಣಿನ ಮಡಿಕೆಯಲ್ಲಿ ನಿಧಾನವಾಗಿ ಉರಿಯುವ ಇದ್ದಿಲು ಮತ್ತು ಸಾಂಬ್ರಾಣಿ ಹಾಕಿ ಹೆಂಗಸರು ಗಂಡಸರು ಡೋಲಿನ ಬಡಿತಕ್ಕೆ ನರ್ತಿಸುತ್ತಾರೆ. ಇನ್ನೂ ಕೆಲವೆಡೆ ಒಂಬತ್ತು ದಿನವೂ ರಾಮಾಯಣವನ್ನು ರಾತ್ರಿ ನಾಟಕವಾಡಿ ಜನರನ್ನು ಸಂತೋಷ ಗೊಳಿಸುತ್ತಾರೆ.
ನಮ್ಮ ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲಿ ಇಷ್ಟೊಂದು ಸುದೀರ್ಘಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣ ಸಿಗುವುದು ಬಹಳ ಅಪರೂಪ.
ನಮ್ಮ ಕರ್ನಾಟಕದಲ್ಲಿ ನವರಾತ್ರಿಯನ್ನು ನಾಡಹಬ್ಬ ವೆಂದು ಆಚರಿಸುತ್ತಾರೆ. ವಿಜಯನಗರದ ರಾಜರು ತಮ್ಮ ವೈಭವವನ್ನು ತೋರಿಸಲು ಈ ಹಬ್ಬವನ್ನು ಶುರುಮಾಡಿದರು.
ಹಿಂದೂಗಳ ಸಂಪ್ರದಾಯದಂತೆ ಮುಖ್ಯವಾಗಿ ದೇವಿಯನ್ನು ಅವತಾರವನ್ನು ಮೂರು ವಿಧದಲ್ಲಿ ಪ್ರಾರ್ಥನೆ ಮಾಡುತ್ತಾರೆ .ಮಹಾಸರಸ್ವತಿ, ಮಹಾಲಕ್ಷ್ಮಿ ಮತ್ತು ಮಹಾಕಾಳಿ ಎಂದು. ಬ್ರಹ್ಮ ವಿಷ್ಣು ಮತ್ತು ರುದ್ರ ಈ ದೇವಿಯರಿಗೆ ತಮ್ಮಶಕ್ತಿಯನ್ನು ಕೊಟ್ಟಿರುತ್ತಾರೆ.
ಈ ಮೂರು ದೇವತೆಗಳನ್ನು ಒಂದೊಂದು ದೇವಿಯ ಮೂರು ವಿಧದಲ್ಲಿ ಪೂಜಿಸುತ್ತಾರೆ.ಅದಕ್ಕೆ ನವರಾತ್ರಿಯನ್ನು 9 ದಿನ ಆಚರಿಸುತ್ತಾರೆ.
೧. ತಾಯಿ ಶೈಲಪುತ್ರಿ ದೇವಿ.
ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಪೂಜೆ ನಡೆಯುತ್ತದೆ.ಶೈಲ ವೆಂದರೆ ಪರ್ವತ ಪುತ್ರಿ ಎಂದರೆ ಮಗಳು.ಕೈಯಲ್ಲಿ ತ್ರಿಶೂಲ ಮತ್ತು ಕಮಲವನ್ನು ಹಿಡಿದಿರುತ್ತಾಳೆ.ದೇವಿ ಎತ್ತಿನ ಮೇಲೆ ಕೂತಿರುತ್ತಾಳೆ. ದೇವಿಯ ಪಾದಕ್ಕೆ ತುಪ್ಪವನ್ನು ನೈವೇದ್ಯ ಮಾಡುತ್ತಾರೆ.
೨. ತಾಯಿ ಬ್ರಹ್ಮಚಾರಿಣಿ ದೇವಿ.
ಒಂದು ಕೈಯಲ್ಲಿ ಕುಂಭ ಮತ್ತೊಂದರಲ್ಲಿ ಜಪಮಣಿ ಹಿಡಿದಿರುತ್ತಾಳೆ.ದೇವತೆ ಪ್ರೀತಿ ಮತ್ತು ನಂಬಿಕೆಯ ಅಧಿದೇವತೆ. ಧ್ಯಾನ ಮತ್ತು ಬುದ್ಧಿಮತ್ತೆಯ ಗಣಿ. ರುದ್ರಾಕ್ಷಿ ಸರವನ್ನು ಹಾಕಿರುತ್ತಾಳೆ. ಬರೀ ಕಾಲಿನಲ್ಲಿರುವ ಈ ದೇವಿ ಶಿವನನ್ನು ಒಲಿಸಲು ಘೋರ ತಪಸ್ಸು ಮಾಡುತ್ತಾಳೆ. ನೈವೇದ್ಯಕ್ಕೆ ಸಕ್ಕರೆ ಮಾತ್ರ ಅರ್ಪಿಸುತ್ತಾರೆ.
೩. ತಾಯಿ ಚಂದ್ರಕಾಂತ ದೇವಿ
ಮೂರನೆಯದಿನ ಈ ದುರ್ಗಾದೇವಿಯು ಹುಲಿಯ ಮೇಲೆ ಆರೂಢ ಆಗಿರುತ್ತಾಳೆ. ದೇವಿಯ ಶರೀರದಿಂದ ಚಿನ್ನದ ಬಣ್ಣ ಹೊಮ್ಮುತ್ತಿರುವಂತೆ ಕಾಣುತ್ತದೆ.ದೇವಿಗೆ 10 ಕೈಗಳು ಇರುತ್ತದೆ. ಎಂಟು ಕೈಗಳಲ್ಲಿ ವಿಧವಿಧವಾದ ಯುದ್ಧ ಅಸ್ತ್ರಗಳು ಮತ್ತು ಒಂದು ಕೈಯಲ್ಲಿ ವರಗಳನ್ನು ಕೊಡುತ್ತಾ ಮತ್ತೊಂದು ಕೈಯಲ್ಲಿ ಅಭಯಮುದ್ರೆ ಆಶ್ವಾಸನೆ ತೋರಿಸುತ್ತಾಳೆ.ಚಂದ್ರಕಾಂತ ದೇವಿ ಎಂದರೆ ಬ್ರಹ್ಮಾನಂದ ದಲ್ಲಿ ಇರುವ ಬೆಳದಿಂಗಳ ಶೀತ ಮಾರುತದಂತೆ. ದೇವಿಗೆ ಖೀರ್ ನೇವೇದ್ಯ ಮಾಡುವುದರಿಂದ ಎಲ್ಲನೋವುಗಳು ನಿವಾರಣೆಯಾಗುತ್ತೆ.
೪. ತಾಯಿ ಕೂಷ್ಮಾಂಡ ದೇವಿ
ನಾಲ್ಕನೇ ದಿನದಂದು ಕುಷ್ಮಾಂಡ ದೇವಿಯ ಆರಾಧನೆ ನಡೆಯುತ್ತದೆ. ಎಂಟು ಕೈಗಳು ಇರುತ್ತದೆ.ಏಳು ಕೈಯಲ್ಲಿ ಯುದ್ಧದ ಆಯುಧಗಳು ಒಂದು ಕೈಯಲ್ಲಿ ಜಪಮಣಿಇರುತ್ತದೆ.ದೇವಿಯು ಹುಲಿಯ ಮೇಲೆ ಆಸೀನರಾಗಿರುತ್ತಾಳೆ.ದೇವಿಯ ಸುತ್ತಲೂ ಸೂರ್ಯ ಪ್ರಭೆ ಇರುತ್ತದೆ.ಕುಂಭ ಬಂದ್ ಎಂದರೆ ಬ್ರಹ್ಮಾಂಡದ ಆನಂದ ಅಥವಾ ಬ್ರಹ್ಮ ಜ್ಞಾನ ದೇವತೆ.ದೇವಿಯ ಆಸ್ಥಾನ ಬ್ರಹ್ಮ ಪರ್ವತದಲ್ಲಿದೆ. ಮಾಲ್ಪುವಾ ನೇವೇದ್ಯ ಮಾಡಬೇಕು. ಜ್ಞಾನವನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ನೀಡುತ್ತಾಳೆ.
೫. ತಾಯಿ ಸ್ಕಂದ ಮಾತಾ ದೇವಿ.
ಸಿಂಹ ರೂಢಿನಿ ಮತ್ತು ತೊಡೆಯ ಮೇಲೆ ಮಗ ಸ್ಕಂದನನ್ನು ಕೂಡಿಸಿಕೊಂಡು ಇರುತ್ತಾಳೆ. ಮೂರು ಕಣ್ಣು ಮತ್ತು ನಾಲ್ಕು ಕೈ ಇರುತ್ತದೆ.ಎರಡು ಕೈಯಲ್ಲಿ ಕಮಲದ ಹೂವು ಮತ್ತೆರಡು ಕೈ ಅಭಯ ಮತ್ತು ರಕ್ಷಣೆ ಕೊಡುವ ಮುದ್ರೆ.ಸ್ಕಂದ ಮಾತೆಯ ಕೃಪೆಯಿಂದ ಎಂತಹ ಮೂರ್ಖನು ಜ್ಞಾನಿಯಾದ ಪಂಡಿತನಾಗ ಬಲ್ಲ.ಕಾಳಿದಾಸ ಪಂಡಿತನಾದಂತೆ.ಬಾಳೆಹಣ್ಣು ನೈವೇದ್ಯಮಾಡುವುದರಿಂದ ಬಹಳ ತೃಪ್ತಳಾಗುತ್ತಾಳೆ.
೬. ತಾಯಿ ಕಾತ್ಯಾಯಿನಿ ದೇವಿ.
ಕಾತ್ಯಾಯಿನಿ ತನ್ನ ತಪಸ್ಸಿಗಾಗಿ ಕಾತ್ಯಾಯನ ಋಷಿಯ ಆಶ್ರಮದಲ್ಲಿ ಇದ್ದರಂತೆ. ಅದಕ್ಕೆ ಅವರ ಹೆಸರು ಕಾತ್ಯಾಯಿನಿ ಎಂದು ಆಯಿತು.ಈ ದೇವಿ ಸಿಂಹವಾಹಿನಿ ಮೂರು ಕಣ್ಣು ಮತ್ತು ನಾಲ್ಕಕೈಗಳಿವೆ.ಒಂದು ಎಡ ಕೈಯಲ್ಲಿ ಯುದ್ದಾಯುದ ಮತ್ತೊಂದರಲ್ಲಿಪುಷ್ಪವನ್ನು ಹಿಡಿದಿರುತ್ತಾಳೆ. ಬಲಗೈಯಲ್ಲಿ ರಕ್ಷಣೆ ಮತ್ತು ವರಗಳನ್ನು ನೀಡುತ್ತಿರುವ ಮುದ್ರೆ ಇರುತ್ತದೆ. ದೇವಿಯು ಚಿನ್ನದ ಬಣ್ಣವನ್ನು ಹೊಂದಿರುತ್ತಾಳೆ.ದೇವಿಗೆ ಜೇನುತುಪ್ಪ ನೇವೇದ್ಯ ಮಾಡುವುದರಿಂದ ದೇವಿ ಸುಪ್ರೀತ ಆಗುತ್ತಾಳೆ.
೭. ತಾಯಿ ಕಾಳರಾತ್ರಿ ದೇವಿ.
ಕಪ್ಪು ಬಣ್ಣ ತಲೆಯ ತುಂಬಾ ಹೊರೆ ಯಂತಿರುವ ಕೂದಲು ನಾಲ್ಕು ಕೈಗಳು ಇರುತ್ತವೆ.ಎರಡು ಕೈಯಲ್ಲಿ ಯುದ್ಧದ ಆಯುಧ ಮತ್ತು ಬೆಂಕಿ ಮತ್ತೆರಡು ಕೈಯಲ್ಲಿ ವರಗಳನ್ನು ನೀಡುವ,ರಕ್ಷಿಸುವ ಮುದ್ರೆ ಇರುತ್ತದೆ. ಕತ್ತಲು ಮತ್ತು ಅಜ್ಞಾನವನ್ನು ಹೋಗಲಾಡಿಸುತ್ತಾಳೆ. ಕಾಳರಾತ್ರಿ ದೇವಿ ಅವತಾರ ಅಂಧಕಾರವನ್ನು ಓಡಿಸುವ ಕತ್ತಲೆಯನ್ನು ದ್ವೇಷಿಸುವ ಕಾಳಿಮಾತೆಯ ದೇವಸ್ಥಾನ ಕೊಲ್ಕತ್ತಾದಲ್ಲಿ ಪ್ರಖ್ಯಾತವಾಗಿದೆ. ದೇವಿಗೆ ಬೆಲ್ಲವನ್ನು ನೈವೇದ್ಯ ಮಾಡಿದರೆ ನೋವು ತೊಂದರೆಗಳಿಂದ ವಿಮುಕ್ತರಾಗ ಬಹುದು.ದೇಶದ ಉತ್ತರಭಾಗದಲ್ಲಿ ಚಿಕ್ಕ ಹೆಣ್ಣು ಮಕ್ಕಳನ್ನು ದೇವಿಯರು ಎಂದು ಕರೆದು ಪಾದಗಳನ್ನ ತೊಳೆದು ಪೂಜೆ ಮಾಡಿ ಪೂರಿ ಸಜ್ಜಿಗೆ ಮತ್ತು ದಕ್ಷಿಣೆ ಕೊಡುತ್ತಾರೆ.ಸನಾತನ ಧರ್ಮವನ್ನು ಕಾಪಾಡುವ ಈ ಸಂಸ್ಕೃತಿ ಬಹುಶಃ ಪ್ರಪಂಚದಲ್ಲಿ ಎಲ್ಲೂ ಇರಲಾರದು.
೮. ತಾಯಿ ಗೌರಿದೇವಿ.
ನವರಾತ್ರಿಯ ಎಂಟನೆಯ ದಿನವಾದ ಇಂದು ಗೌರಿ ದೇವಿಯನ್ನು ಪೂಜಿಸುತ್ತಾರೆ ನಾಲ್ಕು ಕೈಗಳು ಬಿಳಿಯಾನೆ ಅಥವಾ ಎತ್ತಿನ ಮೇಲೆ ಆಸನಾರೂಢಳಾಗಿರುತ್ತಾಳೆ.ಕೈಯಲ್ಲಿ ತ್ರಿಶೂಲ ಮತ್ತು ಡಮರುಗವನ್ನು ಹಿಡಿದಿರುತ್ತಾಳೆ. ದೇವಿಯು ಅತ್ಯಂತ ಶುಭ್ರ ಶ್ವೇತ ವರ್ಣದ ಗಳಾಗಿರುತ್ತಾಳೆ. ಮುಖದಲ್ಲಿ ಶಾಂತತೆ ಹಾಗೂ ವಾತ್ಸಲ್ಯದ ಕಳೆ ಹೊಳೆಯುತ್ತಿರುತ್ತದೆ ಮಹಾ ಗೌರಿಯ ದೇವಸ್ಥಾನ ಹರಿದ್ವಾರದಲ್ಲಿದೆ.ತೆಂಗಿನಕಾಯಿ ನೆವೇದ್ಯ ಮಾಡುವುದರಿಂದ ಸದಾ ಸುಮಂಗಲಿಯರು ಆಗಿರುವಂತೆ ಆಶೀರ್ವಾದ ಮಾಡುತ್ತಾಳೆ.
೯. ತಾಯಿ ಸಿದ್ಧಿದಾತ್ರಿ ದೇವ
ಒಂಬತ್ತನೆಯ ದಿನವಾದ ಇಂದು ಸಿದ್ಧಿದಾತ್ರಿ ಯ ಆರಾಧನೆ ನಡೆಯುತ್ತದೆ. ದೇವಿಗೆ ನಾಲ್ಕು ಕೈಗಳು ಮತ್ತು ಕಮಲದ ಮೇಲೆ ಆಸೀನರಾಗಿರುತ್ತಾರೆ. ಗಧೆ ಮತ್ತು ಯುದ್ಧಆಯುಧ ಮತ್ತು ಪುಸ್ತಕ ಮತ್ತು ತಾವರೆಯನ್ನು ಕೈಯಲ್ಲಿ ಹಿಡಿದಿರುತ್ತಾರಳೆ. ದೇವಿಯ ಮಂದಿರ ಹಿಮಾಲಯದ ನಂದ ಪರ್ವತದಲ್ಲಿದೆ ದೇವಿಯು 26 ವಿಧವಾದ ಭಕ್ತರ ಆಸೆಗಳನ್ನು ಪೂರೈಸುತ್ತಾಳೆ. ದೇವಿಯು ನಮ್ಮಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ಕೊಟ್ಟು ಕಷ್ಟಗಳಿಂದ ಪಾರಾಗುವಂತೆ ಮಾಡುತ್ತಾಳೆ.ನಮ್ಮ ಅವಗುಣಗಳನ್ನು ದೂರ ಮಾಡಿ ಮನಸ್ಸನ್ನು ಸ್ವತಂತ್ರಹಾಗೂ ಸ್ವಚ್ಛತೆಯಿಂದ ಇರುವಂತೆ ಕಾಪಾಡುತ್ತಾಳೆ. ದೇವಿಗೆ ಸಾಸಿವೆ ಕಾಳನ್ನು ಅರ್ಪಿಸಬೇಕು.ಜೀವನದಲ್ಲಿ ಯಾವ ಪ್ರಾಕೃತಿಕ ಅವಘಡ ಬಾರದಂತೆ ರಕ್ಷಿಸುತ್ತಾಳೆ.
ಈ ಎಲ್ಲ ದೇವಿಯರ ಮಹಾತ್ಮೆಯನ್ನು ದೇವಿ ಮಹಾತ್ಮೆ ಎಂಬ ಸಂಸ್ಕೃತ ಗ್ರಂಥದಲ್ಲಿ ವರ್ಣಿಸಿದ್ದಾರೆ. ಇದು ಮಾರ್ಕಂಡಯಮುನಿಗಳಿಂದ ರಚಿತವಾಗಿದೆ.ದೇವಿಮಹಾತ್ಮೆ,ದುರ್ಗಾಸಪ್ತಶತಿ,ಅಥವಾ ದುರ್ಗಾಪಾಠ ಎಂದು ಕರೆಯುತ್ತಾರೆ.
ಒಂಬತ್ತು ದಿನಗಳನ್ನು ಬಹಳ ಶ್ರದ್ಧೆ ಭಕ್ತಿಯಿಂದ ಪೂಜಿಸಿದ ದೇವಿಯನ್ನು ಹತ್ತನೆಯ ದಿನ ವಿಜಯದಶಮಿ ದಿನದಂದು ನೀರಲ್ಲಿ ವಿಸರ್ಜಿಸುತ್ತಾರೆ.
ನಿಮ್ಮೆಲ್ಲರಿಗೂ ದೇವಿ ಶಕ್ತಿ ಸಂತೋಷ ಮಾನವೀಯತೆ ಶಾಂತಿ ಧ್ಯಾನ ಜ್ಞಾನ ಭಕ್ತಿ ಒಳ್ಳೆಯ ಹೆಸರು ಮತ್ತು ಆಯುರಾರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ.
very relevant article during the festival times, very nice
ನವರಾತ್ರಿಯ ಲೇಖನ ಚೆನ್ನಾಗಿ ಮೂಡಿ ಬಂದಿದೆ . ಉಪಯುಕ್ತ ಮಾಹಿತಿಯನ್ನೊಳಗೊಂಡಿದೆ.
The article has come out very well. Many
Details we never knew!
Thanks for this.
thank you KannadaPress–the detailing about the NINE DEVIS I was not aware,thank you Sasikala Madam for the article
Tumba uttamavagidde nimma baraha,keep p the good work
Tumba uttamavagidde nimma baraha,keep up the good work
may this Navratri the Goddess remove the pandemic from the world, loved the article,happy Navratri to all.
Loved the Article Sasi Aunty
ನನ್ನ ಲೇಖನವನ್ನು ಓದಿ ಮೆಚ್ಚಿ ಸಂತೋಷ ವ್ಯಕ್ತ ಪಡಿಸಿದ ನಿಮ್ಮೆಲರಿಗೂ ನನ್ನ ಅನಂತ ವಂದನೆಗಳು.