ನವರಾತ್ರಿ ಬಂತೆಂದರೆ ಮನೆ ಮನೆಯಲ್ಲಿ ಗೊಂಬೆ ಕೂಡಿಸುವ ಸಂಭ್ರಮ. ಹಳೇ ಮೈಸೂರು ಭಾಗದಲ್ಲಿ ಇದರ ಸಂಭ್ರಮ ಹೆಚ್ಚು. ಒಂದೊಂದು ಮನೆಯಲ್ಲೂ ನೂರಾರು ಗೊಂಬೆಗಳು. ಮಹಾಭಾರತ, ರಾಮಾಯಣ, ಶ್ರೀನಿವಾಸ ಕಲ್ಯಾಣ, ಗಿರಿಜಾ ಕಲ್ಯಾಣ ಎಲ್ಲವೂ ಗೊಂಬೆ ರೂಪದಲ್ಲಿ ಜೀವ ತಾಳುವುದುಂಟು.
ಆದರೆ ಆ ಬಾರಿ ಕೋವಿಡ್ ಈ ಸಂಭ್ರಮಕ್ಕೆ ಒಂದಿಷ್ಟು ಅಡ್ಡಿ ತಂದಿರುವುದಂತು ನಿಜ. ಸುರಕ್ಷತಾ ದೃಷ್ಟಿಯಿಂದ ಅನೇಕ ಮನೆಗಳಲ್ಲಿ ಗೊಂಬೆ ಹಬ್ಬ ಈ ಬಾರಿ ಅವರವರ ಮನೆಗೆ ಸೀಮಿತವಾಗಿದೆ. ಗೊಂಬೆ ನೋಡಲು ಯಾರನ್ನೂ ಕರೆಯದಂಥ ಅನಿವಾರ್ಯತೆ ಎದುರಾಗಿದೆ.
ಹೀಗಾಗಿ ಕೆಲವರು ಶಾಸ್ತ್ರ ನಿಲ್ಲಿಸಬಾರದೆಂದು ಪಟ್ಟದ ಗೊಂಬೆಗಳನ್ನು ಮಾತ್ರ ಇಟ್ಟಿದ್ದಾರೆ. ಇನ್ನೂ ಕೆಲವರು ಕೆಲವೇ ಕೆಲವು ಗೊಂಬೆಗಳನ್ನು ಮಾತ್ರ ಇಟ್ಟಿದ್ದಾರೆ. ಇನ್ನು ಹಲವರು ಎಂದಿನಂತೆ ಮನೆ ತುಂಬಾ ಗೊಂಬೆ ಕೂಡಿಸಿದ್ದಾರೆ.
ಎಲ್ಲರೂ ಎಲ್ಲರ ಮನೆಯ ಗೊಂಬೆ ಹಬ್ಬವನ್ನು ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ಕನ್ನಡಪ್ರೆಸ್.ಕಾಮ್ ವೇದಿಕೆ ಕಲ್ಪಿಸಿದೆ. ನಿಮ್ಮ ಮನೆಯಲ್ಲಿ ಕೂಡಿಸಿರುವ ಗೊಂಬೆಗಳ ಫೋಟೋವನ್ನು ಕೆಳಗಿನ ನಂಬರಿಗೆ ವಾಟ್ಸಾಪ್ ಮಾಡಿ ಅಥವಾ ಇ ಮೇಲ್ ಮಾಡಿ. ನಾವದನ್ನು ಸುಂದರ ಆಲ್ಬಂ ಮಾಡಿ ಪ್ರಕಟಿಸುತ್ತೇವೆ. ಆ ಮೂಲಕ ನಿಮ್ಮ ಮನೆಯ ಗೊಂಬೆ ಅಲಂಕಾರ ಎಲ್ಲರ ಮನೆ ಮನವನ್ನು ಮುಟ್ಟುತ್ತದೆ. ವಾಟ್ಸಪ್ ನಂಬರ್ 7483010618 ಇ ಮೇಲ್ [email protected]