18.8 C
Karnataka
Friday, November 22, 2024

    ಜಯದುರ್ಗಿ ಜಯದುರ್ಗಿ ನಾನಿನ್ನ ಕಾಲ್ಗೆರಗಿ ಬೇಡುವೆನು ಭೀತಿಗಳ ಪರಿಹರಿಸು

    Must read

    ಇಂದಿನಿಂದ ಎಲ್ಲೆಡೆ ನವರಾತ್ರಿ ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ನಿಮ್ಮ ನೆಚ್ಚಿನ ಕನ್ನಡ ಪ್ರೆಸ್.ಕಾಮ್ ಇಂದಿನಿಂದ ನವರಾತ್ರಿ ಸಂಗೀತೋತ್ಸವವನ್ನು ಸಾದರ ಪಡಿಸುತ್ತಿದೆ.

    ಇಂದು ನವರಾತ್ರಿ ಪಾಡ್ಯ. ಈ ದಿನದ ಸಂಗೀತ ಸಂಜೆಯನ್ನು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಶ್ರುತಿ ಕೋಡನಾಡ್ ಮತ್ತು ಅವರ ಶಿಷ್ಯವೃಂದದಿಂದ ಆರಂಭಿಸುತ್ತಿದ್ದೇವೆ.

    ಶ್ರುತಿ ಕೋಡನಾಡ್ ಅವರ ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಈ ಸಂಗೀತ ಸಂಜೆ ಎಂಟು ವರ್ಷದ ಪ್ರಥಮ್ ಗಿರೀಶ್ ರಾವ್ ಹಾಡಿರುವ ಕುಮಾರವ್ಯಾಸ ನ ಕರ್ನಾಟ ಭಾರತ ಕಥಾಮಂಜರಿಯ ನಾಂದಿ ಪದ್ಯದೊಂದಿಗೆ ಮುಂದುವರಿಯುತ್ತದೆ.

    ಅನಂತರ ಒಂಭತ್ತು ವರ್ಷದ ಕುಮಾರಿ ಸನಯ ಸಂತೋಷ್ ಹಾಡಿರುವ ಅಪ್ಪಯ್ಯ ದೀಕ್ಷಿತರ ಕೃತಿ ವರವೀಣಾ ಮೃದುಪಾಣಿ ಯೊಂದಿಗೆ ಮತ್ತೊಂದು ಮಜಲನ್ನು ಪ್ರವೇಶಿಸುತ್ತದೆ.

    ಈ ವೇಳೆಗೆ ಶ್ರುತಿ ಅವರೇ ಗಾಯನಕ್ಕೆ ಧಾವಿಸಿದ್ದರಿಂದ ಕಛೇರಿ ಮತ್ತೊಂದು ಎತ್ತರಕ್ಕೆ ಏರುತ್ತದೆ.ಶಂಕರಾಚಾರ್ಯರು ವಿರಚಿತ ಸೌಂದರ್ಯ ಲಹರಿ ಶ್ಲೋಕ ಮತ್ತು ಮುತ್ತಯ್ಯ ಭಾಗವತರ ಹಿಮಗಿರಿ ತನಯೇ ಕೃತಿಯೊಂದಿಗೆ ಅವರು ಸಂಗೀತದ ನೂತನ ಅನುಭೂತಿ ಸೃಷ್ಟಿಸುತ್ತಾರೆ.

    ಮುಂದೆ ಆರು ವರ್ಷದ ಪುಟಾಣಿ ಕುಮಾರಿ ಆದ್ಯ ಒರುಗಂಟಿ ಮುತ್ತುಸ್ವಾಮಿ ದೀಕ್ಷಿತರ ಶ್ಯಾಮಳೆ ಮೀನಾಕ್ಷಿ ಕೃತಿಯನ್ನು ತನ್ನ ಮುದ್ದಾದ ಕಂಠದಿಂದ ಹಾಡಿ ಕೇಳುಗರನ್ನು ಮಂತ್ರ ಮುಗ್ಧಗೊಳಿಸುತ್ತಾಳೆ.

    ಕೊನೆಯಲ್ಲಿ ಶ್ರುತಿ ಕೋಡನಾಡ್, ಸಂಸ್ಕೃತಿ ಸಮೀರ್,  ಪುಷ್ಪಾ ಬೈಕಾಡಿ,  ಸುಪ್ರಿಯಾ ಪಾರಂಪಳ್ಳಿ ಮತ್ತು ಅಶ್ವೀನಿ ಸಂಗಮ್ ಅವರೆಲ್ಲರೂ ಬೀರೂರು ಚಿದಂಬರ ಜೋಯಿಸರ ಜಯದುರ್ಗಿ ಎಂಬ ಮಂಗಳ ಗೀತೆಯನ್ನು ಹಾಡಿ ಸಂಪನ್ನಗೊಳಿಸುತ್ತಾರೆ.

    ಮೂಲತಃ ಚಿತ್ರದುರ್ಗದವರಾದ ಶ್ರುತಿ ಕೋಡನಾಡ್ ರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಗಮಕ ಕಲೆಯನ್ನು ಗಮಕ ಕಲಾನಿಧಿ ಶ್ರೀಮತಿ ಚಂಪಕಾ ಶ್ರೀಧರ್ ಇವರಲ್ಲಿ  ಅಭ್ಯಾಸ ಮಾಡಿದ್ದಾರೆ.ಚಿಕ್ಕವಯಸ್ಸಿನಲ್ಲೇ ತಮ್ಮ ತಾಯಿ ಗಮಕಿ ಶ್ರೀಮತಿ ಮಂಜುಳಾ ದತ್ತಾತ್ರೇಯ ಅವರಿಂದ ಗಮಕ ಕಲೆಗೆ ಪರಿಚಿತರಾಗಿರುತ್ತಾರೆ.

    ಪಾಡ್ಕಾಸ್ಟ್ ನಿರೂಪಣೆ ಭಾರತಿ ಅವರದ್ದು.

    ಆಲಿಸಿ ಪ್ರತಿಕ್ರಿಯಿಸಿ.

    spot_img

    More articles

    19 COMMENTS

    1. Excellent… appreciate navaratri plan to keep readers in festival mood and engaged them not only with your brilliant write-ups in addition podcast too with devotional music. 🙏

    2. ಕಾರ್ಯಕ್ರಮ ಚೆನ್ನಾಗಿದೆ. ಮಕ್ಕಳ ಹಾಡುಗಳು ಮುದ್ದಾಗಿ ವೆ. ಶೃತಿ ಅವರ ಗಾಯನ ಅದ್ಬುತ

    3. Bharathi,
      Your narration is very good 👌👌
      Ms Shruthi’s team has sung really well 👏👏

      Wonderful concept of Sangeetothsava by Kannadapress.com 👍👍

    4. ದಸರಾ 2020ರ ಕಾರ್ಯಕ್ರಮದ ಪ್ರಯುಕ್ತ ನವರಾತ್ರಿ ಸಂಗೀತ ಉತ್ಸವದ ಪ್ರಥಮ ದಿನ ಶ್ರೀಮತಿ ಶ್ರುತಿ ಕೋಡನಾಡ್ ಮತ್ತು ಅವರ ಶಿಷ್ಯ ವೃಂದದಿಂದ ಪ್ರಸ್ತುತ ಪಡಿಸಿದ ಸಂಗೀತ ತುಂಬಾ ರಸವತ್ತಾಗಿತ್ತು. 6-8ವಯಸ್ಸಿನ ಚಿಕ್ಕ ಚಿಕ್ಕ ಮಕ್ಕಳ ಸಂಗೀತ ಕೇಳಲು ತುಂಬಾ ಮುದ ನೀಡಿತು. ಸಂದರ್ಭೋಚಿತವಾಗಿ ನಿರೂಪಣೆಯನ್ನು ಪ್ರಸ್ತುತ ಪಡಿಸಿದ ಶ್ರೀಮತಿ ಭಾರತಿಯವರು ಕಾರ್ಯಕ್ರಮವನ್ನು ಕಳೆಗಟ್ಟಿಸಿದ್ದಾರೆ, ಅವರಿಗೆ ನನ್ನ ಅಭಿನಂದನೆಗಳು. ಕಾರ್ಯಕ್ರಮದ ಚಾಲನೆ ನವದುರ್ಗೆಯರ ಪ್ರಾರ್ಥನೆ ಯೊಂದಿಗೆ ಆರಂಭಗೊಂಡಿದ್ದು , ನವರಾತ್ರಿ ಸಂಗೀತ ಸಂಭ್ರಮವು ಯಶಸ್ವಿಯಾಗಲೆಂದು ಹಾರೈಸುತ್ತೇನೆ.

    5. ಅದ್ಭುತ , ಶ್ರುತಿ ಹಾಗು ಸಂಗಡಿಗರ ಹಾಡು ಮತ್ತು ಭಾರತಿ ಯವರ ನಿರೂಪಣೆ ಸುಂದರ ವಾಗಿ ಮೂಡಿ ಬಂದಿದೆ.. ನವರಾತ್ರಿ ಮೊದಲ ದಿನದ ಸಂಗೀತದ ರಸದೌತಣ ಸವಿದಾಯಿತು., ನಾಳೆ ಯ ಕಾರ್ಯಕ್ರಮಕ್ಕೆ ಕಾತುರದಿಂದ ಕಾಯುತಿರುವೆವು. ದನ್ಯವಾದ ಗಳು….

    6. Shruthi kodanadu haagu avara balaga heliruva haadugalu adbhuthavagide Adarallu Himagiri thanaye matty koneya jaanapada shyaliya Hadu bahala chennagide. Shruthi avaru Onlinenalli shramavahisi ellarannu ogguudisi maadiruva prayatna appreciable. Prayatna sarthakavaaythu . Hats off to all singers.

    7. On the first day of musical programme launched by kannadapress.com it is a treat to hear melodious renditions of Ms.Shruti Kodanad and her team. Special mention to kids who have sung very well. Kudos to Ms.Shruti Kodanad for spreading the rich culture of karnataka in foreign land and bring GenNext to hold and importing the knowledge of carnatic classical music. Well anchored by Ms.Bharathi.

    8. ಶ್ರೀಮತಿ ಶ್ರುತಿ ಅಂಜನ್ ರವರು ನೆಡಿಸಿಕೊಟ್ಟ ನವರಾತ್ರಿ ಸಂಗೀತ ಕಚೇರಿ ತುಂಬಾ ಚನ್ನಾಗಿದೇ ಅ ನವ ದುಗೀಯ್ಯರ ಆಶೀರ್ವಾದ ಸದಾ ಇರಲಿ ಎಂದು ಆಶಿಸುತ್ತೇನೆ

    9. ಗಣೇಶನ ಸ್ತುತಿ ಯೊಂದಿಗೆ ಪ್ರಾರಂಬವಾದದಸರಾ ಸಂಗೀಥೊತ್ಸವ ಮದುರವಾಗಿ ಚೆನ್ನಾಗಿದೆ. ಶೃತಿಯವರ ಗಾಯನ , ಮಕ್ಕಳ ಹಾಡುಗಾರಿಕೆ ಸುಂದರವಾಗಿ ಮೂಡಿಬಂದಿದೆ. ಭಾರತೀಯವರ ನಿರೂಪಣೆ ಕಾರ್ಯಕ್ರಮಕ್ಕೆ ಮೆರಗು ನೀಡಿದೆ. ಶುಭವಾಗಲಿ. ಇಂದಿನ ಕಾರ್ಯಕ್ರಮಕ್ಕೆ ಕಾತುರರ್ರಾಗಿರುವೆವು

    10. Happy Navaratri to all.
      I listened to your Navaratri podcast. All very nice songs . Thanks for giving such a nice programme.

    11. Excellent rendition by Ms. Shruthi Kodanad and team.

      Thank you Kannada press for the special Navratri treat.

      Smt. Bharathi’s anchoring is icing on the cake!

    LEAVE A REPLY

    Please enter your comment!
    Please enter your name here

    Latest article

    error: Content is protected !!