ಇಂದು ನವರಾತ್ರಿ ಚತುರ್ಥಿ. ಕನ್ನಡಪ್ರೆಸ್.ಕಾಮ್ ನ ಸಂಗೀತೋತ್ಸವ ಮತ್ತೊಂದು ಹಂತವನ್ನು ತಲುಪಿದೆ. ಎಲ್ಲಾ ರೀತಿಯ ಗೀತೆಗಳನ್ನು ಸೊಗಸಾಗಿ ಹಾಡುವ ಶ್ಯಾಮಲಾ ಇಂದಿನ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ.
ಶ್ಯಾಮಲಾ ಅವರಿಗೆ ಬಾಲ್ಯದಿಂದಲೇ ಸಂಗೀತ ಮತ್ತು ಭಜನೆಯಲ್ಲಿ ಆಸಕ್ತಿ.ಮನೆಯಲ್ಲಿ ಅದಕ್ಕೆ ಪೂರಕ ವಾತಾವರಣವೂ ಇದ್ದುದರಿಂದ ಭಜನೆ, ಶ್ಲೋಕಗಳನ್ನು ಹೇಳುವ ಅಭ್ಯಾಸ ಬೆಳೆಯಿತು.ಪುಸ್ತಕಗಳ ಓದು ಅವರ ಸಾಹಿತ್ಯ ಹರಿವನ್ನು ವಿಸ್ತರಸಿತು. ಜೊತಗೆ ಅವರಿಗೆ ಚಿತ್ರಕಲೆಯಲ್ಲೂ ಆಸಕ್ತಿ.
ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಇಂದಿನ ಸಂಗೀತ ಸಂಜೆ ಕಣ್ಣುಗಳೆರಡು ಸಾಲದಮ್ಮ ಎಂದು ಲಕ್ಷ್ಮಿಯನ್ನು ಧ್ಯಾನಿಸುತ್ತದೆ. ಮುಂದೆ ದಯಮಾಡೆ ಭ್ರಮರಾಂಭೆ ಮೂಲಕ ಮುಂದುವರಿಯುತ್ತದೆ. ಜಗದ ಜನನಿ ಜಗದಂಬಾ ಅಂಬಾ ಭವಾನಿ ಎಂದು ದೇವಿಯನ್ನು ಆರಾಧಿಸಿ ಶ್ರೀಮನ್ನಾರಾಯಣನ ಆರತಿ ಗೀತೆಯೊಂದಿಗೆ ಸಂಪನ್ನ ವಾಗುತ್ತದೆ..
ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ.
ನೀವು ಆಲಿಸಿ, ಪ್ರತಿಕ್ರಿಯಿಸಿ.
Narration and singing 👌👌👌
ಹಾಡುಗಳು ಚೆನ್ನಾಗಿವೆ. ಭಾರತಿ ಹಾಗೂ ಶ್ಯಾಮಲಾರಿಗೆ ಅಭಿನಂದನೆಗಳು.
Melodious rendering by Smt.Shymala on the fourth day of Navaratri and all songs are sung very well and especially “jagada jannani jagadamba amba bavani ” would like the one to hear again and again. Bharathi has done good job as moderator and kannadapress.com team has created new trend in online portal by giving platform for new talent to emerge in the limelight and showcase their performance.
ಶ್ಯಾಮಲ ಅವರ ಗಾಯನ ಕಿವಿಗೆ ಬಹಳ ಇಂಪಾಗಿತ್ತು. ಭಾರತಿಯ ನಿರೂಪಣೆಯು ಸೊಗಸಾಗಿ ಮೂಡಿಬಂತು. ಹಾಡಿನ ಜೊತೆಗೆ ಅದರ ಸಾಹಿತ್ಯವು ನೋಡುವ ಹಾಗಿದ್ದರೆ ಅನುಕೂಲವಾಗುತ್ತದೆ .
Nice singing
T S uma ಅವರ ಸಲಹೆಯನ್ನು ಗಮನದಲ್ಲಿರಿಸಿಕೊಂಡಿದ್ದೇವೆ. ಉಪಯುಕ್ತ ಸಲಹೆ.