ಬೆಂಗಳೂರು ಬೊಮ್ಮನಹಳ್ಳಿ ಬಳಿಯ ಕೋಡಿಚಿಕ್ಕನಹಳ್ಳಿಯ ನಿವಾಸಿ ಪ್ರೇಮ ಎನ್ ಎಸ್ ಅವರು ಕಳೆದ ನಲುವತ್ತು ವರುಷಗಳಿಂದ ಗೊಂಬೆ ಕೂಡಿಸುವ ಸಂಪ್ರದಾಯವನ್ನು ಅನುಚೂನವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ವಂಶಪಾರಂಪರ್ಯವಾಗಿ ಬಂದ ಪದ್ಧತಿಯನ್ನು ಅವರು ಕೈ ಬಿಟ್ಟಿಲ್ಲ. ಅವರ ಮಗಳು ಕೂಡ ಅಮ್ಮನಿಗೆ ಬೆಂಬಲವಾಗಿ ನಿಂತಿದ್ದಾರೆ.
ತಂತ್ರಜ್ಞಾನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಪ್ರೇಮಾ ಅವರು ಬಿಡುವಿಲ್ಲದ ಕೆಲಸದ ನಡುವೆಯೂ ಗೊಂಬೆ ಕೂರಿಸಲು ಬಿಡುವುಮಾಡಿಕೊಂಡಿದ್ದಾರೆ.
ನಮ್ಮ ಮನೆಯ ಗೊಂಬೆಗಳನ್ನು ನೋಡಲು ನಮ್ಮ ಸ್ನೇಹಿತರು , ಬಂಧುಗಳಿಗೆ ಆಸಕ್ತಿ. ಆದರೆ ಈ ಬಾರಿ ಯಾರ್ಯಾರು ಬರುತ್ತಾರೋ ಗೊತ್ತಿಲ್ಲ ಎನ್ನುತ್ತಾರೆ.
ಅವರ ಮನೆಯ ಗೊಂಬೆ ಆಲ್ಬಂ ಇಲ್ಲಿದೆ.
Very nice
ಪ್ರೇಮಾ ಅವರೆ,ಅಬ್ಬಾ ಎಷ್ಟುಂದು ಅಂದ ಚೆಂದದ ಬೊಂಬೆ ಗಳು ! ಮೊಟ್ಟಮೊದಲು ಕಾಣುವುದು ನಿಮ್ಮ ಸೃಜನ ಶೀಲತೆ.ಅದೆಷ್ಟು
ವಿಧಗಳಲ್ಲಿ ಬೊಂಬೆಗಳನ್ನು ಸಮಾಜದ ಪ್ರತಿರೂಪವಾಗಿ ಅಲಂಕರಿಸಿದ್ದೀರ.ನಿಮಗೆ ನನ್ನ ನಮನಗಳು.
ನಮಸ್ಕಾರ. ಪ್ರತಿ ವರ್ಷ ವಿಧವಿಧವಾದ ಬೊಂಬೆಗಳನ್ನು ಕೂರಿಸುವ ನಿಮ್ಮ ಹವ್ಯಾಸ ನಿಜಕ್ಕೂ ಅದ್ಭುತ. ನಿಮ್ಮ ಆಸಕ್ತಿ ಮತ್ತು ತಾಳ್ಮೆ ಪ್ರಶಂಸನೀಯ. ಈ ಪರಂಪರೆ ಹೀಗೇ ಮುಂದುವರೆಯಲಿ.