21.4 C
Karnataka
Thursday, November 21, 2024

    ರಾಜರಾಜೇಶ್ವರಿ ತ್ರಿಪುರ ಭೈರವಿ ಮಹಾಕಾಳಿ ಮಧುಕರವೇಣಿ

    Must read

    ಇಂದು ನವರಾತ್ರಿ ಆರನೇ ದಿನ. ಕನ್ನಡಪ್ರೆಸ್.ಕಾಮ್ ನ ಸಂಗೀತೋತ್ಸವ ಮತ್ತೊಂದು ಹಂತವನ್ನು ತಲುಪಿದೆ.ನಾಲ್ವರು ಗಾಯಕರು ಇಂದಿನ ಸಂಗೀತ ಸಂಜೆಯನ್ನು ನಡೆಸಿಕೊಟ್ಟಿದ್ದಾರೆ.

    ಬೆಂಗಳೂರಿನ ಪ್ರಿಯಾಂಕ ಪದಕಿ ಅವರ ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಇಂದಿನ ಸಂಗೀತ ಸಂಜೆ ವಿದುಷಿ ಜಯಶೀಲ ಅವರ ದೇವಿ ಆರಾಧನೆಯೊಂದಿಗೆ ಮುಂದುವರೆಯುತ್ತದೆ. ನಂತರ ಸಿಯಾಟೆಲ್ ನಿಂದ ಜೊತೆಯಾಗುವ ರಮ್ಯಾ ಹರ್ಷ ಅವರು ಶಾರದೆಯನ್ನು ಆರಾಧಿಸುವ ಮೂಲಕ ಸಂಗೀತ ಸರಸ್ವತಿಯನ್ನು ನೆನೆಯುತ್ತಾರೆ. ಮುಂದೆ ಜಯಶೀಲ ಮತ್ತು ಸುಮನ್ ಅವರು ಧರ್ಮಸಂವರ್ಧಿನಿ ಧನುಜಾ ಸಂವರ್ಧಿನಿ ಎಂದು ದೇವಿಯನ್ನು ಸ್ತುತಿಸುತ್ತಾರೆ. ಪ್ರಿಯಾಂಕ ಅವರ ಮಂಗಳ ಗೀತೆಯೊಂದಿಗೆ ಕಛೇರಿ ಸಂಪನ್ನವಾಗುತ್ತದೆ.

    ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ.

    ನೀವು ಆಲಿಸಿ, ಪ್ರತಿಕ್ರಿಯಿಸಿ.

    spot_img

    More articles

    9 COMMENTS

    1. ಎಲ್ಲರ ಹಾಡುಗಳು ತುಂಬಾ ಸುಮಧುರ ವಾಗಿತ್ತು. ಅವಕಾಶ ಕಲ್ಪಿಸಿದ ಕನ್ನಡಪ್ರೆಸ್.ಕಾಂ ನವರಿಗೆ ಅಭಿನಂದನೆಗಳು. ಎಂದಿನಂತೆ ಭಾರತಿ ಯವರ ನೀರುಪಣೆ ಚೆನ್ನಾಗಿತ್ತು.

    2. ಸರಳ, ಸುಂದರ ಹಾಡುಗಳ ಜೊತೆಗೆ ಶಾಸ್ತ್ರೀಯ ಹಾಡುಗಳ ಮಿಶ್ರಣ ಕರ್ಣಾನಂದ.

    3. ಎಲ್ಲ ಗಾಯಕಿಯರ ಗಾಯನವು ಬಹಳ ಕರ್ಣಾನಂದವಾಗಿತ್ತು. ಎಂದಿನಂತೆ ಭಾರತಿಯ ನಿರೂಪಣೆಯು ಸೊಗಸಾಗಿ ಮೂಡಿಬಂತು.

    4. Àtyanta sumadhura gayana kelisidiri Bharati. Shreshta vada kala seve hagu tayi sharade ya aradhane kyegondiruva Kannada Press ge abhinandanegalu.
      Also Bharati, as usual your anchoring is so sweet and excellent.

    5. ಈ ದಿನದ ಎಲ್ಲಾ 4 ಕಲಾವಿದರ ಗಾಯನವೂ ಸೊಗಸಾಗಿ ಮೂಡಿಬಂದಿದೆ. ದೇವಿಯ ಎಲ್ಲಾ ರೀತಿಯ ರೂಪಗಳನ್ನು ಈ ಹಾಡುಗಳ ಮೂಲಕ ಆರಾಧಿಸುವಲ್ಲಿ ಗಾಯಕರು ಯಶಸ್ವಿ ಆಗಿದ್ದಾರೆ. ಅಚ್ಚುಕಟ್ಟಾದ ನಿರೂಪಣೆಯು, ಗಾಯನವೂ ಮನಕ್ಕೆ ಮುದ ನೀಡಿತು. ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!