ಬೆಂಗಳೂರು ಮಾಗಡಿ ಮುಖ್ಯರಸ್ತೆಯಲ್ಲಿರುವ ಗೊಲ್ಲರಹಟ್ಟಿಯ ಶ್ರೀಕೃಷ್ಣನಗರದ ನಿವಾಸಿ ಶಾಂತಾ ಕಾರ್ಣೀಕ್ ಕಳೆದ 25 ವರ್ಷಗಳಿಂದ ಗೊಂಬೆ ಕೂಡಿಸುತ್ತಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅಮ್ಮನ ಮನೆಯಲ್ಲಿದ್ದ ಸಂಪ್ರದಾಯ ಮದುವೆಯಾಗಿ ಬಂದ ಮೇಲೂ ಮುಂದುವರಿದಿದೆ.
ಮನೆ ಮಂದಿಯೆಲ್ಲಾ ಶಾಂತಾ ಅವರ ಗೊಂಬೆ ಪ್ರೀತಿಗೆ ಸಹಕಾರಿಯಾಗಿ ನಿಂತಿದ್ದಾರೆ. ಪಿಯುಸಿ ಓದುತ್ತಿರುವ ಮಗ, ಜಿಟಿಟಿಸಿ ಯಲ್ಲಿ ನೌಕರಿಯಲ್ಲಿರುವ ಪತಿ , ನಿವೃತ್ತ ಹೆಡ್ ಮಾಸ್ಟರ್ ಆಗಿರುವ ಮಾವ, ಅತ್ತೆ ಎಲ್ಲರೂ ಬೆಂಬಲವಾಗಿ ನಿಂತಿದ್ದಾರೆ.
ಈ ಬಾರಿ ಕೈಲಾಸ ಪರ್ವತವನ್ನು ಹೊಸದಾಗಿ ತಮ್ಮ ಗೊಂಬೆ ಸಂಗ್ರಹಕ್ಕೆ ಸೇರಿಸಿದ್ದಾರೆ. ಪ್ರತಿವರ್ಷ ಗೊಂಬೆ ಹಬ್ಬ ಬಂದರೆ ಮನೆ ತುಂಬಾ ಜನ. ಆದರೆ ಈ ಬಾರಿ ಯಾರನ್ನು ಕರೆಯದಂತಾಗಿದೆ ಎಂದು ಬೇಸರ ಪಟ್ಟುಕೊಳ್ಳುತ್ತಾರೆ.
ಅಂಜನಾ ನಗರದ ಶ್ರೀ ವಿದ್ಯಾಲಕ್ಷ್ಮಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯೂ ಆಗಿರುವ ಶಾಂತಾ, ಗೊಂಬೆ ಕೂಡಿಸುವ ಪರಂಪರೆಯನ್ನು ಅನೂಚೂನವಾಗಿ ನಡೆಸಿಕೊಂಡು ಬಂದಿದ್ದಾರೆ.
ಅವರ ಮನೆಯ ಗೊಂಬೆ ಆಲ್ಬಂ ಇಲ್ಲಿದೆ.
ಶಾಂತ,ಸುಮತ, ಮಂಜುಳಾ ನೀವುಗಳು ಆಸಕ್ತಿ ಯಿಂದ ಬೊಂಬೆಗಳನ್ನು ಅಲಂಕಾರವಾಗಿ ಕೂಡಿಸಿ ಪಾರಂಗಿತ ವಾಗಿ ಬಂದಿರುವ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುತ್ತಿರುವ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.