ಬಾಂಡ್ ಜೇಮ್ಸ್ ಬಾಂಡ್ ಎನ್ನುತ್ತಾ ಹಲವು ದಶಕಗಳಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಶಾನ್ ಕಾನರಿ ತಮ್ಮ 90ನೆಯ ವಯಸ್ಸಿನಲ್ಲಿ ಇಂದು ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಕೆಲಕಾಲದಿಂದ ಅಸ್ವಸ್ಥರಾಗಿದ್ದ ಕಾನರಿ ಬಹಮಾಸ್ ನಲ್ಲಿ ಶಾಂತವಾಗಿ ಚಿರನಿದ್ರೆಗೆ ಜಾರಿದರು ಎಂದು ಅವರ ಪುತ್ರ ತಿಳಿಸಿದ್ದಾಗಿ ಬಿಬಿಸಿ ವರದಿ ಮಾಡಿದೆ.
ಅನ್ ಟಚಬಲ್ಸ್ ನಲ್ಲಿ ಅವರು ಅಭಿನಯಿಸಿದ್ದ ಐರಿಶ್ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ದಿ ಹಂಟ್ ಫಾರ್ ರೆಡ್ ಅಕ್ಟೋಬರ್, ಇಂಡಿಯಾನ ಜೋನ್ಸ್, ಲಾಸ್ಟ್ ಕ್ರುಸೇಡ್ ಮತ್ತು ದಿ ರಾಕ್ ಆತನ ಪ್ರಮುಖ ಚಿತ್ರಗಳ ಸಾಲಿಗೆ ಸೇರುತ್ತದೆ.
Sir Sean Connery has died at the age of 90. He was the first actor to play James Bond on the big screen in Dr. No in 1962, From Russia With Love, Goldfinger, Thunderball, You Only Live Twice and Diamonds Are Forever followed. pic.twitter.com/VaFPHCM5Ou
— James Bond (@007) October 31, 2020
ಚಿರತೆಯಂತೆ ಓಡುವ, ಶತ್ರುಗಳನ್ನು ಮುಲಾಜಿಲ್ಲದೆ ಸಾಯಿಸುವ, ಹುಡುಗಿಯರೊಂದಿಗೆ ಲಲ್ಲೆ ಹೊಡೆಯುವ ಜೇಮ್ಸ್ ಬಾಂಡ್ 007 ಆಗಿ ಕಾನರಿ ಅಭಿನಯವನ್ನು ನೋಡೇ ಸವಿಯಬೇಕು.
ಶಾನ್ ಕಾನರಿ ಹುಟ್ಟಿದ್ದು 1930ರ ಆಗಸ್ಟ್ 25. ಇವರ ತಂದೆ ಫ್ಯಾಕ್ಟರಿಯೊಂದರ ಕೆಲಸಗಾರ. 13 ವರ್ಷಕ್ಕೆ ಶಾಲೆಗೆ ಶರಣು ಹೊಡೆದ ಸೀನ್ ಕ್ಯಾನರಿ ಮಾಡದ ಕೆಲಸಗಳಿಲ್ಲ. ಹಾಲು ವಿತರಿಸಿದ ,ಕ್ಯಾಫಿನ್ ಗಳಿಗೆ ಬಣ್ಣ ಬಳಿಯುವ ಕೆಲಸವನ್ನೂ ಮಾಡಿದ. ಆಮೇಲೆ ನೌಕದಳ ಸೇರಿದ. ಅಲ್ಸರ್ ಕಾರಣದಿಂದ ಆ ಕೆಲಸವನ್ನು ಬಿಡಬೇಕಾಯಿತು, ಮುಂದೆ ಟ್ರಕ್ ಡ್ರೈವರ್ ಆದ, ಲೈಫ್ ಗಾರ್ಡ್ ಕೆಲಸ ಮಾಡಿದ. ದೇಹ ದಾರ್ಢ್ಯ ಪಟುವಾದ. 1953 ರಲ್ಲಿ ಇಂಥದೇ ಸ್ಪರ್ಧೆಗೆಂದು ಲಂಡನ್ ಗೆ ಬಂದ. ಅಲ್ಲಿಂದ ಅವನ ದಾರಿ ಬದಲಾಯಿತು. ಸಣ್ಣ ಪುಟ್ಟ ಪಾತ್ರಗಳನ್ನು ನಾಟಕಗಳಲ್ಲಿ ಮಾಡತೊಡಗಿದ. ಹಾಗೆ ಸಿನಿಮಾದಲ್ಲಿ ಪಾತ್ರ ಗಿಟ್ಟಿಸಿದ. ಮುಂದೆ ಜೇಮ್ಸ್ ಬಾಂಡ್ 007ನಾಗಿ ಜನಪ್ರಿಯನಾದ.
RIP
Honour to great legend Sir Thomas Sean Connery was Scottish actor and producer. He shot to global superstardom as Bond in 1962, with the first film of the 007 series, “Dr. No”, and then went on to work in “From Russia with Love” (1963), “Goldfinger” (1964), “Thunderball” (1965), “You Only Live Twice” (1967), “Diamonds Are Forever” (1971) and “Never Say Never Again” (1983).
His last film The League of Extraordinary Gentlemen in 2003.
In 1998, he won an Oscar for Best Supporting Actor for his role in The Untouchables.
He has left behind lasting legacy and vacuum difficult to fill.
A legendary actor.RIP
ಮೊದಲು ಇಂತ ಅದ್ಭುತ ಕಲಾವಿದನಿಗೆ ನಮನಗಳು. ಜೇಮ್ಸ್ ಬಾಂಡ್ ಫಿಲಿಂ ನೋಡ್ತಾಯಿದ್ರೆ ಅವರ ನಟನಾ ಕುಶಾಲ್ಯ ಎಲ್ಲರನ್ನು ಮಂತ್ರಮುಗ್ದ ರನಾಗಿ ಸುತ್ತಿತ್ತು. ಅಂತ ಅದ್ಭುತ ಕಲಾವಿದ. ಇಂದು ಚಿರನಿದ್ರೆಗೆ ಜಾರಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರಿಲ್ಲದಿದ್ದರು ಅವರ ಫಿಲ್ಮ್ಗ ನಮ್ಮ ಜೊತೆ ಇರುತ್ತದೆ. ಧನ್ಯವಾದಗಳು. 🙏