ಇಂದು ಕರ್ನಾಟಕದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಕನ್ನಡ ರಾಜ್ಯೋತ್ಸವದ ಸಡಗರ. ಎಲ್ಲಾದರು ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಸಹಸ್ರಾರು ಮೈಲಿ ದೂರದಲ್ಲಿರುವ ಕನ್ನಡಿಗರಲ್ಲೂ ಉತ್ಸಾಹ.
ಹಲವಾರು ವರುಷಗಳಿಂದಲೂ ಇಂಗ್ಲೆಂಡ್ ನಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ಸಾಹಿತ್ಯ,ಸಂಸ್ಕತಿ ಮತ್ತು ವಿಚಾರ ವೇದಿಕೆ ಎಂಬ ಪುಟ್ಟ ಬಳಗ ಕಟ್ಟಿಕೊಂಡು ನಿರಂತರ ಕನ್ನಡ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ.
ಈ ಬಾರಿಯ ಕನ್ನಡರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಕನ್ನಡಪ್ರೆಸ್.ಕಾಮ್ ಇಂಗ್ಲೆಂಡ್ ಕನ್ನಡಿಗರ ಕವಿಗೋಷ್ಠಿ ನಡೆಸಲು ತೀರ್ಮಾನಿಸಿತು. ಲಂಡನ್ ನಲ್ಲಿ ನೆಲೆಸಿರುವ ದಂತ ವೈದ್ಯೆ ಡಾ. ಪ್ರೇಮಲತ ಅವರೊಂದಿಗೆ ಆ ಬಗ್ಗೆ ಚರ್ಚಿಸಿದಾಗ ತಕ್ಷಣ ಸ್ಪಂದಿಸಿ ಈ ಕವಿಗೋಷ್ಠಿ ನಡೆಸಿಕೊಟ್ಟರು. ಇಲ್ಲಿರುವ ಯೂ ಟ್ಯೂಬ್ ನಲ್ಲಿ ಅಡಗಿದೆ ಈ ಕಾವ್ಯಗೋಷ್ಠಿ.
ಬರ್ಮಿಂಗ್ ಹ್ಯಾಮ್ ನಲ್ಲಿ ರೇಡಿಯಾಲಜಿಸ್ಟ್ ಆಗಿರವ ಕೇಶವ ಕುಲಕರ್ಣಿ,ಲಂಡನ್ ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ
ರಾಧಿಕ ಜೋಶಿ, ಡರ್ಬಿಯಲ್ಲಿ ರುಮಾಟಾಲಜಿ ತಜ್ಞರಾಗಿರುವ
ರಾಮಶರಣ ಲಕ್ಷ್ಮೀನಾರಾಯಣ, ಬ್ರಾಡ್ಫೋರ್ಡ್ ನಲ್ಲಿ ಫೇತ್ ಟ್ಯೂಟರ್ ಆಗಿರುವ ಸವಿತಾ ಸುರೇಶ್ ಮತ್ತು ಡಾನ್‌ಕಾಸ್ಟರ್ ನಲ್ಲಿ ನೇತ್ರಶಾಸ್ತ್ರ ಸಲಹೆಗಾರರಾಗಿರುವ ಶ್ರೀವತ್ಸ ದೇಸಾಯಿ
ಭಾಗವಹಿಸಿದ್ದಾರೆ.
ಇವರೆಲ್ಲರ ಕಾವ್ಯ ವಾಚನ ಕೇಳಿ ಆನಂದಿಸುವ ಮೂಲಕ ರಾಜ್ಯೋತ್ಸವದ ಸಡಗರ ಮತ್ತಷ್ಟು ಹೆಚ್ಚಲಿ. ಭಾಗವಹಿಸಿದ ಎಲ್ಲರಿಗೂ ಧನ್ಯವಾದ.
ಇಂಗ್ಲೆಂಡ್ ಕನ್ನಡಿಗರಾ ಕವಿಗೋಷ್ಠಿ ಮೆಚ್ಚುವಂತದ್ದು ಅಲ್ಲಿದ್ದರೂ ಕನ್ನಡಾಭಿಮಾನ ಉಳಿಸಿ, ಬೆಳೆಸುತ್ತಿರುವರಲ್ಲಾ ಅವರಿಗೆಲ್ಲಾ ನಮನಗಳು
ಕನ್ನಡತನವನ್ನು ಬಹಳ ಆಸ್ಥೆಯಿಂದ ನಮ್ಮತನವೆಂದು ಕಾಪಾಡುವ ಅನಿವಾಸಿ ಕನ್ನಡಿಗರಾದ ನಮಗೆ ಅದನ್ನು ವ್ಯಕ್ತಪಡಿಸಲು ಅವಕಾಶ ನೀಡಿದ ಕನ್ನಡ ಪ್ರೆಸ್ ಬಗ್ಗೆ ತುಂಬು ಅಭಿಮಾನ.
ಈ ರಾಜ್ಯೋತ್ಸವ ಸಂದರ್ಭವನ್ನು ವಿಶೇಷ ಗೊಳಿಸಿದ ಈ ಅವಕಾಶಕ್ಕಾಗಿ ಧನ್ಯವಾದಗಳು. ಇದನ್ನು ಕೇಳಿದ ಮತ್ತು ಪ್ರತಿಕ್ರಿಯಿಸಿದ ರತ್ನ ಮತ್ತು ಮಿಕ್ಕೆಲ್ಲರಿಗೂ ನಮ್ಮ ವಂದನೆಗಳು.
I don’t know Kannada typing. Excuse me.
Karya krama thumba chennagide. Halavaru varshagalu kaladeru, Kannada seveyannu maduthiruva ellarigu vandanegalu. Srivatsa Nadig avarige Dhanyavadagalu.
ದೂರದ ಇಂಗ್ಲೆಂಡ್ ನಲ್ಲಿದ್ದುಕೊಂಡು ಕನ್ನಡ ರಾಜ್ಯೋತ್ಸವದಂದು ‘ಕವಿಗೋಷ್ಠಿ’ ನಡೆಸಿ ಕನ್ನಡದ ಕಂಪನ್ನು ವಿಶ್ವದಾದ್ಯಂತ ಪಸರಿಸಿದ ಇಂಗ್ಲೆಂಡಿನ ಅಭಿಮಾನಿ ಕನ್ನಡ ಬಳಗದ ಎಲ್ಲಾ ಕವಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
Hutidare kannada nadinalli huttabeku ennauva nudi estu satya enduku e lekana nodi artha vagitade
ಎಲ್ಲರಿಗೂ ಅಭಿನಂದನೆಗಳು. ಇದು ನಮಗೆಲ್ಲಾ ಹೆಮ್ಮೆಯ ವಿಷಯ.
ಈ ಕನ್ನಡದ ನೆಲದಲ್ಲೇ ಹುಟ್ಟಿ. ಬೆಳೆದು. ಇಲ್ಲೇ ನೆಲಸಿ. ಕನ್ನಡ ನುಡಿಯ ಬಗ್ಗೆ ತಾತ್ಸರ ಹೊಂದಿರುವ ಕನ್ನಡಿಗರು ಇರುವಾಗ. ವಿದೇಶ ದಲ್ಲಿ ನೆಲಸಿ ಕನ್ನಡದ ಬಗ್ಗೆ ಇಷ್ಟು ಅಭಿಮಾನ ಹೊಂದಿದ ಜನರನ್ನು ನೋಡಿ ಖುಷಿ ಆಯಿತು. ನಿಜಕ್ಕೂ ವಿದೇಶದಲ್ಲಿ ಕನ್ನಡದ ಕಂಪನ್ನು ಹರಡುತ್ತಿರುವ ಕನ್ನಡ ಅಭಿಮಾನಿ ಬಳಗ ಕ್ಕೆ ಶತಕೋಟಿ ವಂದನೆಗಳು. 🙏🙏