ಕೊಲಂಬಿಯಾ ಏಷ್ಯಾ ಆಸ್ಪತ್ರೆ ಸಮೂಹವನ್ನು ರೂ. 2100 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಸ್ವಾಧೀನಪಡಿಸಿಕೊಳ್ಳುತ್ತಿರುವುದಾಗಿ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಮಣಿಪಾಲ್ ಹಾಸ್ಪಿಟಲ್ಸ್ ಪ್ರಕಟಿಸಿದೆ. ಈ ಒಂದು ಪ್ರಕ್ರಿಯೆಯಿಂದಾಗಿ ಸಿಯಾಟೆಲ್ ಮೂಲದ ಕೊಲಂಬಿಯಾ ಏಷಿಯಾ ಫೆಸಿಫಿಕ್ ಸಂಸ್ಥೆ ಭಾರತದ ಆರೋಗ್ಯೋದ್ಯಮದಿಂದ ದೂರ ಸರಿದಂತಾಗಿದೆ. ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಗಳು ಮುಗಿದ ನಂತರ ಎರಡೂ ಆಸ್ಪತ್ರೆಗಳ ರಿ ಬ್ರಾಂಡಿಂಗ್ ನಡೆಯಲಿದೆ.
ಈ ವಿಷಯವನ್ನು ಪ್ರಕಟಿಸಿರುವ ಮಣಿಪಾಲ್ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್ ನ ಅಧ್ಯಕ್ಷ ರಂಜನ್ ಪೈ, ಕೊಲಂಬಿಯಾ ಏಷಿಯಾವನ್ನು ಮಣಿಪಾಲ ಗ್ರೂಪ್ ಗೆ ಸ್ವಾಗತಿಸುತ್ತಿರುವುದಾಗಿ ತಿಳಿಸಿದ್ದಾರೆ.
2005ರಲ್ಲಿ ಹೆಬ್ಬಾಳದಲ್ಲಿ ಮೊದಲ ಬಾರಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಕಾರ್ಯಾಚರಣೆ ಆರಂಭಿಸಿತು. ಪ್ರಸ್ತುತ ಬೆಂಗಳೂರು, ಮೈಸೂರು, ಕೊಲ್ಕತ್ತಾ, ಗುರುಗ್ರಾಮ್, ಗಾಜಿಯಾಬಾದ್, ಪಟಿಯಾಲ ಮತ್ತು ಪುಣೆ ಸೇರಿದಂತೆ ದೇಶಾದ್ಯಂತ 11 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.
ಈ ಎರಡೂ ಸಮೂಹಗಳು ಒಟ್ಟು ಸೇರಿದಾಗ 15 ನಗರಗಳಲ್ಲಿ 27 ಆಸ್ಪತ್ರೆಗಳಾಗುತ್ತವೆ.7200 ಬೆಡ್ ಗಳು,4000ಕ್ಕೂ ಹೆಚ್ಚು ವೈದ್ಯರು ಮತ್ತು 10000ಕ್ಕೂ ಹೆಚ್ಚು ನೌಕರರು ಸೇರಿದಂತೆ ಆಗುತ್ತದೆ.
👍