21.3 C
Karnataka
Tuesday, December 3, 2024

    ಸಂತೇಬೆನ್ನೂರು: ಜಿಲ್ಲಾ ಪಂಚಾಯ್ತಿ ಸದಸ್ಯ ವಾಗೀಶ್ ನಿಧನ

    Must read

    ದಾವಣಗೆರೆ ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಉಪಾಧ್ಯಕ್ಷ ಪಿ. ವಾಗೀಶ್ (71) ಗುರುವಾರ ಅಪರಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ರಾಜಕೀಯ ಪ್ರವೇಶಿಸುವ ಮುನ್ನ ಸಂತೇಬೆನ್ನೂರಿನ ವಿಜಯ ಯುವಕ ಸಂಘದ ವಿಜಯ ಪ್ರೌಢಶಾಲೆಯಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸಿದ್ದರು. ಜನಪ್ರಿಯ ಶಿಕ್ಷಕರೂ ಆಗಿ ಅಪಾರ ಶಿಷ್ಯವೃಂದವನ್ನು ಸಂಪಾದಿಸಿದ್ದ ಅವರು ನಿವೃತ್ತಿ ನಂತರ ವಿಜಯ ಯುವಕ ಸಂಘದ ಉಪಾಧ್ಯಕ್ಷರಾದರು. ಕ್ರೀಡಾ ಪ್ರೇಮಿಯೂ ಆಗಿದ್ದ ಅವರು ವಿನೂಸ್ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರು ಆಗಿದ್ದರು. ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

    ಸಂತಾಪ : ವಾಗೀಶ್ ಅವರ ನಿಧನಕ್ಕೆ ವಿಜಯ ಯುವಕ ಸಂಘದ ಅಧ್ಯಕ್ಷ ಸತ್ಯನಾರಾಯಣ ನಾಡಿಗ್, ಕಾರ್ಯಧ್ಯಕ್ಷ ಕೆ.ಮೂರ್ತಿ, ಕಾರ್ಯದರ್ಶಿ ಕೆ. ಸಿದ್ದಲಿಂಗಪ್ಪ, ಕಾರ್ಯನಿರ್ವಹಣಾಧಿಕಾರಿ ಸುಮತೀಂದ್ರ ನಾಡಿಗ್ ದು:ಖಿಸಿದ್ದಾರೆ. ನಾಡು ಒಬ್ಬ ಶಿಕ್ಷಣ ಪ್ರೇಮಿ, ಸಹೃದಯಿಯನ್ನು ಕಳೆದುಕೊಂಡಂತೆ ಆಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

    ಸಂಸದರು,ಶಾಸಕರ ಶೋಕ :ದಾವಣಗೆರೆ ಸಂಸದ ಸಿದ್ದೇಶ್, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷ ಜನಾನುರಾಗಿ ನಾಯಕನನ್ನು ಕಳೆದುಕೊಂಡಂತೆ ಆಗಿದೆ ಎಂದು ಶೋಕಿಸಿದ್ದಾರೆ.

    ನಾಳೆ ಅಂತ್ಯಕ್ರಿಯೆ : ಶುಕ್ರವಾರ ಸಂತೇಬೆನ್ನೂರಿನಲ್ಲಿ ಅಂತ್ಯ ಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಒಬ್ಬ ಪುತ್ರ, ಇಬ್ಬರು ಪುತ್ರಿ ಮತ್ತು ಪತ್ನಿಯನ್ನು ಅವರು ಅಗಲಿದ್ದಾರೆ.

    spot_img

    More articles

    9 COMMENTS

    1. ಸನ್ಮಾನ್ಯ ಶ್ರೀ ವಾಗೀಶ್ ಸರ್ ಅವರ ಆತ್ಮಕ್ಕೆ ಶಾಂತಿ ನೀಡಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.🙏💐💐💐.

    2. ಉತ್ತಮ, ಸಭ್ಯ ವ್ಯಕ್ತಿತ್ವವನ್ನು ಹೊಂದಿದ್ದ ನಮ್ಮೆಲ್ಲರ ಪ್ರೀತಿಯ ವಾಗೀಶಣ್ಣರ ನಿಧನದಿಂದ ಮನಸಿಗೆ ತುಂಬಾ ನೋವಾಗುತ್ತಿದೆ.
      ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.🙏💐

    3. ವಿಷಯ ತಿಳಿದು ತುಂಬಾ ಬೇಸರವಾಗ್ತಿದೆ, ವಾಗೀಶ್ ಸರ್ ಮಾಡ್ತಾ ಇದ್ದ ರಸಾಯನ ಶಾಸ್ತ್ರ ಹಾಗು ಬೀಜಗಣಿತದ ಪಾಠಗಳು ಇನ್ನೂಹಚ್ಚಹಸಿರಾಗಿವೆ.
      ವಾಗೀಶ್ ಸರ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾಥಿಸುತ್ತೇನೆ

    4. ಬಾಲ್ಯ ಮಿತ್ರ ಶ್ರೀ. ವಾಗೀಶ್ ರವರು ದೈವಾಧೀನರಾದ ಸುದ್ದಿ ಕೇಳಿ ಆಘಾತವಾಯಿತು.
      ಅವರ ಆತ್ಮಕ್ಕೆ ಚಿರಶಾಂತಿ, ಸದ್ಗತಿ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.🙏🙏🙏

    5. ಓಂಶಾಂತಿ.
      ಸ್ನೇಹಪ್ರಿಯ ವ್ಯಕ್ತಿಯನ್ನ ಕಳೆದುಕೊಂಡಂತಾಯಿತು.

    6. ಓಂ ಶಾಂತಿ.
      ಓರ್ವ ಸ್ನೇಹಪ್ರಿಯ ವ್ಯಕ್ತಿಯನ್ನ ಕಳೆದುಕೊಂಡೆವು.
      ಜನಾನುರಾಗಿ. ಸಂಘಟನಾಶೀಲರು.
      ಅವರ ಆತ್ಮಕ್ಜೆ ಚಿರಶಾಂತಿ ಸಿಗಲಿ

    7. ಶ್ರೀ ವಾಗೀಶ್ sir ರವರ ನಿಧನ ದ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ಬಹಳ ದುಃಖ ವಾಗುತ್ತಿದೆ. ಈಗ್ಗೆ ಒಂದು -ಒಂದೂವರೆ ತಿಂಗಳ ಹಿಂದೆ ಅವರನ್ನು ಸಂತೇಬೆನ್ನೂರಿನ ಯುವಕ ಸಂಘದ ಕಚೇರಿಯಲ್ಲಿ ಶ್ರೀ ಗಣೇಶ ದೇವಸ್ಥಾನ ದ ಬಗ್ಗೆ ವಿಚಾರಗಳನ್ನು ಹಂಚಿಕೊಂಡ್ಡಿದ್ದೆ ಮತ್ತು ಅವರ ಸಲಹೆ ಸೂಕ್ತ ಎನಿಸಿತ್ತು. ಅವರೊಟ್ಟಿಗೆ ಕಳೆದ ಕ್ಷಣಗಳನ್ನು ಮರೆಯುವಂತಿಲ್ಲ. ಬಾಲ್ಯದಲ್ಲಿ ನನ್ನನ್ನು ಕಂಡರೆ ಬಲು ಪ್ರೀತಿ. ಅವರನ್ನು ಭೇಟಿ ಮಾಡಿದಾಗಲೆಲ್ಲ ಚಾಲ್ಕ್ಲೇಟ್ ಕೊಡುತಿದ್ದರು. ಅದೇ ಪ್ರೀತಿ ವಿಶ್ವಾಸ ವನ್ನು ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರು. ಅಂತಹ ಪ್ರೀತಿತೋರುವ ಗುರುಗಳು ಇಂದು ನನ್ನನ್ನು ಮತ್ತು ನನ್ನಂತಹ ಅನೇಕ ಶಿಷ್ಯ ರನ್ನು ಅಭಿಮಾನಿಗಳನ್ನು ಬಿಟ್ಟು ಅಗಲಿರುವುದು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರ ಆತ್ಮಕ್ಕೆ ಚಿರ ಶಾಂತಿ ಕೋರುತ್ತೇನೆ ಮತ್ತು ಅವರ ಅಗಲುವಿಕೆಯ ದುಃಖ ವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏🙏🙏

    8. ಗುರುಗಳ ಆತ್ಮಕ್ಕೆ ಸದ್ಗತಿ ದೊರಕಲಿ..

    LEAVE A REPLY

    Please enter your comment!
    Please enter your name here

    Latest article

    error: Content is protected !!