ಎಲ್ಲೆಡೆಯೂ ದೀಪಾವಳಿಯ ಸಂಭ್ರಮ. ನರಕ ಚತುರ್ದಶಿಯ ಈ ಹೊತ್ತು ಮನೆ ಮನೆಗಳಲ್ಲೂ ದೀಪಗಳು ಝಗಮಗಿಸುತ್ತಿವೆ. ಈ ಹೊತ್ತಿನ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಶಾಸ್ತ್ರೀಯ ಸಂಗೀತದ ಪಾಡ್ಕಾಸ್ಟ್ ಪ್ರಸ್ತುತ ಪಡಿಸುತ್ತಿದ್ದೇವೆ.
ಈ ಪಾಡ್ಕಾಸ್ಟ್ ನ್ನು ನಡೆಸಿಕೊಟ್ಟವರು ಡಾ. ಸುಚೇತ. ವೃತ್ತಿಯಿಂದ ದಂತ ವೈದ್ಯೆಯಾದರು ಸಂಗೀತದಲ್ಲಿ ಆಸಕ್ತಿ. ಹೀಗಾಗಿ ಪತಿಯ ಜೊತೆ ಸೇರಿ ಸಾರಂಗ ಸಂಗೀತ ಶಾಲೆ ನಡೆಸುತ್ತಿದ್ದಾರೆ. ಡಾ. ಸುಚೇತ ಅವರು ವಿದ್ವಾನ್ ಪಲ್ಲವಿ ಸಿ ವರದರಾವ್, ಸರೋಜ ಸಿದ್ಧಾಂತಿ ಮತ್ತು ವಿದುಷಿ ವೃಂದಾ ಆಚಾರ್ಯ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದಾರೆ.
ಈ ಸಂಚಿಕೆ ನೀರು ತುಂಬುವ ಹಬ್ಬ ಬಂದಿದೆ ಎಂಬ ಗೀತೆಯೊಂದಿಗೆ ಆರಂಭವಾಗುತ್ತದೆ. ಈ ಗೀತೆಯನ್ನು ರಚಿಸಿದವರು ಕ್ಯಾಲಿಫೋರ್ನಿಯಾದಲ್ಲಿರುವ ರಾಮಪ್ರಸಾದ್. ಅದಕ್ಕೆ ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆ ಸುಚೇತ ಅವರದ್ದು.
ಗಜಾನನುತಂ ಗಣೇಶ್ವರಂ ಎಂದು ವಿನಾಯಕನ್ನು ಧ್ಯಾನಿಸಿ ಮುಂದುವರಿಯುವ ಸಂಗೀತ ಸಂಜೆ ಮುಂದೆ ಪಿಳ್ಳಂಗೋವಿಯ ಚೆಲುವ ಕೃಷ್ಣನ, ಇನ್ನು ದಯಾಬಾರದೆ ದಾಸನ ಮೇಲೆ.., ಬಾರೋ ಕೃಷ್ಣಯ್ಯ ಎಂಬ ದಾಸರ ಪದಗಳೊಂದಿಗೆ ಮುಂದುವರಿದು ಸಂಗೀತ ಪ್ರಿಯ ನಮ್ಮ ಶ್ರೀರಂಗ ಎಂಬ ಹಾಡಿನೊಂದಿಗೆ ಮುಕ್ತಾಯವಾಗುತ್ತದೆ.
ಜೊತಗೆ ಭಾರತಿ ಅವರ ವಿಶ್ಲೇಷಣೆ ಹಬ್ಬದ ಸಂಭ್ರಮ ಹೆಚ್ಚಿಸುತ್ತದೆ. ಇನ್ನು ಆಲಿಸುವ ಸಂಭ್ರಮ ನಿಮ್ಮದಾಗಲಿ.
ಸೊಗಸಾದ ಗಾಯನ ದೀಪಾವಳಿ ಸಂಭ್ರಮ ಹೆಚ್ಚಿಸಿತು.
Nice program and melodious songs enriches our Deepawali celebrations.Thank you kannadapress.com
Nice program and melodious songs enriches our Deepawali celebrations. Thank you kannadapress.com
Commendable musical treat by Kannadapress.com on a Deepawali day. One of the mythological story Lord Krishna kills demon Narakasura and Dr.Suchetha has praised Lord in many of the songs. The programme has started by singing a song penned by Mr.Ramprasad from California describing the pre-deepavali significance well in different self composed style followed by popular numbers Gajanana stutam. pillangovia chelluva Krishna, Innu Daya Bharade , Baro krishnayya and ended with sangeeta priya. Dr.Sucheta has rendered all songs in a simple , melodious and devotional manner reflecting her professional class and making music lovers of all age to listen the programme again and again. Great singing by Dr.Sucheta who has shown her expertise in music world although she is dentist professionally also. Well anchored by Bharathi looking forward to such programme on Balipadyami with more musical melodies
ಡಾ, ಸುಚೇತ ಅವರ ನೀರು ತುಂಬುವ ಹಬ್ಬದ ಹಾಡು ಜಾನಪದ ವನ್ನು ನೆನಪಿಗೆ ತಂದಿತು. ನಂತರದ ಅವರ ಗಾಯನ ಸುಶ್ರಾವ್ಯವಾಗಿದ್ದು ಮುದವನ್ನುಉಂಟು ಮಾಡಿತು. ಇದಕ್ಕೆ ಶ್ರೀಮತಿ ಭಾರತಿ ಅವರ ನಿರೂಪಣೆ ಪೂರಕವಾಗಿತ್ತು. ಗಾಯಕರಿಗೂ, ನಿರೂಪಕರಿಗೂ ಆಯೊಜಕರಿಗೂ ಧನ್ಯವಾದಗಳು.
ವಾವ್, ಸೊಗಸಾದ ಸಂಗೀತ, ದೀಪಾವಳಿ .ಹಬ್ಬದ ಆಚರಣೆಗೆ ಹೊಸ ಮೆರಗು ತಂದಿತು. ಹೊಸ ಹೊಸ ಹಾಡುಗಾರರ ಹಾಡು ವಿಕೆ ಯನ್ನು ಕೇಳಿ ಸಿದ ಆಯೋಜಕ ರಿಗೆ ತುಂಬು ಹೃದ ಯದ ದನ್ಯ ವಾದ ಗಳು. ನೀರೂಪಕೀ ಯ ನೀರೂ ಪಣೆ ಆಮೂಘ ವಾಗಿತ್ತು. ದೀಪಾವಳಿ ಯ ಶುಭಾಶಯ ಗಳು.🙏🙏
Superb singing by Sucheta, very melodious voice, and all the songs enriched the meaning of tradition and celebration of Deepavali, Wishing all Kannada press.com readers Happy Deepawali ⭐
Melodious and lively music rendition by Dr. Suchetha. Especially enjoyed the first song which described Deepavali in all its grandeur!