ಬಲಿಪಾಡ್ಯಮಿಯ ಸಂಜೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಲು ಕನ್ನಡಪ್ರೆಸ್.ಕಾಮ್ ಈ ಸುಮಧುರ ಪಾಡ್ಕಾಸ್ಟ್ ಅನ್ನು ಪ್ರಸ್ತುತ ಪಡಿಸುತ್ತದೆ.
ಮೊನ್ನೆಯ ಪಾಡ್ಕಾಸ್ಟ್ ನಲ್ಲಿ ತಮ್ಮ ಸುಶ್ರಾವ್ಯ ಸಂಗೀತದೊಂದಿಗೆ ದೀಪಾವಳಿಯ ಸಡಗರವನ್ನು ಹೆಚ್ಚಿಸಿದ್ದ ಸಾರಂಗ ಸಂಗೀತ ಶಾಲೆಯ ಡಾ. ಸುಚೇತಾ ಅವರು ಇಂದು ತಮ್ಮ ವಿದ್ಯಾರ್ಥಿ ಬಳಗದೊಂದಿಗೆ ಈ ಇಂದಿನ ಸಂಗೀತ ಸಂಜೆಯನ್ನು ನಡೆಸಿಕೊಟ್ಟಿದ್ದಾರೆ.
ಮಾಧವಿ ರವಿ,ತಮೋಘ್ನ,ಅವನಿ ಅರ್ಜುನ, ತನಿಷ ಸತೀಶ್, ಎಸ್ ಪ್ರದೀಪ, ತೇಜಸ್ವಿನಿ, ಪ್ರಿಯದರ್ಶಿನಿ, ಎನ್. ಸಾನಿಕ,ಸಾನಿಕ ತೇಜಸ್ವಿ, ಅನಿರುದ್ಧ ಹಾಗೂ ದ್ಯುತಿ ಆನಂದ್ ಅವರು ಈ ಪಾಡ್ಕಾಸ್ಟ್ ನಲ್ಲಿ ಡಾ. ಸುಚೇತಾ ಅವರೊಂದಿಗೆ ಸೊಗಸಾಗಿ ಹಾಡಿದ್ದಾರೆ.
ಎಂದಿನಂತೆ ಭಾರತಿ ಎಸ್ ಎನ್ ಅವರ ವ್ಯಾಖ್ಯಾನ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸಿದೆ. ಆಲಿಸಿ. ಪ್ರತಿಕ್ರಿಯಿಸಿ.
ಕಾರ್ಯಕ್ರಮ ಸೊಗಸಾಗಿದೆ.ಮಕ್ಕಳ ಹಾಡುಗಾರಿಕೆ ಅದ್ಬುತ.ಮುತ್ತಿನ ಗಿಡದ ಕಥೆ ಭಾರತಿ ಅವರು ಚೆನ್ನಾಗಿ ಹೇಳಿದ್ದಾರೆ
ಧನ್ಯವಾದಗಳು ಶ್ಯಾಮಲಾ. ಆ ಹಾಡನ್ನು ಕೇಳಿ ಕತೆ ಹೇಳುವ ಮನಸ್ಸಾಯಿತು .
Wonderful singing by Saranga music school kids, All Dasara Keerthana’ s are so beautifully sung by them, Best wishes to all the kids 💐
🙏🙏 wow, thank you for a very nice & melodious music programme by Saranga Music Shool Children.
ಪುಟ್ಟ ಮಕ್ಕಳ ಗಾಯನ ಸೊಗಸಾಗಿತ್ತು. ಅದರಲ್ಲೂ
ಡಿಡಿ ಆಡ್ಯಾನೆ ಹಾಗೂ ಮುತ್ತು ಪೋಣಿಸುವ ಹಾಡು ತುಂಬಾ ಇಷ್ಟವಾಯಿತು. ಹಬ್ಬದ ಆಚರಣೆಯ ಹಿಂದಿನ ಕಥೆಯನ್ನು ಹಾಗೂ ವಿಷಯವನ್ನು ಭಾರತಿ ಬಹಳ ಚೆನ್ನಾಗಿ ವಿವರಿಸಿದ್ದಾರೆ . ಇಂತಹ ಕಾರ್ಯಕ್ರಮವನ್ನು
ಆಯೋಜಿಸಿದ ಕನ್ನಡ ಪ್ರೆಸ್ .ಕಾಮ್ಗೆ ನಮ್ಮ ಅಭಿನಂದನೆಗಳು.