ಜಗತ್ತಿನಾದ್ಯಂತ ತಲ್ಲಣ ಎಬ್ಬಿಸಿದ ಕೊರೋನಾ ವೈರಸ್ ತಗುಲಿದ ಮೊದಲ ಕೇಸ್ ವರದಿಯಾಗಿ ಇವತ್ತಿಗೆ ಬರೋಬ್ಬರಿ ವರುಷ ತುಂಬಿದೆ.
ವರ್ಷದ ಹಿಂದೆ ಇದೇ ದಿನ ಚೀನಾದ ಹುಬೆ ಪ್ರಾಂತ್ಯದ 55 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಮೊದ ಮೊದಲು ಅಲ್ಲಿನ ವೈದ್ಯಲೋಕಕ್ಕೂ ಇದೇನಿದು ಎಂದು ಗೊತ್ತಾಗಲಿಲ್ಲ, ನಂತರ ಇದೇ ರೀತಿಯ ರೋಗ ಲಕ್ಷಣಗಳಿರುವವರ ಸಂಖ್ಯೆ ಹೆಚ್ಚುತ್ತಾ ಹೋಯಿತು, ಡಿಸೆಂಬರ್ ವೇಳೆಗೆ ಚೀನಾ ಈ ರೋಗ ಹಬ್ಬುತ್ತಿರುವ ಬಗ್ಗೆ ಅಧಿಕೃತವಾಗಿ ಪ್ರಕಟಿಸಿತು.
ಚೀನಾ ಸರ್ಕಾರ ಅಧಿಕೃತವಾಗಿ ಮೊದಲ ಕೋವಿಡ್ ಕೇಸನ್ನು ಖಚಿತ ಪಡಿಸಿದ್ದು ಡಿಸೆಂಬರ್ 8ರಂದೇ ಆಗಿದ್ದರೂ ಈ ವರ್ಷದ ಮಾರ್ಚ್ ನಲ್ಲಿ South China Morning Post ವರದಿಯೊಂದನ್ನು ಪ್ರಕಟಿಸಿ 2019 ರ ನವೆಂಬರ್ 17 ರಂದೆ ಮೊದಲ ಕೇಸು ಪತ್ತೆಯಾಗಿದ್ದು ಎಂದು ಹೇಳಿತ್ತು. ಇದರ ಪ್ರಕಾರ ಮೊದಲ ಕೇಸ್ ಪತ್ತೆಯಾಗಿ ಇವತ್ತಿಗೆ ವರ್ಷ ತುಂಬುತ್ತದೆ.
ಡಿಸೆಂಬರ್ ನಲ್ಲಿ ಹುಬೈ ಆಸ್ಪತ್ರೆಗೆ ಬಂದಿದ್ದ ದಂಪತಿಗಳನ್ನು ಪರೀಕ್ಷಿಸಿದ್ದ ವೈದ್ಯರು ಇದೊಂದು ಫ್ಲೂ ಥರ ಕಾಣುತ್ತಿರುವ ಯಾವುದೋ ಹೊಸ ಕಾಯಿಲೆಯಾಗಿದೆ ಎಂದು ತಿಳಿಸಿದ್ದರು. ನಂತರ ಈ ರೋಗ ಇಡೀ ವಿಶ್ವಕ್ಕೆ ಹಬ್ಬಿದ್ದು ಈಗ ಇತಿಹಾಸ. ವಿಶ್ವದ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುವ ವೇಳೆಗೆ ಜನವರಿಯಾಗಿತ್ತು. ಬಿಬಿಸಿಯ ವಿದೇಶ ಸುದ್ದಿ ವಿಭಾಗದ ಹಿರಿಯ ವರದಿಗಾರ ರಿಚ್ ಪ್ರೆಸ್ಟನ್ ಜನವರಿಯಲ್ಲಿ ಈ ಬಗ್ಗೆ ಮಾಡಿದ ವರದಿಯನ್ನು ಮೊನ್ನೆ ಟ್ವೀಟ್ ಮಾಡಿದ್ದಾರೆ.
ವರುಷ ತಲುಪುವ ವೇಳೆಗೆ ಲಸಿಕೆ ತಯಾರಿಕೆ ಹಂತದಲ್ಲೂ ಗಣನೀಯ ಪ್ರಗತಿ ಸಾಧಿಸಿರುವುದು ನೆಮ್ಮದಿ ತಂದಿರುವ ಸಂಗತಿ. ಈ ಮಧ್ಯೆ ಸಾಮಾಜಿಕ ಜಾಲ ತಾಣಗಳು ಕೊರೋನಾ ಗೆ ವರ್ಷ ತುಂಬಿದ ಬಗ್ಗೆ ಹಾಕಿದ ವಿಧ ವಿಧ ಪೋಸ್ಟ್ ಗಳಿಂದ ತುಂಬಿ ಹೋಗಿವೆ.
ಕೊರೋನಾ ವೈರಸ್ ಗೆ ಶ್ರದ್ಧಾಂಜಲಿ ಅರ್ಪಿಸುವ ಸಮಯ ಸನ್ನಿಹಿತವಾಗಿದೆಯೆಂಬುದು ನನ್ನ ಅಭಿಪ್ರಾಯ. …ಅಲ್ಲವೇ ಸ್ನೇಹಿತರೆ…..ಆದರೆ ಮೈಮರೆಯುವುದು ಬೇಡ…..ನಮ್ಮೆಲ್ಲರ ಹಿತಕ್ಕಾಗಿ ಇನ್ನೂ ಹೆಚ್ಚಿನ ಜಾಗ್ರತೆವಹಿಸೋಣ.
This One year has taught a lot to this world…