21.7 C
Karnataka
Tuesday, December 3, 2024

    ಏಳು ದಿನದ ನಂತರ ವಾಟ್ಸಾಪ್ ಮೆಸೇಜ್ ತನ್ನಿಂದ ತಾನೆ ಮಾಯ ವಾಗುವಂತೆ ಮಾಡುವುದು ಹೇಗೆ

    Must read

    ಗುಡ್ ಮಾರ್ನಿಂಗ್, ಗುಡ್ ನೈಟ್ ವಾಟ್ಸಪ್  ಮೆಸೇಜ್ ಗಳಿಂದ ಪೋನ್ ಮೆಮೋರಿ ತುಂಬಿ ಹೋಗಿ ಒದ್ದಾಡುತ್ತಿದ್ದ ಬಳಕೆ ದಾರರಿಗೆ ಅನುಕೂಲವಾಗುವ ಹೊಸ ಫೀಚರ್ ಅನ್ನು ವಾಟ್ಸಪ್ ಇದೀಗ ಪರಿಚಯಿಸಿದೆ. ಅದರ ಜೊತೆಗೆ ಅಯ್ಯೋ ಮೆಸೇಜು ಕಳುಹಿಸಿ ಆಗಿದೆ. ಅದು ಡಿಲೀಟ್ ಆಗಿದ್ದರೆ ಒಳ್ಳೇದಿತ್ತು ಅಂದುಕೊಳ್ಳುವವರಿಗೂ ಇದು ಅನುಕೂಲ ಮಾಡಿಕೊಡುತ್ತದೆ.

    ನೀವು ನಿಮ್ಮ ಮೊಬೈಲ್ ಗಳಿಗೆ ಹರಿದು ಬರುವ ಮೆಸೇಜ್ ಗಳು  ಏಳು ದಿನಗಳಿಗೊಮ್ಮೆ ತನ್ನಿಂದ ತಾನೆ ಡಿಸ್ ಅಪಿಯರ್ ಆಗುವ ವಿಧಾನವನ್ನು ಅದು ಅಳವಡಿಸಿದೆ. ಸಧ್ಯಕ್ಕೆ ಇದು ಗ್ರೂಪ್ ಮೆಸೇಜ್ ಗಳಿಗೆ ಅನ್ವಯವಾಗುವುದಿಲ್ಲ. ವೈಯಕ್ತಿಕ ಮೆಸೇಜುಗಳಿಗೆ ಬಳಸ ಬಹುದಾಗಿದೆ. ಗ್ರೂಪ್ ಗಳಲ್ಲಿ ಅಡ್ಮಿನ್ ಮಾತ್ರ  ಇದನ್ನು ಅಳವಡಿಸ ಬಹುದು.

    ಈಗಂತೂ ವಾಟ್ಸಪ್ ಬ್ರಾಡ್ ಕಾಸ್ಟ್ ಮೆಸೇಜುಗಳ  ಮೂಲಕ ವೆಬ್ ಜಾಲಗಳ ಸುದ್ದಿ ತುಣುಕುಗಳು,  ಸಂಘ ಸಂಸ್ಥೆಗಳ ಆಹ್ವಾನ ಪತ್ರಗಳು, ವೆಬಿನಾರ್ ಆಹ್ವಾನಗಳು ಹರಿದು ಬರುವುದು ಸಾಮಾನ್ಯವಾಗಿದೆ. ಇಂಥ ಮೆಸೇಜುಗಳು ಏಳು ದಿನಗಳಿಗೊಮ್ಮೆ ತನ್ನಿಂದ ತಾನೆ ನಾಪತ್ತೆಯಾಗಿ ನಿಮ್ಮ ಡಿಲೀಟ್ ಮಾಡುವ ಕೆಲಸ  ಉಳಿಯುತ್ತದೆ.

    ಇದನ್ನು ಅಳವಡಿಸಿಕೊಳ್ಳುವುದು ಹೇಗೆ

    ಇದನ್ನು ಆಕ್ವೀವ್ ಮಾಡುವುದು ತುಂಬಾನೆ ಸುಲಭ. ಯಾರಿಂದ ಬರುವ ಮೆಸೇಜುಗಳು/ ಕಳಿಸುವ ಮೆಸೇಜುಗಳು ಏಳು ದಿನಗಳಿಗೊಮ್ಮೆ ಡಿಲೀಟ್ ಆಗ ಬೇಕೆಂದು ಬಯಸುತ್ತೀರೋ ಅವರ ಮೆಸೇಜಿಗೆ ಹೋಗಿ.  ಮೇಲ್ಭಾಗದಲ್ಲಿರುವ   ಮೂರು ಚುಕ್ಕಿಯನ್ನು ಒತ್ತಿ. ಅಲ್ಲಿ ಒಂದು ಬಾಕ್ಸ್ ಓಪನ್ ಆಗುತ್ತೆ. ಅದರಲ್ಲಿ view contact  ಸೆಲೆಕ್ಟ್ ಮಾಡಿ.  ಈ ವಿಭಾಗ ತೆರದುಕೊಳ್ಳುತ್ತದೆ.  ಅದರಲ್ಲಿ ಹಾಗೆ ನೋಡುತ್ತಾ ಬನ್ನಿ,   mute notification, Media Visibility, starred message  ಎಂದು ಕಾಣಿಸುತ್ತದೆ. ಹಾಗೆ ಕೆಳಗೆ ಬಂದರೆ   Disappearing message ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿ. On ಮತ್ತು off ಎಂಬ ಎರಡು ಸಾಲು ಕಾಣಿಸುತ್ತದೆ. ಅದರಲ್ಲಿ  on  ಸೆಲೆಕ್ಟ್  ಮಾಡಿ. ಇಲ್ಲಿಗೆ ನಿಮ್ಮ ಕೆಲಸ ಮುಗಿಯಿತು. ಹಿಂದಕ್ಕೆ ಹೋಗಿ ಅವರ ಪ್ರೊಫೈಲ್ ಫೋಟೋ ಗಮನಿಸಿ. ಅಲ್ಲಿ ಒಂದು ಗಡಿಯಾರದ ಮುಳ್ಳಿನ ಚಿಹ್ನೆ ಮೂಡಿರುತ್ತದೆ. ಇನ್ನು ಈ ಚಾಟ್ ನ ಮಸೇಜುಗಳು ಏಳು ದಿನ ತುಂಬುತ್ತಿದ್ದಂತೆ ಮಾಯಾವಾಗುತ್ತವೆ. ಯಾವುದೇ ಸಮಯದಲ್ಲಿ ನೀವು ಈ ಸೌಲಭ್ಯವನ್ನು   0ff ಮಾಡಲೂ ಬಹುದು.

    ನಿಮ್ಮ ಫೋನಿನಲ್ಲಿ ಡಿಸ್‌ ಅಪಿಯರ್ ಮೆಸೇಜು ಆನ್ ಆಗಿದ್ದು ಆ ಮೇಸೇಜನ್ನು ಫಾರ್ವರ್ಡ್ ಮಾಡಿದ್ದರೆ ಏನಾಗುತ್ತದೆ.

    ನೀವು ಫಾರ್ವರ್ಡ್ ಮಾಡಿದ ಫೋನ್ ನಂಬರ್ ನಲ್ಲಿ ಡಿಸ್‌ ಅಪಿಯರ್ ಮೆಸೇಜು ಆಫ್ ಆಗಿದ್ದರೆ ಈ ಮೇಸೇಜು ನಿಮ್ಮಲ್ಲಿ ಏಳು ದಿನಗಳ ನಂತರ ಡಿಲೀಟ್ ಆದರು ಅವರ ಫೋನ್ ನಲ್ಲಿ ಉಳಿದಿರುತ್ತದೆ.

    ಡಿಸ್ ಅಪಿಯರ್ ಆಗುವ ಮುನ್ನವೇ ಬ್ಯಾಕ್ ಅಪ್ ಮಾಡಿಕೊಂಡಿದ್ದರೆ…

    ಅದು  ಬ್ಯಾಕ್ ಅಪ್ ನಲ್ಲಿ ಸಂಗ್ರಹವಾಗಿರುತ್ತದೆ . ಒಮ್ಮೆ ಬ್ಯಾಕ್ ಅಪ್ ನಿಂದ ರಿಸ್ಟೋರ್ ಮಾಡಿದಾಗ  ಡಿಸ್ ಅಪಿಯರ್ ಆಗುತ್ತದೆ.

    ಈ ಮೇಸೇಜುಗಳ ಸ್ಕ್ರೀನ್ ಶಾಟ್ ತೆಗೆಯುವುದು, ಬೇರೆ ನಂಬರ್ ಗೆ ಫಾರ್ವರ್ಡ್ ಮಾಡುವುದು ಇತ್ಯಾದಿಗಳಿಂದ ಸಂಗ್ರಹಿಸಿಟ್ಟುಕೊಳ್ಳಲೂ ಬಹುದಾಗಿದೆ.

    ಮೆಸೇಜ್ ಜೊತೆ ಬರುವ ಫೋಟೋ, ವಿಡಿಯೋ ಇತ್ಯಾದಿಗಳು ಏನಾಗುತ್ತವೆ

    ಮೆಸೇಜುಗಳ ಜೊತೆ ಬಂದ ಮೀಡಿಯಾಗಳು ಆಟೋಮ್ಯಾಟಿಕ್ ಆಗಿ ನಿಮ್ಮ ಫೋನ್ ನಲ್ಲಿ ಸಂಗ್ರಹವಾಗಿರುತ್ತವೆ. ಮೆಸೇಜು ಡಿಸ್ ಅಪಿಯರ್ ಆದರೂ ಇವು ಹಾಗೆ ಉಳಿದಿರುತ್ತವೆ. ಇವೂ ಉಳಿಯಬಾರದು ಎಂದರೆ  media visibility ಅನ್ನು ಕ್ಲಿಕ್ ಮಾಡಿ ಅಲ್ಲಿ show newly downloaded media from this chat in your photo gallery  ಯಲ್ಲಿ  no ಎಂದು ಒತ್ತಬೇಕು.

    ಇನ್ನೂ ಸ್ಪಷ್ಟತೆಗೆ ಈ ವಿಡಿಯೋ ನೋಡಿ.

    Photo by AARN GIRI on Unsplash

    spot_img

    More articles

    2 COMMENTS

    LEAVE A REPLY

    Please enter your comment!
    Please enter your name here

    Latest article

    error: Content is protected !!